Karnataka: ಪದವಿಯಲ್ಲಿನ್ನು ಕನ್ನಡ ಭಾಷೆ ಕಲಿಕೆ ಕಡ್ಡಾಯ ಅಲ್ಲ..!

By Kannadaprabha News  |  First Published Jan 24, 2022, 7:33 AM IST

*   ಉನ್ನತ ಶಿಕ್ಷಣ ಇಲಾಖೆ ಆದೇಶ
*  ವಿದ್ಯಾರ್ಥಿಗಳಿಗೆ ಈಗ ಬೇರೆ ಭಾಷೆ ಆಯ್ಕೆಗೆ ಅವಕಾಶ
*  ಆದೇಶ ಸ್ಪಷ್ಟವಿಲ್ಲ: ತಜ್ಞರಿಂದ ಆಕ್ಷೇಪ
 


ಬೆಂಗಳೂರು(ಜ.24):  ಪದವಿ(Graduation) ವ್ಯಾಸಂಗದಲ್ಲಿ ವಿದ್ಯಾರ್ಥಿಗಳು ‘ಕನ್ನಡ’ವನ್ನು(Kannada) ಒಂದು ಭಾಷೆಯಾಗಿ ಕಲಿಯುವುದನ್ನು ಕಡ್ಡಾಯಗೊಳಿಸದಂತೆ ಉನ್ನತ ಶಿಕ್ಷಣ ಇಲಾಖೆ(Department of Higher Education) ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ಪ್ರಸಕ್ತ ಶೈಕ್ಷಣಿಕ ಅವಧಿಯಲ್ಲಿ ಇಚ್ಛೆ ಇಲ್ಲದಿದ್ದರೂ ಈಗಾಗಲೇ ಕನ್ನಡವನ್ನು ಆಯ್ಕೆ ಮಾಡಿಕೊಂಡಿದ್ದವರಿಗೆ ತಮ್ಮಿಷ್ಟದ ಬೇರೆ ಭಾಷೆಗೆ ಬದಲಿಸಿಕೊಳ್ಳಲು ಅವಕಾಶ ದೊರೆಯಲಿದೆ ಎನ್ನಲಾಗುತ್ತಿದೆ.

ಪದವಿಯಲ್ಲಿ ಕನ್ನಡವನ್ನು ಕಡ್ಡಾಯವಾಗಿ ಒಂದು ಭಾಷೆಯಾಗಿ ಅಧ್ಯಯನ ಮಾಡಬೇಕೆಂದು ವಿದ್ಯಾರ್ಥಿಗಳಿಗೆ(Students) ಒತ್ತಡ ಮಾಡಬಾರದು. ಮುಂದಿನ ಆದೇಶದವರೆಗೂ ಇದನ್ನು ವಿದ್ಯಾರ್ಥಿಗಳ ಆಯ್ಕೆಗೆ ಬಿಡುವಂತೆ ಸೂಚಿಸಿ ಹೈಕೋರ್ಟ್‌(High Court of Karnataka) ನೀಡಿರುವ ಮಧ್ಯಂತರ ಆದೇಶದ ಹಿನ್ನೆಲೆಯಲ್ಲಿ ಉನ್ನತ ಶಿಕ್ಷಣ ಇಲಾಖೆ ಈ ಆದೇಶ ಮಾಡಿದೆ. ವಿದ್ಯಾರ್ಥಿಗಳು ಕನ್ನಡವನ್ನು ಒಂದು ಭಾಷೆಯಾಗಿ ಕಲಿಯಲು ಇಚ್ಛಿಸದಿದ್ದರೆ ಹೈಕೋರ್ಟ್‌ನ ಅಂತಿಮ ಆದೇಶದವರೆಗೂ ಅದನ್ನು ಕಡ್ಡಾಯಗೊಳಿಸದಂತೆ ನಿರ್ದೇಶನ ನೀಡಿದೆ.

Tap to resize

Latest Videos

Hijab Controversy: ಹಿಜಾಬ್‌ ವಿವಾದ ತಡೆಗೆ ಪಿಯುಸಿಗೂ ಸಮವಸ್ತ್ರ?

ಈ ಸಂಬಂಧ ಉನ್ನತ ಶಿಕ್ಷಣ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಜಿ.ಕುಮಾರ್‌ ನಾಯ್ಕ ಅವರು, ರಾಜ್ಯದ ಎಲ್ಲ ಸರ್ಕಾರಿ ಹಾಗೂ ಖಾಸಗಿ ವಿಶ್ವವಿದ್ಯಾಲಯಗಳು, ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರು, ಸರ್ಕಾರಿ, ಖಾಸಗಿ ಪದವಿ ಕಾಲೇಜುಗಳ ಪ್ರಾಂಶುಪಾಲರಿಗೆ ಆದೇಶ ಹೊರಡಿಸಿದ್ದಾರೆ.

ಈಗಲೂ ಆಯ್ಕೆ ಬದಲಿಸಬಹುದು:

ಒಂದು ವೇಳೆ ಯಾವುದೇ ವಿದ್ಯಾರ್ಥಿ ತಮಗೆ ಇಚ್ಛೆ ಇಲ್ಲದಿದ್ದರೂ ಕನ್ನಡವನ್ನು ಒಂದು ಭಾಷೆಯಾಗಿ ಅಧ್ಯಯನ ಮಾಡುತ್ತಿದ್ದಲ್ಲಿ ಅಂತಹವರು ತಮ್ಮಿಷ್ಟದ ಬೇರೆ ಭಾಷೆಯ ಅಧ್ಯಯನಕ್ಕೆ ಈಗಲೂ ಬದಲಿಸಿಕೊಳ್ಳಬಹುದು. ಆದರೆ, ಆಯ್ಕೆ ಮಾಡಿಕೊಂಡ ಭಾಷೆಯ ಪಠ್ಯವನ್ನು ಮೊದಲಿಂದಲೂ ಅಧ್ಯಯನ ಮಾಡಬೇಕಾಗುತ್ತದೆ. ಆದರೆ, ಹಾಜರಾತಿ ವಿಚಾರದಲ್ಲಿ ಕನ್ನಡ ಭಾಷಾ ಬೋಧನಾ ತರಗತಿಗಳ ಹಾಜರಾತಿಯನ್ನು ಆಯ್ಕೆ ಮಾಡಿಕೊಂಡ ಬೇರೆ ಭಾಷೆಯ ತರಗತಿ ಹಾಜರಾತಿಗೆ ಸರಿದೂಗಿಸಲಾಗುವುದು ಎಂದು ಹೇಳಿದ್ದಾರೆ.

ಆದೇಶ ಸ್ಪಷ್ಟವಿಲ್ಲ: ತಜ್ಞರಿಂದ ಆಕ್ಷೇಪ

ಉನ್ನತ ಶಿಕ್ಷಣ ಇಲಾಖೆಯ ಆದೇಶದಲ್ಲಿ ಸ್ಪಷ್ಟತೆ ಇಲ್ಲ. ಹೈಕೋರ್ಟ್‌ ಮಧ್ಯಂತರ ಆದೇಶದಿಂದ(Interim Order) ತರಾತುರಿಯಲ್ಲಿ ಆದೇಶ ಮಾಡಿದಂತಿದೆ. ಕನ್ನಡ ಒಂದು ಭಾಷೆಯಾಗಿ ಕಲಿಯುವುದು ಕಡ್ಡಾಯವಲ್ಲ ಎನ್ನುವುದಾದರೆ ಪ್ರಸಕ್ತ ಸಾಲಿನಲ್ಲಿ ಕೆಲ ವಿದ್ಯಾರ್ಥಿಗಳು ಇಚ್ಛೆ ಇಲ್ಲದಿದ್ದರೂ ಕನ್ನಡ ಕಲಿಯುತ್ತಿದ್ದಲ್ಲಿ ಅಂತಹವರು ತಮ್ಮಿಷ್ಟದ ಬೇರೆ ಭಾಷೆಗೆ ಬದಲಿಸಿಕೊಳ್ಳಲು ಅವಕಾಶ ಈ ವರ್ಷವೇ ಸಿಗಲಿದೆಯಾ? ಅಥವಾ ಇದು ಮುಂದಿನ ವರ್ಷಕ್ಕೆ ಅನ್ವಯಿಸುತ್ತದಾ ಎಂಬ ಗೊಂದಲಗಳು ಮೂಡಿವೆ ಎಂದು ಕೆಲ ಕಾಲೇಜು ಪ್ರಾಂಶುಪಾಲರು, ತಜ್ಞರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

SSLC Exam ಎಸ್‌ಎಸ್‌ಎಲ್‌ಸಿ ಪೂರ್ವ ಸಿದ್ಧತಾ ಪರೀಕ್ಷೆ ವೇಳಾಪಟ್ಟಿ ಪ್ರಕಟ

ಇನ್ಮುಂದೆ 6-8 ಕ್ಲಾಸ್‌ ಶಿಕ್ಷಕ ಹುದ್ದೆಗೆ ಪದವಿ ಕಡ್ಡಾಯ

ರಾಜ್ಯ ಸರ್ಕಾರಿ ಶಾಲೆಗಳಲ್ಲಿನ(Government Schools) 6ರಿಂದ 8ನೇ ತರಗತಿ ಬೋಧನೆಗೆ 15 ಸಾವಿರ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಸಂಬಂಧ ರಾಷ್ಟ್ರೀಯ ಶಿಕ್ಷಣ ನೀತಿಗೆ(National Education Policy) ಪೂರಕವಾಗಿ ಶಿಕ್ಷಕರ ನೇಮಕಾತಿ ನಿಯಮಗಳಲ್ಲಿ ಅನೇಕ ಬದಲಾವಣೆ ಮಾಡಿ ಸರ್ಕಾರ ಕರಡು ನಿಯಮಾವಳಿ ಪ್ರಕಟಿಸಿದೆ.

ಪ್ರಮುಖವಾಗಿ ಪ್ರತಿಯೊಂದು ವಿಷಯಕ್ಕೂ ಆಯಾ ವಿಷಯಗಳನ್ನು ಪದವಿಯಲ್ಲಿ(Degree) ಅಧ್ಯಯನ ಮಾಡಿರುವವರನ್ನು ನೇಮಿಸುವುದು, ನೇಮಕಾತಿಗೆ(Recruitment) ಸ್ಪರ್ಧಾತ್ಮಕ ಪರೀಕ್ಷೆ ಫಲಿತಾಂಶದ ಶೇ.50ರಷ್ಟು ಅಂಕ, ಅರ್ಜಿ ಸಲ್ಲಿಸಲು ಅರ್ಹತೆಗಾಗಿ ಪ್ರತಿ ವರ್ಷ ನಡೆಸುವ ಶಿಕ್ಷಕರ ಅರ್ಹತಾ ಪರೀಕ್ಷಾ (TET) ಫಲಿತಾಂಶದ ಶೇ.20ರಷ್ಟುಅಂಕ, ಪದವಿಯ ಶೇ.20 ಮತ್ತು ಬಿ.ಇಡಿ, ಡಿ.ಎಡ್‌ ಸೇರಿದಂತೆ ಅರ್ಹ ಶಿಕ್ಷಕರ ಶಿಕ್ಷಣದ ಶೇ.10ರಷ್ಟು ಅಂಕಗಳನ್ನು ಪರಿಗಣಿಸಲಾಗುತ್ತದೆ. ನೇಮಕಗೊಂಡವರಿಗೆ 14,550 ರಿಂದ 26,700 ರು.ವರೆಗೆ ಮೂಲ ವೇತನ ಶ್ರೇಣಿ ನಿಗದಿಪಡಿಸಲಾಗಿದೆ.

click me!