ರಾಜ್ಯದ 10 ಹಳೇ ಐಟಿಐ ಕಾಲೇಜುಗಳಿಗೆ ಹೊಸ ಕಟ್ಟಡ ಭಾಗ್ಯ: ಸಚಿವ ಶರಣಪ್ರಕಾಶ ಪಾಟೀಲ್‌

By Kannadaprabha News  |  First Published Sep 20, 2023, 2:30 AM IST

ಕಲಬುರಗಿ ಸರ್ಕಾರಿ ಐಟಿಐ 1969ರಲ್ಲಿ ಶುರುವಾಗಿದೆ, ಇದೇ ರೀತಿ 50 ವರ್ಷ ಮೇಲ್ಪಟ್ಟಂತಹ ಐಟಿಐಗಳನ್ನು ಪಟ್ಟಿ ಮಾಡಲಾಗಿದೆ. ಈ ಪಟ್ಟಿಯಲ್ಲಿ ಬರುವ ಐಟಿಐಗಳಲ್ಲಿ ಮೊದಲ ಹಂತದಲ್ಲಿ ಕಲಬುರಗಿ ಸೇರಿದಂತೆ 10 ಐಟಿಐಗಳಿಗೆ ಕಟ್ಟಡ ಮಂಜೂರು ಮಾಡಲಾಗುತ್ತಿದೆ: ಕೌಶಲ್ಯಾಭಿವೃದ್ಧಿ ಸಚಿವ ಡಾ. ಶರಣಪ್ರಕಾಶ ಪಾಟೀಲ್‌ 


ಕಲಬುರಗಿ(ಸೆ.20): ಕಲ್ಯಾಣ ನಾಡಿನ ಕಲಬುರಗಿ, ರಾಯಚೂರು, ಬಳ್ಳಾರಿ ಸೇರಿದಂತೆ ರಾಜ್ಯದಲ್ಲಿ 5 ದಶಕ ಮೇಲ್ಪಟ್ಟು ಇರುವಂತಹ ಆಯ್ದ 10 ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ (ಐಟಿಐ) ಗಳಿಗೆ ನೂತನ ಕಟ್ಟಡ ಮಂಜೂರು ಮಾಡಲಾಗುತ್ತಿದೆ. ಮುಂದಿನ ಒಂದೂವರೆ ವರ್ಷದೊಳಗೇ ಈ ಕಾಲೇಜುಗಳು ಸುಸಜ್ಜಿತ ಕಟ್ಟಡಗಳೊಂದಿಗೆ ಮಕ್ಕಳಿಗೆ ಗುಣಮಟ್ಟದ ತರಬೇತಿ ನೀಡುವಂತೆ ಸಜ್ಜುಗೊಳ್ಳಲಿವೆ ಎಂದು ಕೌಶಲ್ಯಾಭಿವೃದ್ಧಿ ಸಚಿವ ಡಾ. ಶರಣಪ್ರಕಾಶ ಪಾಟೀಲ್‌ ಹೇಳಿದ್ದಾರೆ.

ಮಂಗಳವಾರ ಕಲಬುರಗಿಯ ಸರಕಾರಿ ಐಟಿಐ (ಪುರುಷ) ಇಲ್ಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಕನ್ನಡಪ್ರಭ ಜೊತೆ ಮಾತನಾಡಿದ ಅವರು, ಐಟಿಐ ಕಾಲೇಜುಗಳಿಗೆ ಸವಲತ್ತು ಒದಗಿಸಲು ತಾವು ಆದ್ಯತೆ ನೀಡಿದ್ದಾಗಿ ಹೇಳಿದರು.

Latest Videos

undefined

ಹಿಜಾಬ್ ವಿವಾದ ಬಳಿಕ ಶಾಲೆಗಳಲ್ಲಿ ನಿಖಾಬ್ ನಿಷೇಧ, ಸೆ.30 ರಿಂದ ಈ ಮುಸ್ಲಿಂ ದೇಶದಲ್ಲಿ ಜಾರಿ!

ಕಲಬುರಗಿ ಸರ್ಕಾರಿ ಐಟಿಐ 1969ರಲ್ಲಿ ಶುರುವಾಗಿದೆ, ಇದೇ ರೀತಿ 50 ವರ್ಷ ಮೇಲ್ಪಟ್ಟಂತಹ ಐಟಿಐಗಳನ್ನು ಪಟ್ಟಿ ಮಾಡಲಾಗಿದೆ. ಈ ಪಟ್ಟಿಯಲ್ಲಿ ಬರುವ ಐಟಿಐಗಳಲ್ಲಿ ಮೊದಲ ಹಂತದಲ್ಲಿ ಕಲಬುರಗಿ ಸೇರಿದಂತೆ 10 ಐಟಿಐಗಳಿಗೆ ಕಟ್ಟಡ ಮಂಜೂರು ಮಾಡಲಾಗುತ್ತಿದೆ ಎಂದರು.

ಕೌಶಲ್ಯಾಭಿವೃದ್ಧಿಗೆ ತಮ್ಮ ಸರ್ಕಾರ ಒತ್ತು ನೀಡಲಿದೆ. ಈಗಾಗಲೇ ಸರ್ಕಾರಿ ಐಟಿಐಗಳು ಗುಣಮಟ್ಟದ ತರಬೇತಿ ನೀಡುತ್ತಿವೆ, ಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಗುಣಮಟ್ಟದ ಶಿಕ್ಷಣ ದೊರುವಂತೆ ಮಾಡಲಾಗುತ್ತದೆ ಎಂದರು.
ರಾಜ್ಯದಲ್ಲಿ ಸರ್ಕಾರಿ ರಂಗದಲ್ಲಿರುವ 280 ಐಟಿಐ ಕಾಲೇಜುಗಳಲ್ಲಿ ಮಕ್ಕಳಿಗೆ ಗುಣಮಟ್ಟದ ತರಬೇತಿ ನೀಡಲಾಗುತ್ತಿರೋದು ಗಮನಿಸಲಾಗಿದೆ. ಇಲ್ಲಿ ಕಲಿತವರಿಗೆ ಉದ್ಯೋಗವಕಾಶ ಶೇ.30ರಷ್ಟಿದೆ ಎಂದು ಹೇಳಲಾಗಿದೆ. ಇದನ್ನು ಬರುವ ದಿನಗಳಲ್ಲಿ ಶೇ.60ಕ್ಕಿಂತ ಹೆಚ್ಚಾಗುವಂತೆ ಕ್ರಮ ವಹಿಸಲು ಸೂಚಿಸಿದ್ದಾಗಿ ಡಾ. ಶರಣಪ್ರಕಾಶ ಹೇಳಿದರು.

ಖಾಸಗಿ ರಂಗದಲ್ಲಿ ಸಾಕಷ್ಟು ಐಟಿಐಗಳಿದ್ದರೂ ಸರಕಾರಿ ಸಂಸ್ಥೆಯಲ್ಲಿರುವಂತಹ ಗುಣಮಟ್ಟದ ತರಬೇತಿ ಅಲ್ಲಿ ದೊರಕುತ್ತಿಲ್ಲವೆಂದು ಮಕ್ಕಳೇ ತಾವು ಭೇಟಿ ನೀಡಿದ ಅನೇಕ ಕಡೆಗಳಲ್ಲಿ ಹೇಳಿದ್ದಾರೆ. ಈ ಬಗ್ಗೆಯೂ ಪರಿಶೀಲನೆ ನಡೆಸಲಾಗುತ್ತಿದೆ. ಮಾನದಂಡಗಳಂತೆ ಖಾಸಗಿ ರಂಗದಲ್ಲಿಯೂ ಐಟಿಐಗಳು ಪ್ರಯೋಗಾಲಯ ಇತರೆ ಸವಲತ್ತು ಹೊಂದಿ ಮಕ್ಕಳಿಗೆ ಗುಣಮಟ್ಟದ ತರಬೇತಿ ನೀಡುವಲ್ಲಿ ಮುಂದೆ ಬರುವಂತೆ ಸೂಚಿಸಲಾಗುತ್ತದೆ ಎಂದರು.

9ನೇ ವಯಸ್ಸಿಗೆ ಕಾಲೇಜಿಗೋದ, 14 ವರ್ಷಕ್ಕೆ ಎಂಜಿನಿಯರ್ ಆದ: ಈಗ ವಿಶ್ವದ ನಂ. 1 ಶ್ರೀಮಂತ ವ್ಯಕ್ತಿ ಬಳಿ ಕೆಲಸ!

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವರು ಹೊಸ ಐಟಿಐ ಕಾಲೇಜುಗಳನ್ನು ಆರಂಭಿಸುವ ಉದ್ದೇಶ ಸದ್ಯ ಸರಕಾರದ ಮುಂದಿಲ್ಲ. ಈಗಿರುವ ಐಟಿಐಗಳಿಗೆ ಹೆಚ್ಚಿನ ಸವಲತ್ತು ನೀಡಿ ಬಲಗೊಳಿಸಲಾಗುತ್ತದೆ. ಕೌಶಲ್ಯ ಅಭಿವೃದ್ಧಿ ನಿಗಮದ ಸಿಎಂಕೆಕೆವೈ ಯೋಜನೆಯನ್ನು ಖಾಸಗಿ ಸಂಸ್ಥೆಗಳಿಗಿಂತಲೂ ಹೆಚ್ಚಿಗೆ ನಮ್ಮ ಕೆಜಿಟಿಟಿಐ, ಜಿಟಿಟಿಸಿ, ಐಟಿಐಗಳಿಗೇ ನೀಡುವ ಕುರಿತು ಬರುವ ದಿನಗಳಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ರಾಜ್ಯದಲ್ಲಿ ಸದ್ಯ ಲಭ್ಯವಿರುವ ಮೂಲ ಸವಲತ್ತಿನ ಅನ್ವಯ ವಾರ್ಷಿಕ 1.20 ಲಕ್ಷ ಮಕ್ಕಳಿಗೆ ತರಬೇತಿ ನೀಡಬಹುದಾಗಿದೆ. ಆದರೆ ನಿರೀಕ್ಷೆಯನ್ನು ತಲುಪಲಾಗುತ್ತಿಲ್ಲ. ಬರುವ ದಿನಗಳಲ್ಲಿ ನಮ್ಮ ಲಭ್ಯ ಸವಲತ್ತನ್ನು ಬಳಸಿ ಹೆಚ್ಚಿನ ಮಕ್ಕಳಿಗೆ ಕೌಶಲ್ಯಾಧಾರಿತ ತರಬೇತಿ ನೀಡುವುದೇ ಇಲಾಖೆಯ ಗುರಿ ಎಂದರು.

click me!