Asianet Suvarna News Asianet Suvarna News

QR Code ಮೂಲಕ ಪಾಠ ಹೇಳುವ ಶಿಕ್ಷಕನಿಗೆ ಅಂತಾರಾಷ್ಟ್ರೀಯ ಮನ್ನಣೆ

*ಗ್ಲೋಬಲ್ ಟೀಚರ್ ಪ್ರೈಜ್ ಗೆದ್ದ ರಂಜಿತ್ ಸಿನ್ಹ ಡಿಸಾಲೆ ಅವರಿಂದ ವಿನೂತನ ಬೋಧನಾ ಪದ್ಧತಿ
*ಕ್ಯೂರ್ ಕೋಡ್‌ಗಳನ್ನು ಬಳಸಿ ಮಕ್ಕಳಿಗೆ ಪಾಠ ಹೇಳುವ ಈ ಮಹಾರಾಷ್ಟ್ರದ ಈ ಟೀಚರ್
* ಮಹಾರಾಷ್ಟ್ರ ಪರಿತೇವಾಡಿ ಶಾಲೆಯಲ್ಲಿ ಹುಡುಗಿಯರು ಸೇರಿ ಶೇ. 100 ರಷ್ಟು ಹಾಜರಾತಿ
 

Teacher from Maharashtra innovate QR Code Teaching method
Author
Bengaluru, First Published Jul 8, 2022, 3:16 PM IST

ಇತ್ತೀಚೆಗಷ್ಟೇ ಕ್ಯೂಆರ್ ಕೋಡ್ (QR -Quick Response code) ರೆಸ್ಯೂಮ್ ಬಗ್ಗೆ ತಿಳಿಸಿದ್ವಿ. QR ಕೋಡ್ ಬಳಸಿ ಉದ್ಯೋಗ ಪಡೆಯಲು ಇಂಗ್ಲೆಂಡ್ ಯುವಕನ ಐಡಿಯಾ ಬಗ್ಗೆ ಹೇಳಿದ್ವಿ.. ದೂರದ ಇಂಗ್ಲೆಂಡ್‌ ಬಿಡಿ, ಕ್ಯೂಆರ್ ಕೋಡ್ ಬಳಕೆ ನಮ್ಮ ದೇಶದಲ್ಲೇ ಸಾಕಷ್ಟು ಫೇಮಸ್ ಆಗ್ಬಿಟ್ಟಿದೆ. ಅದು ವ್ಯಾಪಾರ ವಹಿವಾಟು ವಲಯದಲ್ಲಷ್ಟೇ ಅಲ್ಲ, ಶಿಕ್ಷಣ ಕ್ಷೇತ್ರದಲ್ಲೂ. ಅರೆ..ಅದ್ಹೇಗೆ ಸಾಧ್ಯ ಅಂತೀರಾ..ನಮ್ಮ ಪಕ್ಕದ ರಾಜ್ಯದ ಶಿಕ್ಷಕನ ಯಶೋಗಾಥೆಯ ಈ ಸ್ಟೋರಿ ನೋಡಿ. ಮಹಾರಾಷ್ಟ್ರ(Maharashtra)ದ ಗ್ಲೋಬಲ್ ಟೀಚರ್ ಪ್ರೈಜ್ (Global Teacher Prize) 2020 ರ ಪುರಸ್ಕೃತರಾದ ರಂಜಿತ್‌ ಸಿನ್ಹ್ ಡಿಸಾಲೆ (Ranjitsinh Disale) ಮಾಡಿರುವ ಸಾಧನೆ ಸಾಮಾನ್ಯವಾದುದಲ್ಲ. ಪಠ್ಯಪುಸ್ತಕಗಳಲ್ಲಿ ಕ್ಯೂಆರ್ ಕೋಡ್‌ (QR Code) ಗಳನ್ನು ಎಂಬೆಡ್ ಮಾಡಿ ಮಕ್ಕಳ ಅಭ್ಯಾಸಕ್ಕೆ ಉತ್ತಮ ದಾರಿ ತೋರಿಸಿದ್ದಾರೆ. ಇದೀಗ ಮಹಾರಾಷ್ಟ್ರದಾದ್ಯಂತ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ರಂಜಿತ್ ಸಿನ್ಹಾರ ವಿನೂತನ ಪ್ರಯತ್ನದಿಂದಾಗಿ ಅವರು ಕಲಿಸುವ ಪರಿತೇವಾಡಿ ಶಾಲೆಯಲ್ಲಿ ವಿಶೇಷವಾಗಿ ಹುಡುಗಿಯರನ್ನು ಒಳಗೊಂಡಂತೆ ಶೇಕಡಾ 100 ರಷ್ಟು ಹಾಜರಾತಿ ಇರುತ್ತದೆ. ಇದಕ್ಕೆ ಕಾರಣ ಪಠ್ಯಪುಸ್ತಕಗಳಲ್ಲಿ ಕ್ಯೂಆರ್ ಕೋಡ್‌ಗಳನ್ನು ಎಂಬೆಡ್ ಮಾಡುವ ಅಭ್ಯಾಸ.

ಇಂಜಿನಿಯರಿಂಗ್ (Engineering) ವ್ಯಾಸಂಗ ಮಾಡುತ್ತಿದ್ದ ರಂಜಿತ್‌ಸಿನ್ಹ್ ಡಿಸಾಲೆ, ವೈಯಕ್ತಿಕ ಕಾರಣಗಳಿಂದ ಅರ್ಧಕ್ಕೆ ಕಾಲೇಜು ತೊರೆದರು. ಬಳಿಕ ತಂದೆಯ ಒತ್ತಾಯದ ಮೇರೆಗೆ ಶಿಕ್ಷಕರ ತರಬೇತಿ ಕೋರ್ಸ್ ಪಡೆದರು. ಆರಂಭದಲ್ಲಿ ಆಸಕ್ತಿಯಿಲ್ಲದಿದ್ರೂ ಆನಂತರ ತಮ್ಮ ಜೊತೆಗಿದ್ದ ಶಿಕ್ಷಕರಿಂದ ಪ್ರಭಾವಿತರಾಗಿ ಬೋಧನೆ ಮೇಲೆ ಆಸಕ್ತಿ ಬೆಳೆಸಿಕೊಂಡರು. ಶಿಕ್ಷಣದ ಮೂಲಕ, ವಿಶೇಷವಾಗಿ ಕಡಿಮೆ ಆದಾಯದ ಹಿನ್ನೆಲೆಯ ವಿದ್ಯಾರ್ಥಿಗಳ ಜೀವನವನ್ನು ಹೇಗೆ ಬದಲಾಯಿಸಬಹುದು ಎಂಬುದರ ಕುರಿತು ರಂಜಿತ್ ಸಿನ್ಹಾ ಯೋಚಿಸಲು ಪ್ರಾರಂಭಿಸಿದರು. ಅದಕ್ಕಾಗಿ ರಾಜೇಂದ್ರ ಮಾನೆ (Rajendra Mane) ಮಾರ್ಗದರ್ಶನದಲ್ಲಿ ಆರು ತಿಂಗಳ ಇಂಟರ್ನ್‌ಶಿಪ್ ಅನ್ನು ಕೈಗೊಂಡರು. ವಿದ್ಯಾರ್ಥಿಗಳೊಂದಿಗೆ ಹೇಗೆ ವ್ಯವಹರಿಸಬೇಕು, ಹೇಗೆ ಸಹಾನುಭೂತಿ ತೋರಿಸಬೇಕು ಎಂದು ಕಲಿತರು.

2009ರ ಜನವರಿ 5 ರಂದು, ರಂಜಿತ್‌ಸಿನ್ಹಾ (Ranjith Sinha) ಸೊಲ್ಲಾಪುರ ಜಿಲ್ಲೆಯ ಪರಿತೇವಾಡಿ ಗ್ರಾಮದ ಜಿಲ್ಲಾ ಪರಿಷತ್ ಪ್ರಾಥಮಿಕ ಶಾಲೆ ಸೇರಿದರು. ಅಲ್ಲಿನ ವ್ಯವಸ್ಥೆಯನ್ನು ಬದಲಾಯಿಸಲು ಬಯಸಿದ್ದರು.  ಅವರ ಮೊದಲ ಹೆಜ್ಜೆಯೆಂದರೆ ಪರಿತೆವಾಡಿಯ ಪ್ರತಿ ಮನೆಗೆ ಹೋಗಿ ಸಮುದಾಯದೊಂದಿಗೆ ಅನೌಪಚಾರಿಕ ಸಂವಾದವನ್ನು ಪ್ರಾರಂಭಿಸುವುದು, ಶಿಕ್ಷಣದ ಬಗ್ಗೆ ಅವರ ದೃಷ್ಟಿಕೋನವನ್ನು ಅರ್ಥಮಾಡಿಕೊಳ್ಳುವುದು ಮತ್ತು ಅವರ ಸ್ನೇಹಿತ ಮತ್ತು ವಿಶ್ವಾಸಾರ್ಹ ಎಂದು ಸ್ಥಾಪಿಸುವುದು. 'ಇದು ಸ್ವಲ್ಪ ಸಮಯ ತೆಗೆದುಕೊಂಡಿತು. ಆದರೆ ಆರರಿಂದ ಏಳು ತಿಂಗಳ ನಂತರ, ನಾನು ಬಯಸಿದ ಬದಲಾವಣೆಯನ್ನು ತರಬಲ್ಲೆ ಎಂದು ನಾನು ಅರರಂಜಿತ್ ಸಿನ್ಹಾು ವಿವರಿಸುತ್ತಾರೆ ರಂಜಿತ್ ಸಿನ್ಹಾ.

ಜಮ್ಮು ಮತ್ತು ಕಾಶ್ಮೀರದ ಬುಡಕಟ್ಟು ವಿದ್ಯಾರ್ಥಿಗಳಿಗೆ ಉಚಿತ NEET, JEE ತರಬೇತಿ

ವಿದ್ಯಾರ್ಥಿಗಳು ದೃಶ್ಯ ಮಾಧ್ಯಮದಲ್ಲಿ ಹೆಚ್ಚು ಆಸಕ್ತಿ ಹೊಂದಿರುವುದರಿಂದ, ಅವರ ತಂದೆಯಿಂದ ಹಣವನ್ನು ಎರವಲು ಪಡೆದು, ಯೂಟ್ಯೂಬ್‌ (YouTube) ನಲ್ಲಿ ವೀಡಿಯೊಗಳನ್ನು ತೋರಿಸಲು ಮತ್ತು ಪವರ್‌ಪಾಯಿಂಟ್ (PowerPoint) ಪ್ರಸ್ತುತಿಗಳನ್ನು ರಚಿಸಲು ತರಗತಿಗೆ ಲ್ಯಾಪ್‌ಟಾಪ್ (Laptop) ಖರೀದಿಸಿದರು.

ಲ್ಯಾಪ್‌ಟಾಪ್‌ನಲ್ಲೂ ಸಿನಿಮಾ ಪ್ಲೇ ಮಾಡುತ್ತಿದ್ದರು. ಇದರಿಂದ ಖುಷಿಯಾದ ಮಕ್ಕಳು, ಶಾಲೆಯು ವಿನೋದ ಮತ್ತು ಆನಂದದ ಸ್ಥಳ ಎಂಬ ಸಂದೇಶವನ್ನು  ಸಾರಿದರು. ದಿನವಿಡೀ ದುಡಿಯುವುದಕ್ಕಿಂತ ತರಗತಿಗೆ ಹೋಗುವುದನ್ನು ಹೆಚ್ಚು ಅಪೇಕ್ಷಣೀಯ ಆಯ್ಕೆಯನ್ನಾಗಿ ಮಾಡಿಕೊಂಡಿದ್ದರು. ಇದು ಉಳಿದ ಕವಿದ್ಯಾರ್ಥಿಗಳ ಗಮನವನ್ನು ಸೆಳೆದು, ತರಗತಿಗೆ ಹಾಜರಾಗುವ ಮಕ್ಕಳ ಸಂಖ್ಯೆ ಹೆಚ್ಚಾಯಿತು.

ವೃತ್ತಿಪರರಿಗೆ ಪಾರ್ಟ್‌ಟೈಮ್ ಪಿಎಚ್‌ಡಿ ಮಾಡಲಿನ್ನು ಅವಕಾಶ

ಬಳಿಕ ತಮ್ಮ ಪಾಠಗಳನ್ನು ರೆಕಾರ್ಡ್ ಮಾಡಲು ಮತ್ತು ಮೊಬೈಲ್‌ಗಳಲ್ಲಿ ಹಂಚಿಕೊಳ್ಳಲು ಪ್ರಾರಂಭಿಸಿದರು. ಆದರೆ ಹಲವಾರು ತಾಂತ್ರಿಕ ಸಮಸ್ಯೆಗಳನ್ನು ಎದುರಿಸಿದರು. ಈ ವೇಳೆ ಅಂಗಡಿಯೊಂದರಲ್ಲಿ ನೋಡಿದ ಕ್ಯೂಆರ್ ಕೋಡ್ ಪಾವತಿಯಿಂದ ಪ್ರೇರಿತರಾದ ರಂಜಿತ್ ಸಿನ್ಹಾ, ಶಿಕ್ಷಣವೂ ಇದೇ ರೀತಿ ಆಗಿರಬೇಕು ಎಂದು ನಿರ್ಧರಿಸಿದರು. ಕ್ಯೂಆರ್ ಕೋಡ್ ಎಂದರೇನು ಮತ್ತು ಅದರಲ್ಲಿ ಮಾಹಿತಿಯನ್ನು ಹೇಗೆ ಎಂಬೆಡ್ ಮಾಡುವುದು ಎಂಬುದನ್ನು ಸ್ವತಃ ತಾವೇ ಮಕ್ಕಳಿಗೆ ಹೇಳಿಕೊಟ್ಟರು. ಇದರಿಂದಾಗಿ ಮಕ್ಕಳು ಕ್ಯೂಆರ್ ಕೋಡ್ ಬಳಸಿಕೊಂಡ ನಿರಂತರ ಕಲಿಕೆ ಸಾಧ್ಯವಾಗಿದೆ. ಇದರ ರೂವಾರಿ ರಂಜಿತ್ ಸಿನ್ಹಾ ಡಿಸಾಲೆ.

Follow Us:
Download App:
  • android
  • ios