58ನೇ ವಯಸ್ಸಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದು ಪಾಸಾದ ಒಡಿಶಾ ಶಾಸಕ

By Suvarna News  |  First Published Jul 11, 2022, 10:59 AM IST

* ಬಿಎಸ್‌ಇ ಒಡಿಶಾ ಮೆಟ್ರಿಕ್ ಪರೀಕ್ಷೆ ಬರೆದು ಉತ್ತೀರ್ಣರಾಗಿದ್ದಾರೆ ಒಡಿಶಾದ ಈ ಶಾಸಕ
* 58ನೇ ವರ್ಷಯ ವಯಸ್ಸಿನಲ್ಲಿ ಪರೀಕ್ಷೆ ಬರೆದೂ ಶೇ.72 ಅಂಕಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ
* ಡ್ರಾಪ್ ಔಟ್ ಆದವರಿಗೆ ಒಡಿಶಾದ ಶಾಸಕ ಅಂಗಾದ ಕನ್ಹರ್ ಅವರು ಪ್ರೇರಣೆಯಾಗಿದ್ದಾರೆ
 


ಶಿಕ್ಷಣಕ್ಕೆ (Education) ವಯಸ್ಸಿನ ಮಿತಿ ಇಲ್ಲ! ಬಡವ ಬಲ್ಲಿಗನೆಂಬ ಬೇಧಭಾವವೂ ಇಲ್ಲ. ಜನಸಾಮಾನ್ಯನಾಗಲಿ, ಸಿರಿವಂತನಾಗಲಿ.. ಶ್ರದ್ಧೆ ಭಕ್ತಿ ಇದ್ದವರಿಗೆ ಸರಸ್ವತಿ ಒಲಿದೇ ಒಲಿಯುತ್ತಾಳೆ. ಶಿಕ್ಷಣ ಪಡೆಯಲು ಇಂಥದ್ದೇ ವಯೋಮಿತಿ ಅಂಥೇನೂ ಇಲ್ಲ. ನಿಮ್ಮ ಯಾವ ವಯಸ್ಸಿನಲ್ಲಾದ್ರೂ ಓದಬೇಕು ಅನ್ನೋ ಆಸೆ, ಛಲ ಬಂದ್ರೆ ಸಾಕು.. ಅದನ್ನ ಈಡೇರಿಸಿಕೊಳ್ಳಬಹುದು. 58 ವರ್ಷದ ಒಡಿಶಾ (Odisha) ಶಾಸಕ (MLA) ಇದೀಗ 10ನೇ ತರಗತಿ ಪಾಸ್ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ. ಒಡಿಶಾ ಶಾಸಕ ಅಂಗದಾ ಕನ್ಹರ್ (Angada Kanhar) ಅವರು 58 ನೇ ವಯಸ್ಸಿನಲ್ಲಿ ತಮ್ಮ ಬಿಎಸ್‌ಇ ಒಡಿಶಾ ಮೆಟ್ರಿಕ್ ಪರೀಕ್ಷೆ ಬರೆದು ಉತ್ತೀರ್ಣರಾಗಿದ್ದಾರೆ. ಶೇಕಡಾ 72 ಅಂಕಗಳೊಂದಿಗೆ ತೇರ್ಗಡೆಯಾಗಿದ್ದಾರೆ. ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ ಒಡಿಶಾ ಅಥವಾ BSE ಒಡಿಶಾ 5 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ಜುಲೈ 6, 2022 ರಂದು 10 ನೇ ಫಲಿತಾಂಶವನ್ನು ಘೋಷಿಸಿತು. ಈ 5 ಲಕ್ಷ ಅಭ್ಯರ್ಥಿಗಳಲ್ಲಿ ಬಿಜೆಡಿ ಫುಲ್ಬಾನಿ ಶಾಸಕ ಅಂಗದಾ ಕನ್ಹರ್ ಕೂಡ ಸೇರಿದ್ದಾರೆ. ಒಡಿಶಾ ಶಾಸಕರು ತಮ್ಮ ಮೆಟ್ರಿಕ್ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿದ್ದಾರೆ ಮತ್ತು ಒಟ್ಟಾರೆ ಶೇಕಡಾ 72 ರಷ್ಟು ಅಂಕಗಳನ್ನು ಗಳಿಸಿದ್ದಾರೆ. ಅವರು 500ಕ್ಕೆ ಬರೋಬ್ಬರಿ 364 ಅಂಕ ಗಳಿಸಿದ್ದಾರೆ.

 ಕನ್ಹರ್ ಅವರು ಪರೀಕ್ಷೆಗಳಿಗೆ ಹಾಜರಾಗಿ, ತಮ್ಮ ಶಿಕ್ಷಣವನ್ನು ಪೂರ್ಣಗೊಳಿಸುವ ಮೂಲಕ ಡ್ರಾಪ್ಔಟ್ ಮಾಡೋರಿಗೆ ಸ್ಫೂರ್ತಿಯಾಗಿದ್ದಾರೆ. ಅವರ ಕಥೆಯು ಇತರ ಡ್ರಾಪ್ಔಟ್‌ ಆದವರು, ತಮ್ಮ ಬಾಕಿ ಉಳಿದಿರುವ ಪರೀಕ್ಷೆಗಳನ್ನು ತೆರವುಗೊಳಿಸಲು ಪ್ರೇರೇಪಿಸುತ್ತದೆ. 2019 ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಡಿ ಟಿಕೆಟ್‌ನಲ್ಲಿ ಕನ್ಹರ್ ಫುಲ್ಬಾನಿ (Phulbani) ಶಾಸಕರಾಗಿ ಆಯ್ಕೆಯಾದರು. ಅದಕ್ಕೂ ಮುನ್ನ ಜಿಲ್ಲೆಯ ಫಿರಿಂಗಿಯಾ ಬ್ಲಾಕ್‌ನಲ್ಲಿ ಜಿಲ್ಲಾ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದರು. 1978 ರಲ್ಲಿ ಫುಲ್ಬಾನಿಯ ಎಜೆಒ ಪ್ರೌಢಶಾಲೆಯಲ್ಲಿ ಓದಿದ ಶಾಸಕ ಕನ್ಹರ್ ಅವರು, ಒಡಿಶಾ ಮೆಟ್ರಿಕ್ ಪರೀಕ್ಷೆಗಳಿಗೆ ಬರೆಯಲು ಸಿದ್ಧರಾಗಿದ್ದರು. ಆದರೆ ಕೌಟುಂಬಿಕ ಸಮಸ್ಯೆಗಳಿಂದಾಗಿ ಅದು ಸಾಧ್ಯವಾಗಲಿಲ್ಲ. ಆನಂತರ ರಾಜಕೀಯ (Politcal) ವೃತ್ತಿಯಲ್ಲಿ ನಿರತರಾದರು.ತನ್ನ 42ನೇ ಪ್ರಯತ್ನದಲ್ಲಿ ಹತ್ತನೇ ತರಗತಿ ಪರೀಕ್ಷೆಯಲ್ಲಿ ತೇರ್ಗಡೆಯಾದ ವ್ಯಕ್ತಿಯ ಕುರಿತಾದ ಸುದ್ದಿ ವರದಿಯಿಂದ ಅವರು ಸ್ಫೂರ್ತಿ ಪಡೆದರು. ಬಳಿಕ ತಮ್ಮ ಸ್ನೇಹಿತರೊಂದಿಗೆ ಚರ್ಚಿಸಿ ಈ ವರ್ಷ ಮೆಟ್ರಿಕ್ ಬೋರ್ಡ್ ಪರೀಕ್ಷೆಗೆ ಹಾಜರಾಗಲು ನಿರ್ಧರಿಸಿದರು.  

ಟಿಕ್‌ಟಾಕ್‌ನಿಂದ ಫಾಲೋ ಮೀ ಉಚಿತ ಬ್ಯುಸಿನೆಸ್ ಪ್ರೋಗ್ರಾಮ್

Tap to resize

Latest Videos

ಕಂಧಮಾಲ್ ಜಿಲ್ಲೆಯ ಈ ಬುಡಕಟ್ಟು ಶಾಸಕ 500ಕ್ಕೆ 364 ಅಂಕ ಗಳಿಸುವ ಮೂಲಕ ಬಿ1 ಗ್ರೇಡ್ ಪಡೆದಿದ್ದಾರೆ. ಅವರು ಸ್ಟೇಟ್ ಓಪನ್ ಸ್ಕೂಲ್ ಸರ್ಟಿಫಿಕೇಟ್ (SOSC) ಮೋಡ್ ಅಡಿಯಲ್ಲಿ ಫುಲ್ಬಾನಿ ಬಳಿಯ ಪಿಟಾಬರಿಯ ರುಜಂಗಿ ಪ್ರೌಢಶಾಲೆಯಲ್ಲಿ ಪರೀಕ್ಷೆಗೆ ಹಾಜರಾಗಿದ್ದರು. ಶಾಲೆ ಬಿಟ್ಟ ಮಕ್ಕಳಿಗೆ HSC ಅನ್ನು ತೆರವುಗೊಳಿಸಲು SOSC ಅವಕಾಶವನ್ನು ಒದಗಿಸುತ್ತದೆ. ನಾನು ಉತ್ತಮ ಅಂಕಗಳೊಂದಿಗೆ ಪರೀಕ್ಷೆಯಲ್ಲಿ ಉತ್ತೀರ್ಣನಾಗಿದ್ದೇನೆ ಎಂದು ನನಗೆ ಸಂತೋಷವಾಗಿದೆ. ನನ್ನಂತಹ ಶಾಲೆ ಬಿಟ್ಟ ವ್ಯಕ್ತಿಗಳು ನಾಚಿಕೆಪಡುವ ಬದಲು ಪರೀಕ್ಷೆಗೆ ಹಾಜರಾಗುವಂತೆ ನಾನು ಸಲಹೆ ನೀಡುತ್ತೇನೆ ಅಂತಾರೆ ಕನ್ಹರ್.

ಅಂಗದ ಕನ್ಹರ್ ಅವರ ಕಥೆಯು ವಯಸ್ಸು ಕೇವಲ ಸಂಖ್ಯೆ ಮತ್ತು ಶಿಕ್ಷಣಕ್ಕೆ ವಯಸ್ಸಿನ ಮಿತಿಯಿಲ್ಲ ಎಂಬ ಅಂಶವನ್ನು ಮತ್ತಷ್ಟು ಸಾಬೀತುಪಡಿಸುತ್ತದೆ. ಸದ್ಯ ಅವರು ತಮ್ಮ ಅಧ್ಯಯನವನ್ನು ಮುಂದುವರಿಸಲು ಯೋಜಿಸುತ್ತಿದ್ದಾರೆ .ಶಿಕ್ಷಣಕ್ಕೆ ಸಂಬಂಧಿಸಿದಂತೆ ಯಾವುದೇ ನಿವೃತ್ತಿ ವಯಸ್ಸು ಇಲ್ಲ' ಅನ್ನೋದು ಅವರ ಅಭಿಪ್ರಾಯ.

QR Code ಮೂಲಕ ಪಾಠ ಹೇಳುವ ಶಿಕ್ಷಕನಿಗೆ ಅಂತಾರಾಷ್ಟ್ರೀಯ ಮನ್ನಣೆ

ಒಡಿಶಾ ಮೆಟ್ರಿಕ್ ಪರೀಕ್ಷೆಯನ್ನು ಜುಲೈ 6, 2022 ರಂದು ಸುಮಾರು 5.8 ಲಕ್ಷ ಅಭ್ಯರ್ಥಿಗಳು  ಬರೆದಿದ್ದರು.  ಈ 5.8 ಲಕ್ಷ ಅಭ್ಯರ್ಥಿಗಳ ಪೈಕಿ ಒಟ್ಟು 5,17,847 ವಿದ್ಯಾರ್ಥಿಗಳು 10ನೇ ತರಗತಿಯ ಬೋರ್ಡ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಒಡಿಶಾ 10ನೇ ಫಲಿತಾಂಶದ ಒಟ್ಟು ಉತ್ತೀರ್ಣ ಶೇಕಡಾ 90.55 ರಷ್ಟು ದಾಖಲಾಗಿದೆ.

 

Odisha | 58-year-old BJD's Phulbani MLA Angada Kanhar cleared class 10 board examination with 72% marks

"I am happy that I have passed the 10th exam with good marks. There is no age to acquire education or learn new things," he said (07.07) pic.twitter.com/Py368yq3Az

— ANI (@ANI)

 

click me!