*ಸಿಎ ಎನ್ನುವುದು ಬಹುತೇಕ ಕನಸಿನ ಉದ್ಯೋಗ. ಈ ಜಾಬ್‌ಗೆ ಸಾಕಷ್ಟು ಶ್ರಮ ಹಾಕಬೇಕು
*ಸಿವಿಲ್ ಸರ್ವೀಸ್ ಪರೀಕ್ಷೆಗಳಿಗೆ ತಯಾರಾಗುವ ರೀತಿಯಲ್ಲಿ ಸಿದ್ಧತೆ ಮಾಡಿಕೊಳ್ಳಬೇಕು
*ವಿವಿಧ ಹಂತಗಳಲ್ಲಿ ಪರೀಕ್ಷೆ ಬರೆಯಬೇಕು. 12 ಮತ್ತು ಪದವಿ ಪೂರೈಸಿದವರು ಬರೆಯಬಹುದು
ಸದ್ಯ ದೇಶದಲ್ಲಿ ಹೆಚ್ಚು ಟ್ರೆಂಡಿಂಗ್ ನಲ್ಲಿರುವ ಪ್ರಮುಖ ಹುದ್ದೆಗಳಲ್ಲಿ ಚಾರ್ಟರ್ಡ್ ಅಕೌಂಟೆಂಟ್ (Chartered account) ಗೆ ಸಿಕ್ಕಾಪಟ್ಟೆ ಬೇಡಿಕೆ. ಉತ್ತಮ ಸ್ಯಾಲರಿ ಸಿಗುವ ಹುದ್ದೆಗಳಲ್ಲಿ ಇದು ಒಂದು. ಆದರೆ ಅಷ್ಟು ಸುಲಭವಾಗಿ ದಕ್ಕುವ ನೌಕರಿ ಇದಲ್ಲ. ಸಿವಿಲ್ ಸರ್ವಿಸ್ ಎಕ್ಸಾಂ (Civil Service Exam) ರೀತಿಯಲ್ಲೇ ಸಿಎ (CA) ಪಾಸ್ ಮಾಡಲು ಸಾಕಷ್ಟು ಶ್ರಮ ಪಡಬೇಕು. ಪ್ರತಿ ಹಂತದಲ್ಲೂ ಪರೀಕ್ಷೆಯಲ್ಲಿ ಫೇಲ್ ಆದ್ರೂ ಮರಳಿ ಯತ್ನವ ಮಾಡು ಎಂಬಂತೆ ಪ್ರಯತ್ನಿಸಬೇಕು. ಸಿಎ ಕೋರ್ಸ್ ಕ್ಲಿಯರ್ ಮಾಡುವುದು ಬಹಳ ಕಷ್ಟ ಎಂಬ ಮಾತಿದೆ. ಆದ್ರೆ ಮೊದಲ ಪ್ರಯತ್ನದಲ್ಲೇ ಪಾಸ್ ಮಾಡಿದವರು ಸಾಕಷ್ಟು ಮಂದಿ ಇದ್ದಾರೆ. ಭಾರತದಲ್ಲಿ ಚಾರ್ಟರ್ಡ್ ಅಕೌಂಟಂಟ್ ಆಗುವುದು ಹೇಗೆ, ಸಿಎ ಪರೀಕ್ಷೆ ತೆಗೆದುಕೊಳ್ಳಲು ಶೈಕ್ಷಣಿಕ ಅರ್ಹತೆ ಏನು? ಯಾವೆಲ್ಲಾ ಪರೀಕ್ಷೆಗಳನ್ನು ಎದುರಿಸಬೇಕು? ಏನೆಲ್ಲ ಉದ್ಯೋಗ ಮಾಡಬಹುದು ಎಂಬ ಬಗ್ಗೆ ತಿಳಿಯೋಣ.
ಚಾರ್ಟರ್ಡ್ ಅಕೌಂಟಂಟ್ ಪರೀಕ್ಷೆಯನ್ನು ಪದವಿ ಮುಗಿದವರಷ್ಟೇ ಮಾಡಬೇಕು ಎಂದೇನಿಲ್ಲ. 10ನೇ ತರಗತಿ ನಂತರವೇ ಸಿಎ ಕೋರ್ಸ್ ಅಭ್ಯಾಸ ಮಾಡಬಹುದು. ಇದಕ್ಕಾಗಿ ಕಾಮನ್ ಪ್ರೊಫಿಸಿಯನ್ಸೀ ಟೆಸ್ಟ್(Common proficiency test-CPT)ಬರೆದು ಉತ್ತೀರ್ಣರಾಗಬೇಕು. ಆದರೆ ಡಿಗ್ರಿ ಮುಗಿಸಿದ ನಂತರ ಸಿಎ ಓದಲು ಕಾಮರ್ಸ್ ವಿದ್ಯಾರ್ಥಿಗಳೇ ಆಗಲಿ ಅಥವಾ ಇತರೆ ಯಾವುದೇ ಪದವಿ ಕೋರ್ಸ್‌ಗಳ ವಿದ್ಯಾರ್ಥಿಗಳಾಗಲಿ ಕನಿಷ್ಟ ಶೇ.55ರಷ್ಟು ಅಂಕಗಳನ್ನು ಪಡೆದಿರೋದು ಕಡ್ಡಾಯ. ಪದವಿ ಬಳಿಕ ಸಿಎಗೆ ಬೇಕಾದ ಅರ್ಹತೆ ಇದ್ದರೆ ನೇರವಾಗಿ IPCC (ಇಂಟಿಗ್ರೇಟೆಡ್ ಪ್ರೊಫೇಶನಲ್ ಕಾಂಪಿಟೆನ್ಸಿ ಕೋರ್ಸ್) ಪರೀಕ್ಷೆಯನ್ನು ನೇರವಾಗಿ ಎದುರಿಸಬಹುದು. 10 ನೇ ತರಗತಿ ಹಾಗೂ ದ್ವಿತೀಯ ಪಿಯುಸಿ ನಂತರ ಸಿಎ ತೆಗೆದುಕೊಳ್ಳುವುದಾದರೆ 3 ಹಂತದ ಪರೀಕ್ಷೆಗಳನ್ನು ಪಾಸ್ ಮಾಡಬೇಕು. ಸಿಪಿಟಿ ಪರೀಕ್ಷೆ ಪಾಸ್ ಮಾಡಬೇಕು.
undefined
ಕರ್ನಾಟಕದಲ್ಲಿ ಏಳು ಡಿಜಿಟಲ್ ವಿವಿ ಸ್ಥಾಪನೆಗೆ ನಿರ್ಧಾರ: ಸಿಎಂ ಬೊಮ್ಮಾಯಿ
ಸಿಪಿಟಿ ಪರೀಕ್ಷೆ ಎಂದರೇನು?
ಈ ಪರೀಕ್ಷೆ ಪಾಸ್ ಮಾಡಲು ಮೊದಲ ಹಂತದ ನಾಲ್ಕು ಸಬ್ಜೆಕ್ಟ್‌ಗಳನ್ನು ಪಾಸ್ ಮಾಡಲೇಬೇಕು. ಪ್ರತಿಯೊಂದು ಸಬ್ಜೆಕ್ಟ್‌ನಲ್ಲೂ ಶೇ.30 ಅಂಕ ಗಳಿಸಲೇಬೇಕು. 4 ಸಬ್ಜೆಕ್ಟ್‌ಗಳನ್ನು ಎರಡು ಸೆಷನ್‌ಗಳಲ್ಲಿ ಪರೀಕ್ಷೆ ಬರೆಯಬೇಕು. ಮೊದಲ ಸೆಷನ್‌ನಲ್ಲಿ ಅಕೌಂಟಿಂಗ್ (Accounting) ಅಂಡ್ ಮರ್ಕೆಂಟೈಲ್ (Mercantile) ಕಾನೂನುಗಳ ಕುರಿತು ಪರೀಕ್ಷೆ ಬರೆಯಬೇಕು. ಎರಡನೇ ಹಂತದಲ್ಲಿ ಜೆನರಲ್ ಎಕಾನಾಮಿಕ್ಸ್ (General Economics) ಅಂಡ್ ಕ್ವಾಂಟಿಟೇಟಿವ್ ಆಪ್ಟಿಟ್ಯೂಡ್ (Quantitative Aptitude) ಬಗ್ಗೆ ಪರೀಕ್ಷೆ ಬರೆಯಬೇಕು. ಒಟ್ಟಾರೆ 200 ಅಂಕಗಳಿಗೆ ಮಲ್ಟಿಪಲ್ ಚಾಯ್ಸ್ ಪ್ರಶ್ನೆಗಳು ಇರುತ್ತವೆ. ತಪ್ಪು ಉತ್ತರಗಳಿಗೆ ನೆಗೆಟಿವ್ ಅಂಕಗಳು ಇರುತ್ತವೆ.
ಐಪಿಸಿಸಿ ಪರೀಕ್ಷೆ
ಈ ಪರೀಕ್ಷೆಗೆ ಕೂರಲು ಸಿಪಿಟಿ ಪರೀಕ್ಷೆ ಪಾಸ್ ಮಾಡಿರಬೇಕು. (10+2 ಲೆವೆಲ್) ಅಥವಾ ಪದವಿ ಮುಗಿಸಿದವರು ನೇರವಾಗಿ ಐಪಿಸಿಸಿ ಟೆಸ್ಟ್ ತೆಗೆದುಕೊಳ್ಳಬಹುದು. ಇದರಲ್ಲಿ ಗ್ರೂಪ್ ಎ ಮತ್ತು ಗ್ರೂಪ್ ಬಿ ಎಂಬ ಎರಡು ಪರೀಕ್ಷೆಗಳಿರುತ್ತವೆ. ಒಂದು ಬಾರಿಗೆ ಒಂದು ಗ್ರೂಪ್ ಪರೀಕ್ಷೆ ತೆಗೆದುಕೊಳ್ಳಬಹುದು ಅಥವಾ ಗ್ರೂಪ್ ಎ ಮತ್ತು ಬಿ ಎರಡು ಪರೀಕ್ಷೆಗಳನ್ನು ಒಮ್ಮೆಲೇ ತೆಗೆದುಕೊಳ್ಳಬಹುದು. ಆದರೆ ಯಾವುದೇ ಗ್ರೂಪ್‌ನಲ್ಲಿನ ಒಂದು ವಿಷಯ ಫೇಲಾದರೂ ಪುನಃ ಎಲ್ಲಾ ಸಬ್ಜೆಕ್ಟ್ ಗಳಿಗೂ ಎಕ್ಸಾಂ ಬರೆಯಬೇಕು. ಗ್ರೂಪ್ ಎ ನಲ್ಲಿ 4 ವಿಷಯಗಳು ಇರುತ್ತವೆ. ಅಕೌಂಟಿಂಗ್, ಲಾ ಎಥಿಕ್ಸ್ ಮತ್ತು ಕಂಮ್ಯುನಿಕೇಷನ್, ಕಾಸ್ಟ್ ಅಕೌಂಟಿಂಗ್ ಮತ್ತು ಫೈನಾನ್ಸಿಯಲ್ ಮ್ಯಾನೇಜ್ಮೆಂಟ್ ಮತ್ತು ಟ್ಯಾಕ್ಸೇಷನ್ ವಿಷಯಗಳು ಇರುತ್ತವೆ. ಗ್ರೂಪ್ ಬಿ ನಲ್ಲಿ 3 ವಿಷಯಗಳು ಇರುತ್ತವೆ. ಅಡ್ವಾನ್ಸ್‌ಡ್ ಅಕೌಂಟಿಂಗ್ (Advanced Accounting), ಆಡಿಟಿಂಗ್ ಅಂಡ್ ಅಸುರೆನ್ಸ್ ಅಂಡ್ ಇನ್ಫಾರ್ಮೇಶನ್ ಟೆಕ್ನಾಲಜಿ ಮತ್ತು ಸ್ಟ್ರಾಟೆಜಿಕ್ ಮ್ಯಾನೇಜ್ಮೆಂಟ್ (Strategic Management) ವಿಷಯಗಳು ಇರುತ್ತವೆ. ಐಪಿಸಿಸಿ ಪರೀಕ್ಷೆ ತೆಗೆದುಕೊಳ್ಳುವ ಮುನ್ನ ಇನ್ಫಾರ್ಮೇಶನ್ ಟೆಕ್ನಾಲಜಿ ಟ್ರೈನಿಂಗ್(ITT) ಮುಗಿಸಿರಬೇಕು.
ಆರ್ಟಿಕಲ್ ಶಿಪ್
ಸಿಎ ಎಕ್ಸಾಮ್ ಪಾಸ್ ಮಾಡಲು ಆರ್ಟಿಕಲ್ ಶಿಪ್ ಮಾಡಬೇಕು. ಐಪಿಸಿಸಿ ಪರೀಕ್ಷೆ ಪಾಸ್ ಮಾಡಿದ ನಂತರ ಈಗಾಗಲೇ ಪ್ರ್ಯಾಕ್ಟೀಸ್ ಮಾಡುತ್ತಿರುವ ಚಾರ್ಟರ್ಡ್ ಅಕೌಂಟೆಂಟ್ ಬಳಿ 3 ವರ್ಷ ತರಬೇತಿ ಪಡೆಯಬೇಕು. ಇದೊಂದು ಪ್ರ್ಯಾಕ್ಟಿಕಲ್ ಟ್ರೈನಿಂಗ್ ಆಗಿದೆ. ಇದಕ್ಕೆ ತರಬೇತಿ ಅವಧಿಯಲ್ಲಿ ಅಭ್ಯರ್ಥಿಗಳು ಪ್ರತಿ ತಿಂಗಳಿಗೆ ಇಂತಿಷ್ಟು ಹಣವನ್ನು ಸ್ಟೈಫಂಡ್ ಪಡೆಯಬಹುದು.
IIT Madrasನಿಂದ ಔಟ್ ಆಫ್ ಬಾಕ್ಸ್ ಥಿಂಕಿಂಗ್ ಎಂಬ ಗಣಿತ ಆನ್‌ಲೈನ್ ಕೋರ್ಸ್
ಸಿಎ ಫೈನಲ್ ಪರೀಕ್ಷೆ
ಸಿಎ ಫೈನಲ್ ಪರೀಕ್ಷೆಗೆ ಕೂರಲು ಎರಡು ಮುಖ್ಯ ಅರ್ಹತೆಗಳು ಇರಬೇಕು. ಮೊದಲನೇಯದು ಐಪಿಸಿಸಿಯ ಎರಡು ಗ್ರೂಪ್‌ಗಳನ್ನು ಪಾಸ್ ಮಾಡಿರಬೇಕು. ಎರಡನೇಯದು 2.5 ವರ್ಷಕ್ಕಿಂತ ಹೆಚ್ಚಿನ ಅವಧಿಯ ಆರ್ಟಿಕಲ್ ಶಿಪ್ ಅನ್ನು ಪೂರ್ಣಗೊಳಿಸಿರಬೇಕು.
ಸಿಎ ಅಂತಿಮ ಪರೀಕ್ಷೆ ಪಾಸ್ ಮಾಡಲು ಎರಡು ಗ್ರೂಪ್‌ಗಳ ಪರೀಕ್ಷೆ ಇರುತ್ತದೆ. ಪ್ರತಿ ಗ್ರೂಪ್‌ನಲ್ಲಿ 4 ಸಬ್ಜೆಕ್ಟ್‌ಗಳು ಇರುತ್ತವೆ. ಮೊದಲ ಗ್ರೂಪ್‌ನಲ್ಲಿ ಫೈನಾನ್ಸಿಯಲ್ ರಿಪೋರ್ಟಿಂಗ್, ಸ್ಟ್ರಾಟೆಜಿಕ್ ಫೈನಾನ್ಸಿಯಲ್ ಮ್ಯಾನೇಜ್ಮೆಂಟ್, ಅಡ್ವಾನ್ಸ್‌ಡ್ ಆಡಿಟಿಂಗ್ ಹಾಗೂ ಪ್ರೊಫೇಶನಲ್ ಎಥಿಕ್ಸ್ ಅಂಡ್ ಕಾರ್ಪೋರೇಟ್ ಲಾಸ್ ಮತ್ತು ಸೀಕ್ರೇಟೆರಿಯಲ್ ಪ್ರ್ಯಾಕ್ಟೀಸ್. ಎರಡನೇ ಗ್ರೂಪ್‌ನಲ್ಲಿ ಅಡ್ವಾನ್ಸ್‌ಡ್ ಮ್ಯಾನೇಜ್ಮೆಂಟ್ ಅಕೌಂಟಿಂಗ್, ಇನ್ಫಾರ್ಮೇಶನ್ ಸಿಸ್ಟೆಮ್ಸ್ ಕಂಟ್ರೋಲ್, ಡೈರೆಕ್ಟ್ ಟ್ಯಾಕ್ಸೆಸ್ ಅಂಡ್ ಇನ್‌ಡೈರೆಕ್ಟ್ ಟ್ಯಾಕ್ಸೆಸ್. ಸಿಎ ಅಂತಿಮ ಪರೀಕ್ಷೆ ಪಾಸ್ ಮಾಡಲು ಪ್ರತಿ ವಿಷಯಗಳಲ್ಲಿ ಕನಿಷ್ಟ ಶೇ.40 ಅಂಕಗಳನ್ನು ಗಳಿಸಬೇಕು. ಒಟ್ಟಾರೆ ಶೇ.50 ಅಂಕ ಗಳಿಸಬೇಕು. ಆಗ ಮಾತ್ರ ನೀವು ಚಾರ್ಟೆಡ್ ಅಕೌಂಟೆಂಟ್ ಪರೀಕ್ಷೆ ಪೂರ್ಣಗೊಳಿಸಿದಂತಾಗುತ್ತದೆ.