Asianet Suvarna News Asianet Suvarna News

Fact Check: NEET PG 2022 Exam ಮುಂದೂಡಲಾಗಿದೆ ಎಂಬ ನೋಟಿಸ್‌ ಫೇಕ್:‌ PIB ಸ್ಪಷ್ಟನೆ!

ಮಾರ್ಚ್ 12, 2022 ರಂದು ನಡೆಯಬೇಕಿದ್ದ NEET PG 2022 ಪರೀಕ್ಷೆಯನ್ನು ದೇಶಾದ್ಯಂತ ಹೆಚ್ಚುತ್ತಿರುವ  ಕೊರೋನಾ ಪರಿಸ್ಥಿತಿಯಿಂದಾಗಿ ಮುಂದೂಡಲಾಗಿದೆ ಎಂದು ನೋಟಿಸ್‌ನಲ್ಲಿ ಹೇಳಲಾಗಿದೆ. ಆದರೆ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ನೋಟೀಸ್ ನಕಲಿ ಎಂದು ಸರ್ಕಾರ ಸ್ಪಷ್ಟಪಡಿಸಿದೆ. 
 

NEET PG 2022 Postponed Notice is fake PIB Clarifies Exam Dates for Upcoming Medical Entrance mnj
Author
Bengaluru, First Published Jan 14, 2022, 12:59 PM IST

Fact Check: ನೀಟ್​-ಪಿಜಿ  (NEET PG) ಕೌನ್ಸೆಲಿಂಗ್‌ಗಾಗಿ ಬಹುನಿರೀಕ್ಷಿತ ವೇಳಾಪಟ್ಟಿಯನ್ನು ವೈದ್ಯಕೀಯ ಕೌನ್ಸೆಲಿಂಗ್ ಸಮಿತಿಯು ಬಿಡುಗಡೆ ಮಾಡಿದೆ. ವೇಳಾಪಟ್ಟಿಯ ಪ್ರಕಾರ, NEET-PG ಕೌನ್ಸೆಲಿಂಗ್‌ನ ನೋಂದಣಿ ಪ್ರಕ್ರಿಯೆಯು ಜನವರಿ 12, 2022 ರಂದು ಪ್ರಾರಂಭವಾಗಿದೆ. ಆದರೆ, ರಾಷ್ಟ್ರೀಯ ಪರೀಕ್ಷಾ ಮಂಡಳಿಯ (National Board of Examinations) ಹೆಸರಿನಲ್ಲಿ ನಕಲಿ ಸುತ್ತೋಲೆ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವುದು ಸಾರ್ವಜನಿಕರ ಗಮನಕ್ಕೆ ಬಂದಿದೆ. . ಮಾರ್ಚ್ 12, 2022 ರಂದು ನಡೆಯಬೇಕಿದ್ದ NEET PG 2022 ಪರೀಕ್ಷೆಯನ್ನು ದೇಶಾದ್ಯಂತ ಹೆಚ್ಚುತ್ತಿರುವ  ಕೊರೋನಾ ಪರಿಸ್ಥಿತಿಯಿಂದಾಗಿ ಮುಂದೂಡಲಾಗಿದೆ ಎಂದು ನೋಟಿಸ್‌ನಲ್ಲಿ ಹೇಳಲಾಗಿದೆ.

"ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ (MoHFW), ಭಾರತ ಸರ್ಕಾರವು 10.01.2022 ದಿನಾಂಕದ ತನ್ನ ಪತ್ರ ಸಂಖ್ಯೆ V. 11025/215/2020-MEP (FTS-8079808) ಅನ್ನು ಪ್ರಸ್ತುತ COVID ಪರಿಸ್ಥಿತಿಯ ಬೆನ್ನಲ್ಲೇ ನಿರ್ದೇಶನ - ಕೋವಿಡ್ -19 ಸಾಂಕ್ರಾಮಿಕ ಮತ್ತು ವಿದ್ಯಾರ್ಥಿಗಳ ಸುರಕ್ಷತೆ ಮತ್ತು ಯೋಗಕ್ಷೇಮವನ್ನು ಗಣನೆಗೆ ತೆಗೆದುಕೊಂಡು, ಮಾರ್ಚ್ 12, 2022 ರಂದು ನಡೆಯಲಿರುವ NEET-PG 2022 ಪರೀಕ್ಷೆಯನ್ನು ಮುಂದೂಡಲಾಗಿದೆ," ಎಂದು ಫೇಕ್‌ ನೋಟಿಸ್‌ನಲ್ಲಿ ತಿಳಿಸಲಾಗಿದೆ.ಜತೆಗೆ "ನೀಟ್-ಪಿಜಿ 2022 ಪರೀಕ್ಷೆಯ ಮುಂದಿನ ದಿನಾಂಕವನ್ನು ನಂತರ ಪರಿಸ್ಥಿತಿಯನ್ನು ಪರಿಶೀಲಿಸಿದ ನಂತರ ಪ್ರಕಟಿಸಲಾಗುವುದು" ಎಂದು  ಸೇರಿಸಲಾಗಿದೆ.

NEET PG 2022 Postponed Notice is fake PIB Clarifies Exam Dates for Upcoming Medical Entrance mnj

ಆದರೆ ಈ ಬಗ್ಗೆ ಕೇಂದ್ರ ಸರ್ಕಾರದ ನೋಡಲ್‌ ಸಂಸ್ಥೆ ಪಿಐಬಿ (PIB) ಕೂಡ  ಫ್ಯಾಕ್ಟ್‌ ಚೆಕ್‌ ಮಾಡಿದ್ದು ಬುಧವಾರ, ಸರ್ಕಾರವು ಪರೀಕ್ಷೆಯನ್ನು ಮುಂದೂಡುವ ಬಗ್ಗೆ ಯಾವುದೇ ಅಧಿಕೃತ ಪ್ರಕಟಣೆ ಬಂದಿಲ್ಲ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ನೋಟೀಸ್ ನಕಲಿ ಎಂದು ಸ್ಪಷ್ಟಪಡಿಸಿದೆ.

"This claim is fake. No such order/notice has been issued by the board," ಎಂದು ನೋಡಲ್‌ ಸಂಸ್ಥೆ ಪಿಐಬಿ ಹೇಳಿದೆ.

 

 


ನೀಟ್​-ಪಿಜಿ ಕೌನ್ಸೆಲಿಂಗ್ ಪ್ರಾರಂಭ, ಆರೋಗ್ಯ ಸಚಿವರ ಘೋಷಣೆ!

 ಸಾಕಷ್ಟು ವಿಳಂಬದ ಬಳಿಕ 2021-2022 ನೇ ಶೈಕ್ಷಣಿಕ ವರ್ಷದ ನೀಟ್​-ಪಿಜಿ (NEET-PG) ಕೌನ್ಸಿಲಿಂಗ್​ ಜನವರಿ 12ರಿಂದ ಪ್ರಾರಂಭವಾಗಲಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಟ್ವಿಟರ್ ನಲ್ಲಿ ಘೋಷಣೆ ಮಾಡಿದ್ದಾರೆ. ನೀಟ್ ಪದವಿ ಹಾಗೂ ಸ್ನಾತಕೋತ್ತರ ವಿಭಾಗದ ಕೌನ್ಸೆಲಿಂಗ್ ವಿಳಂಬದ ಕುರಿತಾಗಿ ಶುಕ್ರವಾರ ತುರ್ತು ಅರ್ಜಿ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ಮೀಸಲಾತಿ ಗೊಂದಲಗಳನ್ನು ಬದಿಗಿಟ್ಟು ಈಗಾಗಲೇ ಘೋಷಣೆಯಾಗಿರುವ ಅಧಿಸೂಚನೆಯಂತೆಯೇ ಈ ಬಾರಿಯ ಕೌನ್ಸೆಲಿಂಗ್ ನಡೆಯಲಿದೆ ಎಂದು ತಿಳಿಸಿತ್ತು.

NEET PG ಕೌನ್ಸೆಲಿಂಗ್ ಅನ್ನು ನಾಲ್ಕು ವಿಭಿನ್ನ ಸುತ್ತುಗಳಲ್ಲಿ ನಡೆಸಲಾಗುತ್ತದೆ. AQI Round 1, AQI Round 2, AIQ  mop-up round ಮತ್ತು stray vacancy round. ಅಭ್ಯರ್ಥಿಗಳು ಜನವರಿ 18 ರಿಂದ ಜನವರಿ 19, 2022 ರವರೆಗೆ 1 ನೇ ಸುತ್ತಿನ ಪರಿಶೀಲನಾ ಪ್ರಕ್ರಿಯೆಯಲ್ಲಿ ಭಾಗವಹಿಸಲು ಸಾಧ್ಯವಾಗುತ್ತದೆ. ಅದರ ನಂತರ, ಸೀಟು ಹಂಚಿಕೆ ಪ್ರಕ್ರಿಯೆಯು ಜನವರಿ 20 ಮತ್ತು 21 ರಂದು ಪ್ರಾರಂಭವಾಗುತ್ತದೆ. ಫಲಿತಾಂಶಗಳು ಜನವರಿ 22, 2022 ರಂದು ಬಿಡುಗಡೆಯಾಗುತ್ತವೆ. ಅಭ್ಯರ್ಥಿಗಳು ಸಂಪೂರ್ಣ NEET PG ವೇಳಾಪಟ್ಟಿಯನ್ನು ಇಲ್ಲಿ ಪರಿಶೀಲಿಸಬಹುದು

ರೆಸಿಡೆಂಟ್ ವೈದ್ಯರಿಗೆ ಆರೋಗ್ಯ ಇಲಾಖೆ ನೀಡಿರುವ ಆಶ್ವಾಸನೆಯಂತೆ ಸುಪ್ರೀಂ ಕೋರ್ಟ್ ಆದೇಶದ ಅನ್ವಯ 2022 ಜನವರಿ 12 ರಿಂದ ವೈದ್ಯಕೀಯ ಕೌನ್ಸೆಲಿಂಗ್ ಸಮಿತಿ ನೀಟ್-ಪಿಜಿ ಕೌನ್ಸೆಲಿಂಗ್ ಅನ್ನು ಆರಂಭಿಸಲಿದೆ. ಇದು ಕೋವಿಡ್-19 ವಿರುದ್ಧ ಹೋರಾಟಕ್ಕೆ ನಿಂತಿರುವ ದೇಶಕ್ಕೆ ಮತ್ತಷ್ಟು ಬಲ ತುಂಬಲಿದೆ. ಎಲ್ಲಾ ಅಭ್ಯರ್ಥಿಗಳು ಶುಭಾಶಯ" ಎಂದು ಮನ್ಸುಖ್ ಮಾಂಡವಿಯಾ (Mansukh Mandaviya )ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ. ರೆಸಿಡೆಂಟ್ ವೈದ್ಯರು ಮತ್ತು ವೈದ್ಯಕೀಯ ವಿದ್ಯಾರ್ಥಿಗಳಿಗೆ ದೊಡ್ಡ ಮಟ್ಟದ ನಿರಾಳತೆ ನೀಡಿದ ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ,  ಅಖಿಲ ಭಾರತ ಕೋಟಾ ಸೀಟುಗಳಲ್ಲಿ ಅಸ್ತಿತ್ವದಲ್ಲಿರುವ 27% OBC ಮತ್ತು 10% EWS ಮೀಸಲಾತಿಗಳ ಅಡಿಯಲ್ಲಿಯೇ ಹಾಲಿ ವರ್ಷದ ನೀಟ್-ಪಿಜಿ ಕೌನ್ಸೆಲಿಂಗ್ ನಡೆಯಲಿದೆ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ತೀರ್ಪು ನೀಡಿತ್ತು.

Follow Us:
Download App:
  • android
  • ios