ಶಾಲಾ ಪಠ್ಯದಲ್ಲಿ ರಾಮಾಯಣ,ಮಹಾಭಾರತ ಸೇರಿಸಲು NCERT ಸಮಿತಿ ಶಿಫಾರಸು!

By Suvarna NewsFirst Published Nov 21, 2023, 6:45 PM IST
Highlights

NCERT ಸಮಿತಿ ಮಹತ್ವದ ಶಿಫಾರಸು ಮಾಡಿದೆ. ಶಾಲಾ ಪಠ್ಯ ಪುಸ್ತಕದಲ್ಲಿ ರಾಮಾಯಣ ಹಾಗೂ ಮಹಾಭಾರತ ಮಹಾಕಾವ್ಯ ಸೇರಿಸಲು ಸರ್ಕಾರಕ್ಕೆ ಶಿಫಾರಸು ಮಾಡಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ಮಕ್ಕಳು ರಾಮಾಯಣ ಹಾಗೂ ಮಹಾಭಾರತವನ್ನು ಶಾಲ ಪಠ್ಯದಲ್ಲಿ ಕಲಿಯುವ ಸಾಧ್ಯತೆ ಇದೆ.

ನವದೆಹಲಿ(ನ.21) ಹೊಸ ಪಠ್ಯಕ್ರಮದ ಅನುಸಾರ ಪಠ್ಯಪುಸ್ತಕಗಳನ್ನು ಪರಿಷ್ಕರಿಸಲು ರಚಿಸಿರುವ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಹಾಗೂ ತರಬೇತಿ ಮಂಡಳಿ( NCERT) ಇದೀಗ ಮಹತ್ವದ ಶಿಫಾರಸು ಮಾಡಿದೆ. ಶಾಲಾ ಪಠ್ಯಪುಸ್ತಕದಲ್ಲಿ ಶ್ರೀ ರಾಮಾಯಣ ಹಾಗೂ ಮಹಾಭಾರತ ವಿಷಗಳ ಸೇರ್ಪಡೆಗೆ ಸರ್ಕಾರಕ್ಕೆ ಶಿಫಾರಸು ಮಾಡಿದೆ.  ದೇ ವೇಳೆ ಶಾಲಾ ಗೋಡೆಗಳ ಮೇಲೆ ಸಂವಿಧಾನದ ಪೀಠಿಕೆಯನ್ನು ಬರೆಯುಂತೆ ಶಿಫಾರಸು ಮಾಡಿದೆ. 

ಕಳೆದ ವರ್ಷ ಏಳು ಸದಸ್ಯರ ಸಮಿತಿಯನ್ನು ರಚನೆ ಮಾಡಲಾಗಿತ್ತು. ಸಮಾಜ ವಿಜ್ಞಾನ ಪಠ್ಯ ಪರಿಷ್ಕರಣೆಗೆ ಈ ಸಮಿತಿ ಹಲವು ಶಿಫಾರಸು ನೀಡಿದೆ. ಸಮಿತಿ ಶಿಫಾರಸು ಮಾಡಿದ ಅಂಶಗಳನ್ನು 19 ಸದಸ್ಯರ ರಾಷ್ಟ್ರೀಯ ಪಠ್ಯಕ್ರಮ ಹಾಗೂ ಬೋಧನಾ ಕಲಿಕಾ ಸಾಮಾಗ್ರಿ ಸಮಿತಿ ಪರಿಶೀಲನೆ ನಡೆಸಿ ಪರಿಗಣಿಸಲಿದೆ.  ಶ್ರೀರಾಮಾಯಣ ಹಾಗೂ ಮಹಾಭಾರತ ಕಾವ್ಯಗಳನ್ನು ಪಠ್ಯದಲ್ಲಿ ಸೇರಿಸುವ ಜೊತೆ ಮೌಲ್ಯಗಳನ್ನು ತಿಳಿಸುವ ಪ್ರಯತ್ನವಾಗಬೇಕು. ಮಕ್ಕಳ ಮೌಲ್ಯಯುತ ಜೀವನಕ್ಕೆ ಶ್ರೀ ರಾಮಾಯಣ ಹಾಗೂ ಮಹಾಭಾರತ ಕಾವ್ಯಗಳು ಅವಶ್ಯಕವಾಗಿದೆ ಎಂದು ಸಮಿತಿಯ ಮುಖ್ಯಸ್ಥ ಸಿಐ ಐಸಾಕ್ ಹೇಳಿದ್ದಾರೆ.

ಶಾಲಾ ಪಠ್ಯಪುಸ್ತಕದಲ್ಲಿ ಇಂಡಿಯಾ ಬದಲು 'ಭಾರತ', NCERT ಸಮಿತಿ ಶಿಫಾರಸು

7 ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ರಾಮಾಯಣ ಹಾಗೂ ಮಹಾಭಾರತ ಮಹಾಕಾವ್ಯಗಳನ್ನು ಪಠ್ಯದಲ್ಲಿ ಸೇರಿಸುವಂತೆ ಸಮಿತಿ ಶಿಫಾರಸು ಮಾಡಿದೆ. ವಿದ್ಯಾರ್ಥಿಗಳಲ್ಲಿ ಸ್ವಾಭಿಮಾನ, ದೇಶಭಕ್ತಿ, ದೇಶದ ಬಗ್ಗೆ ಗೌರವ ಹಾಗೂ ಹೆಮ್ಮೆಯನ್ನು ಬೆಳೆಸುವಲ್ಲಿ  ಈ ಮಹಾಕಾವ್ಯಗಳು ನೆರವಾಗಲಿದೆ. ಭಾರತೀಯರು ತಮ್ಮ ಬೇರುಗಳನ್ನು ಅರ್ಥಮಾಡಿಕೊಳ್ಳುವ ಅಗತ್ಯವಿದೆ. ದೇಶ, ಸಂಸ್ಕೃತಿ ಬಗ್ಗೆ ಪ್ರೀತಿ ಬೆಳೆಸಿಕೊಳ್ಳುವುದು ಮುಖ್ಯವಾಗಿದೆ ಎಂದು ಐಸಾಕ್ ಹೇಳಿದ್ದಾರೆ.  

ಹೊಸ ಪಠ್ಯಕ್ರಮದ ಅನುಸಾರ ಪಠ್ಯಪುಸ್ತಕಗಳನ್ನು ಪರಿಷ್ಕರಿಸಲು ಎನ್‌ಸಿಇಆರ್‌ಟಿ ರಚಿಸಿರುವ ಹೊಸ ಸಮಿತಿಯಲ್ಲಿ ಬೆಂಗಳೂರಿನ ಇನ್ಫೋಸಿಸ್ ಫೌಂಡೇಶನ್‌ ಅಧ್ಯಕ್ಷೆ ಸುಧಾ ಮೂರ್ತಿ, ದಕ್ಷಿಣ ಕನ್ನಡ ಮೂಲದ ಸಂಸ್ಕೃತ ಶಿಕ್ಷಣ ತಜ್ಞ ಚಾಮು ಕೃಷ್ಣಶಾಸ್ತ್ರಿ, ಖ್ಯಾತ ಗಾಯಕ ಶಂಕರ್‌ ಮಹಾದೇವನ್‌, ಅರ್ಥಶಾಸ್ತ್ರಜ್ಞ ಸಂಜೀವ್‌ ಸನ್ಯಾಲ್‌ ಸೇರಿದಂತೆ ಹಲವು ಗಣ್ಯರಿದ್ದಾರೆ.

NCERT ಪಠ್ಯಪುಸ್ತಕ ಸಮಿತಿಯಲ್ಲಿ ಸುಧಾ ಮೂರ್ತಿ, ಶಂಕರ್‌ ಮಹದೇವನ್‌ಗೆ ಸ್ಥಾನ

ವಿಜ್ಞಾನ ಕುರಿತ ಉನ್ನತ ಮಟ್ಟದ ಸಮಿತಿಯೊಂದು ಇತ್ತೀಚೆಗೆ ಶಾಲಾ ಪಠ್ಯದಲ್ಲಿ ಇಂಡಿಯಾ ಬದಲು ಭಾರತ ಎಂದು ಉಲ್ಲೇಖಿಸಲು ಎನ್‌ಸಿಇಆರ್‌ಟಿಗೆ ಶಿಫಾರಸು ಮಾಡಿತ್ತು. ಇದು ವಿವಾದಕ್ಕೂ ಕಾರಣವಾಗಿತ್ತು. 

click me!