ಪಿಯುಸಿ ಫಲಿತಾಂಶದಲ್ಲಿ ಕೊನೆಯ ಸ್ಥಾನ: ಚಿತ್ರದುರ್ಗಕ್ಕೆ ಈ ಸ್ಥಿತಿ ಬರಲು ಅಧಿಕಾರಿಗಳೇ ಕಾರಣ..!

By Girish Goudar  |  First Published Jul 2, 2022, 11:00 PM IST

*  ಶಿಕ್ಷಣ ಇಲಾಖೆಯ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿರೋದು ಖಂಡನೀಯ
*  ಇನ್ನಾದ್ರು ಎಚ್ಚೆತ್ತು ಮಕ್ಕಳಿಗೆ ಸೂಕ್ತ ಶಿಕ್ಷಣ ನೀಡಲು ಆಗ್ರಹ
*  ಚಿತ್ರದುರ್ಗ ಜಿಲ್ಲೆಯಲ್ಲಿ 131 ಉಪನ್ಯಾಸಕರ ಹುದ್ದೆಗಳು ಖಾಲಿ ಇವೆ 
 


ವರದಿ: ಕಿರಣ್ಎಲ್ ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿತ್ರದುರ್ಗ

ಚಿತ್ರದುರ್ಗ(ಜು.02):  ಇತ್ತೀಚೆಗಷ್ಟೇ ಪದವಿ ಪೂರ್ಣ ಶಿಕ್ಷಣ ಇಲಾಖೆಯು ದ್ವಿತೀಯ ಪಿಯುಸಿ ರಿಸಲ್ಟ್ ಅನೌನ್ಸ್ ಮಾಡಿತ್ತು. ಆದ್ರೆ ಕೋಟೆನಾಡು ಚಿತ್ರದುರ್ಗ ಜಿಲ್ಲೆ ಮಾತ್ರ ಕಟ್ಟ ಕಡೆಯ ಸ್ಥಾನ ಪಡೆದಿದ್ದು ಜಿಲ್ಲೆಯ ವಿಧ್ಯಾರ್ಥಿಗಳು ಹಾಗೂ ಪೋಷಕರಲ್ಲಿ ಆತಂಕ ಮೂಡಿಸಿತ್ತು. ಇದರ ಪರಿಣಾಮವಾಗಿ ಎಲ್ಲಾ ವಿದ್ಯಾರ್ಥಿಗಳನ್ನು ಬೇರೆ ಬೇರೆ ಜಿಲ್ಲೆಯ ಕಡೆ ಮುಖ ಮಾಡಿದ್ರು.  ಆದ್ರೆ ಈ ವಿಚಾರಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಏನಂತಾರೆ ಎಂಬುದೇ ಪ್ರಶ್ನೆಯಾಗಿತ್ತು. ಇದೆಲ್ಲದರ ಕುರಿತಾದ ಒಂದು ಸ್ಪೆಷಲ್ ರಿಪೋರ್ಟ್ ಇಲ್ಲಿದೆ ನೋಡಿ.

Latest Videos

undefined

ಶಿಥಿಲಾವಸ್ಥೆಗೊಂಡಿರೋ ಕಾಲೇಜಿನ ಕಟ್ಟಡಗಳು. ಅದ್ರಲ್ಲಿಯೂ ಮಕ್ಕಳು ಪಾಠ ಕೇಳುವ ಕೊಠಡಿಗಳು ಕೂಡ ಶಿಥಿಲಾವಸ್ಥೆ ತಲುಪಿದ್ರೂ ಸಹ ಯಾವುದೇ ಕ್ರಮ ಕೈಗೊಳ್ಳದೇ ಮೌನವಹಿಸಿರುವ ಅಧಿಕಾರಿಗಳು. ಇನ್ನು ವಿದ್ಯಾರ್ಥಿಗಳಿಗೆ ಸೂಕ್ತ ಲ್ಯಾಬ್ ಸೌಲಭ್ಯ ಇಲ್ಲ. ಕ್ಲಾಸ್ ಮಾಡಬೇಕಾದ ಉಪನ್ಯಾಸಕರೇ ಇಲ್ಲದೇ ಖಾಲಿ ಹೊಡೆಯುತ್ತಿರುವ ಮಕ್ಕಳು. 

ಕಳೆದ ವರ್ಷ ರಾಜ್ಯದಲ್ಲಿ ಶಾಲಾ ಪ್ರವೇಶ ಕುಸಿತ

ಈ ದೃಶ್ಯಗಳು ಕಂಡು ಬಂದಿದ್ದು ಚಿತ್ರದುರ್ಗ ಜಿಲ್ಲೆಯಲ್ಲಿ ಬರುವ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ, ಮೊದಲೇ ಚಿತ್ರದುರ್ಗ ನಗರದಲ್ಲಿ ಇತಿಹಾಸವುಳ್ಳ ಸುಮಾರು ಹಳೆಯ ಕಾಲದ ಕಾಲೇಜುಗಳೇ ಹೆಚ್ಚಿವೆ. ಹೀಗಿದ್ರು ಅವುಗಳ ದುರಸ್ತಿ ಕಾರ್ಯ ಸರಿಪಡಿಸದೇ ಇರುವುದು ಬೇಸರದ ಸಂಗತಿ. 

ಅತಿಥಿ ಉಪನ್ಯಾಸಕರ ಕೊರತೆ

ಇದರ ಜೊತೆ ಜೊತೆಗೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರ ಕೊರತೆ ಎದ್ದು ಕಾಣ್ತಿದೆ. ಸೂಕ್ತ ಮೂಲಭೂತ ಸೌಲಭ್ಯಗಳಿಲ್ಲಿದೇ ವಿಧ್ಯಾರ್ಥಿಗಳು ಬಳಲ್ತಿದ್ರೆ, ಮತ್ತೊಂದೆಡೆ ತಮಗೆ ಪಾಠ ಮಾಡುವ ಭೋದಕರೇ ಇಲ್ಲದಿದ್ದಾಗ ಮಕ್ಕಳ ಶೈಕ್ಷಣಿಕ ಮಟ್ಟ ಮಾತ್ರ ಹೇಗೆ ಮುಂದುವರೆಯಲು ಸಾಧ್ಯ. ಇನ್ನೂ ಮೊನ್ನೆ ತಾನೇ ಬಂದಂತಹ ದ್ವಿತೀಯ ಪಿಯುಸಿ ಫಲಿತಾಂಶ ಕೋಟೆನಾಡಿನ ಪೋಷಕರಲ್ಲಿ ದಿಗ್ಭ್ರಮೆಗೊಳಿಸಿದೆ. ಯಾಕಂದ್ರೆ ನಮ್ಮ ಮಕ್ಕಳಿಗೆ ಕಾಲೇಜುಗಳಲ್ಲಿ ಉತ್ತಮ ಶಿಕ್ಷಣ ದೊರಕುತ್ತಿದ್ಯೋ‌ ಇಲ್ವೋ ಎನ್ನುವ ಅನುಮಾನ ವ್ಯಕ್ತವಾಗ್ತಿದೆ. 

ಇದ್ರಿಂದ ಆಕ್ರೋಶಗೊಂಡ ಪೋಷಕರು SSLC ಫಲಿತಾಂಶದಲ್ಲಿ ಈ ಬಾರಿ ನಮ್ಮ ಜಿಲ್ಲೆ ನಾಲ್ಕನೇ‌ ಸ್ಥಾನ ಪಡೆಯುವ ಮೂಲಕ ಇತಿಹಾಸ ಸೃಷ್ಟಿ ಮಾಡಿತ್ತು. ಆದ್ರೆ ಪಿಯುಸಿ ಫಲಿತಾಂಶದಲ್ಲಿ ಕೊನೆ ಸ್ಥಾನ ಗಳಿಸೋದಕ್ಕೆ ಅಧಿಕಾರಿಗಳ ಸಮನ್ವಯತೆಯ ಕೊರತೆಯೇ ಕಾರಣ ಎಂದು ಗಂಭೀರ ಆರೋಪ ಮಾಡಿದ್ದಾರೆ. ಯಾಕಂದ್ರೆ, SSLC ಮಕ್ಕಳಿಗೆ ಅಧಿಕಾರಿಗಳಾಗಿ BRP, CRP, BEO, EO, DDPI ಈಗ ಹಲವು ಅಧಿಕಾರಿಗಳು ಹಾಗಾಗ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸ್ತಾ ಇರ್ತಾರೆ. ಆದ್ರೆ PUC ವಿಧ್ಯಾರ್ಥಿಗಳಿಗೆ ಮೇಲಾಧಿಕಾರಿ PU DD ಮಾತ್ರ ಆಗಿರ್ತಾರೆ. 

ಆಯಾ ಕಾಲೇಜಿನಲ್ಲಿ ಬರುವ ಪ್ರಾಂಶುಪಾಲರು ಹಾಗೂ ಉಪನ್ಯಾಸಕರು ಅವರನ್ನು ಯಾರೂ ಸರಿಯಾಗಿ ಪ್ರಶ್ನೆ ಮಾಡಲ್ಲ. ಹೀಗಿದ್ದಾಗ PU DD ಜೊತೆ ಪ್ರಾಂಶುಪಾಲರು ಹಾಗೂ ಉಪನ್ಯಾಸಕರ ಸಮನ್ವಯ ಅಷ್ಟಕಷ್ಟೆ ಇರುತ್ತೆ. ಇನ್ನಾದ್ರು ಜಿಲ್ಲಾಡಳಿತ ಇದನ್ನು ಮನಗಂಡು, ಸರ್ಕಾರಿ ಪದವಿ ಪೂರ್ವ ಕಾಲೇಜುಗಳಿಗೆ ಕೂಡಲೇ ಖಾಲಿ ಇರುವ ೧೦೦ಕ್ಕೂ ಅಧಿಕ ಉಪನ್ಯಾಸಕರ ನೇಮಕ ಮಾಡಬೇಕು. ಹಾಗೂ ಶಿಥಿಲಾವಸ್ಥೆಗೊಂಡಿರೋ ಕಾಲೇಜುಗಳು ದುರಸ್ತಿ ಪಡಿಸಿ ಮಕ್ಕಳಿಗೆ ಮೂಲಭೂತ ಸೌಕರ್ಯಗಳ ವ್ಯವತ ಕಲ್ಪಿಸಬೇಕು ಎಂದು ಪೋಷಕರು ಒತ್ತಾಯಿಸಿದರು.

131 ಉಪನ್ಯಾಸಕರ ಹುದ್ದೆಗಳು ಖಾಲಿ

ಇನ್ನೂ ಕೋಟೆನಾಡು ಪಿಯುಸಿ ಫಲಿತಾಂಶದಲ್ಲಿ ಕಟ್ಟ ಕಡೆಯ ಸ್ಥಾನ ಬರಲು ಏನು ಕಾರಣ? ಉಪನ್ಯಾಸಕರ ಕೊರತ ಯಾಕೆ ಆಗ್ತಿದೆ? ಕಾಲೇಜುಗಳಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ಯಾಕೆ ಆಗ್ತಿದೆ? ಅಂತೆಲ್ಲಾ ಪಿಯು ಡಿಡಿ ಅವರಿಗೆ ಕೇಳಿದ್ರೆ, ಜಿಲ್ಲೆಯಲ್ಲಿ ಒಟ್ಟು 128 ಕಾಲೇಜುಗಳಿಗೆ ಅದ್ರಲ್ಲಿ 31 ಸರ್ಕಾರಿ ಕಾಲೇಜುಗಳಿವೆ. ಅದ್ರಲ್ಲಿ 131 ಉಪನ್ಯಾಸಕರ ಹುದ್ದೆಗಳು ಖಾಲಿ ಇವೆ. 

ಬಡಮಕ್ಕಳಿಗೆ ಗುಡ್ ನ್ಯೂಸ್ ಬೆಂಗಳೂರಿನಲ್ಲಿ ಸಂಜೆ ಶಾಲೆ ಆರಂಭ

ಈ ಕುರಿತು ಮೇಲಿನ ಅಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ‌. ಕೂಡಲೇ ಭರ್ತಿ ಮಾಡುವುದಾಗಿ ನಮ್ಮ ಶಿಕ್ಷಣ ಇಲಾಖೆ ನಿರ್ದೇಶಕರು ಭರವಸೆ ಕೊಟ್ಟಿದ್ದಾರೆ. ಅದನ್ನು ಹೊರತು ಪಡಿಸಿ ಕೆಲ ಕಾಲೇಜುಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿದೆ ಎಂಬ ಮಾಹಿತಿ ಬಂದಿದೆ. ನಾನು ಅಧಿಕಾರ ಸ್ವೀಕರಿಸಿ ಒಂದು ತಿಂಗಳಾಗಿದೆ ಕೂಡಲೇ ಆ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ತೀವಿ ಎಂದು ತಿಳಿಸಿದರು.

ಒಟ್ಟಾರೆಯಾಗಿ ಸುಸಜ್ಜಿತ ಕಟ್ಟಡಗಳಲ್ಲಿ ಯಾವುದೇ ಉಪನ್ಯಾಸಕರ ಕೊರತೆಯಿಲ್ಲದೇ ಪಾಠ ಕೇಳಬೇಕಿದ್ದ ಮಕ್ಕಳಿಗೆ ಕೋಟೆನಾಡು ಶಿಕ್ಷಣ ಇಲಾಖೆಯ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿರೋದು ಖಂಡನೀಯ. ಇನ್ನಾದ್ರು ಎಚ್ಚೆತ್ತು ಮಕ್ಕಳಿಗೆ ಸೂಕ್ತ ಶಿಕ್ಷಣ ನೀಡಿ, ಮುಂದಿನ ಬಾರಿಯಾದ್ರು ಉತ್ತಮ ಫಲಿತಾಂಶದೊಂದಿಗೆ ನಮ್ಮ ಜಿಲ್ಲೆ ಉತ್ತುಂಗಕ್ಕೆ ಏರಿ ಈ ಕೆಟ್ಟ, ಕಳಪೆ ಹಣೆಪಟ್ಟಿಯಿಂದ ಹೊರಗೆ ಬರಲಿ ಎಂಬುದು ಜಿಲ್ಲೆಯ ಪ್ರತಿಯೊಬ್ಬ ಪೋಷಕರ ಆಶಯವಾಗಿದೆ. 
 

click me!