ತುಮಕೂರಿನ Siddhartha Collegeಗೆ ಎನ್‌ಬಿಎ ಮಾನ್ಯತೆ

Published : Jun 09, 2022, 03:46 AM IST
 ತುಮಕೂರಿನ  Siddhartha Collegeಗೆ ಎನ್‌ಬಿಎ ಮಾನ್ಯತೆ

ಸಾರಾಂಶ

ಸಿದ್ಧಾರ್ಥ ಕಾಲೇಜಿಗೆ ಎನ್‌ಬಿಎ ಮಾನ್ಯತೆ ಏಪ್ರಿಲ್‌ನಲ್ಲಿ ಕಾಲೇಜಿಗೆ ಭೇಟಿ ನೀಡಿದ್ದ ಎನ್‌ಬಿಎ ತಂಡ ಶೈಕ್ಷಣಿಕ ಪ್ರಗತಿಯ  ಪರಾಮರ್ಶೆ ನಡೆಸಿ ಈ ಮಾನ್ಯತೆ  

ತುಮಕೂರು (ಜೂ.9): ತುಮಕೂರು ನಗರದ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ನಾಲ್ಕು ವಿಭಾಗಗಳಿಗೆ ಎನ್‌ಬಿಎ (National Board of Accreditation- ರಾಷ್ಟ್ರೀಯ ಮಾನ್ಯತಾ ಮಂಡಳಿ) ಮಾನ್ಯತೆ ನೀಡಿದೆ. ಸಿಎಸ್‌ಇ, ಐಎಸ್‌ಇ, ಇಸಿಇ ಮತ್ತು ಎಂಇ ವಿಭಾಗಗಳಿಗೆ ಮೂರು ವರ್ಷಗಳ ಮಾನ್ಯತೆ ನೀಡಿರುವ ಬಗ್ಗೆ ಎನ್‌ಬಿಎ ಅಧಿಕೃತವಾಗಿ ಪ್ರಕಟಿಸಿದೆ.

ಏ.22ರಿಂದ 24ರವರೆಗೂ ಎನ್‌ಬಿಎ (ರಾಷ್ಟ್ರೀಯ ಮಾನ್ಯತಾ ಮಂಡಳಿ)ಯ ನುರಿತ ವಿಷಯ ತಜ್ಞರ ತಂಡ ಭೇಟಿ ನೀಡಿತ್ತು. ತಾಂತ್ರಿಕ ಶಿಕ್ಷಣ ಗುಣಮಟ್ಟದ ಬಗ್ಗೆ ಮಾನ್ಯತೆ ನೀಡುವ ಈ ಮಂಡಳಿಯ ಮೂರು ದಿನಗಳ ಭೇಟಿಯಲ್ಲಿ, ಅಧ್ಯಕ್ಷರು ಸೇರಿದಂತೆ ಆರು ಪರಿಣಿತರನ್ನು ಒಳಗೊಂಡ ತಂಡ ಕಾಲೇಜಿನಲ್ಲಿ ಶೈಕ್ಷಣಿಕ ಚಟುವಟಿಕೆಗಳನ್ನು ಪರಿಶೀಲನೆ ನಡೆಸಿತು.

YOGA DAY IN MYSURU; ಜೂನ್ 20 ರಂದು 1 ಲಕ್ಷ ಫಲಾನುಭವಿಗಳ ಜತೆ ಮೋದಿ ಸಂವಾದ

ಎನ್‌ಬಿಎ ನೀಡಿರುವ ಮಾನ್ಯತೆ ಕುರಿತು ಮಾತನಾಡಿದ ಸಾಹೇ ವಿವಿ ಕುಲಾಧಿಪತಿ ಡಾ.ಜಿ.ಪರಮೇಶ್ವರ ಅವರು ಸಂತೋಷವನ್ನು ವ್ಯಕ್ತಪಡಿಸಿದರು. ಪ್ರಾಧ್ಯಾಪಕರ ಮತ್ತು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯ ಬಗ್ಗೆ ಪರಾಮರ್ಶೆಯನ್ನು ಮಂಡಳಿಯು ಮೂರು ದಿನಗಳ ಭೇಟಿಯಲ್ಲಿ ಪರಿಶೀಲಿಸಿತು. ಪ್ರತಿ ಹಂತದ ಶೈಕ್ಷಣಿಕ ಚಟುವಟಿಕೆಗಳನ್ನು ಪರಿಶೀಲಿಸಿದ ಎನ್‌ಬಿಎ ತಂಡ ಈಗ ನಾಲ್ಕು ವಿಭಾಗಗಳಿಗೆ ಮಾನ್ಯತೆ ನೀಡಿದೆ. ಈ ಹಿಂದೆ ಎರಡು ವಿಭಾಗಗಳಿಗೆ ಮಾನ್ಯತೆ ನೀಡಿತ್ತು. ಈಗ ಒಟ್ಟು ಆರು ವಿಭಾಗಗಳು ಎನ್‌ಬಿಎಯಿಂದ ಮಾನ್ಯತೆ ಪಡೆದಂತಾಗಿದೆ. ಇದಕ್ಕೆ ಶ್ರಮಿಸಿದ ಪ್ರಾಂಶುಪಾಲರು, ಮುಖ್ಯಸ್ಥರು, ಬೋಧಕ ಮತ್ತು ಬೋದಕೇತರ ಸಿಬ್ಬಂದಿ ವರ್ಗದವರ ಶ್ರಮವನ್ನು ಶ್ಲಾಘಿಸಿದ್ದಾರೆ.

ಬಸವ ಜನ್ಮಭೂಮಿಯಲ್ಲಿ Vijayapura DCಯಿಂದ ಸಾರ್ವಜನಿಕ ಅಹವಾಲು ಸ್ವೀಕಾರ!

ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಎಂ.ಎಸ್‌. ರವಿಪ್ರಕಾಶ ಮಾತನಾಡಿ, ನಾಲ್ಕು ವಿಭಾಗಗಳಿಗೆ ಎನ್‌ಬಿಎ ಮಾನ್ಯತೆ ದೊರೆತಿರುವುದು ಸಂತೋಷದಾಯಕ. ಎಂಜಿನಿಯರಿಂಗ್‌ ಕಾಲೇಜಿನ ಕಂಪ್ಯೂಟರ್‌ ಸೈನ್ಸ್‌ (ಸಿಎಸ್‌ಇ), ಮಾಹಿತಿ ತಂತ್ರಜ್ಞಾನ (ಐಎಸ್‌ಇ), ಎಲೆಕ್ಟ್ರಾನಿಕ್ಸ್‌ ಮತು ್ತಕಮ್ಯುನಿಕೇಶನ್‌ (ಇಸಿಇ) ಮತ್ತು ಮೆಕ್ಯಾನಿಕಲ್‌ (ಎಂಇ)ನಾಲ್ಕು ವಿಭಾಗಗಳನ್ನು ಎನ್‌ಬಿಎ ಪರಿಶೀಲಿಸಿತಲ್ಲದೆ, ಪ್ರಾಧ್ಯಾಪಕರ ಮತ್ತು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯ ಬಗ್ಗೆ ಪರಾಮರ್ಶೆ ನಡೆಸಿದ್ದನ್ನು ಪರಿಗಣಿಸಿ ಮಾನ್ಯತೆ ನೀಡಿದೆ ಎಂದರು.

Bannerghatta ; ಹೋಟೆಲ್‌ನಲ್ಲಿ ರೈಲಿನ ಮೂಲಕ ಟೇಬಲ್‌ಗೆ ಊಟ!

ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ತಾಂತ್ರಿಕ ಶಿಕ್ಷಣ ನೀಡಲಾಗುತ್ತಿದೆ. ನುರಿತ ಪ್ರಾಧ್ಯಾಪಕರು, ಸಂಶೋಧಕರು, ಡಿಜಿಟಲ್‌ ಲೈಬ್ರರಿ, ವೈಫೈ ಕ್ಯಾಂಪಸ್‌ ಸೇರಿದಂತೆ ಸೌಲಭ್ಯ, ಕಲಿಕಾ ಬೋಧನೆ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ. ಜೊತೆಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಕ್ಯಾಂಪಸ್‌ ಸಂದರ್ಶನ ಏರ್ಪಡಿಸಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಉತ್ತಮ ತಾಂತ್ರಿಕ ಕಲಿಕಾ ಬೋಧನೆ ರೂಪಿಸಿಕೊಳ್ಳಲು ನೆರವಾಗುತ್ತಿದ್ದೇವೆ. ಈ ವರ್ಷ 630 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಉದ್ಯೋಗ ದೊರೆತಿದೆ.ಇದಕ್ಕೆ ಕಾರಣರಾದ ಡಾ.ಜಿ.ಪರಮೇಶ್ವರ್‌ಗೆ ಧನ್ಯವಾದಗಳನ್ನು ತಿಳಿಸಿದರು.

PREV
Read more Articles on
click me!

Recommended Stories

SSLCಗೆ ಶೇ.33 ಪಾಸಿಂಗ್ ಮಾರ್ಕ್ಸ್ ಸಮರ್ಥಿಸಿ ಕೊಳ್ಳುತ್ತಲೇ ರಾಜ್ಯ ಪೊಲಿಟಿಕ್ಸ್ ಅಪ್ಟೇಡ್ ಕೊಟ್ಟ ಮಧು ಬಂಗಾರಪ್ಪ
ಖಾಸಗಿ ಶಾಲೆಗಳಿಗೆ ಸೆಡ್ಡು, ಮುಂದಿನ ವರ್ಷದಿಂದ ರಾಜ್ಯಾದ್ಯಂತ 700 ಕೆಪಿಎಸ್ ಶಾಲೆ ಕಾರ್ಯಾರಂಭ