ಮಕ್ಕಳ ಪಾಲಿನ ರೋಗಗ್ರಸ್ತ ಅಂಗನವಾಡಿ ಇದ್ದಿದ್ದು ಮೈಸೂರಿನ ನರಸಿಂಹರಾಜ ಕ್ಷೇತ್ರದ ಶಾಸಕ ತನ್ವೀರ್ ಸೇಠ್ ಪ್ರತಿನಿಧಿಸುವ ಎಲ್ಲಮ್ಮ ಬಡಾವಣೆಯಲ್ಲಿ. ಹೆಸರಿಗಷ್ಟೇ ಅಂಗನವಾಡಿ ರೂಪದಲ್ಲಿದ್ದ ಇಲ್ಲಿ 60 ಮಕ್ಕಳ ಸಂಖ್ಯಾಬಲ ಇತ್ತು. ಆದ್ರೆ ಬರುತ್ತಾ ಇದ್ದಿದ್ದು ಮಾತ್ರ 25 ಮಕ್ಕಳು.
ಮಧು.ಎಂ.ಚಿನಕುರಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಮೈಸೂರು
ಮೈಸೂರು(ಡಿ.07): ಮಕ್ಕಳ ಅಪೌಷ್ಟಿಕತೆ ದೂರಮಾಡಿ ಬುದ್ದಿಮಟ್ಟ, ದೈಹಿಕ ಬೆಳವಣಿಗೆಗೆ ಬುನಾದಿ ಹಾಕೋಕೆ ಸರ್ಕಾರ ಕೋಟಿ ಕೋಟಿ ವ್ಯಯ ಮಾಡಿ ಅಂಗನವಾಡಿ ಮಾಡಿದೆ. ಆದ್ರೆ ಸಿಎಂ ತವರಿನ ಅಂಗನವಾಡಿಯೊಂದು ಮಕ್ಕಳ ಬೆಳವಣಿಗೆ ಬುನಾದಿ ಆಗೋ ಸರ್ವರೋಗಗಳ ಕೂಪವಾದಂತಾಗಿದೆ. ವರದಿಯಿಂದ ಎಚ್ಚೆತ್ತ ಅಧಿಕಾರಿಗಳು ಮಕ್ಕಳನ್ನು ಶಿಫ್ಟ್ ಮಾಡಿಸಿದ್ದಾರೆ.
undefined
ಮೇಲೆ ನೋಡಿದ್ರೆ ತಳಕು ಒಳಗೆ ಹುಳುಕು ಅಂತಾ ಕೆಲವೊಂದನ್ನ ಕರಿತಾರೆ. ಆದ್ರೆ ಈ ಆಂಗನವಾಡಿ ಕಥೆನೂ ಹಾಗೆನೆ. ಮೇಲೂ ಹುಳುಕು, ಒಳಗೆ ಹುಳುಕೋ ಹುಳುಕು ಅನ್ನುವಂತಿದೆ. ಮಕ್ಕಳ ಬೆಳವಣಿಗೆಗೆ ಪೂರಕವಾಗಬೇಕಿದ್ದ ಈ ಅಂಗನವಾಡಿ ಹಂದಿ ಗೂಡಾಗಿ ಪರಿಣಮಿಸಿದೆ. ಹೆಗ್ಗಣ, ಇಲಿಗಳು ಕೆರೆದಿಯೋ ಮಣ್ಣಿನ ಗುಡ್ಡೆಯ ಮೇಲೇಯೇ ಕುಳಿತು, ಪಾಠ ಊಟ ಮಾಡಬೇಕಾದ ಅನಿವಾರ್ಯತೆ ಇತ್ತು. ಅಂದಹಾಗೆ ಮಕ್ಕಳ ಪಾಲಿನ ರೋಗಗ್ರಸ್ತ ಅಂಗನವಾಡಿ ಇದ್ದಿದ್ದು ಮೈಸೂರಿನ ನರಸಿಂಹರಾಜ ಕ್ಷೇತ್ರದ ಶಾಸಕ ತನ್ವೀರ್ ಸೇಠ್ ಪ್ರತಿನಿಧಿಸುವ ಎಲ್ಲಮ್ಮ ಬಡಾವಣೆಯಲ್ಲಿ. ಹೆಸರಿಗಷ್ಟೇ ಅಂಗನವಾಡಿ ರೂಪದಲ್ಲಿದ್ದ ಇಲ್ಲಿ 60 ಮಕ್ಕಳ ಸಂಖ್ಯಾಬಲ ಇತ್ತು. ಆದ್ರೆ ಬರುತ್ತಾ ಇದ್ದಿದ್ದು ಮಾತ್ರ 25 ಮಕ್ಕಳು. ಈ ರೀತಿಯ ಶೋಚನೀಯ ಸ್ಥಿತಿಯಲ್ಲಿ ಮಕ್ಕಳು ಅಂಗನವಾಡಿಯಲ್ಲಿ ಶಿಕ್ಷಣ ಕಲಿಯುತ್ತಿದ್ದ ಬಗ್ಗೆ ಸರ್ಕಾರದ ಕಣ್ಣು ತೆರೆಸುವ ಕೆಲಸ ಆಗಿದೆ.
ಯಾವುದನ್ನೂ ಉಚಿತವಾಗಿ ಕೊಡಬಾರದು ಎಂದಿರುವ ನಾರಾಯಣಮೂರ್ತಿಗೆ ಬಡವರ ಕಷ್ಟ ಗೊತ್ತಿಲ್ಲ: ಸಚಿವ ಮಹದೇವಪ್ಪ
ವರದಿ ಪ್ರಸಾರವಾಗುತ್ತಲೇ ಸ್ಥಳಕ್ಕೆ ದೌಡಾಯಿಸಿ ಬಂದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಅಂಗನವಾಡಿ ಕೇಂದ್ರದಲ್ಲಿದ್ದ ಮಕ್ಕಳನ್ನ ಪಕ್ಕದಲ್ಲೇ ಇದ್ದ ಸಮುದಾಯ ಭವನಕ್ಕೆ ಶಿಫ್ಟ್ ಮಾಡಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಬಸವರಾಜು ಈ ದುಸ್ಥಿತಿ ನನ್ನ ಗಮನಕ್ಕೆ ಬಂದಿಲ್ಲ. ಗಮನಕ್ಕೆ ತರದ ಸಿಬ್ಬಂದಿ ಮೇಲೆ ಕ್ರಮ ಕೈಗೊಳ್ತೀನಿ ಎಂದಿದ್ದಾರೆ. ಶಾಸಕರಿಂದ ಅನುದಾನ ಬಿಡುಗಡೆ ಆಗಿದೆ. ಜಾಗ ಗುರುತು ಮಾಡಲಾಗಿದ್ದು ಆದಷ್ಟು ಬೇಗ ಕಟ್ಟಡ ನಿರ್ಮಾಣ ಮಾಡ್ತೀವಿ ಎಂದಿದ್ದಾರೆ.
ಒಟ್ಟಿನಲ್ಲಿ, ಮಕ್ಕಳ ಭವಿಷ್ಯಕ್ಕೆ ಬೆಳಕಾಗಬೇಕಾದ ಅಂಗನವಾಡಿ ಮಕ್ಕಳನ್ನ ಕತ್ತಲಿಗೆ ದೂಡಿತ್ತು. ವರದಿಯಿಂದ ಎಚ್ಚೆತ್ತ ಅಧಿಕಾರಿಗಳು ಮಕ್ಕಳನ್ನ ಶಿಫ್ಟ್ ಮಾಡಿಸಿದ್ದಾರೆ. ಮುಂದಾದ್ರೂ ಎಚ್ಚೆತ್ತು ಈ ರೀತಿಯ ಘಟನೆಗಳಿಗೆ ಆಸ್ಪದ ನೀಡದೆ ಮಕ್ಕಳಿಗೆ ಇಲಾಖೆ ಉತ್ತಮ ಭವಿಷ್ಯ ರೂಪಿಸಲಿ ಅನ್ನೋದು ನಮ್ಮ ಆಶಯ.