Exam Result 10ನೇ ತರಗತಿ ಪರೀಕ್ಷೆ ಬರೆದ 43 ವರ್ಷದ ಅಪ್ಪ ಪಾಸ್, ಮಗ ಫೇಲ್!

By Suvarna News  |  First Published Jun 19, 2022, 9:30 PM IST
  • 10ನೇ ತರಗತಿ ಪರೀಕ್ಷೆ ಬರೆದ ಅಪ್ಪ ಹಾಗೂ ಮಗ
  • 30 ವರ್ಷದ ಬಳಿಕ ಪರೀಕ್ಷೆ ಬರೆದ ಅಪ್ಪ ಪಾಸ್
  • ಪ್ರತಿ ದಿನ ಶಾಲೆಗೆ ಹೋಗಿ ಬಂದ ಮಗ ಫೇಲ್

ಪುಣೆ(ಜೂ.19): ಏನಾದರು ಸಾಧಿಸಲು ವಯಸ್ಸು ಅಡ್ಡಿಯಾಗಲ್ಲ ಅನ್ನೋದು ಹಲವು ಬಾರಿ ಸಾಬೀತಾಗಿದೆ. ಇನ್ನು ವಿದ್ಯಾಭ್ಯಾಸ ವಿಚಾರದಲ್ಲಿ ಇದು ಮತ್ತೆ ಮತ್ತೆ ಸಾಬೀತಾಗಿದೆ. ಇಳಿವಯಸ್ಸಿನಲ್ಲಿ ಪರೀಕ್ಷೆ ಬರೆದ ಅದೆಷ್ಟೋ ಘಟನೆಗಳು ಕಣ್ಣಮುಂದಿದೆ. ಇದೀಗ ಅಪ್ಪ ಮಗ ಒಟ್ಟಿಗೆ ಪರೀಕ್ಷೆ ಬರೆದ ಘಟನೆ ನಡೆದಿದೆ. ಇಲ್ಲೊಂದು ಟ್ವಿಸ್ಟ್ ಇದೆ. ಫಲಿತಾಂಶ ಬಂದಾಗ ಅಪ್ಪ ಪಾಸ್ ಆಗಿದ್ದರೆ. ಮಗ ಫೇಲ್ ಆಗಿದ್ದಾನೆ.

ಪುಣೆಯ ನಿವಾಸಿಯಾಗಿರುವ ಭಾಸ್ಕರ್ ವಾಗ್‌ಮಾರೆ ವಯಸ್ಸು 43. 7ನೇ ತರಗತಿ ಬಳಿಕ ಭಾಸ್ಕರ್ ವಿದ್ಯಾಭ್ಯಾಸ ಮುಂದುವರಿಸಲು ಸಾಧ್ಯಾವಾಗಿರಲಿಲ್ಲ. ಕುಟುಂಬ ಜವಾಬ್ದಾರಿ, ಆರ್ಥಿಕ ಪರಿಸ್ಥಿತಿ ಕಾರಣ ವಿದ್ಯಾಭ್ಯಾಸ ತೊರೆದು ಜೀವನ ನಿರ್ವಹಣೆಗಾಗಿ ಕೆಲಸ ಮಾಡಲು ಆರಂಭಿಸಿದರು. ಹೀಗಾಗಿ ವಿದ್ಯಾಭ್ಯಾಸ ಅರ್ಧಕ್ಕೆ ನಿಂತಿತು.

Tap to resize

Latest Videos

ಆಗಸ್ಟ್‌ನಲ್ಲಿ ಪಿಯುಸಿ ಪೂರಕ ಪರೀಕ್ಷೆ: ನಾಗೇಶ್‌

30 ವರ್ಷಗಳ ಬಳಿಕ ಭಾಸ್ಕರ್ ವಾಗ್‌ಮಾರೆ 10ನೇ ತರಗತಿ ಪರೀಕ್ಷೆ ಬರೆಯಲು ಸಜ್ಜಾದರು. ಪುತ್ರ ಕೂಡ 10ನೇ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿದ್ದ ಕಾರಣ ಬೇರೆ ಪುಸ್ತಕ ತೆಗೆದುಕೊಳ್ಳುವ ಅಗತ್ಯವಿಲ್ಲ. ಗೊಂದಲಗಳಿದ್ದರೆ ಮಗನಲ್ಲೇ ಕೇಳಿ ತಿಳಿದುಕೊಳ್ಳಬಹುದು ಎಂದು ಕಠಿಣ ಅಭ್ಯಾಸದಲ್ಲಿ ತೊಡಗಿದರು.

ಮಹಾರಾಷ್ಟ್ರ ಬೋರ್ಡ್ ಎಕ್ಸಾಮ್‌ಗೆ ಅಪ್ಪ ಹಾಗೂ ಮಗ ತಯಾರಿ ಮಾಡಿ ಪರೀಕ್ಷೆ ಬರೆದಿದ್ದರು. ಆದರೆ ಫಲಿತಾಂಶ ಬಂದಾಗ ಅಚ್ಚರಿ ಕಾದಿತ್ತು. ಅಪ್ಪ ಪರೀಕ್ಷೆಯಲ್ಲಿ ಪಾಸ್ ಆಗಿದ್ದಾರೆ. ಆದರೆ ಮಗ 3 ವಿಷಯದಲ್ಲಿ ಫೇಲ್ ಆಗಿದ್ದಾನೆ.

ನನಗೆ ಓದು ಅಂದರೆ ಹೆಚ್ಚು ಇಷ್ಟದ ವಿಷಯ. ಆದರೆ ಅಂದು ಪರಿಸ್ಥಿತಿ ಪೂರಕವಾಗಿರಲಿಲ್ಲ. ಹೀಗಾಗಿ ವಿದ್ಯಾಭ್ಯಾಸ ಮುಂದುವರಿಸಲು ಸಾಧ್ಯವಾಗಲಿಲ್ಲ. ಹೀಗಾಗಿ 30 ವರ್ಷಗಳ ಬಳಿಕ ಪರೀಕ್ಷೆ ಬರೆಯಲು ತಯಾರಿ ನಡೆಸಿದ್ದೆ. ಪಠ್ಯಗಳನ್ನು ಅರ್ಥ ಮಾಡಿಕೊಳ್ಳಲು ಕಷ್ಟವಾಗುತ್ತಿತ್ತು. ಆದರೆ ಪರೀಕ್ಷೆಯಲ್ಲಿ ಪಾಸ್ ಆಗಿರುವುದು ಸಂತಸ ತಂದಿದೆ ಎಂದು ಭಾಸ್ಕರ್ ಹೇಳಿದ್ದಾರೆ.

ಇಂಗ್ಲೀಷ್ ನಲ್ಲಿ 35, ಗಣಿತದಲ್ಲಿ 36..! ಹತ್ತನೇ ಕ್ಲಾಸ್ ನಲ್ಲಿ ಜಸ್ಟ್ ಪಾಸ್ ಆಗಿದ್ರು ಈ ಐಎಎಸ್ ಅಧಿಕಾರಿ!

ಮಗ ಎರಡು ವಿಷಯದಲ್ಲಿ ಫೇಲ್ ಆಗಿದ್ದಾನೆ. ಆದರೆ ಆತನ ಮರು ಪರೀಕ್ಷೆ ಬರೆಯಲು ನಾನು ಬೆಂಬಲಿಸುತ್ತೇನೆ. ಮರು ಪರೀಕ್ಷೆಗಾಗಿ ಮಗ ಉತ್ತಮ ಅಂಕಗಳೊಂದಿಗೆ ಪಾಸಾಗುತ್ತಾನೆ ಅನ್ನೋ ವಿಶ್ವಾಸವಿದೆ ಎಂದು ಭಾಸ್ಕರ್ ಹೇಳಿದ್ದಾರೆ.

30 ವರ್ಷಗಳ ನಂತರ ಶಾಸಕ ಸಾ.ರಾ. ಮಹೇಶ್‌ ಪತ್ನಿ ಪಿಯು ಪರೀಕ್ಷೆಯಲ್ಲಿ ತೇರ್ಗಡೆ
ಕೆ.ಆರ್‌. ನಗರ ಶಾಸಕ ಸಾ.ರಾ. ಮಹೇಶ್‌ ಅವರ ಪತ್ನಿ ಅನಿತಾ ಮಹೇಶ್‌ ಅವರು ದ್ವೀತಿಯ ಪಿಯುಸಿ ಪರೀಕ್ಷೆಯ ಕಲಾ ವಿಭಾಗದಲ್ಲಿ 419 ಅಂಕಗಳನ್ನು ಪಡೆದು ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ.
ಅನಿತಾ ಮಹೇಶ್‌ ಅವರು 1993ರಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದರು. ನಂತರ ವ್ಯಾಸಂಗವನ್ನು ಮುಂದುವರಿಸಲು ಸಾಧ್ಯವಾಗಿರಲಿಲ್ಲ. ಮೂವತ್ತು ವರ್ಷಗಳ ನಂತರ ದ್ವಿತೀಯ ಪಿಯುಸಿ ಪರೀಕ್ಷೆ ಬರೆದು ತೇರ್ಗಡೆಯಾಗುವಲ್ಲಿ ಯಶಸ್ವಿಯಾಗಿದ್ದಾರೆ.

ಇವರು ತಮ್ಮ ಪತಿಯ ಶಾಸಕ ರಾಜಕೀಯ ಜಂಜಾಟ, ಜೊತೆಗೆ ತಮ್ಮ ಹಿರಿಯ ಪುತ್ರ ಧನುಷ್‌ ಎಂಬಿಬಿಎಸ್‌ ಮುಗಿಸಿ ಬೆಂಗಳೂರಿನಲ್ಲಿ ಎಂಎಸ್‌ ಮಾಡುತ್ತಿದ್ದಾರೆ. ಕಿರಿಯ ಪುತ್ರ ಜಯಂತ್‌ ಉದ್ಯಮಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.ಇದೆಲ್ಲರ ಮಧ್ಯೆ ಶಾಸಕ ಸಾ.ರಾ. ಮಹೇಶ್‌ ಅವರ ಪತ್ನಿ ಅನಿತಾ ಮಹೇಶ್‌ ಅವರು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿರುವುದು ವಿಶೇಷ.

click me!