ಕಲ್ಲಡ್ಕ ಸರ್ಕಾರಿ ಶಾಲೆಯ ಬಹುಮುಖಿ ಮಕ್ಕಳ ತಂಡವೊಂದು ಹೆದ್ದಾರಿ ಅಕ್ಕಪಕ್ಕ ಗಿಡನೆಡಿ ಎಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದೆ.
ಬಂಟ್ವಾಳ (ಜೂ.9): ಒಂದೆಡೆ ಪರಿಸರ ದಿನಾಚರಣೆಯ ಹೆಸರಿನಲ್ಲಿ ಬಹುತೇಕರು ಗಿಡನೆಡುತ್ತಾ ಫೆäಟೋ ತೆಗೆಸಿಕೊಂಡರೆ ಕಲ್ಲಡ್ಕ ಸರ್ಕಾರಿ ಶಾಲೆಯ ಬಹುಮುಖಿ ಮಕ್ಕಳ ತಂಡವೊಂದು ಹೆದ್ದಾರಿ ಅಕ್ಕಪಕ್ಕ ಗಿಡನೆಡಿ ಎಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದೆ.
ಏನಿದು ಪತ್ರ..? : ಕಲ್ಲಡ್ಕ ಸರ್ಕಾರಿ ಮಾದರಿ ಹಿರಿಯ ಪ್ರಾ.ಶಾಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಬೆಂಗಳೂರಿನ ಇಂಡಿಯಾ ¶ೌಂಡೇಶನ್ ಫಾರ್ ದಿ ಆಟ್ಸ್‌ರ್ ಎಂಬ ಸಂಸ್ಥೆಯ ಕಲಿ-ಕಲಿಸು ಯೋಜನೆಯನ್ವಯ ಕಲಾಬರಹ-ಕಲಾಪತ್ರಿಕೆ ಯೋಜನೆಯ ಚಟುವಟಿಕೆಗಳನ್ನು ಪತ್ರಕರ್ತ-ಕಲಾವಿದ ಮೌನೇಶ ವಿಶ್ವಕರ್ಮ ಅವರು ನಡೆಸಿದ್ದು, ಶಾಲೆಯ ಮುಖ್ಯಶಿಕ್ಷಕ ಅಬೂಬಕರ್ ಅಶ್ರಫ್ ಮಾರ್ಗದರ್ಶನ ನೀಡುತ್ತಿದ್ದಾರೆ.
30 ಮಕ್ಕಳ ಬಹುಮುಖಿ ಗುಂಪನ್ನು ರಚಿಸಲಾಗಿದ್ದು,ಗುಂಪಿಗೆ ವಿಭಿನ್ನ ಕಲಾ ಚಟುವಟಿಕೆಗಳನ್ನು ನಡೆಸಲಾಗಿದೆ. ಈ ಚಟುವಟಿಕೆಯ ಭಾಗವಾಗಿ ನಮ್ಮ ಪರಿಸರ ಅಭಿವೃದ್ಧಿ ಹೇಗೆ ..?.ಏಕೆ ..? ಪರಿಸರ ಕಲಾತ್ಮಕತೆ ಕುರಿತು, ಪರಿಸರ ಪರಹೋರಾಟಗಾರ ಶಿವಮೊಗ್ಗ ದ ಸತೀಶ್ ಕುಮಾರ್ ಎಸ್. ಅವರ ಜೊತೆ ಚರ್ಚೆ-ಸಂವಾದ ನಡೆಸುವ ವೇಳೆ ಹೆದ್ದಾರಿ ಪಕ್ಕದ ಮರಗಳ ಮಾರಣಹೋಮದ ವಿಚಾರ ಚರ್ಚೆಗೆ ಬಂದು ಪರಿಹಾರದ ವಿಚಾರ ಚರ್ಚೆಯ ವೇಳೆ ಮಕ್ಕಳಿಂದ ಕೇಳಿಬಂದ ಸಲಹೆಯಂತೆ ಹೆದ್ದಾರಿ ಅಕ್ಕಪಕ್ಕ ಗಿಡಮರ ಬೆಳೆಸುವಂತೆ ಮನವಿ ಪತ್ರ ಬರೆಯಲಾಗಿದೆ.
Chitradurga: ಶಾಲೆಯ ಅಭಿವೃದ್ಧಿಗಾಗಿ ಬೀದಿಗಿಳಿದ ಕೋಟೆ ನಾಡಿನ ವಿದ್ಯಾರ್ಥಿಗಳು
ಪತ್ರದಲ್ಲೇನಿದೆ?: ಮಾನ್ಯ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಕಲ್ಲಡ್ಕ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಬಹುಮುಖಿ ಮಕ್ಕಳು ಮಾಡುವ ಪ್ರಣಾಮಗಳು..ಹಾಗೂ ವಿಶ್ವ ಪರಿಸರ ದಿನಾಚರಣೆಯ ಶುಭಾಶಯಗಳು..,
ಕಲ್ಲಡ್ಕ ನಮ್ಮ ಊರು ನಾವೆಲ್ಲರೂ ಹುಟ್ಟಿಬೆಳೆದ ಹೆಮ್ಮೆಯ ಊರು. ಕಲ್ಲಡ್ಕದ ಶಿಲ್ಪಾ ಗೊಂಬೆ ಬಳಗ, ಕಲ್ಲಡ್ಕದ ಕೆ.ಟಿ, ಕಲ್ಲಡ್ಕ ದ ಹೆಸರನ್ನು ರಾಜ್ಯ-ರಾಷ್ಟ್ರಮಟ್ಟದಲ್ಲಿ ಗುರುತಿಸುವಂತೆ ಮಾಡಿದೆ.
ಕಲ್ಲಡ್ಕದಿಂದ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 75ರ ಬಿ.ಸಿ.ರೋಡು-ಅಡ್ಡಹೊಳೆ ಚತುಷ್ಪಥ ಹೆದ್ದಾರಿಯ ಕಾಮಗಾರಿ ಕಳೆದ ಒಂದೂವರೆ ವರ್ಷದಿಂದ ನಡೆಯುತ್ತಿದ್ದು, ಕಲ್ಲಡ್ಕದಲ್ಲಿ ಫ್ಲೈಓರ್ವ ನಿರ್ಮಾಣವಾಗಲಿದೆ. ಈ ಕಾಮಗಾರಿಗಾಗಿ ರಸ್ತೆ ಬದಿಯ ಮರಗಳನ್ನು ಕಡಿಯಲಾಗಿದ್ದು, ಅದೆಷ್ಟೋ ಕಟ್ಟಡಗಳು ನೆಲಸಮವಾಗಿದೆ.
ಸಾವಿರಾರು ಮರಗಳು ಕಡಿಯಲ್ಪಟ್ಟಿರುವುದರಿಂದ ನಮ್ಮ ಪರಿಸರಕ್ಕೆ ಅದೆಷ್ಟೋ ನಷ್ಟವಾಗಿದೆ. ಆ ಮರಗಿಡಗಳಲ್ಲಿ ಆಶ್ರಯ ಪಡೆದಿದ್ದ ಪಕ್ಷಿಗಳು ಸಹಿತ ಇತರ ಜೀವಿಗಳಿಗೂ ಸಮಸ್ಯೆಯಾಗಿದೆ. ಉಂಟಾಗಿರುವ ನಷ್ಟವನ್ನು ಭರ್ತಿಗೊಳಿಸಲು ಸಾಧ್ಯವಿಲ್ಲ. ಆದರೆ ಕನಿಷ್ಠ ಹೆದ್ದಾರಿ ನಿರ್ಮಾಣದ ವೇಳೆ ಹೆದ್ದಾರಿ ಪಕ್ಕದಲ್ಲಿ ಕಡಿದಿರುವ ಮರಗಳಿಗೆ ಪ್ರಾಯಶ್ಚಿತ್ತವಾಗಿ ಗಿಡಮರಗಳನ್ನು ನೆಟ್ಟು ಬೆಳೆಸಲು ಯೋಜನೆಯನ್ನು ಹಾಕಿಕೊಳ್ಳಬೇಕೆಂದು ನಮ್ಮ ಮನವಿ.
ಪಠ್ಯ ಪುಸ್ತಕ ಪರಿಷ್ಕರಣೆ ವಿಚಾರದಲ್ಲಿ ತಪ್ಪಾಗಿದ್ರೆ ತಿದ್ದಿಕೊಳ್ಳುತ್ತೇವೆ: ಸಚಿವ ನಾಗೇಶ್
ಇದಕ್ಕೆ ಪೂರಕವಾಗಿ ಹೆದ್ದಾರಿ ನಿರ್ಮಾಣದ ಸಂದರ್ಭವೇ ಮುಂದೆ ಗಿಡಮರ ಬೆಳೆಸಲು ಸ್ಥಳವನ್ನೂ ನಿಗದಿಪಡಿಸಬೇಕು. ನೆಡುವಂತಹಾ ಮರಗಳು ಪರಿಸರಕ್ಕೆ, ಪ್ರಾಣಿ-ಪಕ್ಷಿಗಳಿಗೆ ಉಪಯೋಗವಾಗುವಂತಿರಲಿ, ಕಲ್ಲಡ್ಕ ಪರಿಸರದಲ್ಲಿ ಮಾತ್ರವಲ್ಲ, ಬಿ.ಸಿ.ರೋಡು -ಅಡ್ಡಹೊಳೆ ಹೆದ್ದಾರಿಯುದ್ದಕ್ಕೂ ಹಾಗೂ ಎಲ್ಲೆಲ್ಲಿ ಮರಗಳನ್ನು ಕಡಿದು ಅಭಿವೃದ್ಧಿ ನಡೆಸಲಾಗುತ್ತದೆಯೋ ಅಲ್ಲೆಲ್ಲಾ ಪ್ರಾಯಶ್ಚಿತ್ತಕ್ಕಾಗಿ ದುಪ್ಪಟ್ಟು ಗಿಡಮರ ಬೆಳೆಸುವುದನ್ನು ಸರ್ಕಾರ-ಇಲಾಖೆಗಳ ಯೋಜನೆಯಾಗಿಯೂ ಕಡ್ಡಾಯ ಜಾರಿಗೊಳಿಸಬೇಕೆನ್ನುವುದು ನಮ್ಮ ಮನವಿ..
ಪರಿಸರದ ಕಲಾತ್ಮಕತೆ ಕುರಿತ ತರಗತಿಯಲ್ಲಿ ಸಮಸ್ಯೆಗಳನ್ನು ಗುರುತಿಸುವುದು, ಅದಕ್ಕೆ ಪರಿಹಾರಕ್ಕೆ ಯತ್ನಿಸುವ ಚಟುವಟಿಕೆಯ ಭಾಗವಾಗಿ ಮಕ್ಕಳೇ ಗುರುತಿಸಿದ ಗಂಭೀರ ಸಮಸ್ಯೆಗೆ ಮಕ್ಕಳೇ ಪತ್ರ ಬರೆದು ಪರಿಹಾರ ಕೊಳ್ಳುವ ಪ್ರಯತ್ನ ನಡೆಸಿದ್ದು, ಅಗತ್ಯ ಮಾರ್ಗದರ್ಶನ ನೀಡಲಾಗಿದೆ.
-ಮೌನೇಶ ವಿಶ್ವಕರ್ಮ, ಐಎಫ್‌ಎ ಗ್ರ್ಯಾಂಟಿ
ಶಾಲೆ ಮುಂಭಾಗದಲ್ಲಿ ಹಾದು ಹೋಗುವ ಹೆದ್ದಾರಿಯ ಅಗಲೀಕರಣಕ್ಕೆ ಅದೆಷ್ಟೋ ಮರಗಳನ್ನು ಕಡಿಯಲಾಗಿದೆ, ಹೆದ್ದಾರಿ ಕೆಲಸ ಮುಗಿದ ಬಳಿಕ ಹೆದ್ದಾರಿಯ ಇಕ್ಕೆಲಗಳಲ್ಲಿ ಪ್ರಾಣಿ ಪಕ್ಷಿಗಳಿಗೆ ಉಪಕಾರಿಯಾಗುವಂತಹಾ ಗಿಡಗಳನ್ನು ಸರ್ಕಾರ ನೆಡಿಸಬೇಕು. ಮಾನ್ಯ ಪ್ರಧಾನಮಂತ್ರಿಯವರಿಗೆ ಪತ್ರ ಬರೆದು ನಮ್ಮಬೇಡಿಕೆಯನ್ನು ತಿಳಿಸಲಾಗಿದೆ.
ಸಮೃದ್ಧಿ ಶೆಟ್ಟಿ, 7ನೇ ತರಗತಿ, ಐಎಫ್‌ಎ ಬಹುಮುಖಿ ವಿದ್ಯಾರ್ಥಿನಿ.