* ಬರಗೂರು ಪಠ್ಯಪುಸ್ತಕ ಸಮಿತಿ ನೀಡಿದ ಬಸವಣ್ಣ ಪಠ್ಯ ಮುಂದುವರಿಕೆ
* ಪಿಯುಸಿ ಪಠ್ಯ ಪರಿಷ್ಕರಣೆ ಮಾಡಲ್ಲ
* ಬೆಂಗಳೂರಿನಲ್ಲಿ ಶಿಕ್ಷಣ ಸಚಿವ ಬಿಸಿ ನಾಗೇಶ್ ಸ್ಪಷ್ಟನೆ
ಬೆಂಗಳೂರು, (ಜೂನ್.07): ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿಯನ್ನು ವಿಸರ್ಜಿಸಿರುವ ಕಾರಣ, ಪಿಯುಸಿ ಪಠ್ಯಪುಸ್ತಕ ಪರಿಷ್ಕರಣೆಯ ವರದಿಯನ್ನು ಪಡೆಯುವುದಿಲ್ಲ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಇಂದು(ಮಂಗಳವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಲ್ಲದಿರುವವರ ಕೈಯಿಂದ ಪಠ್ಯ ಪರಿಷ್ಕರಣೆ ಮಾಡಲಾಗಲ್ಲ. ಈಗ ಯಾವುದೇ ಪರಿಷ್ಕರಣೆ ಮಾಡಲ್ಲ. ಪಿಯುಸಿ ಪಠ್ಯ ಎತಾವತ್ತಾಗಿ ಇರಲಿದೆ. ಪಠ್ಯ ಪುಸ್ತಕ ಸಮಿತಿ ವಿಸರ್ಜನೆ ಮಾಡಲಾಗಿದೆ. ಹಾಗಾಗಿ ಅವರಿಂದ(ರೋಹಿತ್ ಚಕ್ರತೀರ್ಥ ಸಮಿತಿಯಿಂದ) ಪಠ್ಯ ಪರಿಷ್ಕರಣೆ ಮಾಡಿಸಲ್ಲ ಎಂದು ಸ್ಪಷ್ಟಪಡಿಸಿದರು.
ಎಚ್ಚೆತ್ತ ಸರ್ಕಾರ, PU ಪಠ್ಯ ಪರಿಷ್ಕರಣೆ ಸಮಿತಿಯಿಂದ ರೋಹಿತ್ ಚಕ್ರತೀರ್ಥ ಔಟ್
ಬಸವಣ್ಣ ಪಠ್ಯ ಪರಿಷ್ಕಣೆ ಮಾಡಿರುವ ವಿಚಾರಕ್ಕೆ ಪ್ತತಿಕ್ರಿಯಿಸಿರುವ ನಾಗೇಶ್. ಬರಗೂರು ರಾಮಚಂದ್ರಪ್ಪ ನೀಡಿದ ಪಠ್ಯವನ್ನೇ ಮುಂದುವರೆಸಲಿದ್ದೇವೆ. ಅದರಲ್ಲಿರೋ ಬಗ್ಗೆ ಯಾರಿಗೂ ಆಕ್ಷೇಪ ಇಲ್ಲ. ಹಾಗಾಗಿ ಬರಗೂರು ಪಠ್ಯಪುಸ್ತಕ ಸಮಿತಿ ನೀಡಿದ ಬಸವಣ್ಣ ಪಠ್ಯ ಮುಂದುವರೆಯಲಿದೆ. ಅಂಬೇಡ್ಕರ್ ಪಠ್ಯ ಸೇರಿದಂತೆ ಇತರೆ ಪಠ್ಯಗಳಲ್ಲಿರೋ ಲೋಪಗಳನ್ನೂ ಸರಿಪಡಿಸುತ್ತೇವೆ ಎಂದು ಮಾಹಿತಿ ನೀಡಿದರು.
ಸಿಎಂ ಭೇಟಿ ಮಾಡಿ ಎರಡು ನಿರ್ಣಯ ತೆಗೆದುಕೊಂಡಿದ್ದೇವೆ. ಸಿದ್ರಾಮಯ್ಯ ಸರ್ಕಾರ ಏನು ತೆಗೆದು ಏನು ಇಂಟ್ರಡ್ಯೂಸ್ ಮಾಡಿದ್ರು?
ನಮ್ಮ ಸರ್ಕಾರದಲ್ಲಿ ಏನು ಪಠ್ಯಪುಸ್ತಕ ಪರಿಷ್ಕರಣೆ ಆಗಿದೆ. ಅದೆಲ್ಲವನ್ನೂ ಜನರ ಮುಂದಿಡುತ್ತೇವೆ ಜನರೇ ಪ್ರಭುಗಳು, ಜನರು ತಪ್ಪು ಅಂದ್ರೆ ಬದಲಾಯಿಸುತ್ತೇವೆ ಎಂದರು.
ಬಸವಣ್ಣನ ಬಗ್ಗೆ ಹಿಂದೆ ಏನಿತ್ತೋ ಅದೆಲ್ಲ ಮಾಡ್ತೀವಿ ಅಂತ ಸಿಎಂ ಸ್ಪಷ್ಟನೆ ಕೊಟ್ಟಿದ್ದಾರೆ. ಅಂಬೇಡ್ಕರ್ ಅವರದು ಏನು ಬಿಟ್ಟು ಹೋಗಿದೆಯೋ ಅದನ್ನು ಸೇರಿಸುತ್ತೇವೆ ಅಂತ ಹೇಳಿದ್ದೇವೆ. ಇಷ್ಟು ಹೇಳಿದ ಮೇಲೂ ರಾಜಕೀಯಗೊಳಿಸುತ್ತಿರುವುದು ಹುನ್ನಾರ. ರಾಜಕೀಯವಾಗಿ ಉತ್ತರ ಕೊಡೋದಕ್ಕೆ ನಾವೂ ಸಿದ್ದ ಎಂದು ಗುಡುಗಿದರು.
'ಸಂವಿಧಾನ ಶಿಲ್ಪಿ' ಪದ ಕೈ ಬಿಟ್ಟು ವಿವಾದ ಮಾಡಿಕೊಂಡಿತಾ ಪಠ್ಯ ಪರಿಷ್ಕರಣಾ ಸಮಿತಿ..?
ಜನರು ಕೆಂಪೇಗೌಡ ಸೇರಿಸಿದ್ದು ತಪ್ಪು ಅನಿಸಿದರೆ ಹೇಳಲಿ. ಏರುತಿದೆ ಹಾರುತಿದೆ ಬಾವುಟ ಅನ್ನೋದನ್ನು ತೆಗೆದುಹಾಕಿದ್ದರೆ ಹೇಳಲಿ
ಜನಪ್ರತಿನಿಧಿಗಳು ಮಾತ್ರ ಎಲ್ಲದಕ್ಕೂ ಹಕ್ಕು ಬಾಧ್ಯರು ಅಂತಲ್ಲ. ಬರಗೂರು ರಾಮಚಂದ್ರಪ್ಪ ಯಾವ ವಿಷಯವನ್ನು ತೆಗೆದು ಹಾಕಿದ್ದರು?
ಸಿಂಧೂ ಸಂಸ್ಕೃತ ತೆಗೆದು ನೆಹರೂ ಪತ್ರ ಸೇರಿಸಿದ್ದರುಈ ಮಣ್ಣು ನಮ್ಮದು ಈ ನಾಡು ನಮ್ಮದು ಎಂಬ ಪದ್ಯವನ್ನು ಬರಗೂರು ತೆಗೆದು ಹಾಕಿದ್ದರು. ಅವರ ಸಮಿತಿ ಕಾಲದಲ್ಲಿ ಯಾಕೆ ತೆಗೆದೆ ಯಾಕೆ ಹಾಕಿದ್ದೆ ಅಂತ ಸಿದ್ದರಾಮಯ್ಯ ಜವಾಬ್ದಾರಿಯುತ ಉತ್ತರ ಕೊಡಬೇಕಿತ್ತು. ಅದನ್ನು ಸಿದ್ದರಾಮಯ್ಯ ಮಾಡಲೇ ಇಲ್ಲ. ಸಿದ್ದರಾಮಯ್ಯಗೂ ನಾನು ಉತ್ತರ ಕೊಡ್ತಿಲ್ಲ ಎಂದು ಹೇಳಿದರು.
ಜನರ ಮುಂದೆ ಇಟ್ಟ ಮೇಲೆ ಜನರೇ ತೀರ್ಮಾನ ಮಾಡಲಿ. ಲೋಪ ದೋಷ ಆಗಿದ್ದರೆ ಜನರೇ ಹೇಳಲಿ. ಶಿಕ್ಷಣ ಇಲಾಖೆ ತಜ್ಞರ ಜೊತೆ ಚರ್ಚೆ ಮಾಡಿಯೇ ತಿರ್ಮಾನ ಮಾಡುತ್ತೇವೆ. ಇನ್ನೊಂದು ವಾರದ ಒಳಗೆ ಪಬ್ಲಿಕ್ ಡೊಮೇನ್ ಗೆ ಹೋಗ್ತೀವಿ ಎಂದು ತಿಳಿಸಿದರು.