CBSE ಪಠ್ಯದಲ್ಲಿ ಮೊಘಲರು, ದೆಹಲಿ ಸುಲ್ತಾನರ ಪಾಠ ಕೈಬಿಟ್ಟು ಮಹಾಕುಂಭ, ಮೇಕ್ ಇನ್ ಇಂಡಿಯಾ ಸೇರ್ಪಡೆ

Published : Apr 28, 2025, 10:24 AM ISTUpdated : Apr 28, 2025, 10:27 AM IST
CBSE ಪಠ್ಯದಲ್ಲಿ ಮೊಘಲರು, ದೆಹಲಿ ಸುಲ್ತಾನರ ಪಾಠ ಕೈಬಿಟ್ಟು ಮಹಾಕುಂಭ, ಮೇಕ್ ಇನ್ ಇಂಡಿಯಾ ಸೇರ್ಪಡೆ

ಸಾರಾಂಶ

ಸಿಬಿಎಸ್‌ಇ ಪಠ್ಯಕ್ರಮದಿಂದ ದೆಹಲಿ ಸುಲ್ತಾನರು ಮತ್ತು ಮೊಘಲರ ಪಾಠಗಳನ್ನು ತೆಗೆದು, ಮಹಾಕುಂಭ, ಮೇಕ್ ಇನ್ ಇಂಡಿಯಾ ಮತ್ತು ಬೇಟಿ ಬಚಾವೋ-ಬೇಟಿ ಪಡಾವೋ ಯೋಜನೆಗಳನ್ನು ಸೇರಿಸಲಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿಯನ್ವಯ ಭಾರತೀಯ ಸಂಪ್ರದಾಯ ಮತ್ತು ಜ್ಞಾನ ವ್ಯವಸ್ಥೆಗಳನ್ನು ಒಳಗೊಳ್ಳಲಾಗಿದೆ. ಏಳನೇ ತರಗತಿಯಿಂದ ಮೊಘಲರ ಪಾಠಗಳನ್ನು ಕೈಬಿಡಲಾಗಿದೆ.

ಬೆಂಗಳೂರು (ಏ.28): ದೇಶದಲ್ಲಿ ಈವರೆಗೆ ದೆಹಲಿ ಸುಲ್ತಾನರು ಹಾಗೂ ಮೊಘಲ ಸಾಮ್ರಾಜ್ಯವನ್ನೇ ಭಾರತವನ್ನಾಳಿದ ಮಹಾಪುರುಷರು ಎಂಬಂತೆ ಬಿಂಬಿಸಲಾಗಿದ್ದ ಪಠ್ಯವನ್ನು ತೆಗೆದುಹಾಕಿರುವ ಸರ್ಕಾರ ಅದರ ಬದಲಾಗಿ ಹಿಂದೂ ಧರ್ಮದ ಪವಿತ್ರ ಆಚರಣೆ ಮಹಾಕುಂಭ, ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಮೇಕ್ ಇನ್ ಇಂಡಿಯಾ ಹಾಗೂ ಹೆಣ್ಣು ಮಕ್ಕಳ ರಕ್ಷಣೆಗಾಗಿ ರೂಪಿಸಿದ ಬೇಟಿ ಬಚಾವೋ-ಬೇಟಿ ಪಡಾವೋ ಯೋಜನೆಗಳ ವಿಚಾರಗಳನ್ನು ಸೇರ್ಪಡೆ ಮಾಡಲಾಗಿದೆ.

ನಮ್ಮ ದೇಶದಲ್ಲಿ ಈಗಾಗಲೇ ಪದವಿ ಪೂರ್ಣಗೊಳಿಸಿದ ಎಲ್ಲರೂ ಕೂಡ ಭಾರತವನ್ನು ಆಳಿದ ಹಾಗೂ ಉದ್ಧಾರ ಮಾಡಿದ ಪರಮೋಚ್ಛ ರಾಜಮನೆತನಗಳು ಎಂದರೆ ಅದು ದೆಹಲಿ ಸುಲ್ತಾನರು, ಮೊಘಲರು ಎಂದು ಓದಿಕೊಂಡು ಬಂದಿದ್ದಾರೆ. ಇನ್ನು ಪರೀಕ್ಷೆಗಳಲ್ಲಿ ಕೂಡ ಪುಟುಗಟ್ಟಲೇ ಮೊಘಲರು ಹಾಗೂ ದೆಹಲಿ ಸುಲ್ತಾನರ ಆಡಳಿತ ಮತ್ತು ಇತಿಹಾಸವನ್ನೇ ಬರೆದು ಪಾಸ್ ಆಗಿರುತ್ತಾರೆ. ಆದರೆ, ಇದೀಗ ಕೇಂದ್ರ ಸರ್ಕಾರವು ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (Central Board of Secondary Education-CBSE) ಪಠ್ಯದಲ್ಲಿ ಭಾರೀ ಪ್ರಮಾಣದ ಬದಲಾವಣೆಯನ್ನು ಮಾಡಿದೆ. ಈವರೆಗೆ ಸಿಬಿಎಸ್‌ಇ ಪಠ್ಯ ಪುಸ್ತಕದಲ್ಲಿ ಇದ್ದ ದೆಹಲಿ ಸುಲ್ತಾನರು ಹಾಗೂ ಮೊಘಲರು ಪಾಠಗಳನ್ನು ತೆಗೆದು ಹಾಕಲಾಗಿದೆ.

ಇದನ್ನೂ ಓದಿ: ಹೊಸ ವಿವಾದ: ರೈಲ್ವೆ ಪರೀಕ್ಷೆಯಲ್ಲೂ ಮಂಗಳಸೂತ್ರ ನಿಷಿದ್ಧ!

ಹೌದು, ಸಿಬಿಎಸ್ ಇ ಪಠ್ಯದಲ್ಲಿ ಮೊಘಲರು ಹಾಗೂ ದಿಲ್ಲಿ ಸುಲ್ತಾನರ ಕುರಿತಾದ ಪಾಠಕ್ಕೆ ಕೊಕ್ ಕೊಡಲಾಗಿದೆ. ಇದರ ಬದಲಾಗಿ ಹಿಂದೂ ಧರ್ಮದ ಅತಿದೊಡ್ಡ ಹಾಗೂ ಪವಿತ್ರ ಆಚರಣೆಗಳಲ್ಲಿ ಒಂದಾಗಿರುವ ಕೋಟಿ, ಕೋಟಿ ಜನರು ಒಟ್ಟಿಗೆ ಸೇರಿ ಆರಣೆ ಮಾಡುವಂತಹ ಮಹಾಕುಂಭ ಮೇಳ, ಕೇಂದ್ರ ಸರ್ಕಾರದ ಭಾರತದ ಉತ್ಪಾದನಾ ಸ್ವಾವಲಂಬಿ ಯೋಜನೆಯಾದ ಮೇಕ್ ಇನ್ ಇಂಡಿಯಾ ಹಾಗೂ ದೇಶದಲ್ಲಿ ಹೆಣ್ಣು ಮಕ್ಕಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಆರಂಭಿಸಲಾದ ಬೇಟಿ ಬಜಾವೋ- ಬೇಟಿ ಪಾಢಾವೊ ಆಂದೋಲನ ವಿಷಯಗಳನ್ನು ದೆಹಲಿ ಸುಲ್ತಾನದ ಪಠ್ಯದ ಬದಲಿಗೆ ಸೇರ್ಪಡೆ ಮಾಡಲಾಗಿದೆ.

ನೂತನ ರಾಷ್ಟ್ರೀಯ ಶಿಕ್ಷಣ ನೀತಿಗೆ ಅನುಗುಣವಾಗಿ ಪಠ್ಯ ಸೇರ್ಪಡೆ ಮಾಡಲಾಗಿದೆ. ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಣದಲ್ಲಿ ಭಾರತೀಯ ಸಂಪ್ರದಾಯ, ಭಾರತೀಯ ಸಿದ್ಧಾಂತ, ಜ್ಞಾನ ವ್ಯವಸ್ಥೆ ಹಾಗೂ ಸ್ಥಳೀಯ ವಿಚಾರಗಳನ್ನು ಪಠ್ಯದಲ್ಲಿ ಸೇರ್ಪಡೆ ಮಾಡುವುದಕ್ಕೆ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (National Council of Educational Research and Training-NCERT) ನಿರ್ಧಾರ ಕೈಗೊಂಡಿದೆ. ಇನ್ನು 7ನೇ ತರಗತಿಯಲ್ಲಿ ಭಾರತ ಸಾಮ್ರಾಜ್ಯಗಳು ಹಾಗೂ ಪವಿತ್ರ ಭೂಗೋಳ ಶಾಸ್ತ್ರ ಅಧ್ಯಯನದಲ್ಲಿ ಬದಲಾವಣೆ ಅಗಾಧ ಪ್ರಮಾಣದ ಬದಲಾವಣೆಗಳನ್ನು ಮಾಡಲಾಗಿದೆ. ಈ 7ನೇ ತರಗತಿ ಪಠ್ಯಪುಸ್ತಕದಲ್ಲಿ ಮೊಘಲರ ಪಾಠಗಳನ್ನು ಸಂಪೂರ್ಣ ‌ಕೈಬಿಡಲಾಗಿದೆ. ಪ್ರಸಕ್ತ ಸಾಲಿನಿಂದಲೇ ಪಠ್ಯ ಕೈಬಿಟ್ಟಿರುವುದಾಗಿ ಎನ್‌ಸಿಇಆರ್‌ಟಿ ಆದೇಶವನ್ನು ಹೊರಡಿಸಿದೆ.

ಇದನ್ನೂ ಓದಿ: ಖಾಸಗಿ ಶಾಲೆಗಳಿಗೂ ಈಗ ಅಕ್ರಮ- ಸಕ್ರಮ: ಇಂದಿನಿಂದ ಅರ್ಜಿ ಸಲ್ಲಿಕೆ

PREV
Read more Articles on
click me!

Recommended Stories

SSLCಗೆ ಶೇ.33 ಪಾಸಿಂಗ್ ಮಾರ್ಕ್ಸ್ ಸಮರ್ಥಿಸಿ ಕೊಳ್ಳುತ್ತಲೇ ರಾಜ್ಯ ಪೊಲಿಟಿಕ್ಸ್ ಅಪ್ಟೇಡ್ ಕೊಟ್ಟ ಮಧು ಬಂಗಾರಪ್ಪ
ಖಾಸಗಿ ಶಾಲೆಗಳಿಗೆ ಸೆಡ್ಡು, ಮುಂದಿನ ವರ್ಷದಿಂದ ರಾಜ್ಯಾದ್ಯಂತ 700 ಕೆಪಿಎಸ್ ಶಾಲೆ ಕಾರ್ಯಾರಂಭ