ವೀಲ್ ಚೇರ್ ನಲ್ಲಿ ಕುಳಿತು UPSC ಪರೀಕ್ಷೆಯಲ್ಲಿ ಸಾಧನೆ ಮಾಡಿದ ಇಸ್ರೋ ವಿಜ್ಞಾನಿ!

By Santosh Naik  |  First Published Jun 7, 2022, 5:15 PM IST

ಇಪ್ಪತ್ತೈದು ವರ್ಷದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ವಿಜ್ಞಾನಿ ಕಾರ್ತಿಕ್ ಕನ್ಸಾಲ್ ಅವರು ಯುಪಿಎಸ್ಸಿ ಪರೀಕ್ಷೆಯ 2ನೇ ಯತ್ನದಲ್ಲಿ ಯಶಸ್ವಿಯಾಗಿದ್ದರೆ. ವೀಲ್ ಚೇರ್ ನಲ್ಲೇ ಕುಳಿತೇ ಪ್ರಯಾಣ ಮಾಡುವ ಕಾರ್ತಿಕ್ ಕನ್ಸಾಲ್, 271ನೇ ಶ್ರೇಯಾಂಕ ಪಡೆದುಕೊಂಡಿದ್ದಾರೆ. ಅವರ ಈ ಸಾಹಸಿಕ ಪ್ರಯಾಣದ್ದೇ ಇನ್ನೊಂದು ಸ್ಫೂರ್ತಿದಾಯಕ ಕಥೆ.


ಬೆಂಗಳೂರು (ಜೂನ್ 7): ಈ ಬಾರಿಯ ಯುಪಿಎಸ್ಸಿ (UPSC) ಫಲಿತಾಂಶ ಪ್ರಕಟವಾದ ಬೆನ್ನಲ್ಲಿಯೇ ಸಾಕಷ್ಟು ಜನರ ಭವಿಷ್ಯವೇ ಇದರಿಂದ ಬದಲಾದವು. ಯುಪಿಎಸ್ಸಿ ಪರೀಕ್ಷೆಯಯಲ್ಲಿ ಟಾಪರ್ ಗಳಾದವರ ಕಥೆಗಳು, ಅದಕ್ಕಾಗಿ ಅವರು ಪಟ್ಟ ಶ್ರಮಗಳ ಬಗ್ಗೆ ಸಾಕಷ್ಟು ಕಥೆಗಳು ಪ್ರಕಟವಾದವು. ತನ್ನ ಎದುರಿಗೆ ಅಗಾಧವಾಗಿದ್ದ ದೈಹಿಕ ನ್ಯೂನ್ಯತೆಯನ್ನು ಸವಾಲಾಗಿ ಸ್ವೀಕರಿಸಿದ ಇಸ್ರೋ ವಿಜ್ಞಾನಿ (ISRO Scientist) ಕಾರ್ತಿಕ್ ಕನ್ಸಾಲ್ (Kartik Kansal), ಯುಪಿಎಸ್ಸಿ ಪರೀಕ್ಷೆಯಲ್ಲಿ ಯಶಸ್ವಿನ ಸವಿ ಕಂಡಿದ್ದಾರೆ.

ಎಂಟು ವರ್ಷದ ವಯಸ್ಸಿನಲ್ಲಿ, ಕಾರ್ತಿಕ್ ಗೆ ಮಸ್ಕ್ಯುಲಾರ್ ಡಿಸ್ಟ್ರೋಫಿ (Muscular Dystroph) ಇರುವುದು ಪತ್ತೆಯಾಗಿದ್ದು. ಈ ಅನಾರೋಗ್ಯದಲ್ಲಿ ಕ್ರಮೇಣವಾಗಿ ಅಂಗಗಳು ಕಾರ್ಯನಿರ್ವಹಿಸುವುದನ್ನು ನಿಲ್ಲಿಸುತ್ತವೆ. ಅದರಲ್ಲೂ ಪ್ರಮುಖವಾಗಿ ತಮ್ಮ ಕಾಲಿನ ಮೇಲೆ ನಿಲ್ಲುವುದು ವ್ಯಕ್ತಿಗೆ ಸಾಧ್ಯವಾಗುವುದಿಲ್ಲ. ಅದಕ್ಕಾಗಿ ವೀಲ್ ಚೇರ್ (wheelchair) ಮೊರೆ ಹೋಗಬೇಕಾಗುತ್ತದೆ. ಆದರೆ, ಈ ರೋಗವು ಅವನ ಜೀವನವನ್ನು ಸಂಪೂರ್ಣವಾಗಿ ಬದಲಾಯಿಸಿತು. ತನ್ನ ವಯಸ್ಸಿನವರೆಲ್ಲಾ ಹೊರಗೆ ಹೋಗಿ ಆಟವಾಡುತ್ತಿದ್ದರೆ, ಕಾರ್ತಿಕ್ ಮಾತ್ರ ಅನಾರೋಗ್ಯದ ಕಾರಣದಿಂದಾಗಿ ಹೆಚ್ಚಿನ ಸಮಯನ್ನು ಚಿಕಿತ್ಸೆ, ಥೆರಪಿ ಹಾಗೂ ಯೋಗದ ಸಲುವಾಗಿಯೇ ಕಳೆಯುತ್ತಿದ್ದರು.

ಆದರೆ ದೈಹಿಕ ದೌರ್ಬಲ್ಯವು ಅವನ ಇಚ್ಛಾಶಕ್ತಿಯನ್ನು ಬಲಪಡಿಸುವುದನ್ನು ತಡೆಯಲಿಲ್ಲ. ಕಷ್ಟಪಟ್ಟು ಓದಿ ಸಿವಿಲ್ ಸರ್ವೀಸ್ ಪರೀಕ್ಷೆಯಲ್ಲಿ ಉತ್ತಮ ಶ್ರೇಯಾಂಕ ಪಡೆದುಕೊಂಡಿದ್ದಾರೆ. 2018 ರಲ್ಲಿ ಐಐಟಿ ರೂರ್ಕಿಯಿಂದ ಪದವಿ ಪಡೆದ ನಂತರ, ಕನ್ಸಾಲ್ ಅವರು ಗೇಟ್ (GATE) ಮತ್ತು ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ ಇಂಜಿನಿಯರಿಂಗ್ ಸರ್ವಿಸಸ್ (Union Public Service Commission Engineering Services Exam )  ಪರೀಕ್ಷೆ ಸೇರಿದಂತೆ ಹಲವಾರು ಪರೀಕ್ಷೆಗಳನ್ನು ಉತ್ತೀರ್ಣರಾದರು ಆದರೆ ಅವರ ದೈಹಿಕ ಅಸಾಮರ್ಥ್ಯದಿಂದಾಗಿ ಉದ್ಯೋಗವನ್ನು ಪಡೆಯಲು ಸಾಧ್ಯವಾಗಲಿಲ್ಲ.

ತಮ್ಮ ಓದಿನ ದಿನಗಳನ್ನು ನೆನೆಸಿಕೊಳ್ಳುವ ಕಾರ್ತಿಕ್, "ನಾನು ಎಂಜಿನಿಯರಿಂಗ್ ಸೇವೆಗಳ ಪರೀಕ್ಷೆಯ ಪ್ರಿಲಿಮ್ಸ್‌ನಲ್ಲಿ ಉತ್ತಮ ಸಾಧನೆ ಮಾಡಿದ್ದೆ. ಆದರೆ ಮುಖ್ಯ ಪರೀಕ್ಷೆಯ ಪಟ್ಟಿ ಬಂದಾಗ, ನನ್ನ ಸ್ಥಿತಿಯಿಂದಾಗಿ ನಾನು ಯಾವುದೇ ಹುದ್ದೆಗಳಿಗೆ ಅರ್ಹನಲ್ಲ ಎಂದು ನನಗೆ ತಿಳಿಯಿತು. ಇದು ನನಗೆ ಕಷ್ಟಕರವಾದ ಹಂತವಾಗಿತ್ತು. ಮಾನಸಿಕವಾಗಿ, ನಾನು ಸಿದ್ಧನಾಗಿದ್ದೆ, ಆದರೆ ನನ್ನ ದೈಹಿಕ ಸ್ಥಿತಿಗೆ ನಾನು ಏನು ಮಾಡಬಹುದು? ನನ್ನ ಇಡೀ ಪ್ರಯತ್ನವೇ ಛಿದ್ರಗೊಳ್ಳುವ ಸಮಯ ಹತ್ತಿರವಾಗುತ್ತಿತ್ತು' ಎಂದು ಹೇಳಿದ್ದಾರೆ. ಎಂಜಿನಿಯರಿಂಗ್ ಸೇವೆಗಳಿಂದ ನನ್ನನ್ನು ನಿರಾಕರಿಸಿದ್ದ ಕಾರಣಕ್ಕಾಗಿಯೇ ನಾಗರಿಕ ಸೇವೆಗಳನ್ನು ಪರೀಕ್ಷೆ ಬರೆಯಲು ಸಿದ್ಧನಾಗಿದ್ದೆ ಆ ಮೂಲಕ ನೀತಿಯಲ್ಲಿ ಬದಲಾವಣೆಗಳನ್ನು ತರುವ ಮನಸ್ಸು ಮಾಡಿದ್ದೆ ಎಂದು ಕಾರ್ತಿಕ್ ಹೇಳುತ್ತಾರೆ.

ಇಂಜಿನಿಯರಿಂಗ್ ನಲ್ಲಿ ನಾನು ರಿಜೆಕ್ಟ್ ಆದ ಬಳಿಕ, ದೇಶದ ಕೆಲವೊಂದು ನೀತಿ ನಿಯಮಗಳಲ್ಲಿ ಬದಲಾವಣೆ ತರುವುದು ಅಗತ್ಯವಿದೆ ಎಂದು ಅನಿಸಿತ್ತು. ದೈಹಿಕವಾಗಿ ಬಲಾಢ್ಯವಾಗಿರುವ ವ್ಯಕ್ತಿಗಳಿಗಿಂತ ಮಾನಸಿಕವಾಗಿ ಬಲಾಢ್ಯವಾಗಿರುವ ವ್ಯಕ್ತಿಗಳಿಗೆ ಕೆಲವೊಂದು ವಿಭಾಗಗಳು ಇನ್ನಷ್ಟು ಮುಕ್ತವಾಗಬೇಕು ಎಂದು ಬಯಸಿದ್ದೆ ಎಂದು ಕನ್ಸಾಲ್ ಹೇಳಿದ್ದಾರೆ. ಈ ರೀತಿಯ ತೊಂದರೆಗಳು ವಿಕಲಾಂಗ ವ್ಯಕ್ತಿಯ ಬೆಳವಣಿಗೆಗೆ ಅಡ್ಡಿಯಾಗುತ್ತಿವೆ ಮತ್ತು ಅವರ ಮನೋಸ್ಥೈರ್ಯವನ್ನು ಕುಗ್ಗಿಸುತ್ತಿವೆ ಎಂದು ಅವರಿಗೆ ಅರಿವಾಯಿತು. ಇದರಿಂದಾಗಿ ನಾನು ಇನ್ನಷ್ಟು ಕಠಿಣ ಶ್ರಮ ಹಾಕಲು ಬಯಸಿದ್ದೆ ಎನ್ನುತ್ತಾರೆ.

ಕನ್ಸಾಲ್ ಅವರು ಮೂರು ಬಾರಿ ನಾಗರಿಕ ಸೇವಾ ಪರೀಕ್ಷೆಗೆ ಹಾಜರಾಗಿದ್ದರು. 2019 ರಲ್ಲಿ ಅವರ ಮೊದಲ ಪ್ರಯತ್ನದಲ್ಲಿ ಅವರು 813 ನೇ ಶ್ರೇಯಾಂಕ ಪಡೆಯುವಲ್ಲಿ ಯಶಸ್ವಿಯಾದರು. ತಕ್ಕ ಹುದ್ದೆ ಸಿಗುತ್ತಿದ್ದರೂ ಅಂಕಗಳನ್ನು ಸುಧಾರಿಸಿಕೊಂಡು ಆಡಳಿತಾತ್ಮಕ ಹುದ್ದೆ ಪಡೆಯಬೇಕೆಂಬ ಆಸೆ ಅವರಲ್ಲಿತ್ತು. 2020 ರಲ್ಲಿ, ಅವರು ಮತ್ತೆ ಯುಪಿಎಸ್ಸಿ ನಾಗರಿಕ ಸೇವಾ ಪರೀಕ್ಷೆಗಳಿಗೆ ಹಾಜರಾಗಿದ್ದರು ಮತ್ತು ಪ್ರಿಲಿಮ್ಸ್ ಅನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದರು. ಆದರೆ, ಪ್ರಧಾನ ಪರೀಕ್ಷೆಯಲ್ಲಿ ಶ್ರೇಯಾಂಕ ಪಡೆಯಲು ವಿಫಲರಾಗಿದ್ದರು. ಆದರೆ ಈ ವೈಫಲ್ಯವು ಅವರನ್ನು ಕಷ್ಟಪಟ್ಟು ಕೆಲಸ ಮಾಡಲು ಮತ್ತು ತಮಗೆ ಅರ್ಹವಾದ ಶ್ರೇಣಿಯನ್ನು ಪಡೆಯಲು ಪ್ರೇರೇಪಿಸಿತು. ಬರವಣಿಗೆಯಲ್ಲಿ ಸಮಸ್ಯೆಗಳಿದ್ದರೂ, ಅವರು ಲಿಖಿತ ಪರೀಕ್ಷೆಗಾಗಿ ಪ್ರತಿದಿನ ಅಭ್ಯಾಸ ಮಾಡಿದರು.

ಎಚ್ಚೆತ್ತ ಸರ್ಕಾರ, PU ಪಠ್ಯ ಪರಿಷ್ಕರಣೆ ಸಮಿತಿಯಿಂದ ರೋಹಿತ್​ ಚಕ್ರತೀರ್ಥ ಔಟ್

"ಇಂತಹ ಪರೀಕ್ಷೆಗಳಲ್ಲಿ ನೀವೇ ಉತ್ತರವನ್ನು ಬರೆಯುವುದು ಯಾವಾಗಲೂ ಉತ್ತಮ ಎಂದು ನಾನು ನಂಬುತ್ತೇನೆ. ನನಗೆ ಕಷ್ಟವಾಗಿದ್ದರೂ, ನಾನು ಯುಪಿಎಸ್ಸಿ ಪ್ರಧಾನ ಪರೀಕ್ಷೆಗೆ ಕುಳಿತು ನನ್ನ ಪತ್ರಿಕೆಯನ್ನು ಬರೆಯಲು ಪ್ರತಿದಿನ ಮೂರು ತಿಂಗಳ ಕಾಲ ನಾಲ್ಕು ಗಂಟೆಗಳ ಕಾಲ ಅಭ್ಯಾಸ ಮಾಡಿದೆ' ಎಂದು ಕಾರ್ತಿಕ್ ಹೇಳುತ್ತಾರೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಲ್ಲಿ (ಇಸ್ರೋ) ಅವರ ಕೆಲಸದ ಜೊತೆಗೆ, ಯುಪಿಎಸ್ಸಿ ಪರೀಕ್ಷೆ ಸಿದ್ಧತೆಗೂ ಅವಿರತವಾಗಿ ಶ್ರಮ ಹಾಕಿದರು.

ಬೆಳೆ ನಷ್ಟಕ್ಕೆ ಕಂಗಾಲದ ರೈತರು: ಖಾಸಗಿ ಶಾಲೆಯಿಂದ ಹೊರ ಬಂದ ಮಕ್ಕಳು..!

"ವಾರದ ದಿನಗಳಲ್ಲಿ ಒಂಬತ್ತು ಗಂಟೆಗಳ ಕಾಲ ಕೆಲಸ ಮಾಡಿದ್ದರಿಂದ ಅದಕ್ಕೆ ತಕ್ಕಂತೆ ಅಧ್ಯಯನವನ್ನು ನಿರ್ವಹಿಸುತ್ತಿದ್ದೆ. ವಾರದ ದಿನಗಳಲ್ಲಿ ಬೆಳಗ್ಗೆ 6 ಗಂಟೆಗೆ ಎದ್ದು 8 ಗಂಟೆಯವರೆಗೆ ಓದಿ ತಯಾರಾಗಿ ಕಚೇರಿಗೆ ಹೊರಡುತ್ತಿದ್ದೆ. ಕಚೇರಿಯಿಂದ ಹಿಂತಿರುಗಿದ ನಂತರ ಸಂಜೆ 6:30 ರಿಂದ ರಾತ್ರಿ 11 ರವರೆಗೆ ಅಧ್ಯಯನ ಮಾಡುತ್ತಿದ್ದೆ, ವಾರಾಂತ್ಯದಲ್ಲಿ, ನಾನು ಹೆಚ್ಚು ಸಮಯವನ್ನು ವಿನಿಯೋಗಿಸುತ್ತಿದ್ದೆ" ಎಂದು ಅವರು ಹೇಳಿದರು. ಇದರಿಂದಾಗಿ 2021ರಲ್ಲಿ ಯುಪಿಎಸ್ಸಿ ನಾಗರಿಕ ಸೇವಾ ಪರೀಕ್ಷೆ ಬರೆದಿದ್ದ ಕಾರ್ತಿಕ್ 271ನೇ ಶ್ರೇಯಾಂಕ ಪಡೆದುಕೊಂಡಿದ್ದಾರೆ.

Tap to resize

Latest Videos

click me!