ವೃತ್ತಿಪರ ಕೋರ್ಸ್ ಗಳಲ್ಲಿ ಆಸಕ್ತಿ ಹೊಂದಿರುವವರಿಗೆ ಸಾಮಾಜಿಕ ಕಾರ್ಯದಲ್ಲಿ ಬ್ಯಾಚುಲರ್ ಪದವಿ ಮಾಡಲು ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯವು ಮುಂದಾಗಿದೆ.
ಬೆಂಗಳೂರು(ಜ.23): ಸಮಾಜ ಕಾರ್ಯಗಳಲ್ಲಿ ಆಸಕ್ತಿ ಹೊಂದಿರುವವರಿಗೆ ಹಾಗೂ ಕಾರ್ಪೋರೇಟ್ ಕಂಪನಿಗಳಲ್ಲಿ ಹಮ್ಮಿಕೊಳ್ಳಲಾಗುವ ಕಾರ್ಪೋರೇಟ್ ಸೋಷಿಯೋ ರೆಸ್ಪಾನ್ಸಿಬಿಲಿಟಿ (Corporate Social Responsibility) ಯಂಥ ಯೋಜನಗಳಲ್ಲಿ ಸಿಕ್ಕಾಪಟ್ಟೆ ಉದ್ಯೋಗ ಅವಕಾಶಗಳನ್ನು ಕಲ್ಪಿಸುವ ಪದವಿ BSW (Bachelor of Social Work). ಕರ್ನಾಟಕ ಸೇರಿ ದೇಶದ ಹಲವು ವಿಶ್ವವಿದ್ಯಾಲಯಗಳಲ್ಲಿ ಈ ಪದವಿಗೆ ಎಲ್ಲಿಲ್ಲದ ಬೇಡಿಕೆ ಇದೆ. ಇದನ್ನು ಮನಗೊಂಡ ಇಗ್ನೋ (Indira Gandhi National Open Universitty) ಸಹ ಈ ಪದವಿ ಆರಂಭಿಸಿದೆ. ಈ ಬಗ್ಗೆ ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ಪದವಿಗೆ ಸಂಬಂಧಿಸಿದ ಮಾಹಿತಿ ನೀಡಿದೆ.
ವರ್ಚುವಲ್ ಮೋಡ್‌ನಲ್ಲಿ (Virtual Mode) ಬ್ಯಾಚುಲರ್ ಕಾರ್ಯಕ್ರಮವನ್ನು ಆರಂಭಿಸಿದ್ದು, ವೃತ್ತಿಪರ ಕೋರ್ಸ್‌ಗಳಲ್ಲಿ ಆಸಕ್ತಿ ಹೊಂದಿರುವ ಅಭ್ಯರ್ಥಿಗಳಿಗೆ ಸಾಮಾಜಿಕ ಕಾರ್ಯದಲ್ಲಿ ಬ್ಯಾಚುಲರ್ ಪದವಿ ಕಾರ್ಯಕ್ರಮ (BSW) ಗಳನ್ನು ನೀಡುವ ಗುರಿಯನ್ನು ಇಗ್ನೋ ಹೊಂದಿದೆ. ಬದಲಾಗುತ್ತಿರುವ ಜಾಗತಿಕ ಸನ್ನಿವೇಶ ಮಾನವನ ಸಮಸ್ಯೆಗಳನ್ನು ಬಗೆಹರಿಸಲು ಈ ಕೋರ್ಸ್ ನೆರವಾಗಲಿದೆ. ಅಲ್ಲದೇ ಸಮಾಜದಲ್ಲಿ ಬದಲಾವಣೆ ತರುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂಬ ವಿಶ್ವಾಸವನ್ನು ಮುಕ್ತ ವಿವಿಯದ್ದು.
10+2 ಅಥವಾ ಪಿಯುಸಿ ಮುಗಿಸಿರುವ ಅರ್ಹ ಅಭ್ಯರ್ಥಿಗಳು ಈ ಪದವಿಗೆ ಅರ್ಜಿ ಸಲ್ಲಿಸಬಹುದು. ವಿದ್ಯಾರ್ಥಿಗಳು ignouiop.samarth.edu.in ಮೂಲಕ ಆನ್‌ಲೈನ್ ಕಾರ್ಯಕ್ರಮಕ್ಕೆ ಅರ್ಜಿ ಸಲ್ಲಿಸಬಹುದು. ಇಗ್ನೋ ಉಪ ಕುಲಪತಿ ಪ್ರೊ.ನಾಗೇಶ್ವರ್ ರಾವ್, ತುಮಕೂರು ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ.ವೈ.ಎಸ್.ಸಿದ್ದೇಗೌಡ, ಹಿರಿಯ ನಿವೃತ್ತ ಪ್ರೊಫೆಸರ್ ಮತ್ತು ಮಾಜಿ ರಿಜಿಸ್ಟ್ರಾರ್ ನಿಮ್ಹಾನ್ಸ್ ಬೆಂಗಳೂರು ಇಲ್ಲಿನ ಪ್ರೊ.ಕೆ.ಶೇಖರ್, ಪ್ರೊ. ಸಂಜಯ್ ಭಟ್, (ಸಮಾಜ ಕಾರ್ಯ ವಿಭಾಗದ ಪ್ರಾಧ್ಯಾಪಕರು, ದೆಹಲಿ ವಿಶ್ವವಿದ್ಯಾಲಯ) ಮತ್ತು ಪ್ರೊ. ರೋಸ್ ನೆಂಬಿಯಾಕ್ಕಿಮ್ (ನಿರ್ದೇಶಕರು, ಸ್ಕೂಲ್ ಆಫ್ ಸೋಶಿಯಲ್ ವರ್ಕ್ ಇಗ್ನೋ) ಇವರ ಸಮ್ಮುಖದಲ್ಲಿ ಈ ಕೋರ್ಸಿಗೆ ಈಗಾಗಲೇ ಚಾಲನೆ ನೀಡಲಾಗಿದೆ.
ಸಮಾಜಕಾರ್ಯದಲ್ಲಿ ಬ್ಯಾಚುಲರ್ ಪದವಿ ಕಾರ್ಯಕ್ರಮವು NGO, INGO, CSR ಮತ್ತು ಇತರ ವಕಾಲತ್ತು ಕ್ಷೇತ್ರಗಳಲ್ಲಿ ಉದ್ಯೋಗದಲ್ಲಿರುವ ಅಥವಾ ಉದ್ಯೋಗವನ್ನು ಅರಸುತ್ತಿರುವವರಿಗೆ ಸಹಾಯವಾಗಲಿದೆ. ಸಾಮಾಜಿಕ ಕ್ಷೇತ್ರಗಳಾದ ಆರೋಗ್ಯ, ಸಮುದಾಯ ಅಭಿವೃದ್ಧಿ (Community Development), ಶಿಕ್ಷಣ (Education), ಉದ್ಯಮ, ಸಮಾಲೋಚನೆ (Couselling), ಕುಟುಂಬ (Family), ತಿದ್ದುಪಡಿ ಸೆಟ್ಟಿಂಗ್, ಸಾಮಾಜಿಕ ರಕ್ಷಣೆ, ಮಹಿಳೆಯರು(Women), ಮಕ್ಕಳು, ಮಾನಸಿಕ ಆರೋಗ್ಯ ಕ್ಷೇತ್ರ (Mental Health Sector) ಮತ್ತು ಅಂಗವೈಕಲ್ಯ ಕ್ಷೇತ್ರಗಳಲ್ಲಿ ಉದ್ಯೋಗ ಮಾಡಲು ಅವಕಾಶ ಬಿಎಸ್‌ಡಬ್ಲ್ಯೂ ಪದವೀಧರರು ಅವಕಾಶ ಪಡೆಯುತ್ತಾರೆ. ಆಸಕ್ತರು ಅಧಿಕೃತ ವೆಬ್ಸೈಟ್ ignouiop.samarth.edu.in ಗೆ ಭೇಟಿ ನೀಡಿ ಈ ಕೋರ್ಸ್‌ಗೆ ಅರ್ಜಿ ಸಲ್ಲಿಸಬಹುದು. ಈ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾದಲ್ಲಿ ಅಧಿಕೃತ ವೆಬ್ಸೈಟ್-iop.ignouonline.ac.in ಗೆ ಭೇಟಿ ನೀಡಬಹುದು.
IGNOU MACSR: ಕಾರ್ಪೊರೇಟ್ ಸೋಷಿಯಲ್ ರೆಸ್ಪಾನ್ಸಿಬಿಲಿಟಿ ಎಂಎ ಕೋರ್ಸ್ ಆರಂಭ
ಮೂರನೇ ಬಾರಿ ಜನವರಿ ಸೆಶನ್ ಪ್ರವೇಶಾತಿಗೆ ನೋಂದಣಿ ದಿನಾಂಕ ವಿಸ್ತರಿಸಿದ ಇಗ್ನೋ: ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯವು (Indira Gandhi National Open University) 2022ರ ಜನವರಿ ಸೆಶನ್ ಪದವಿ ಮತ್ತು ಸ್ನಾತಕೋತ್ತರ ಪದವಿ ಮತ್ತು ಪಿಜಿ ಡಿಪ್ಲೋಮಾ (PG Diploma) ಮತ್ತು ಪಿಜಿ ಸರ್ಟಿಫಿಕೇಟ್ ಕೋರ್ಸ್ ಗಳ ಮರುನೋಂದಣಿ ಅರ್ಜಿ ಸಲ್ಲಿಕೆಯ ಅವಧಿಯನ್ನು ಮತ್ತೊಮ್ಮೆ ವಿಸ್ತರಿಸಲಾಗಿದೆ. ಆಸಕ್ತರು ಆನ್‌ಲೈನ್ ಮೂಲಕ ಜನವರಿ 31, 2022ರೊಳಗೆ ಅರ್ಜಿಯನ್ನು ಸಲ್ಲಿಸಬಹುದು. ಇಲ್ಲಿವರೆಗೆ ಇಗ್ನೋ ಜನವರಿ ಸೆಶನ್ ಅನ್ನು ಮೂರು ಬಾರಿ ವಿಸ್ತರಣೆ ಮಾಡಿದೆ. ಇದಕ್ಕೂ ಮುನ್ನ ಕಳೆದ ಡಿಸೆಂಬರ್ 15 ಮತ್ತು 31ರವರೆಗೆ ವಿಸ್ತರಿಸಿತು. ಆಸಕ್ತ ಅಭ್ಯರ್ಥಿಗಳು ನಿಗದಿತ ಶುಲ್ಕದೊಂದಿಗೆ ಅರ್ಜಿ ಸಲ್ಲಿಸಿ ಪ್ರವೇಶ ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್ಸೈಟ್ https://ignouadmission.samarth.edu.in/ ಗೆ ಭೇಟಿ ನೀಡಿ.