JEE Main Result 2022: ಜೆಇಇ ಮುಖ್ಯ ಪರೀಕ್ಷೆ ಫಲಿತಾಂಶ ಬಿಡುಗಡೆ

By Suvarna News  |  First Published Jul 11, 2022, 8:39 AM IST

2022ನೇ ಸಾಲಿನ ಜೆಇಇ ಮುಖ್ಯ ಪರೀಕ್ಷೆಯ  ಜೂನ್ ಸೆಷನ್​ನ ಫಲಿತಾಂಶ ಇಂದು ಬಿಡುಗೆಯಾಗಿದೆ.   ಫಲಿತಾಂಶವನ್ನು ಅಧಿಕೃತ ವೆಬ್‌ಸೈಟ್   jeemain.nta.nic.inನಲ್ಲಿ ಪರಿಶೀಲಿಸಬಹುದು.


ನವದೆಹಲಿ (ಜು.11): 2022ನೇ ಸಾಲಿನ ಜೆಇಇ (JEE) ಮುಖ್ಯ ಪರೀಕ್ಷೆಯ  ಜೂನ್ ಸೆಷನ್​ನ ಫಲಿತಾಂಶ ಇಂದು ಬಿಡುಗೆಯಾಗಿದೆ. ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) JEE ಮೇನ್ ಫಲಿತಾಂಶವನ್ನು ಅಧಿಕೃತ ವೆಬ್‌ಸೈಟ್ ಆದ jeemain.nta.nic.in ನಲ್ಲಿ ಬಿಡುಗಡೆಗೊಳಿಸಿದೆ. NTA ಈಗಾಗಲೇ JEE ಮುಖ್ಯ ಪರೀಕ್ಷೆಯ ಪ್ರಾವಿಷನಲ್ ಫೈನಲ್ ಆನ್ಸರ್ ಕೀಯನ್ನು ಜುಲೈ 6ರಂದು ಬಿಡುಗಡೆ ಮಾಡಿದೆ.

 

The Joint Entrance Examination Main (JEE Main) Session 1 result has been declared.

— ANI (@ANI)

Tap to resize

Latest Videos

JEE ಮುಖ್ಯ ಪರೀಕ್ಷೆಯನ್ನು ಅನೇಕ ಪಾಳಿಗಳಲ್ಲಿ  ಜೂನ್ 23ರಿಂದ 29ರವರೆಗೆ ನಡೆಸಲಾಗಿತ್ತು.  ಜೆಇಇ ಮೇನ್‌ನಲ್ಲಿ ಇಬ್ಬರು ಅಥವಾ ಎರಡಕ್ಕೂ ಹೆಚ್ಚಿನ ಅಭ್ಯರ್ಥಿಗಳು ಒಂದೇ ಅಂಕಗಳನ್ನು ಗಳಿಸಿದರೆ ಟೈ ಬ್ರೇಕಿಂಗ್ ವಿಧಾನವನ್ನು ಅನುಸರಿಸಲಾಗುತ್ತದೆ. ಈ ನಡುವೆ  ಜೆಇಇ ಮುಖ್ಯ ಸೆಷನ್ 2ಕ್ಕೆ ನೋಂದಣಿ  ಪ್ರಕ್ರಿಯೆ  ಮುಗಿದಿದೆ.  ಜೆಇಇ ಮುಖ್ಯ ಸೆಷನ್ 2ಕ್ಕೆ  ಜುಲೈ  21ರಿಂದ ಜುಲೈ 30ರವರೆಗೆ  ಪರೀಕ್ಷೆ ನಡೆಯಲಿದೆ.

ಶೇ.35ರಷ್ಟು ಕೋರ್ಸ್ ಶುಲ್ಕ ಹೆಚ್ಚಿಸಿದ IIT-Bombay, ವಿದ್ಯಾರ್ಥಿಗಳ ಅಸಮಾಧಾನ

ಫಲಿತಾಂಶಗಳು ಹೊರಬಂದ ನಂತರ NTA ತನ್ನ ಅಧಿಕೃತ ವೆಬ್‌ಸೈಟ್ www.jeemain.nta.nic.in ನಲ್ಲಿ JEE ಅಂತಿಮ ಕಟ್-ಆಫ್ ಅನ್ನು ಪ್ರಕಟಿಸಲಿದೆ. JEE ಮುಖ್ಯ ಫಲಿತಾಂಶವನ್ನು ಚೆಕ್ ಮಾಡಲು ಅಭ್ಯರ್ಥಿಗಳು ಪರೀಕ್ಷೆಯ ಕ್ರಮ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ನಮೂದಿಸಿ ಪರಿಶೀಲನೆ ನಡೆಸಬಹುದಾಗಿದೆ. ಅದಾಗ್ಯೂ ಚೆಕ್ ಮಾಡುವ ವಿಧಾನ ಇಲ್ಲಿದೆ.

ಕೊನೆಗೂ ಪಿಯು ಉತ್ತರಪತ್ರಿಕೆ ಡೌನ್‌ಲೋಡ್‌ಗೆ ಲಭ್ಯ, PUC ದಾಖಲಾತಿ ಜು.22ರವರೆಗೆ ವಿಸ್ತರಣೆ

ಫಲಿತಾಂಶ ವೀಕ್ಷಿಸುವುದು ಹೇಗೆ?
ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ- jeemain.nta.nic.in.
'JEE ಮುಖ್ಯ 2022 ಸೆಷನ್ 1 ಫಲಿತಾಂಶ ಡೌನ್‌ಲೋಡ್' ಎಂದು ಇರುವ ಲಿಂಕ್ ಅನ್ನು ಕ್ಲಿಕ್ ಮಾಡಿ.
ರೋಲ್ ಸಂಖ್ಯೆ, ಹುಟ್ಟಿದ ದಿನಾಂಕ, ಕ್ಯಾಪ್ಚಾ ಕೋಡ್ ಮತ್ತು ಇತರ ವಿವರಗಳನ್ನು ನಮೂದಿಸಿ.
JEE ಮುಖ್ಯ 2022 ಸೆಷನ್ 1 ಫಲಿತಾಂಶವನ್ನು ಪ್ರದರ್ಶಿಸಲಾಗುತ್ತದೆ.
ಅಭ್ಯರ್ಥಿಗಳು JEE ಮುಖ್ಯ 2022 ಸೆಷನ್ 1 ಫಲಿತಾಂಶವನ್ನು ಮುಂದಿನ ಉಪಯೋಗಕ್ಕಾಗಿ ಡೌನ್‌ಲೋಡ್ ಮಾಡಿ ಇಟ್ಟುಕೊಳ್ಳಿ

click me!