* 1.11 ಲಕ್ಷ ವಿದ್ಯಾರ್ಥಿಗಳಿಗೆ ಉಚಿತ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ
* ಸಂತೋಷ ಲಾಡ್ ಫೌಂಡೇಶನ್ ವತಿಯಿಂದ ಫೆ. 2ರಿಂದ ಆರಂಭ
* ದುಬಾರಿ ವೆಚ್ಚ ಭರಿಸಲಾಗದ ಬಡ ವಿದ್ಯಾರ್ಥಿಗಳಿಗೆ ಅನುಕೂಲ
ಬಸವರಾಜ ಹಿರೇಮಠ
ಧಾರವಾಡ(ಫೆ.03): ಪ್ರಸ್ತುತ ಕೇಂದ್ರ ಮತ್ತು ರಾಜ್ಯ ಸರ್ಕಾರಿ ಉನ್ನತ ಉದ್ಯೋಗ(Government Jobs) ಸೇರಿದಂತೆ ಔದ್ಯೋಗಿಕ ಕ್ಷೇತ್ರಕ್ಕೆ ಸ್ಪರ್ಧಾತ್ಮಕ ಪರೀಕ್ಷೆಗಳೇ ಆಧಾರ. ಈ ಹಿನ್ನೆಲೆ ಪದವಿ ನಂತರದಲ್ಲಿ ಬಹುತೇಕ ವಿದ್ಯಾರ್ಥಿಗಳು(Students) ಸ್ಪರ್ಧಾತ್ಮಕ ಪರೀಕ್ಷೆಗಳತ್ತ ಚಿತ್ತ ಹರಿಸುತ್ತಿದ್ದಾರೆ. ಆದರೆ, ಎಲ್ಲರಿಗೂ ದುಬಾರಿ ವೆಚ್ಚ ಭರಿಸಿ ಸ್ಪರ್ಧಾತ್ಮಕ ಪರೀಕ್ಷಾ(Competitive Exam) ತರಬೇತಿ ಪಡೆಯಲಾಗುತ್ತಿಲ್ಲ. ಇದನ್ನರಿತ ಮಾಜಿ ಸಚಿವ ಸಂತೋಷ ಲಾಡ್(Santosh Lad), ಆನ್‌ಲೈನ್ ಮೂಲಕ ಉಚಿತವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗೆ ಮುಂದಾಗಿದ್ದಾರೆ.
undefined
ಸಂತೋಷ ಲಾಡ್ ಫೌಂಡೇಶನ್(Santosh Lad Foundation) ಮೂಲಕ ಕೆಎಎಸ್(KAS), ಐಎಎಸ್(IAS), ಬ್ಯಾಂಕಿಂಗ್(Banking) ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಆನ್‌ಲೈನ್ ಮೂಲಕ ತರಬೇತಿಯನ್ನು ಈಗಾಗಲೇ ಶುರು ಮಾಡಲಾಗಿದೆ. ಧಾರವಾಡದ(Dharwad) ಶ್ರೀನಗರದಲ್ಲಿ ಅತ್ಯಾಧುನಿಕ ಸ್ಟುಡಿಯೋವೊಂದನ್ನು ಸ್ಥಾಪಿಸಿದ್ದು, 10ಕ್ಕೂ ಹೆಚ್ಚು ನುರಿತ ತರಬೇತುದಾರರು ಬುಧವಾರದಿಂದ ವಿದ್ಯಾರ್ಥಿಗಳಿಗೆ ಪಾಠಗಳನ್ನು ಶುರು ಮಾಡಿದ್ದಾರೆ. ಮೂರು ತಿಂಗಳ ಅವಧಿ ತರಬೇತಿ ಇದಾಗಿದ್ದು, ಈಗಾಗಲೇ 1.11 ಲಕ್ಷ ವಿದ್ಯಾರ್ಥಿಗಳು ಹೆಸರು ನೋಂದಣಿ ಮಾಡಿಕೊಂಡು ಮೊದಲ ದಿನದಿಂದ ತರಬೇತಿ ಪಡೆಯುತ್ತಿದ್ದಾರೆ. ತರಬೇತಿ ಪಡೆಯುವ ವಿದ್ಯಾರ್ಥಿಗಳ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಯೂ ಇದೆ. ನಿತ್ಯ ಬೆಳಗ್ಗೆ 8ರಿಂದ 11, ಸಂಜೆ 6ರಿಂದ 8ರ ವರೆಗೆ ಒಟ್ಟು ಐದು ಗಂಟೆಗಳ ಕಾಲ 14 ವಿಷಯಗಳಲ್ಲಿ ತರಬೇತಿ ನಡೆಯಲಿದೆ. ಆನ್‌ಲೈನ್ ತರಬೇತಿಗಾಗಿಯೇ ಒಂದು ಆ್ಯಪ್(http://linkktr.ee/SantoshSLadINC) ಸಿದ್ಧಪಡಿಸಿದ್ದು, ಲಿಂಕ್ ಮೂಲಕ ವಿದ್ಯಾರ್ಥಿಗಳು ಹೆಸರು ನೋಂದಾಯಿಸಿ ತರಬೇತಿ ಪಡೆಯಬಹುದು.
Education Budget 2022: ಶಿಕ್ಷಣಕ್ಕೆ ಸಿಕ್ಕಿದ್ದು ಮಹತ್ವದ ಕೊಡುಗೆ, ಡಿಜಿಟಲ್ ವಿಶ್ವವಿದ್ಯಾಲಯ ಸ್ಥಾಪನೆ
ಈ ಕುರಿತು ‘ಕನ್ನಡಪ್ರಭ’ದೊಂದಿಗೆ ಮಾಹಿತಿ ಹಂಚಿಕೊಂಡ ಮಾಜಿ ಸಚಿವ ಸಂತೋಷ ಲಾಡ್, ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ಪಡೆಯಲು ಆರ್ಥಿಕ ಸಹಾಯ ಕೇಳಿ ನನ್ನ ಬಳಿ ಕೆಲ ಬಡ ವಿದ್ಯಾರ್ಥಿಗಳ ಬಂದಿದ್ದರು. ಅವರೂ ಸೇರಿದಂತೆ 500 ವಿದ್ಯಾರ್ಥಿಗಳಿಗೆ ಆಫ್‌ಲೈನ್ ತರಬೇತಿ ಕೊಡಲು ಯೋಜನೆ ರೂಪಿಸಲಾಗಿತ್ತು. ಪರೀಕ್ಷೆಗಳ ಮೂಲಕ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲು ತಯಾರಿಯಾಗಿತ್ತು. ಇದಕ್ಕಾಗಿ ಸುಮಾರು 10 ಸಾವಿರ ಅರ್ಜಿಗಳು ಬಂದವು. ಅಲ್ಲದೇ ಲಾಕ್‌ಡೌನ್‌ನಂತಹ ಸಮಸ್ಯೆಯಿಂದಾಗಿ ಆನ್‌ಲೈನ್ ತರಬೇತಿ(Online Coaching) ಮೂಲಕ ಲಕ್ಷಾಂತರ ವಿದ್ಯಾರ್ಥಿಗಳನ್ನು ತಲುಪಬಹುದು ಎಂದು ಈ ಯೋಜನೆ ಆರಂಭಿಸಿದ್ದೇವೆ. ಹತ್ತಾರು ಸಾವಿರ ರುಪಾಯಿ ವೆಚ್ಚ ಮಾಡಿ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ಎಲ್ಲರಿಗೂ ಸಾಧ್ಯವಿಲ್ಲ. ಹೀಗಾಗಿ ಬಡ ವಿದ್ಯಾರ್ಥಿಗಳಿಗೆ ಇದು ತುಂಬ ಅನುಕೂಲವಾಗಿದ್ದು, ಪ್ರಯೋಜನ ಪಡೆಯಬೇಕೆಂದರು.
ಕೋಚಿಂಗ್ ಕ್ಲಾಸ್‌ಗೆ ಪ್ರವೇಶ ಪಡೆಯಬೇಕು ಎನ್ನುವಾಗಲೇ ಸಂತೋಷ ಲಾಡ್ ಫೌಂಡೇಶನ್ ಉಚಿತವಾಗಿ ಆನಲೈನ್ ತರಬೇತಿ ನೀಡುತ್ತಿದೆ ಎಂದು ಹೆಸರು ನೋಂದಾಯಿಸಿದ್ದೇನೆ. ನಮ್ಮಂತಹ ಬಡ ವಿದ್ಯಾರ್ಥಿಗಳಿಗೆ ಉಚಿತವಾದ ಈ ಆನ್‌ಲೈನ್ ತರಬೇತಿ ಆಶಾಕಿರಣವಾಗಿದೆ. ಉಚಿತ ತರಬೇತಿಯ ಸಂಪೂರ್ಣವಾಗಿ ಪ್ರಯೋಜನ ಪಡೆಯುತ್ತೇನೆ ಎಂದು ದಾವಣಗೆರೆಯ ಶ್ವೇತಾ ಎಂಬ ವಿದ್ಯಾರ್ಥಿನಿ ಅಭಿಪ್ರಾಯ ಹಂಚಿಕೊಂಡರು.
Guest Faculty Provisional Selection List 2022: ಅತಿಥಿ ಉಪನ್ಯಾಸಕರ ತಾತ್ಕಾಲಿಕ ಆಯ್ಕೆಪಟ್ಟಿ ಪ್ರಕಟ
ಧಾರವಾಡದ ಸಪ್ತಾಪುರದಿಂದ ಶ್ರೀನಗರ ವೃತ್ತದವರೆಗೂ ಸುಮಾರು 30ಕ್ಕೂ ಹೆಚ್ಚು ಸ್ಪರ್ಧಾತ್ಮಕ ತರಬೇತಿ ಕೇಂದ್ರಗಳಿವೆ. ಒಂದೊಂದರಲ್ಲಿ ತರಬೇತಿಗೆ ಹತ್ತಿಪ್ಪತ್ತು ಸಾವಿರ ಶುಲ್ಕವಿದೆ. ಜತೆಗೆ ಊಟ, ವಸತಿ ವೆಚ್ಚವೂ ವಿದ್ಯಾರ್ಥಿಗಳಿಗೆ ಭಾರ. ಹೀಗಾಗಿ ಸಾಕಷ್ಟು ಬಡ ವಿದ್ಯಾರ್ಥಿಗಳು ತರಬೇತಿಯಿಂದ ವಂಚಿತರಾಗಿದ್ದರು. ಇದೀಗ ಆನ್‌ಲೈನ್ ಮೂಲಕ ಉಚಿತವಾಗಿ ತರಬೇತಿ ನೀಡುವುದರಿಂದ ಮನೆಯಲ್ಲಿಯೇ ಕುಳಿತು ತರಬೇತಿ ಪಡೆಯಲು ಅನೂಕೂಲವಾಗಿದೆ ಎಂಬುದು
ವಿದ್ಯಾರ್ಥಿಗಳ ಅಭಿಪ್ರಾಯ.
ಸ್ಪರ್ಧಾತ್ಮಕ ಪರೀಕ್ಷೆ ತರಬೇತಿಗೆ ನಿರೀಕ್ಷೆ ಮೀರಿ ರಾಜ್ಯದ ಎಲ್ಲ ಜಿಲ್ಲೆಗಳಿಂದಲೂ 1,11,458 ವಿದ್ಯಾರ್ಥಿಗಳು ಅದರಲ್ಲೂ ಶೇ. 35ರಷ್ಟು ವಿದ್ಯಾರ್ಥಿನಿಯರು ಹೆಸರು ನೋಂದಣಿ(Registration) ಮಾಡಿದ್ದಾರೆ. ನುರಿತ ಸಿಬ್ಬಂದಿಯಿಂದ ತರಬೇತಿ ಬುಧವಾರದಿಂದ ಶುರುವಾಗಿದೆ. ಬರೀ ಮೂರು ತಿಂಗಳು ಮಾತ್ರವಲ್ಲದೇ ನಂತರದಲ್ಲೂ ಬಡ ವಿದ್ಯಾರ್ಥಿಗಳಿಗೆ ತರಬೇತಿ ಮೂಲಕ ಅವರನ್ನು ಪರೀಕ್ಷೆಗೆ ಅಣಿಗೊಳಿಸುವ ಯೋಜನೆ ಹೊಂದಿದ್ದೇನೆ. ಉಚಿತವಾಗಿ ಬೇಡ ಎನ್ನುವುದಕ್ಕಾಗಿ ತರಬೇತಿ ನಂತರ ವಿದ್ಯಾರ್ಥಿಗಳು ಒಂದು ರುಪಾಯಿ ಕೊಡಬಹುದು ಅಥವಾ ಬಿಡಬಹುದು. ಕಡ್ಡಾಯವೇನಲ್ಲ ಅಂತ ಮಾಜಿ ಸಚಿವ ಸಂತೋಷ ಲಾಡ್ ತಿಳಿಸಿದ್ದಾರೆ.