
ಬಾಲ್ಯದ ಶಾಲಾ ಜೀವನವೂ ತುಂಬಾ ಅದ್ಭುತವಾಗಿರುತ್ತದೆ. ಆ ಸಮಯದಲ್ಲಿ ಮಾಡಿದ ಕಿತಾಪತಿಗಳು, ಶಿಕ್ಷಕರಿಂದ ತಿಂದ ಏಟುಗಳು ಈಗ ಕುಳಿತು ಯೋಚಿಸಿದರೆ ನಗುವಂತೆ ಮಾಡುತ್ತದೆ. ಪ್ರತಿಯೊಬ್ಬರು ತಮ್ಮ ಶಾಲಾ ಜೀವನದಲ್ಲಿ ತಪ್ಪು ಮಾಡಿರುತ್ತೀರಿ. ಅದೇ ರೀತಿ ಈಗಿನ ಮಕ್ಕಳು ಕೂಡ ಹಿಂದಿನ ತಲೆಮಾರುಗಳಿಗಿಂತ ತುಂಬಾ ಸ್ಮಾರ್ಟ್ ಆಗಿದ್ದು, ಶಿಕ್ಷಕರ ಪ್ರಶ್ನೆಗೆ ಮಕ್ಕಳು ನೀಡುವ ಉತ್ತರಗಳು ಬೆಚ್ಚಿ ಬೀಳಿಸುವಂತಿರುತ್ತವೆ. ಅಥವಾ ನಕ್ಕು ನಗಿಸುವಂತೆ ಮಾಡುತ್ತವೆ. ಶಿಕ್ಷಕರು ಇಂತಹ ವಿಚಾರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಾರೆ. ಅದೇ ರೀತಿ ಇಲ್ಲೊಂದು ಕಡೆ ಪುಟ್ಟ ಮಗುವೊಂದು ಉತ್ತರ ಪತ್ರಿಕೆಯಲ್ಲಿ ಬರೆದಿರುವ ಉತ್ತರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೋಡುಗರನ್ನು ನಗುವಂತೆ ಮಾಡುತ್ತಿದೆ.
ವೈರಲ್ ಆದ ಪೋಸ್ಟ್‌ನಲ್ಲಿ ಮಗು ಬರೆದ ಉತ್ತರ ಪತ್ರಿಕೆಯ ಫೋಟೋವನ್ನು ಹಂಚಿಕೊಳ್ಳಲಾಗಿದೆ. ಅದರಲ್ಲಿ ಕೆಲವು ಪದಗಳನ್ನು ನೀಡಿ ಅವುಗಳಿಗೆ ವಿರುದ್ದಾರ್ಥಕ ಪದಗಳನ್ನು ಬರೆಯುವಂತೆ ಹೇಳಿದ್ದಾರೆ. ಮಗುವಿಗೆ ಇಂಗ್ಲೀಷ್ ಪದಗಳಾದ good(ಒಳ್ಳೆಯದು), Black(ಕಪ್ಪು) ಹಾಗೂ Original(ಮೂಲ) ಈ ಪದಗಳಿಗೆ ವಿರುದ್ಧಾರ್ಥಕ ಪದಗಳನ್ನು ಬರೆಯುವಂತೆ ಕೇಳಲಾಗಿದೆ. ಮಗು ಈ ಪದಗಳಲ್ಲಿ ಮೊದಲೆರಡು ಪದಗಳಾದ ಗುಡ್ ಹಾಗೂ ಬ್ಲ್ಯಾಕ್‌ಗೆ ಬ್ಯಾಡ್ (Bad) ಹಾಗೂ ವೈಟ್(white)ಎಂದು ಉತ್ತರ ಬರೆದಿದೆ. ಆದರೆ ಒರಿಜಿನಲ್ ಪದಕ್ಕೆ ಮಾತ್ರ ಅದು ಆರ್ಟಿಫೀಷಿಯಲ್ ಎಂದು ಬರೆಯುವ ಬದಲು ಚೀನಾ ಎಂದು ಬರೆದು ಬಿಟ್ಟಿದೆ. ಈ ಉತ್ತರ ನೋಡಿ ಶಿಕ್ಷಕರು ಕೂಡ ಶಾಕ್ ಆಗಿದ್ದು, ಚೀನಾ ಪದವನ್ನು ಹೊಡೆದು ಹಾಕಿ ಆರ್ಟಿಫಿಶೀಯಲ್ ಎಂದು ಬರೆದಿದ್ದಾರೆ.
ಈಗ ಈ ಮಗು ಚೀನಾ ಎಂದು ಏಕೆ ಬರೆದಿರಬಹುದು ಎಂದು ತಿಳಿದರೆ ನಿಮಗೆ ಅಚ್ಚರಿ ಆಗಬಹುದು. ಚೀನಾದಲ್ಲಿ ತಯಾರಾದ ಅನೇಕ ಉತ್ಪನ್ನಗಳು ಭಾರತದಲ್ಲಿ ಮಾರಾಟವಾಗುವ ಬಗ್ಗೆ ನಿಮಗೆ ಗೊತ್ತೇ ಇದೆ. ಈ ವಸ್ತಗಳು ಕಡಿಮೆ ಬೆಲೆಗೆ ಸಿಗುತ್ತವೆ. ಆದರೆ ಇದಕ್ಕೆ ಧೀರ್ಘ ಬಾಳಿಕೆಯ ಗ್ಯಾರಂಟಿ ಇಲ್ಲ, ಇದು ಯಾವಾಗ ಬೇಕಾದರೂ ಹಾಳಾಗಿ ಹೋಗಬಹುದು, ಅಥವಾ ಮುರಿದು ಹೋಗಬಹುದು.ಇದೇ ಕಾರಣಕ್ಕೆ ಚೀನಾವನ್ನು ಕೆಲವರು ಡುಪ್ಲಿಕೇಟ್ ಎಂದು ಕರೆಯುವುದುಂಟು. ಚೀನಾದ ಈ ಉತ್ಪನ್ನಗಳೆಲ್ಲವೂ ಪ್ರಸಿದ್ಧ ಬ್ರಾಂಡ್‌ಗಳ ಕಾಫಿಯಾಗಿರುತ್ತದೆ. ಇದೇ ಕಾರಣಕ್ಕೆ ಚೀನಿ ವಸ್ತುಗಳೆಂದರೆ ಅದು ನಕಲಿ ಎಂಬ ಭಾವನೆ ಜನರಲ್ಲಿದೆ. ಹೀಗಾಗಿ ಹೀಗೆ ಯೋಚಿಸುತ್ತಾ ಮಗು ಒರಿಜಿನಲ್ ಪದದ ವಿರುದ್ದಾರ್ಥಕ ಪದವನ್ನು ಉಪಮೆಯಾಗಿ ಚೀನಾ ಎಂದು ಬರೆದಿದೆ.
ವಿದ್ಯಾರ್ಥಿಯ ಈ ಉತ್ತರ ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆ ಹುಟ್ಟು ಹಾಕಿದೆ. ಈ ಹುಡುಗ ಒಮ್ಮೆಗೆ ಸತ್ಯ ಹೇಳಿ ಬಿಟ್ಟ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇಷ್ಟೊಂದು ಸಣ್ಣ ಮಕ್ಕಳಿಗೆ ಇಷ್ಟು ಅಳವಾಗಿ ಯೋಚನೆ ಮಾಡುವ ಶಕ್ತಿ ಎಲ್ಲಿಂದ ಬರುತ್ತದೆ ಎಂದು ಒಬ್ಬರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಚೀನಿ ಉತ್ಪನ್ನಗಳಿಗೆ ಬೇಡಿಕೆ ಇದ್ದರೆ ಅವು ಚಂದ್ರನವರೆಗೂ ತಲುಪುತ್ತವೆ, ಇಲ್ಲದಿದ್ದರೆ ಕನಿಷ್ಠ ಸಂಜೆಯವರೆಗಾದರೂ ಇರುತ್ತದೆ ಎಂದು ಒಬ್ಬರು ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಇದು ಅದ್ಭುತ, ಪುಟ್ಟ ಮಕ್ಕಳ ಈ ಕ್ರಿಯೇಟಿವಿಟಿ ಯೋಚನೆ ಅದ್ಭುತವಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಮಗುವಿನ ಈ ಕ್ರಿಯೇಟಿವಿಟಿ ಬಗ್ಗೆ ನಿಮಗೇನನಿಸಿತು ಕಾಮೆಂಟ್ ಮಾಡಿ.
ಇದನ್ನೂ ಓದಿ:ಬೈಕ್‌ನಲ್ಲಿ 'ಸಾರೀ ಗರ್ಲ್ಸ್' ಬರಹ: ಪೊಲೀಸರ ಪ್ರಶ್ನೆಗೆ ಉತ್ತರಿಸಲಾಗದೆ ಮಜುಗರಪಟ್ಟು, ನಾಚಿಕೊಂಡ ಹುಡುಗ!
ಇದನ್ನೂ ಓದಿ:ಎಲ್ಲರೆದರು ವಧು ಕೊಟ್ಟ ಕಿಸ್‌ಗೆ ವರ ಶಾಕ್; ನಾಚ್ಕೊಂಡು ತಲೆ ತಗ್ಗಿಸಿದ ಯುವಕ! ವಿಡಿಯೋಗೆ 3.7 ಕೋಟಿ ವ್ಯೂವ್