ಮೈಸೂರು; Rohith Chakrathirtha ವಜಾಕ್ಕೆ ಕುರುಬರ ಸಂಘ ಆಗ್ರಹ

By Suvarna News  |  First Published Jun 9, 2022, 4:42 AM IST

ಪಠ್ಯಪುಸ್ತಕ ಪರಿಷ್ಕರಣ ಸಮಿತಿ   ಅಧ್ಯಕ್ಷ ರೋಹಿತ್‌ ಚಕ್ರತೀರ್ಥ ಅವರನ್ನು ಕೂಡಲೇ ವಜಾಗೊಳಿಸಿ ಬಂಧಿಸುವಂತೆ ಕರ್ನಾಟಕ ಪ್ರದೇಶ ಕುರುಬರ ಸಂಘ   ಒತ್ತಾಯಿಸಿದೆ.


ಮೈಸೂರು (ಜೂ.9): ಕುವೆಂಪು (kuvempu) ಅವರಿಗೆ ಅವಮಾನ ಮಾಡಿರುವ ಪಠ್ಯಪುಸ್ತಕ ಪರಿಷ್ಕರಣ ಸಮಿತಿ (textbook revision committee) ಅಧ್ಯಕ್ಷ ರೋಹಿತ್‌ ಚಕ್ರತೀರ್ಥ (Rohith Chakrathirtha) ಅವರನ್ನು ಕೂಡಲೇ ವಜಾಗೊಳಿಸಿ ಬಂಧಿಸುವಂತೆ ಕರ್ನಾಟಕ ಪ್ರದೇಶ ಕುರುಬರ ಸಂಘದ ಅಧ್ಯಕ್ಷ ಬಿ. ಸುಬ್ರಹ್ಮಣ್ಯ ಒತ್ತಾಯಿಸಿದ್ದಾರೆ.

ಶಾಂತಿ, ಸೌಹಾರ್ದತೆ, ಸಹಬಾಳ್ವೆಗೆ ಹೆಸರಾದ ಕನ್ನಡ ನೆಲದಲ್ಲಿ ಇಂದು ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ. ಪ್ರತಿನಿತ್ಯ ಯೋಜಿತವಾಗಿ ಒಂದಲ್ಲ ಒಂದು ವಿವಾದವನ್ನು ಹುಟ್ಟುಹಾಕುತ್ತಿರುವ ಒಂದು ಸಿದ್ಧಾಂತಕ್ಕೆ ಅಂಟಿಕೊಂಡಿರುವ ಕೆಲವರು ಸಮಾಜದ ಸ್ವಾಸ್ಥ್ಯವನ್ನು ಹಾಳುಗೆಡವುತ್ತಿರುವುದು ವಿಷಾದನೀಯ ಎಂದು ತಿಳಿಸಿದ್ದಾರೆ.

Latest Videos

undefined

Kolara; ಮಾಲೂರು ಶಾಸಕನ ಬರ್ತಡೇಯಲ್ಲಿ ಬಿರಿಯಾನಿಗಾಗಿ ಹೋರಾಟ!

ದೇಶದ ಭವಿಷ್ಯದ ಪ್ರಜೆಗಳಾಗುವ ನಮ್ಮ ಮಕ್ಕಳಿಗೆ ಹಲವಾರು ಖ್ಯಾತ ಸಾಹಿತಿಗಳು, ಕವಿಗಳು, ಚಿಂತಕರ ಉತ್ತಮ ವಿಚಾರ ಕಲಿಯಲು ವಿಷಯವಾಗಬೇಕು. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಒಂದು ನಿರ್ದಿಷ್ಟಸಿದ್ಧಾಂತವನ್ನು ಮಕ್ಕಳ ಮೇಲೆ ಏರಲು ಹೊರಟಿರುವುದು ಇಂದಿನ ಶೈಕ್ಷಣಿಕ ವ್ಯವಸ್ಥೆ  (Education system)ನಿಜಕ್ಕೂ ದುರಂತ ಎಂದು ಅವರು ತಿಳಿಸಿದ್ದಾರೆ.

ಪಠ್ಯ ಸಮಿತಿ ಸೇರಿದಾಗ ಉಬ್ಬಿಲ್ಲ, ಈಗ ಕುಗ್ಗಿಯೂ ಇಲ್ಲ: ಚಕ್ರತೀರ್ಥ
ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿ ವಿಸರ್ಜನೆ ಮಾಡುವುದರ ಜೊತೆಗೆ ಪಿಯುಸಿ ಪಠ್ಯದ ಹೊಣೆಗಾರಿಕೆಯಿಂದಲೂ ಕೈಬಿಟ್ಟಿರುವುದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ರೋಹಿತ್‌ ಚಕ್ರತೀರ್ಥ ಅವರು, ಸಂಶೋಧಕನ ದಾರಿಯು ರಾಜಕೀಯ ಪಕ್ಷ ಅಥವಾ ಸರ್ಕಾರದ ದಾರಿಯೂ ಆಗಿರಬೇಕಿಲ್ಲ ಎಂದು ಹೇಳಿದ್ದಾರೆ.

ಬಸವ ಜನ್ಮಭೂಮಿಯಲ್ಲಿ Vijayapura DCಯಿಂದ ಸಾರ್ವಜನಿಕ ಅಹವಾಲು ಸ್ವೀಕಾರ!

ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಗೆ ನೇಮಿಸಿದ್ದೇವೆ ಎಂದು ಹೇಳಿದಾಗ ನಾನು ಉಬ್ಬಿಲ್ಲ. ತೆಗೆದು ಹಾಕಿದ್ದೇವೆ ಎಂದಾಗ ಕುಗ್ಗಿಯೂ ಇಲ್ಲ. ಚಕ್ರತೀರ್ಥನಿಗೆ ‘ಗೇಟ್‌ ಪಾಸ್‌’ ಎಂಬ ಮಾತನ್ನು ಮಾಧ್ಯಮದಲ್ಲಿ ಓದಿದಾಗ ನಗು ಬರುತ್ತದೆ. ಗೇಟ್‌ ಪಾಸ್‌ ಕೊಡಲು ನಾನು ಯಾವ ಕಾಂಪೌಂಡಿನೊಳಗೂ ನಿಂತಿಲ್ಲ ಎಂದು ಹೇಳಿದ್ದಾರೆ.

ತನಗೆ ಬೇಕಾದಂತೆ ಇತಿಹಾಸ ಬರೆಯುವುದು ಎಷ್ಟುಅರ್ಥಹೀನವೋ, ಬೇರೆಯವರಿಗೆ ಬೇಕಾದಂತೆ ಇತಿಹಾಸ ಬರೆಯುತ್ತೇನೆ ಎಂಬುದು ಕೂಡ ಅಷ್ಟೇ ಅರ್ಥಹೀನವಾದದ್ದು. ಇತಿಹಾಸಕ್ಕೆ ನಿಷ್ಠವಾಗಿ ಇತಿಹಾಸವನ್ನು ಬರೆಯಬೇಕೆಂಬ ನನ್ನ ಅಪೇಕ್ಷೆ ಎರಡು ಕಡೆಗೂ ಒಪ್ಪಿಗೆಯಾಗದ ಪಂಥವಿರಬಹುದು. ವಿಸರ್ಜನೆ ಆದ ಮೇಲೂ ಉಳಿಯುವುದು ನನ್ನ ಜಾಯಮಾನಕ್ಕೆ ಒಗ್ಗುವಂತಹದ್ದಲ್ಲ. ಹೀಗಾಗಿ, ನನ್ನ ಕೆಲಸಗಳಿಗೆ ಮರಳಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

ಶಿಕ್ಷಣ ಸಚಿವರ ಮನೆಗೆ ನುಗ್ಗಿದವರು ವಿದ್ಯಾರ್ಥಿಗಳೇ ಅಲ್ಲ: ARAGA JNANENDRA

ಚಕ್ರತೀರ್ಥ ಅಧ್ಯಕ್ಷತೆಯ ಪಠ್ಯಪುಸ್ತಕ ಪರಿಷ್ಕರಣೆ (textbook revision) ಸಮಿತಿ ಬಗ್ಗೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸಮಿತಿಯನ್ನು ವಿಸರ್ಜಿಸಲಾಗಿತ್ತು. ಬಳಿಕೆ ಪಿಯುಸಿ ಪಠ್ಯದ ಹೊಣೆಗಾರಿಕೆಯಿಂದಲೂ ಕೈಬಿಡಲಾಗಿತ್ತು. ಇದಕ್ಕೆ ಫೇಸ್‌ಬುಕ್‌ನಲ್ಲಿ ಪ್ರತಿಕ್ರಿಯಿಸಿರುವ ಚಕ್ರತೀರ್ಥ, ಓರ್ವ ಸಂಶೋಧಕನ ದಾರಿ, ಒಂದು ರಾಜಕೀಯ ಪಕ್ಷ ಅಥವಾ ಸರ್ಕಾರದ ದಾರಿಯೂ ಆಗಿರಬೇಕಿಲ್ಲ. ಸಂಶೋಧಕನಿಗೆ ಸತ್ಯವೇ ಮುಖ್ಯವಾಗುತ್ತದೆ ಎಂದು ಹೇಳಿದ್ದಾರೆ.

click me!