ಚಿತ್ರದುರ್ಗ: ಈ ಸರ್ಕಾರಿ ಶಾಲೆಯ ಮಕ್ಕಳಿಗೆ ಬಯಲಲ್ಲೇ ಪಾಠ..!

By Girish Goudar  |  First Published Dec 7, 2023, 8:06 PM IST

ಆಂತಕದಲ್ಲಿಯೇ ಮರದ ಕೆಳಗೆ ಪಾಠ ಕೇಳ್ತಿರೋ‌ ಮಕ್ಕಳ ಪರಿಸ್ಥಿತಿ ಹೇಳತೀರದು. ಶಾಲೆಯಲ್ಲಿ ಇರುವ ಎರಡು ಕೊಠಡಿಗಳು ಬಿದ್ದು ಹೋಗಿವೆ. ಅದ್ರಲ್ಲೇ ಕುಳಿತು ಪಾಠ ಕೇಳಲು ಭಯ ಆಗ್ತದೆ. ಆದ್ದರಿಂದ ನಮಗೆ ಶಿಕ್ಷಕರು, ಮರದ ಕೆಳಗೆ ಪಾಠ‌ ಹೇಳಿಕೊಡ್ತಾರೆ. 
 


ಕಿರಣ್.ಎಲ್. ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿತ್ರದುರ್ಗ

ಚಿತ್ರದುರ್ಗ(ಡಿ.07):  ಸರ್ಕಾರಿ ಶಾಲೆಗಳ ಉಳುವಿಗಾಗಿ ಸರ್ಕಾರಗಳು ಹತ್ತಾರು ಯೋಜನೆಗಳನ್ನು ಜಾರಿಗೆ ತರುತ್ತಲೇ ಇವೆ. ಆದ್ರೆ ಇಲ್ಲೊಂದು ಶಾಲೆಯಲ್ಲಿ ಮಕ್ಕಳಿಗೆ ಪಾಠ ಹೇಳಿ ಕೊಡುವುದಕ್ಕೂ ಸೂಕ್ತ ಕೊಠಡಗಳಿಲ್ಲಿದೇ, ಮರದ ಕೆಳಗೆ ಹಾಗೂ ಬಯಲಲ್ಲೇ ಪಾಠ ಹೇಳಿ ಕೊಡುವ ದುಸ್ಥಿತಿ ಬಂದಿದೆ. ಈ ಕುರಿತು ವರದಿ ಇಲ್ಲಿದೆ.....,

Tap to resize

Latest Videos

undefined

ಸರ್ಕಾರಿ ಶಾಲೆಗಳು ಉಳಿಯಬೇಕು ಎಂದು ಜನಪ್ರತಿನಿಧಿಗಳು ನಿತ್ಯ ಬೊಬ್ಬೆ ಹೊಡೆಯುತ್ತಾರೆ. ಆದ್ರೆ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕಿನ ನೇರಲಗುಂಟೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನ ನೋಡಿದ್ರೆ, ಎತ್ತ ಸಾಗುತ್ತಿವೆ ಸರ್ಕಾರಿ ಶಾಲೆಗಳು ಎನ್ನುವ ಪ್ರಶ್ನೆ ಉದ್ಭವವಾಗುತ್ತದೆ. ಈ ಶಾಲೆಯಲ್ಲಿ ಒಂದನೇ ತರಗತಿಯಿಂದ ಏಳನೇ ತರಗತಿವರೆಗೆ ಒಟ್ಟು ೧೫೦ಕ್ಕೂ ಅಧಿಕ ವಿಧ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಆದ್ರೆ ವರ್ಷಾರಂಭದಲ್ಲಿ ಸುರಿದ ಮಳೆಗೆ ಎರಡು ಕೊಠಡಿಗಳು ಸಂಪೂರ್ಣ ವಿನಾಶದ ಹಂಚಿಗೆ ತಲುಪಿದ್ದು, ಮಕ್ಕಳಿಗೆ ಬಯಲೇ ಪಾಠ ಶಾಲೆಯಾಗಿದೆ. ಮರದ ಕೆಳಗೆ ಪಾಠ ಕೇಳ್ತಿರೋ ಮಕ್ಕಳಿಗೆ ಸೂಕ್ತ ಕೊಠಡಿಗಳಿಲ್ಲದೇ ವಿಧ್ಯಾಭ್ಯಾಸ ಮಾಡುವುದಕ್ಕೂ ಹರಸಾಹಸ ಪಡುವಂತಾಗಿದೆ. ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಲು ಪೋಷಕರು ಯಾಕೆ ಹಿಂದೇಟು ಹಾಕ್ತಾರೆ ಅಂದ್ರೆ ಈ ರೀತಿ ದುಸ್ಥಿತಿಯ ಪರಿಸರವೇ ಕಾರಣ. ಸರ್ಕಾರಿ ಶಾಲೆಗಳು ಉಳಿಯಬೇಕು ಎಂದು ಜನಪ್ರತಿನಿಧಿಗಳು ಬರೀ ಬಾಯಿ ಮಾತಲ್ಲಿ ಹೇಳಿದ್ರೆ ಸಾಲದು, ಉತ್ತಮ ನಿರ್ವಹಣೆ ಮಾಡುವ ಮೂಲಕ ಉಳಿಸಬೇಕಿದೆ ಎಂದು ಸ್ಥಳೀಯರಾದ ಶಶಿ ಆಗ್ರಹಿಸಿದರು.

ಕಲಬುರಗಿ: ಸರ್ಕಾರಿ ಶಾಲೆಯಲ್ಲಿ ಮಕ್ಕಳ ಬಿಸಿಯೂಟಕ್ಕೆ ಕಂಟಕ..!

ಇನ್ನು ಆಂತಕದಲ್ಲಿಯೇ ಮರದ ಕೆಳಗೆ ಪಾಠ ಕೇಳ್ತಿರೋ‌ ಮಕ್ಕಳ ಪರಿಸ್ಥಿತಿ ಹೇಳತೀರದು. ಶಾಲೆಯಲ್ಲಿ ಇರುವ ಎರಡು ಕೊಠಡಿಗಳು ಬಿದ್ದು ಹೋಗಿವೆ. ಅದ್ರಲ್ಲೇ ಕುಳಿತು ಪಾಠ ಕೇಳಲು ಭಯ ಆಗ್ತದೆ. ಆದ್ದರಿಂದ ನಮಗೆ ಶಿಕ್ಷಕರು, ಮರದ ಕೆಳಗೆ ಪಾಠ‌ ಹೇಳಿಕೊಡ್ತಾರೆ. ಹೊರಗಡೆ‌ ಕುಳಿತು ಪಾಠ ಕೇಳುವುದಕ್ಕೆ ನಮಗೆ ಬೇಸರ ಆಗ್ತದೆ. ಕೊಠಡಿಗಳಲ್ಲದೇ ಮೂಲಭೂತ ಸೌಕರ್ಯಗಳ ಸಮಸ್ಯೆಯೂ ಇದೆ. ಆದ್ದರಿಂದ ಸರ್ಕಾರ ನಮ್ಮ ಕಡೆ ಕಣ್ಬಿಟ್ಟು, ಎರಡು ನೂತನ ಕೊಠಡಿಗಳನ್ನು ಕಟ್ಟಿಸಿ ಕೊಡಬೇಕು ಎಂದು ವಿದ್ಯಾರ್ಥಿನಿ ವರಲಕ್ಷ್ಮಿ ಒತ್ತಾಯಿಸಿದರು.

ಒಟ್ಟಾರೆಯಾಗಿ ಸರ್ಕಾರಿ ಶಾಲೆಗಳು ಅಂದ್ರೆ ಮೂಗು ಮುರಿಯುವ ಜನರ ಮಧ್ಯೆ, ಇನ್ನೂ ಶಾಲೆಗಳಲ್ಲಿ ಈ ದುಸ್ಥಿತಿ ಇರೋದು ಖಂಡನೀಯ. ಕೂಡಲೇ ಶಿಕ್ಷಣ ಇಲಾಖೆ ಎಚ್ಚೆತ್ತು ಮಕ್ಕಳಿಗೆ ತೊಂದರೆ ಆಗದಂತೆ ಸೂಕ್ತ ಕೊಠಡಿಗಳ ವ್ಯವಸ್ಥೆ ಕಲ್ಪಿಸಬೇಕಿದೆ.

click me!