6 ನೇ ತರಗತಿಯಲ್ಲಿ ಮದುವೆ, ನೀಟ್‌ ಪರೀಕ್ಷೆಯಲ್ಲಿ ಗೆದ್ದು ವೈದ್ಯನಾಗಲು ಹೊರಟವನಿಗೆ 20 ವರ್ಷಕ್ಕೆ ಮಗು

By Suvarna News  |  First Published Sep 17, 2023, 7:39 PM IST

ರಾಜಸ್ಥಾನದ  ರಾಮ್‌ಲಾಲ್ ಕೇವಲ 11 ವರ್ಷ ವಯಸ್ಸಿನಲ್ಲಿ  ಮದುವೆಯಾಗಿದ್ದ, 29 ವರ್ಷಕ್ಕೆ ಮಗುವಿನ ತಂದೆಯಾದ. ಎಲ್ಲಾ ಅಡೆತಡೆಗಳನ್ನು ಮೆಟ್ಟಿನಿಂತು ತನ್ನ 5 ನೇ ಪ್ರಯತ್ನದಲ್ಲಿ ವೈದ್ಯಕೀಯ ಪ್ರವೇಶ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ವೈದ್ಯನಾಗುವ ಗುರಿ ಹೊಂದಿದ್ದಾನೆ.


ನೀಟ್‌ (NEET) ಭಾರತದಲ್ಲಿ ಭೇದಿಸಲು ಕಠಿಣ ಪ್ರವೇಶ ಪರೀಕ್ಷೆಗಳಲ್ಲಿ ಒಂದಾಗಿದೆ ಎಂದು ಪರಿಗಣಿಸಲಾಗಿದೆ. ಆದರೆ ರಾಮ್‌ಲಾಲ್ ಎಂಬ ವ್ಯಕ್ತಿ ಚಿಕ್ಕ ವಯಸ್ಸಿನಲ್ಲಿ ಎದುರಿಸಿದ ಅನೇಕ ತೊಂದರೆಗಳು ಮತ್ತು ಕಷ್ಟಗಳ ನಡುವೆಯೂ NEET ಅನ್ನು ತೇರ್ಗಡೆಗೊಳಿಸಿದ ನಂತರ ವೈದ್ಯರಾಗುವ ಕನಸು ನನಸು ಮಾಡಿಕೊಂಡಿದ್ದಾರೆ.

ರಾಜಸ್ಥಾನದ ರಾಮ್‌ಲಾಲ್ ಎಂಬ ಯುವಕ NEET 2022 ಪರೀಕ್ಷೆಯನ್ನು ಎಲ್ಲಾ ಅಡೆತಡೆಗಳನ್ನು ಮೆಟ್ಟಿನಿಂತು ತನ್ನ 5 ನೇ ಪ್ರಯತ್ನದಲ್ಲಿ ವೈದ್ಯಕೀಯ ಪ್ರವೇಶ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ. ಈ ಮೂಲಕ  ತನ್ನ ಕುಟುಂಬದಲ್ಲಿ ವೈದ್ಯ ಓದುತ್ತಿರುವ  ಮೊದಲ  ವ್ಯಕ್ತಿ ಎನಿಸಿಕೊಂಡಿದ್ದಾರೆ. 

Tap to resize

Latest Videos

undefined

ರಾಮ್‌ಲಾಲ್ ಕೇವಲ 11 ವರ್ಷ ವಯಸ್ಸಿನಲ್ಲಿ  6 ನೇ ತರಗತಿಯಲ್ಲಿದ್ದಾಗ ತನ್ನ ಪಕ್ಕದ ಹಳ್ಳಿಯ ಹುಡುಗಿಯನ್ನು ಮದುವೆಯಾಗಿದ್ದನು. ಇದು ಬಲವಂತದ ಬಾಲ್ಯವಿವಾಹವಾಗಿತ್ತು. ಈ ವಿವಾಹಕ್ಕೆ ಅಸ್ಥಿರ ಆರ್ಥಿಕ ಪರಿಸ್ಥಿತಿಗಳು ಕಾರಣವಾಗಿತ್ತು. ಆದರೆ ಇದರ ಹೊರತಾಗಿಯೂ ರಾಮ್‌ಲಾಲ್ ತಮ್ಮ ಅಧ್ಯಯನದ ಮೇಲೆ ಕೇಂದ್ರೀಕರಿಸಲು ನಿರ್ಧರಿಸಿದರು.

ರಾಮ್‌ಲಾಲ್ ಅವರ ಅಧ್ಯಯನವನ್ನು ಮುಂದುವರಿಸುವ ನಿರ್ಧಾರವು ಅವರ ಕುಟುಂಬಕ್ಕೆ ಇಷ್ಟವಿರಲಿಲ್ಲ.  ಅವರ ತಂದೆ ಈ ನಿರ್ಧಾರದಿಂದ ಅಸಮಾಧಾನಗೊಂಡಿದ್ದರು. ರಾಮ್‌ಲಾಲ್ ತನ್ನ ಶಾಲಾ ಶಿಕ್ಷಣವನ್ನು ಮುಂದುವರೆಸಿದಾಗ, ಹೆಂಡತಿ 10 ನೇ ತರಗತಿಯವರೆಗೆ ಮಾತ್ರ ತನ್ನ ಅಧ್ಯಯನವನ್ನು ಪೂರ್ಣಗೊಳಿಸಿದ್ದಳು. ರಾಮಲಾಲ್‌ನ ಗುರಿ ಮತ್ತು ಛಲವನ್ನು ನೋಡಿದ ನಂತರ ಗಂಡ ವೈದ್ಯನಾಗುವ ಕನಸನ್ನು ನನಸು ಮಾಡಲು ಸಹಾಯಕ್ಕೆ ನಿರ್ಧರಿಸಿದಳು. 

ರಾಮ್‌ಲಾಲ್ NEET ಆಕಾಂಕ್ಷಿಯಾಗಿದ್ದರು ತನ್ನ 10 ನೇ ತರಗತಿಯನ್ನು ಶೇ.74  ಅಂಕಗಳೊಂದಿಗೆ ಪಾಸಾಗಿದ್ದರು. ಮುಂದಿನ ವಿದ್ಯಾಭ್ಯಾಸಕ್ಕೆ ವಿಜ್ಞಾನವನ್ನು ಆಯ್ಕೆ ಮಾಡಿಕೊಂಡರು. ಇದು ವೈದ್ಯನಾಗುವ ಕಡೆಗೆ ಅವರ ಮೊದಲ ಹೆಜ್ಜೆಯಾಗಿತ್ತು.  2019 ರಲ್ಲಿ ತಮ್ಮ ಮೊದಲ NEET ಪರೀಕ್ಷೆ ಬರೆದರು. ಒಟ್ಟು 720 ಅಂಕಗಳಲ್ಲಿ 350 ಅಂಕಗಳನ್ನು ಗಳಿಸಿದರು. 

ನಂತರ ಪ್ರತೀ NEET ಪರೀಕ್ಷೆ ಪ್ರಯತ್ನದಲ್ಲಿ ಹೆಚ್ಚು ಹೆಚ್ಚು ಅಂಕಗಳನ್ನು ಗಳಿಸಿದ ನಂತರ, ರಾಮಲಾಲ್ ಕೋಟಾದಲ್ಲಿ ಕೋಚಿಂಗ್‌ಗೆ ಸೇರಲು ನಿರ್ಧರಿಸಿದರು ಮತ್ತು NEET 2022 ರಲ್ಲಿ 490 ಅಂಕಗಳನ್ನು ಗಳಿಸಿದರು, ಇದು ಅವರ ಕನಸನ್ನು ನನಸಾಗಿಸಿತು. ಈ ಅಂಕದೊಂದಿಗೆ, ಅವರು ಉತ್ತಮ ವೈದ್ಯಕೀಯ ಕಾಲೇಜಿಗೆ ಸೇರ್ಪಡೆಗೊಂಡರು.

ರಾಮ್‌ಲಾಲ್ ಮತ್ತು ಅವರ ಪತ್ನಿ ರಾಜಸ್ಥಾನದ ಚಿತ್ತೋರ್‌ಗಢದ ಘೋಸುಂಡಾ ಪ್ರದೇಶದ ನಿವಾಸಿಗಳಾಗಿದ್ದು, ಅವರ ಕುಟುಂಬದೊಂದಿಗೆ ವಾಸಿಸುತ್ತಿದ್ದಾರೆ. ದಂಪತಿಗಳಿಗೆ ಒಂದು ಮಗುವಿದೆ. ರಾಮಲಾಲ್ ಕೇವಲ 20 ವರ್ಷ ವಯಸ್ಸಿನವನಾಗಿದ್ದಾಗ, ಅವನ ಬಲವಂತದ ಬಾಲ್ಯ ವಿವಾಹದ ಒಂಬತ್ತು ವರ್ಷಗಳ ನಂತರ ಈ ಮಗು ಜನಿಸಿದರು. 

click me!