Gangavati: ನೀಟ್‌ ಪರೀಕ್ಷೆಯಲ್ಲಿ ತೇರ್ಗಡೆಯಾದ್ರೂ ವೈದ್ಯಕೀಯ ಕಾಲೇಜು ಪ್ರವೇಶಕ್ಕೆ ಆರ್ಥಿಕ ಬಿಕ್ಕಟ್ಟು

By Kannadaprabha News  |  First Published Feb 3, 2022, 12:32 PM IST

*   ಪಿಯುಸಿ ವಿಜ್ಞಾನ  ಪರೀಕ್ಷೆಯಲ್ಲಿ  ನೂರಕ್ಕೆ ನೂರಷ್ಟು ಅಂಕ,  ದಾನಿಗಳ ಕಾಯುವಿಕೆಯಲ್ಲಿ ವಿದ್ಯಾರ್ಥಿ
*  ನೀಟ್ ಪರೀಕ್ಷೆಯಲ್ಲಿ 634 ಅಂಕ
*  ಮುಂದಿನ ವೈದ್ಯಕೀಯ ಶಿಕ್ಷಣಕ್ಕೆ ಎಲ್ಲರೂ ಸಹಕಾರ ನೀಡಬೇಕಾಗಿದೆ
 


ರಾಮಮೂರ್ತಿ ನವಲಿ

ಗಂಗಾವತಿ(ಫೆ.03):  ಹಲ್ಲು  ಇದ್ದವರಿಗೆ ಕಡಲೆ  ಇಲ್ಲಾ, ಕಡಲೆ ಇದ್ದವರಿಗೆ  ಹಲ್ಲು ಇಲ್ಲ ಎನ್ನುವ ಗಾಧೆ ಮಾತು ಈಗ ಸತ್ಯ ಎನಿಸಿದೆ.  ಗಂಗಾವತಿಯ(Gangavati) ನಗರದ ವಿದ್ಯಾರ್ಥಿಯೊಬ್ಬ ನೀಟ್ ಪರೀಕ್ಷೆಯಲ್ಲಿ(NEET Exam) ತೇರ್ಗಡೆಯಾಗಿದ್ದರು ಸಹ ಸರಕಾರಿ ವೈದ್ಯಕೀಯ ಕಾಲೇಜು(Medical College) ಪ್ರವೇಶಕ್ಕೆ ಆರ್ಥಿಕ ತೊಂದರೆ ಎದುರಾಗಿದೆ.  

Tap to resize

Latest Videos

undefined

ನಗರದ  ವಡ್ಡರಹಟ್ಟಿ ಉಳ್ಳಿಡಗ್ಗಿಯ ನವೀನ್ ಕುಮಾರ್(Naveen Kumar) ಎನ್ನುವ ವಿದ್ಯಾರ್ಥಿಗೆ(Student) ಆರ್ಥಿಕ ಮುಗ್ಗಟ್ಟು ಎದುರಾಗಿದೆ. ಚಿಕ್ಕ ವಯಸ್ಸಿನಲ್ಲಿ ತಂದೆ  ಈರಪ್ಪ ಗುತ್ತಲ,  ತಾಯಿ ನಾಗರತ್ನಮ್ಮ ಕಳೆದು ಕೊಂಡಿರುವ  ನವೀನ್ ಕುಮಾರ  ತನ್ನ ಪ್ರಾಥಮಿಕ ಮತ್ತು ಪ್ರೌಡ ಶಿಕ್ಷಣವನ್ನು ಕೊಪ್ಪಳ(Koppal) ಸಮೀಪದ  ಹನಗುಂಟಿ ಗ್ರಾಮದ ಮುರಾರ್ಜಿ ವಸತಿ ಶಾಲೆಯಲ್ಲಿ 6 ರಿಂದ 10ನೇ ತರಗತಿ ಓದಿದ್ದಾನೆ.  ನಂತರ ಕಾಲೇಜು ಶಿಕ್ಷಣವನ್ನು  ಬೀದರ್‌ನ ಶಹೀನ್  ಇಂಡಿಪೆಂಡಿಂಚ್  ಅಹ್ಮದ್ ಬಾಗ್ ಗೋಳಕನ ಕಾಲೇಜಿನಲ್ಲಿ ಪಿಯುಸಿ ಪ್ರಥಮ ಮತ್ತು ದ್ವೀತಿಯ ವರ್ಷದ ಶಿಕ್ಷಣ ಪಡೆದು  ಕೀರ್ತಿ ತಂದಿದ್ದಾರೆ.  ಎಲ್ಲಾ ವಿಷಯಗಳಲ್ಲಿ ನೂರಕ್ಕೆ ನೂರಷ್ಟು( 600/600) ಅಂಕ ಪಡೆದು ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆಯಾಗಿದ್ದಾನೆ.

Fact Check: NEET PG 2022 Exam ಮುಂದೂಡಲಾಗಿದೆ ಎಂಬ ನೋಟಿಸ್‌ ಫೇಕ್:‌ PIB ಸ್ಪಷ್ಟನೆ!

ನೀಟ್ ಪರೀಕ್ಷೆಯಲ್ಲಿ 634 ಅಂಕಃ  

ನೀಟ್ ಪರೀಕ್ಷೆಯಲ್ಲಿ 725 ಕ್ಕೆ 634 ಅಂಕ ಪಡೆದು ವೈದ್ಯಕೀಯ ಕಾಲೇಜು ಪ್ರವೇಶಕ್ಕೆ ಅರ್ಹನಾಗಿದ್ದಾನೆ.  ಖಾಸಗಿ ವೈದ್ಯಕೀಯ ಕಾಲೇಜುಗಳ ಪ್ರವೇಶಕ್ಕೆ ಲಕ್ಷಾಂತರ ರು. ಶುಲ್ಕ ಇರುವ ಸಂದರ್ಭದಲ್ಲಿ ಸರಕಾರಿ ಕಾಲೇಜಿಗೆ ಆಯ್ಕೆಯಾಗಿರುವ ಈ ವಿದ್ಯಾರ್ಥಿ ನವೀನ್‌ಗೆ  ಸರಕಾರಿ  ಕಾಲೇಜಿಗೆ ಪ್ರವೇಶ ಪಡೆಯಲು  ತೊಂದದರೆಯಾಗಿದೆ.  ಪ್ರತಿ ವರ್ಷ  ಕಾಲೇಜು ಫಿ, ಹಾಸ್ಟೇಲ್ ಮತ್ತು ಇತರ ಪುಸ್ತಕಗಳ ಖರೀದಿಗಾಗಿ ಕನಿಷ್ಟ 1 ಲಕ್ಷ 50 ಸಾವಿರ ರು ಬರುತ್ತದೆ. ಈಗ ಆ ವಿದ್ಯಾರ್ಥಿ ಆರ್ಥಿಕವಾಗಿ ನಿಸ್ಸಾಹಕನಾಗಿದ್ದರಿಂದ ವೈದ್ಯಕೀಯ ಶಿಕ್ಷಣ(Medical Education) ಡೋಲಾಯಾಮಾನವಾಗಿದೆ. 

ದಾನಿಗಳ ಕಾಯುವಿಕೆ

ತಂದೆ ತಾಯಿಯನ್ನು ಕಳೆದು ಕೊಂಡಿರುವ ವಿದ್ಯಾರ್ಥಿ ನವೀನ್‌ಗೆ ಈಗ  ಮುಂದಿನ ವೈದ್ಯಕೀಯ ಶಿಕ್ಷಣ ಪಡೆಯಲು ದಾನಿಗಳನ್ನು ಕಾಯುತ್ತಿದ್ದಾನೆ.  ಎಲ್ಲಾ ಅರ್ಹತೆ ಇದ್ದರು ಸಹ ಆರ್ಥಿಕವಾಗಿ(Financial)  ಹಿನ್ನಡೆಯಾಗಿದ್ದರಿಂದ ವ್ಯಾಸಂಗ ಹೇಗೆ ಮಾಡಬೇಕೆನ್ನುವ ಚಿಂತೆಯಲ್ಲಿ ವಿದ್ಯಾರ್ಥಿ ಇದ್ದಾನೆ.  ದಾನಿಗಳು ಹಾಗು  ವಿವಿಧ ಸಂಘ, ಸಂಸ್ಥೆಗಳು ವಿದ್ಯಾರ್ಥಿಯ ಶಿಕ್ಷಣಕ್ಕೆ  ಸಹಕಾರ ನೀಡಿದರೆ  ಆರ್ಥಿಕವಾಗಿ ಹಿಂದುಳಿದ ಈ ವಿದ್ಯಾರ್ಥಿಯನ್ನು  ಉತ್ತಮ ವೈದ್ಯರನ್ನಾಗಿ ಮಾಡ ಬಹುದಾಗಿದೆ.  

ವಿದ್ಯಾರ್ಥಿಗೆ ಪ್ರೋತ್ಸಾಹಿಸುವವರು ನವೀನ್ ಕುಮಾರ್ ಎಸ್‌ಬಿಐ ( ಎಸ್.ಬಿ ನಂಃ 40751920593  IFSC Code_ sbin 000  9752)  ಸಂಪರ್ಕಿಸಬಹುದಾಗಿದೆ. ಮೊ.  ಮೊಃ 9019306483 

ಸಮೀಪದ ಉಳ್ಳಿ ಡಗ್ಗಿಯ ವಿದ್ಯಾರ್ಥಿ ನವೀನ್ ಕುಮಾರ ಅವರು ನೀಟ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾನೆ. ಮುಂದಿನ ವೈದ್ಯಕೀಯ ಶಿಕ್ಷಣಕ್ಕೆ ಎಲ್ಲರೂ ಸಹಕಾರ ನೀಡಬೇಕಾಗಿದೆ.  ತಂದೆ ತಾಯಿಯನ್ನು ಕಳೆದು ಕೊಂಡಿರುವ ಈ ವಿದ್ಯಾರ್ಥಿಯ ಮುಂದಿನ ಭವಿಷ್ಯಕ್ಕಾಗಿ ಎಲ್ಲರು ಕೈ ಜೋಡಿಸೋಣ ಅಂತಾರೆ ಗಂಗಾವತಿ  ಖ್ಯಾತ ವೈದ್ಯ ಡಾ.ಶಿವಾನಂದ ಭಾವಿಕಟ್ಟಿ ತಿಳಿಸಿದ್ದಾರೆ. 

BCWD NEET JEE Pre Examination Coaching 2022: ಉಚಿತ ನೀಟ್‌, ಜೆಇಇ ಪರೀಕ್ಷಾ ಪೂರ್ವ ತರಬೇತಿಗೆ ಅರ್ಜಿ ಆಹ್ವಾನ

ನೀಟ್‌ ಪರೀಕ್ಷೆಯಲ್ಲಿ ಮುಧೋಳದ ಕೂಲಿಕಾರನ ಮಗ ದೇಶಕ್ಕೇ ಪ್ರಥಮ..!

ಮಹಾಲಿಂಗಪುರ(ಫೆ.03):  ವೈದ್ಯಕೀಯ ವಿಭಾಗದ ಸೂಪರ್‌ ಸ್ಪೆಷಾಲಿಟಿ ‘ನೀಟ್‌’ ಪರೀಕ್ಷೆಯಲ್ಲಿ(Super Specialty NEET Exam)  ಬಾಗಲಕೋಟೆ(Bagalkot) ಜಿಲ್ಲೆ ಮುಧೋಳ ತಾಲೂಕು ರನ್ನಬೆಳಗಲಿಯ ಕೂಲಿಕಾರನ ಮಗ ಡಾ.ಚಿದಾನಂದ ಕಲ್ಲಪ್ಪ ಕುಂಬಾರ(Dr Chidanand Kallappa Kumbar) ಎರಡು ವಿಷಯಗಳಲ್ಲಿ ದೇಶಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.

ರನ್ನಬೆಳಗಲಿಯ ಬಡ ಕುಟುಂಬದ ಕಲ್ಲಪ್ಪ- ಕಸ್ತೂರಿ ದಂಪತಿಯ ಪುತ್ರ ಡಾ.ಚಿದಾನಂದ ಕುಂಬಾರ ಅವರು 2021ನೇ ಸಾಲಿನ ಸೂಪರ್‌ ಸ್ಪೆಷಾಲಿಟಿ ನೀಟ್‌ ಪರೀಕ್ಷೆಯಲ್ಲಿ ಎಂಡಿ ಗ್ಯಾಸ್ಟ್ರೋ ಎಂಟರಾಲಜಿ (Digestive system)ಯಲ್ಲಿ 400ಕ್ಕೆ 340 ಅಂಕ ಮತ್ತು ಎಂಡಿ ಹೆಪಟಾಲಜಿ (Liver Specialist)ಯಲ್ಲಿ 400ಕ್ಕೆ 330 ಅಂಕಗಳಿಸಿ ಈ ಎರಡು ವಿಭಾಗದಲ್ಲಿ ದೇಶಕ್ಕೆ(India) ಪ್ರಥಮ ರ‍್ಯಾಂಕ್‌ ಪಡೆದಿದ್ದಾರೆ.
 

click me!