ಅಬ್ಬಬ್ಬಾ..ಧೋನಿ ಮಗಳು ಝಿವಾ ಕಲೀತಿರೋ ಸ್ಕೂಲ್‌ ಫೀಸ್ ಇಷ್ಟೊಂದಾ?

By Vinutha Perla  |  First Published Dec 7, 2023, 2:49 PM IST

ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಧೋನಿ ಸೋಷಿಯಲ್ ಮೀಡಿಯಾದಲ್ಲಿ ಅಷ್ಟು ಸಕ್ರಿಯವಾಗಿಲ್ಲದಿದ್ದರೂ, ಅವರ ಮಗಳು ಝಿವಾ, ವೀಡಿಯೋ ಆಗಾಗ ವೈರಲ್ ಆಗುತ್ತಿರುತ್ತದೆ. ಆದ್ರೆ ಧೋನಿ ಮಗಳು ಕಲಿತೀರೋ ಸ್ಕೂಲ್ ಫೀಸ್ ಎಷ್ಟೆಂದು ನಿಮ್ಗೆ ಗೊತ್ತಿದ್ಯಾ?
 


ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಅವರ ವೃತ್ತಿ ಜೀವನದ ಬಗ್ಗೆ, ಕ್ರಿಕಟ್ ಸಾಧನೆಗಳ ಬಗ್ಗೆ ಅಭಿಮಾನಿಗಳಿಗೆ ಗೊತ್ತಿದೆ. ಹಾಗೆಯೇ ಅವರ ವೈಯುಕ್ತಿಕ ಜೀವನದ ಬಗ್ಗೆ ತಿಳಿದುಕೊಳ್ಳಲು ಹಲವರಿಗೆ ಕುತೂಹಲವಿದೆ. ಧೋನಿ ಪತ್ನಿ ಸಾಕ್ಷಿ ಹಾಗೂ ಪುತ್ರಿ ಝಿವಾ ಕುರಿತಾಗಿರೋ ವಿಚಾರ ಆಗಾಗ ಸುದ್ದಿಯಲ್ಲಿರುತ್ತದೆ. ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚಿನ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರೋ ಧೋನಿ, ಆಗಾಗ ಮಗಳು ಝಿವಾ ಜೊತೆ ವೀಡಿಯೋ ಮಾಡಿ ಶೇರ್ ಮಾಡಿಕೊಳ್ಳುತ್ತಿರುತ್ತಾರೆ.

ಧೋನಿ ಮಗಳು ಝಿವಾ, ವೀಡಿಯೋ ಆಗಾಗ ವೈರಲ್ ಆಗುತ್ತಿರುತ್ತದೆ. ಈ ಹಿಂದೆ ಭೋಜ್‌ಪುರಿ ಹಾಗೂ ತಮಿಳು ಭಾಷೆಯಲ್ಲಿ (Language) ಮಾತನಾಡಿದ ಝಿವಾ ವೀಡಿಯೋ ವೈರಲ್ ಆಗಿತ್ತು. ಇದಕ್ಕೂ ಹಿಂದೆ ಮಲಯಾಳಂನಲ್ಲಿ ಝಿವಾ ಹಾಡಿದ್ದ ಹಾಡಿನ ವೀಡಿಯೋ ಎಲ್ಲರ ಗಮನ ಸೆಳೆದಿತ್ತು. ಮುದ್ದು ಮುದ್ದಾಗಿ ಮಾತನಾಡುವ ಝಿವಾ ತುಂಟತನದ ವೀಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತವೆ. ಹಾಗಾಗಿಯೇ ಧೋನಿ ಮಗಳ (Dhonis Daughter) ಬಗ್ಗೆ ತಿಳಿದುಕೊಳ್ಳೋಕೆ ಎಲ್ಲರಿಗೂ ಕುತೂಹಲವಿದೆ. 

Latest Videos

undefined

ಜಾಹೀರಾತು ಲೋಕಕ್ಕೆ ಕಾಲಿಟ್ಟ ಧೋನಿ ಪುತ್ರಿ ಝಿವಾ

ಟೌರಿಯನ್ ವರ್ಲ್ಡ್ ಸ್ಕೂಲ್‌ನ ವಿದ್ಯಾರ್ಥಿನಿ ಝಿವಾ
ಫೆಬ್ರವರಿ 6, 2006ರಂದು ಜನಿಸಿದ ಝಿವಾ ಟೌರಿಯನ್ ವರ್ಲ್ಡ್ ಸ್ಕೂಲ್‌ನ ವಿದ್ಯಾರ್ಥಿನಿ. ಟೌರಿಯನ್ ವರ್ಲ್ಡ್‌, ರಾಂಚಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅತ್ಯಂತ ಹೆಸರಾಂತ ಬೋರ್ಡಿಂಗ್ ಶಾಲೆಗಳಲ್ಲಿ ಒಂದಾಗಿದೆ. ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಹಳೆಯ ವಿದ್ಯಾರ್ಥಿಯಾದ ಯುವ ದಾರ್ಶನಿಕ ಅಮಿತ್ ಬಜ್ಲಾರಿಂದ 2008ರಲ್ಲಿ ಇದನ್ನು ಸ್ಥಾಪಿಸಿದರು. ಇದು ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಶಿಕ್ಷಣ ನೀಡುವುದಕ್ಕೆ ಹೆಸರುವಾಸಿಯಾಗಿದೆ.

ಪ್ರಸ್ತುತ ಮುಂಬೈನಲ್ಲಿ ನೆಲೆಸಿರುವ ಅಮಿತ್ ಬಜ್ಲಾ, 2008ರಿಂದ ಶಾಲೆಯ ಅಧ್ಯಕ್ಷರಾಗಿದ್ದಾರೆ. 65 ಎಕರೆ ಕ್ಯಾಂಪಸ್‌ನಲ್ಲಿ ಸ್ಥಾಪಿಸಲಾದ ಶಾಲೆಯು ಸಮಗ್ರ ವಿಧಾನವನ್ನು ಹೊಂದಿದೆ. ಸಾವಯವ ಕೃಷಿ (Agriculture), ಕುದುರೆ ಸವಾರಿ ಮತ್ತು ವಿವಿಧ ಸೌಲಭ್ಯಗಳನ್ನು (Facilities) ನೀಡುತ್ತದೆ. ಶೈಕ್ಷಣಿಕ ಜೊತೆಗೆ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಒತ್ತು ನೀಡುವ ಕೆಲಸವನ್ನೂ ಈ ಸಂಸ್ಥೆ ಮಾಡುತ್ತದೆ. ಹಲವಾರು ಅಂತರರಾಷ್ಟ್ರೀಯ ಶಿಕ್ಷಕರನ್ನು ಈ ಶಾಲೆ (School) ಒಳಗೊಂಡಿದೆ. ಕ್ಯಾಂಪಸ್ ಸಾವಯವ ಕೃಷಿಯಿಂದ ಹಿಡಿದು ಕುದುರೆ ಸವಾರಿಯವರೆಗಿನ ಸೌಲಭ್ಯಗಳನ್ನು ಒದಗಿಸುತ್ತದೆ, ವಿದ್ಯಾರ್ಥಿಗಳಿಗೆ ಸಮಗ್ರ ಅಭಿವೃದ್ಧಿ ವಿಧಾನವನ್ನು ಖಾತ್ರಿಪಡಿಸುತ್ತದೆ. ದೈಹಿಕ ಮತ್ತು ಮಾನಸಿಕ ಸ್ವಾಸ್ಥ್ಯವನ್ನು ಬೆಳೆಸಲು ಕ್ರೀಡೆಗಳಿಗೆ ವಿಶೇಷ ಒತ್ತು ನೀಡಲಾಗುತ್ತದೆ.

ಧೋನಿ ಎರಡನೇ ಸಲ ತಂದೆಯಾದ್ರಾ..? ಪತ್ನಿ ಸಾಕ್ಷಿ ಹಂಚಿಕೊಂಡ ಫೋಟೋ ಈಗ ವೈರಲ್..!

ಸುಸಜ್ಜಿತ ವಾತಾವರಣವಿರುವ ಶಾಲೆಯ ಫೀಸ್ ಇಷ್ಟೊಂದಾ?
ಶಾಲೆಯ ಶುಲ್ಕ ಇತರ ಶಾಲೆಗಳಿಗೆ ಹೋಲಿಸಿದಾಗ ಹೆಚ್ಚಿದ್ದರೂ, ಗುಣಮಟ್ಟದ ಶಿಕ್ಷಣ ಮತ್ತು ಸುಸಜ್ಜಿತ ವಾತಾವರಣ ಇಲ್ಲಿದೆ. ಎಲ್‌ಕೆಜಿಯಿಂದ 8ನೇ ತರಗತಿ ವರೆಗಿನ ಅವಧಿಯ ಬೋರ್ಡರ್ ಮಗುವಿಗೆ ವಾರ್ಷಿಕ ಶುಲ್ಕ (Annual Fees) ಸುಮಾರು 4.40 ಲಕ್ಷ ರೂ. ಆಗಿದೆ. 9ರಿಂದ 12ನೇ ತರಗತಿಯವರೆಗೆ ಸಮವಸ್ತ್ರ, ಪಠ್ಯಪುಸ್ತಕಗಳು, ಲೇಖನ ಸಾಮಗ್ರಿಗಳು, ಚಳಿಗಾಲದ ಸಮವಸ್ತ್ರಗಳು ಮತ್ತು ಕ್ರೀಡಾ ಉಡುಪುಗಳನ್ನು ಒಳಗೊಂಡಂತೆ ಇದು ಸರಿಸುಮಾರು 4.80 ಲಕ್ಷ ರೂ. ಆಗಿರುತ್ತದೆ.

ಟೌರಿಯನ್ ವರ್ಲ್ಡ್ ಸ್ಕೂಲ್‌ನಲ್ಲಿ ಝಿವಾ ಧೋನಿ ಶೈಕ್ಷಣಿಕ ಪ್ರಯಾಣವು ತಮ್ಮ ಮಗಳಿಗೆ ಪೋಷಣೆ ಮತ್ತು ಸಮೃದ್ಧ ಶೈಕ್ಷಣಿಕ ವಾತಾವರಣವನ್ನು ಒದಗಿಸುವ ಧೋನಿ ಕುಟುಂಬದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.

click me!