Prayatna Foundation: ಸ್ಮಾರ್ಟ್‌ಫೋನ್ ಕೊಡೋದು ಅಷ್ಟೇ ಅಲ್ಲ, ನೆಟ್ ಕೂಡ ರೀಚಾರ್ಡ್ ಮಾಡಿದ್ರು

By Suvarna NewsFirst Published Feb 3, 2022, 12:27 PM IST
Highlights

*ಹೈಸ್ಕೂಲು ಓದುತ್ತಿರುವ ಹೆಣ್ಣು ಮಕ್ಕಳಿಗೆ ಸ್ಮಾರ್ಟ್‌ಫೋನ್ ಕೊಳ್ಳುವ ಶಕ್ತಿ ಇರಲಿಲ್ಲ.
*ಈ ಮಕ್ಕಳೆಲ್ಲ ಆಫ್‌ಲೈನ್ ಕ್ಲಾಸಿಗೆ ಕಾದಿದ್ದರು, ಅವರಿಗೆಲ್ಲ ನೆರವು ನೀಡಿದ್ದು ಪ್ರಯತ್ನ ಫೌಂಡೇಷನ್
*ಮಕ್ಕಳಿಗೆ ಸ್ಮಾರ್ಟ್‌ಫೋನ್ ಕೊಡ್ಸಿ ಅವರಿಗೆ ಮೂರು ತಿಂಗಳಿಗೆ ರೀಚಾರ್ಜ್ ಕೂಡ ಮಾಡಿದರು

ಕೋವಿಡ್ (Covid-19) ಸಾಂಕ್ರಾಮಿಕದಿಂದಾಗಿ ಶಿಕ್ಷಣ(Education)ವೆಲ್ಲ ಆನ್‌ಲೈನ್ ಆಯಿತು. ಆದರೆ, ಎಲ್ಲ ಮಕ್ಕಳಿಗೂ ಆನ್ಲೈನ್ ಶಿಕ್ಷಣ (Online Education) ಭರಿಸುವ ಶಕ್ತಿ ಇರಲಿಲ್ಲ. ಅವರ ಪೋಷಕರಿಗೆ ಮೊಬೈಲ್ (Mobile), ಟ್ಯಾಬ್ (Tab) ಸೇರಿ ಇತರ ಸಾಧನಗಳನ್ನು ಕೊಳ್ಳುವಷ್ಟು ಹಣವಿರಲಿಲ್ಲ. ಹಾಗಾಗಿ, ಬಹುತೇಕ ಆಫ್‌ಲೈನ್ ಕ್ಲಾಸು ಶುರುವಾಗಲಿದೆ ಎನ್ನುತ್ತಿದ್ದರು. ಇದಕ್ಕೆ ಹೈಸ್ಕೂಲ್ ಮಕ್ಕಳೂ (High School Students) ಹೊರತಲ್ಲ. ಅವರೆಲ್ಲ ದಿನಗೂಲಿ, ರೈತರು, ರಿಕ್ಷಾ ಚಾಲಕರ ಹೆಣ್ಣುಮಕ್ಕಳಾಗಿದ್ದು, ಕೆಲವರು ಉತ್ತಮ ಸಂಬಳಕ್ಕಾಗಿ ನಗರಕ್ಕೆ ವಲಸೆ ಹೋಗುತ್ತಾರೆ. ಇಂಥ ಬಾಲಕಿಯರಿಗೆ ಶಾಲೆಯ ಶಿಕ್ಷಣದ ಅತ್ಯವಶ್ಯಕವಾಗಿತ್ತು. ಆದರೆ ಸಾಂಕ್ರಾಮಿಕ ರೋಗದಿಂದ ಉಂಟಾದ  ಅಡ್ಡಿ ಮತ್ತು ಸಾಧನಗಳ ಕೊರತೆಯಿಂದ ಉಲ್ಬಣಗೊಂಡ ಸಮಸ್ಯೆಗಳಿಂದಾಗಿ ಅನೇಕ ಹುಡುಗಿಯರು ಬಾಲ್ಯದಿಂದಲೂ  ಹೋರಾಡುತ್ತಿರುವ ಹಾದಿಯಿಂದ ದೂರವಿರುವ ಭವಿಷ್ಯವನ್ನು ಎದುರು ನೋಡುತ್ತಿದ್ದರು. ಇದು ಕೇವಲ ಒಬ್ಬಿಬ್ಬರ ಕತೆಯಲ್ಲ. ಬಹುತೇಕ ಮಕ್ಕಳ ಕತೆ ಇದಾಗಿತ್ತು. ಆಗ ನೆರವಿಗ ಬಂದಿದ್ದೇ ಈ  ಪ್ರಯತ್ನ ಫೌಂಡೇಶನ್ (Prayatna Foundation).

ಪ್ರಯತ್ನ ಫೌಂಡೇಶನ್‌ ಎಂಬ ಎನ್ ಜಿಒ (NGO), ಕೋಲ್ಕೊತಾ ನಗರದಲ್ಲಿ ಇಂಥ ಮಕ್ಕಳಿಗೆ ಆಸರೆಯಾಗಿ ಶ್ರಮಿಸುತ್ತಿದೆ. ಬಡ ಬಾಲಕಿಯರು ಶಿಕ್ಷಣ ದಿಂದ ವಂಚಿತರಾಗಬಾರದು ಎಂದು ಉಚಿತವಾಗಿ ಸ್ಮಾರ್ಟ್ ಫೋನ್ (Smartphones) ಗಳನ್ನು ವಿತರಿಸಿದೆ. ಕೇವಲ‌ ಫೋನ್ ಕೊಡಿಸುವುದಷ್ಟೇ ಅಲ್ಲ, 3 ತಿಂಗಳಿಗೊಮ್ಮೆ ರೀಚಾರ್ಜ್ ಕೂಡ ಮಾಡಿಸಿಕೊಡುತ್ತಿದೆ. 

Sonny Mehta India Scholarship: ಭಾರತೀಯ ಬರಹಗಾರರಿಗೆ ವಿದ್ಯಾರ್ಥಿವೇತನ, ಆಯ್ಕೆಯಾದವರಿಗೆ 28 ಲಕ್ಷ!

ನನ್ನ ತಂದೆ ವೃತ್ತಿಯಲ್ಲಿ ಆಟೋ ಚಾಲಕ (Auto Driver). ನನ್ನ ಸಹೋದರ ಮತ್ತು ನಾನು ಒಂದೇ ಸ್ಮಾರ್ಟ್‌ಫೋನ್ ಅನ್ನು ಹೊಂದಿದ್ದೇವೆ. ಕಾಲೇಜಿನಲ್ಲಿ ಓದುತ್ತಿರುವ ನನ್ನ ಅಣ್ಣ ಕೂಡ ತರಗತಿಗಳಿಗೆ ಹಾಜರಾಗಬೇಕಾಗಿರುವುದರಿಂದ ನನಗೆ ತರಗತಿಗಳಿಗೆ ಹಾಜರಾಗಲು ಸಾಧ್ಯವಾಗಲಿಲ್ಲ ಅಂತ‌ ಹೇಳುತ್ತಾಳೆ ಮಾಧ್ಯಮಿಕದಲ್ಲಿ ಶೇಕಡಾ 91ರಷ್ಟು ಅಂಕ ಗಳಿಸಿದ ಪ್ರಿಯಾ. ಇಂತಹ ನೂರಾರು ಬಾಲಕಿಯರಿಗೆ ಈಗ ಸಹಾಯ ಹಸ್ತ ಸಿಕ್ಕಿದೆ.

ಸಾಂಕ್ರಾಮಿಕ ರೋಗಕ್ಕೆ ಮುಂಚೆಯೇ ನಮ್ಮ ಸಂಕಟಗಳು ತೀವ್ರವಾಗಿದ್ದವು. ಆರ್ಥಿಕ ಬಿಕ್ಕಟ್ಟಿನಿಂದಾಗಿ ನನ್ನ ಸಹೋದರ ವಿಜ್ಞಾನವನ್ನು ತ್ಯಜಿಸಬೇಕಾಯಿತು. ಸಾಂಕ್ರಾಮಿಕ ರೋಗವು(Covid) ನಮ್ಮ ಸಮಸ್ಯೆಗಳನ್ನು ಬಹುಪಾಲು ಹೆಚ್ಚಿಸಿತು. ಹೀಗಾಗಿ ನಾನು ನನ್ನ ತಂದೆಯನ್ನು ಸ್ಮಾರ್ಟ್ ಫೋನ್ ಕೇಳಲು ಸಾಧ್ಯವಾಗಲಿಲ್ಲ. ಶಿಕ್ಷಕರು ಅವರ ಫೋನ್‌ನಲ್ಲಿ ಕಳುಹಿಸುವ ಹೋಮ್ ವರ್ಕ್ (Home Work) ಮಾಡಲು ಸಾಧ್ಯವಾಗುತ್ತಿರಲಿಲ್ಲ.ಈಗ ಕನಿಷ್ಠ ನಾನು ತರಗತಿಗಳಿಗೆ ಹಾಜರಾಗಬಹುದು.  ತರಗತಿಯಲ್ಲಿ ನನ್ನ ಅನುಮಾನಗಳನ್ನು ಪರಿಹರಿಸಬಹುದು. ಶಿಕ್ಷಕರು ವರ್ಕ್  ಕಳುಹಿಸಿದ ಕೂಡಲೇ ನೋಡಬಹುದು ಅಂತ ಖುಷಿಯಿಂದ ಹೇಳುತ್ತಾಳೆ ಬರ್ಶಾ.

ಕೋವಿಡ್ 2ನೇ ಅಲೆ ತಗ್ಗಿದ ನಂತರ ಅಕ್ಟೋಬರ್‌ನಲ್ಲಿ ಈ ಮಕ್ಕಳಿಗೆ ಸಾಧನಗಳನ್ನು  ನೀಡಲಾಯಿತು. ಶಾಲೆಗಳು ಮತ್ತೆ ತೆರೆದಾಗಲೂ ಅವರಿಗೆ ಸಾಧನಗಳು ಬೇಕಾಗುತ್ತವೆ. ಇ-ಲರ್ನಿಂಗ್  (E learning) ಉಳಿಯಬೇಕು ಅನ್ನೋದು ನಮ್ಮ ಆಶಯವಾಗಿತ್ತು. ಹೀಗಾಗಿ ನಾವು ದೂರದ ಸ್ಥಳಗಳಿಗೆ ಹೋಗಲು ಬಯಸಿದ್ದೆವು. ಏಕೆಂದರೆ ನಗರಗಳಲ್ಲಿ ವಿದ್ಯಾರ್ಥಿಗಳು ಸಹಾಯ ಸಿಗುತ್ತದೆ. ಆದರೆ ಹಳ್ಳಿಗಳಲ್ಲಿ ಹಾಗಲ್ಲ. ಹೀಗಾಗಿ ಜಿಲ್ಲಾ ಪೊಲೀಸರು, ಇಂತಹ ಹತ್ತಾರು ಬಡ ವಿದ್ಯಾರ್ಥಿಗಳನ್ನು ಗುರುತಿಸಿದ್ದಾರೆ. ಅವರ ಅಗತ್ಯತೆಗಳು ಮತ್ತು ಅರ್ಹತೆಯ ಆಧಾರದ ಮೇಲೆ ಮೌಲ್ಯಮಾಪನವನ್ನು ಮಾಡಲಾಗಿದೆ ಅಂತಾರೆ ಪ್ರಯತ್ನ ಫೌಂಡೇಶನ್‌ನ ಸಹ-ಸಂಸ್ಥಾಪಕ ಬಿಷ್ಣು ಬಜಾಜ್.

Tripura Education News Bulletin: ಕೋವಿಡ್ ಮಧ್ಯೆ ಶಿಕ್ಷಣಕ್ಕೆ ಹೊಸ ದಾರಿ ಹುಡುಕಿದ ತ್ರಿಪುರಾ ಸರ್ಕಾರ    

ನಾವು ಈ ಹುಡುಗಿಯರೊಂದಿಗೆ ಸಂಪರ್ಕದಲ್ಲಿದ್ದೇವೆ ಮತ್ತು ನಾವು ಆರಂಭದಲ್ಲಿ ಅವರ ಫೋನ್‌ಗಳನ್ನು ಮೂರು ತಿಂಗಳವರೆಗೆ ರೀಚಾರ್ಜ್ ಮಾಡಿದ್ದೇವೆ. ಅದನ್ನು ಇನ್ನೂ ಮೂರು ತಿಂಗಳು ವಿಸ್ತರಿಸುತ್ತಿದ್ದೇವೆ ಎಂದು ಪ್ರತಿಷ್ಠಾನದ ಕಾರ್ಯಕ್ರಮ ನಿರ್ವಾಹಕಿ ಅರ್ಚನಾ ರಾಯ್ ತಿಳಿಸಿದ್ದಾರೆ. ಒಟ್ಟಾರೆ ಈ ಪ್ರಯತ್ನ ಫೌಂಡೇಶನ್ ಕಾರ್ಯ ನಿಜಕ್ಕೂ ಶ್ಲಾಘನೀಯ. ಕೋವಿಡ್ ಸಂಕಷ್ಟ ಸಮಯದಲ್ಲಿ ಇವರು ಮಾಡ್ತಿರೋ ಕಾರ್ಯ ಅತ್ಯಮೂಲ್ಯ ವಾದುದು. ಇವರು ವಿತರಿಸ್ತಿರುವ ಉಚಿತ ಸ್ಮಾರ್ಟ್ ಫೋನ್ ಅದೆಷ್ಟೋ ಹೆಣ್ಣುಮಕ್ಕಳ ಶಿಕ್ಷಣವನ್ನು ಉಳಿಸುತ್ತಿದೆ.

click me!