ಪರೀಕ್ಷೆ ಎದುರಿಸುವ ಮಕ್ಕಳಿಗೆ ಧೈರ್ಯ ತುಂಬುವ ಪ್ರಧಾನಿ ಮೋದಿ ಅವರ ಕಾರ್ಯ ಮುಂದುವರಿದೆ. ಇದರ ಭಾಗವಾದ ಪರಿಕ್ಷಾ ಪೇ ಚರ್ಚಾ ಕಾರ್ಯಕ್ರಮದ 5ನೇ ಭಾಗ ಇಂದು ದೆಹಲಿಯಲ್ಲಿ ನಡೆಯಿತು.
ವರದಿ: ಮಧು.ಎಂ.ಚಿನಕುರಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಮೈಸೂರು
ಮೈಸೂರು (ಏ.01): ಪರೀಕ್ಷೆ (Exam) ಎದುರಿಸುವ ಮಕ್ಕಳಿಗೆ ಧೈರ್ಯ ತುಂಬುವ ಪ್ರಧಾನಿ ನರೇಂದ್ರ ಮೋದಿ ((PM Narendra Modi) ಅವರ ಕಾರ್ಯ ಮುಂದುವರಿದೆ. ಇದರ ಭಾಗವಾದ ಪರಿಕ್ಷಾ ಪೇ ಚರ್ಚಾ (Pariksha Pe Charcha) ಕಾರ್ಯಕ್ರಮದ 5ನೇ ಭಾಗ ಇಂದು ದೆಹಲಿಯಲ್ಲಿ ನಡೆಯಿತು. ಈ ಚರ್ಚೆಯಲ್ಲಿ ರಾಜ್ಯದಿಂದ (Karnataka) ಭಾಗವಹಿಸಿದ ಏಕಮಾತ್ರ ವಿದ್ಯಾರ್ಥಿ (Student) ಆನ್‌ಲೈನ್ ಎಜುಕೇಷನ್ (Online Education) ಬಗ್ಗೆ ಪ್ರಶ್ನೆ ಕೇಳಿ ಗಮನ ಸೆಳೆದಿದ್ದಾರೆ.
undefined
ಹೌದು, ಮಕ್ಕಳು ಎಷ್ಟೇ ಚೆನ್ನಾಗಿ ಓದಿದ್ದರೂ ಪರೀಕ್ಷೆ ಫೋಬಿಯಾ ಅವರನ್ನು ಇನ್ನಿಲ್ಲದೆ ಕಾಡುತ್ತು. ವಿನಾಕಾರಣ ಒತ್ತಡಗಳಿಗೆ ಸಿಲುಕಿವ ವಿದ್ಯಾರ್ಥಿಗಳು ಸರಿಯಾಗಿ ಪರೀಕ್ಷೆ ಬರೆಯದೆ ತೊಂದರೆ ಅನುಭವಿಸುತ್ತಾರೆ. ಇದನ್ನು ತಪ್ಪಿಸುವ ಸಲುವಾಗಿ ಸ್ವತಃ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಮಕ್ಕಳ ಇತ್ತಡ ಕಡಿಮೆ ಮಾಡುವ ಕೆಲಸ ಮಾಡುತ್ತಿದ್ದಾರೆ. ದೇಶಾದ್ಯಂತ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮೋದಿ ಅವರು ಪರಿಕ್ಷಾ ಪೇ ಚರ್ಚಾ ಕಾರ್ಯಕ್ರಮ ನಡೆಸುತ್ತಿದ್ದಾರೆ. ಪರೀಕ್ಷಾ ಪೇ ಚರ್ಚಾ ಸರಣಿಯು 5 ನೇ ವರ್ಷವೂ ಮುಂದುವರೆದಿದ್ದು, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ದೇಶದ ಆಯ್ದ 40 ವಿದ್ಯಾರ್ಥಿಗಳ ಜೊತೆ ಚರ್ಚೆ ನಡೆಸಿದರು.
Pariksha Pe Charcha 2022: ಮಕ್ಕಳು ಮೊಬೈಲ್ ನಿಂದ ದೂರ ಇರಲು ಮೋದಿ ಸಲಹೆ
ಈ ಚರ್ಚಾ ಕಾರ್ಯಕ್ರಮಕ್ಕೆ ಕರ್ನಾಟಕದಿಂದ ಒಬ್ಬನೇ ವಿದ್ಯಾರ್ಥಿ ಆಯ್ಕೆಯಾಗಿದ್ದು, ಆತ ನಮ್ಮ ಮೈಸೂರು ಜಿಲ್ಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ ಎನ್ನುವುದು ಹೆಮ್ಮೆಯ ವಿಷಯವಾಗಿದೆ. ಮೈಸೂರು (Mysuru) ತಾಲೂಕು ದೊಡ್ಡ ಮಾರನಹಳ್ಳಿಯಲ್ಲಿರುವ ಜವಹಾರ್ ನವೋದಯ ಶಾಲೆಯ 11ನೇ ತರಗತಿ ವಿದ್ಯಾರ್ಥಿ ಎಂ.ಬಿ.ತರುಣ್ (MB Tarun) ಚರ್ಚೆಯಲ್ಲಿ ಭಾಗವಹಿಸಿದ್ದರು. ಈಗಾಗಿ ಇಡೀ ಶಾಲೆಯಲ್ಲಿ ಸಂಭ್ರಮ ಮನೆ ಮಾಡಿತ್ತು. ಬೆಳಿಗ್ಗೆ 11 ಗಂಟೆಗೆ ಆರಂಭ ಆಗುವ ಕಾರ್ಯಕ್ರಮ ವೀಕ್ಷಣೆ ಮಾಡಲು ಶಾಲೆಯ ಭೋಜನ ಭವನದಲ್ಲಿ ವ್ಯವಸ್ಥೆ ಮಾಡಲಾಗಿತ್ತು. ದೊಡ್ಡ ಎಲ್‌ಇಡಿ ಪರದೆ ಮೂಲಕ 800 ವಿದ್ಯಾರ್ಥಿಗಳು ಸೇರಿದಂತೆ ಶಾಲಾ ಸಿಬ್ಬಂದಿ ಕಾರ್ಯಕ್ರಮ ವೀಕ್ಷಣೆ ಮಾಡಿದರು.
ಇನ್ನು ನವೋದಯ ಶಾಲೆಯ ತರುಣ್ ವರ್ಚ್ಯುಯಲ್ ಮೂಲಕ ಪ್ರಧಾನಿಯೊಂದಿಗೆ ಪರಿಕ್ಷಾ ಪೇ ಚರ್ಚೆ ನಡೆಸಿದರು. ವರ್ಚ್ಯುಯಲ್ ಮೂಲಕ ಪ್ರಧಾನಿಗೆ ಪ್ರಶ್ನೆ ಕೇಳಿದ ತರುಣ್ ಆನ್‌ಲೈನ್ ಪಾಠದಲ್ಲಿ ವಿದ್ಯಾರ್ಥಿಗಳಿಗೆ ಆಗುತ್ತಿರುವ ತೊಡಕುಗಳ ಬಗ್ಗೆ ಪ್ರಶ್ನೆ ಕೇಳಿದ. ಇದಕ್ಕೆ ಉತ್ತರ ಕೊಟ್ಟ ಪ್ರಧಾನಿಯವರು ಆಫ್‌ಲೈನ್ ಪಾಠಕ್ಕಿಂತ ಆನ್‌ಲೈನ್ ಪಾಠ ಎಷ್ಟು ಮುಖ್ಯ ಅಂತ ತಿಳಿ ಹೇಳಿದರು. ಆಫ್‌ಲೈನ್ ತರಗತಿಗಳನ್ನ ಒಂದು ನಿಗದಿತ ಸ್ಥಳದಲ್ಲಿ ಮಾತ್ರ ಕಲಿಯಲು ಅವಕಾಶ ಇರುತ್ತೆ. ಆದರೆ ಆನ್‌ಲೈನ್ ತರಗತಿ ಎಲ್ಲಿ ಬೇಕಾದರೂ ಕಲಿಯಬಹುದು. ಮಕ್ಕಳು ಮನಸನ್ನು ಹಿಡಿತದಲ್ಲಿ ಇಟ್ಟುಕೊಂಡು ಪಾಠ ಕಲಿಯಬೇಕು. ಆನ್‌ಲೈನ್ ಅಥವಾ ಆನ್‌ಲೈನ್ ಏನೇ ಇದ್ದರೂ ಮನಸನ್ನ ಹಿಡಿತದಲ್ಲಿ ಇಟ್ಟುಕೊಂಡಿರಿ ಅಂತ ಕಿವಿ ಮಾತು ಹೇಳಿದರು. ವಿದ್ಯಾರ್ಥಿ ತರುಣ್ ಪ್ರಧಾನಿ ಜೊತೆ ಚರ್ಚೆಯಲ್ಲಿ ಪಾಲ್ಗೊಂಡಿದ್ದ ಸಂತಸ ವ್ಯಕ್ತಪಡಿಸಿದರು.
Pariksha Pe Charcha: ಪ್ರಧಾನಿ ಮೋದಿಯೊಟ್ಟಿಗೆ ಮೈಸೂರಿನ ವಿದ್ಯಾರ್ಥಿ ತರುಣ್ ಮಾತು!
ಉಳಿದಂತೆ ಚರ್ಚೆಯಲ್ಲಿ ಪರೀಕ್ಷೆಯ ಒತ್ತಡ, ಏಕಾಗ್ರತೆ ಕೊರತೆ ಸೇರಿದಂತೆ ಪರೀಕ್ಷೆ ಎದುರಿಸುವ ಮಕ್ಕಳ ಸಮಸ್ಯೆ ನಿವಾರಿಸುವ ಪ್ರಯತ್ನ ಪ್ರಧಾನಿ ಮಾಡಿದರು. ಕಾರ್ಯಕ್ರಮ ನೋಡಿದ ಮಕ್ಕಳು ಇದು ಮಕ್ಕಳ ಕಲಿಕೆ ಹೆಚ್ಚಿಸಲು, ಪರಿಕ್ಷಾ ಫೋಬಿಯಾ ತಪ್ಪಿಸಲು ನೆರವಾಗಿದೆ. ಪರಿಕ್ಷೆ ಒತ್ತಡ ಕಡಿಮೆ ಮಾಡಲು ಪ್ರಧಾನಿಗಳ ಉತ್ತರ ಸಹಕಾರಿ ಆಗಿತ್ತು ಅಂತ ತಮ್ಮ ಅನಿಸಿಕೆ ಹಂಚಿಕೊಂಡರು. ಒಟ್ಟಾರೆ ಪರೀಕ್ಷೆ ಬಗ್ಗೆ ನಾನಾ ಆತಂಕ ಇಟ್ಟುಕೊಳ್ಳುವ ಮಕ್ಕಳಿಗೆ ಕಾರ್ಯಕ್ರಮದ ಮೂಲಕ ಧೈರ್ಯ ತುಂಬುವ ಕೆಲಸವನ್ನ ದೇಶದ ಪ್ರಧಾನಿಗಳು ಮಾಡುತ್ತಿದ್ದು, ಮಕ್ಕಳಿಗೂ ನೆರವಾಗಿದೆ.