Akkamahadevi Womens University conspiracy: ಸರ್ಕಾರದಿಂದ ಅಕ್ಕ ಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಮುಚ್ಚುವ ಸಂಚು!

By Suvarna News  |  First Published Jan 23, 2022, 7:10 PM IST

ವಿಜಯಪುರದಲ್ಲಿ ಕಳೆದ 2 ದಶಕಗಳಿಂದ ನಾಡು ಹೆಮ್ಮೆ ಪಡುವಂತಹ ಕೆಲಸ ಮಾಡುತ್ತಿರುವ ಅಕ್ಕ ಮಹಾದೇವಿ ಮಹಿಳಾ ವಿಶ್ವವಿದ್ಯಾಲಯವನ್ನು ಈಗ ಏಕಾಏಕಿಯಾಗಿ ಕೊನೆಗಾಣಿಸುವ ಸಂಚು ನಡೆದಿದೆ. ಎಂಬ ಆರೋಪ ಕೇಳಿಬಂದಿದೆ.


ವಿಜಯಪುರ(ಜ.23): ವಿಜಯಪುರದಲ್ಲಿ ಕಳೆದ 2 ದಶಕಗಳಿಂದ ನಾಡು ಹೆಮ್ಮೆ ಪಡುವಂತಹ ಕೆಲಸ ಮಾಡುತ್ತಿರುವ ಕರ್ನಾಟಕ ರಾಜ್ಯ ಅಕ್ಕ ಮಹಾದೇವಿ ಮಹಿಳಾ ವಿಶ್ವವಿದ್ಯಾಲಯವನ್ನು (Karnataka State Akkamahadevi Women's University - KSAWU) ಈಗ ಏಕಾಏಕಿಯಾಗಿ ಕೊನೆಗಾಣಿಸುವ ಸಂಚು ನಡೆದಿದ್ದು ಇದು ಆಘಾತಕಾರಿಯಾಗಿದೆ. ರಾಜ್ಯದಾದ್ಯಂತ ಎಲ್ಲಾ ಸರ್ಕಾರಿ ಮಹಿಳಾ ಪದವಿ ಕಾಲೇಜುಗಳನ್ನು ತನ್ನ ವ್ಯಾಪ್ತಿಯಲ್ಲಿ ಹೊಂದಿರುವ ನಾಡಿನ ಏಕೈಕ ಮಹಿಳಾ ವಿಶ್ವವಿದ್ಯಾಲಯವನ್ನು ಈಗ ವಿಜಯಪುರ (Vijayapura) ಮತ್ತು ಬಾಗಲಕೋಟೆ (Bagalkote) ಜಿಲ್ಲೆಗಳ ಕೆಳಗೆ ಬರುವ ಎಲ್ಲ ಪದವಿ ಕಾಲೇಜುಗಳನ್ನು  ಒಳಗೊಳ್ಳುವಂತಹ ವಿಶ್ವವಿದ್ಯಾಲಯದ ಮಟ್ಟಕ್ಕೆ ಇಳಿಸಿ, ಅದನ್ನು ಸಹಶಿಕ್ಷಣ(Co-Education) ವಿಶ್ವವಿದ್ಯಾಲಯವನ್ನಾಗಿಸುವ ಹುನ್ನಾರ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ.

ಈ ಹಿನ್ನೆಲೆಯಲ್ಲಿ ಈ ಕ್ರಮವನ್ನು ಕೈಬಿಡುವಂತೆ ಒತ್ತಾಯಿಸಿ ಎಲ್ಲಾ ಮಹಿಳಾಪರ ಸಂಘಟನೆ, ಪ್ರಗತಿಪರ ಚಿಂತಕರು, ಹೋರಾಟಗಾರರು ಜನವರಿ 21ರಂದು ವಿರೋಧ ಪಕ್ಷದ ನಾಯಕರಾದ ಶ್ರೀ ಸಿದ್ದರಾಮಯ್ಯ ಅವರನ್ನು ಹಾಗೂ ಕೆಪಿಸಿಸಿಯ ರಾಜ್ಯಾಧ್ಯಕ್ಷರಾದ ಶ್ರೀ ಡಿ. ಕೆ. ಶಿವಕುಮಾರ್ ರವರನ್ನು ಒಂದು ನಿಯೋಗದಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ.

Tap to resize

Latest Videos

ಮಹಿಳಾ ವಿವಿಯ ಪ್ರಸಕ್ತ ಪರಿಸ್ಥಿತಿ ಹೇಗಿದೆಯೆಂದರೆ ಅಲ್ಲಿ ಅಧ್ಯಯನ ಮಾಡುತ್ತಿರುವ ಶೇಕಡಾ 75 ರಷ್ಟು ವಿದ್ಯಾರ್ಥಿನಿಯರ ಹಿನ್ನೆಲೆಯನ್ನು ಗಮನಿಸಿದರೆ ಮಹಿಳಾ ವಿಶ್ವವಿದ್ಯಾಲಯದ ಅವಶ್ಯಕತೆ ಮನದಟ್ಟಾಗುತ್ತದೆ. ಅವರಲ್ಲಿ ಒಂಟಿ ಮಹಿಳೆಯರು -  ವಿಚ್ಛೇದಿತರು, ವಿಧವೆಯರು, ಅಲ್ಪಸಂಖ್ಯಾತ ಹೆಣ್ಣುಮಕ್ಕಳೇ ಹೆಚ್ಚಿನವರು. ನಮ್ಮ ಗ್ರಾಮೀಣ ಪ್ರದೇಶಗಳಲ್ಲಿ ಇಂದಿಗೂ ಸಹ  ಮಹಿಳಾ ವಿದ್ಯಾಲಯಗಳಿದ್ದರೆ ಮಾತ್ರ ಇಂತಹ ಹೆಣ್ಣು ಮಕ್ಕಳು ವಿದ್ಯಾಭ್ಯಾಸ ಪಡೆದುಕೊಳ್ಳುವುದು ಸಾಧ್ಯವೆನ್ನುವಂತಹ ಪರಿಸ್ಥಿತಿ ಇದೆ. 

ವಾಸ್ತವ ಪರಿಸ್ಥಿತಿ ಹೀಗಿರುವಾಗ, ಬಹಳ ಕಷ್ಟದಿಂದ ಅಸ್ತಿತ್ವಕ್ಕೆ ಬಂದಿರುವ ವಿಶ್ವವಿದ್ಯಾಲಯವನ್ನು ಮತ್ತಷ್ಟು ಚೆನ್ನಾಗಿ ಕೆಲಸ ಮಾಡುವಂತೆ ಎಲ್ಲ ರೀತಿಯ ಪ್ರೋತ್ಸಾಹ, ಧನಸಹಾಯ ಕೊಡುವುದು ಬಿಟ್ಟು ಅದನ್ನು ಕೊನೆಗೊಳಿಸ ಹೊರಟಿರುವುದು ಸರ್ಕಾರದ ಮಹಿಳಾ ವಿರೋಧ ಧೋರಣೆಯನ್ನು ಎತ್ತಿ ತೋರಿಸುತ್ತದೆ ಎಂದು ನಿಯೋಗ ಆರೋಪಿಸಿದೆ.

IGNOU BSW PROGRAMME: ವರ್ಚುವಲ್ ಮೋಡ್‌ನಲ್ಲಿ BSW ಕೋರ್ಸ್ ಆರಂಭಿಸಿದ ಇಗ್ನೋ

ಈ ಹಿನ್ನೆಲೆಯಲ್ಲಿ ಈ ಕ್ರಮವನ್ನು ಕೈಬಿಡಬೇಕೆಂದು ಒತ್ತಾಯಿಸುತ್ತಿರುವ ಎಲ್ಲ ಮಹಿಳಾಪರ, ಪ್ರಗತಿಪರ ಚಿಂತಕರು, ಹೋರಾಟಗಾರರು ಜನವರಿ 21ರಂದು ವಿರೋಧ ಪಕ್ಷದ ನಾಯಕರನ್ನು ಭೇಟಿ ನೀಡಿ ಮಾತುಕತೆ ನಡೆಸಿದರು. ಸರ್ಕಾರದ  ಈ ನಡೆಯ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ  ಸಿದ್ದರಾಮಯ್ಯ ಮತ್ತು ಡಿಕೆಶಿ ಇದನ್ನು ತಡೆಯುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. 

ಮಹಿಳಾ ನಿಯೋಗ ಭೇಟಿಯಾದ ತಕ್ಷಣ ಶ್ರೀ ಸಿದ್ದರಾಮಯ್ಯನವರು ಉನ್ನತ ಶಿಕ್ಷಣ ಸಚಿವರಾದ ಶ್ರೀ ಅಶ್ವತ್ಥ ನಾರಾಯಣರನ್ನು ತಕ್ಷಣವೇ ಸಂಪರ್ಕಿಸಿದ್ದು, ಈ ವಿಷಯದ ಕುರಿತು ಸರಿಯಾದ ಮಾತುಕತೆಯಾಗದ ಹೊರತು ಖಂಡಿತವಾಗಿಯೂ ಮುಂದುವರೆಯುವುದಿಲ್ಲ ಎಂದು ಭರವಸೆ ನೀಡಿದ್ದಾರೆ. ಆದರೆ ಇಷ್ಟಕ್ಕೆ ಕೈ ಕಟ್ಟಿ ಕೂರುವ ಹಾಗಿಲ್ಲ, ಎಚ್ಚರ ಕಾಯ್ದುಕೊಳ್ಳ ಬೇಕಾಗಿದೆ ಎಂದು ಮಹಿಳಾ ನಿಯೋಗ ಹೇಳಿದೆ.

ನಿಯೋಗದಲ್ಲಿ ಮಾಜಿ ಸಚಿವರಾದ ಶ್ರೀಮತಿ ಲೀಲಾದೇವಿ ಆರ್ ಪ್ರಸಾದ್, ಮಹಿಳಾ ವಿವಿಯ ವಿಶ್ರಾಂತ ಉಪಕುಲಪತಿಗಳಾದ ಶ್ರೀಮತಿ ಸಬಿಹಾ ಭೂಮಿಗೌಡ, ಲೈಂಗಿಕ ಅಲ್ಪಸಂಖ್ಯಾತರ ಹೋರಾಟಗಾರರಾದ ಅಕ್ಕಯ್ ಪದ್ಮಶಾಲಿ,  ಹಾಗೂ ಮಹಿಳಾ ಹಕ್ಕು ಹೋರಾಟಗಾರರಾದ ಡಾ ಕೆ. ಶರೀಫಾ, ಡಾ. ವಸುಂಧರ ಭೂಪತಿ, ದು. ಸರಸ್ವತಿ, ಡಾ. ಎಚ್. ಜಿ. ಜಯಲಕ್ಷ್ಮಿ, ಅಖಿಲಾ ವಿದ್ಯಾಸಂದ್ರ, ಪ್ರತಿಭಾ, ಮಧು ಭೂಷಣ್, ಮಮತಾ, ಚಂದ್ರಾವತಿ ಮತ್ತಿತರರು ಇದ್ದರು.

ರಾಜ್ಯದ ಏಕೈಕ ಮತ್ತು ಪ್ರಾದೇಶಿಕ ಅಸಮತೋಲನ ನಿವಾರಣೆಗಾಗಿ ಎಸ್ಎಂ ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ಆರಂಭಿಸಲಾಗಿರುವ ವಿಜಯಪುರದ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯವನ್ನು ಮುಚ್ಚಲು ಸರಕಾರ ಮತ್ತು ಉನ್ನತ ಶಿಕ್ಷಣ ಇಲಾಖೆ ಹುನ್ನಾರ ನಡೆಸಿದೆ ಎಂದು ಈ ಹಿಂದೆ ಕೂಡ ಆರೋಪ ಕೇಳಿ ಬಂದಿತ್ತು.

UPSC Recruitment 2022: ಸಹಾಯಕ ಪ್ರಾಧ್ಯಾಪಕ ಸೇರಿ 14 ಹುದ್ದೆಗಳ ನೇಮಕಕ್ಕೆ ಯುಪಿಎಸ್‌ಸಿ ಅರ್ಜಿ

ಪ್ರಾದೇಶಿಕ ಅಸಮತೋಲನ ನಿವಾರಣೆಗಾಗಿ ಡಾ. ನಂಜುಂಡಪ್ಪ ನೀಡಿದ ವರದಿಯ ಆಧಾರದ ಮೇಲೆ ಹಿಂದುಳಿದ ವಿಜಯಪುರ ಜಿಲ್ಲೆಯಲ್ಲಿ ಮಹಿಳಾ ವಿಶ್ವವಿದ್ಯಾಲಯ ಆರಂಭಿಸಲಾಗಿದೆ. ಮಹಿಳೆಯರ ಶಿಕ್ಷಣದ ಪ್ರಗತಿಗಾಗಿ ಈ ವಿಶ್ವವಿದ್ಯಾಲಯವನ್ನು ಆರಂಭಿಸಲಾಗಿದೆ. ಆದರೆ, ಸಂಪನ್ಮೂಲ ಕೊರತೆಯ ನೆಪ ಹೇಳಿ ಈ ವಿಶ್ವವಿದ್ಯಾಲಯವನ್ನು ಮುಚ್ಚುವ ಹುನ್ನಾರ ನಡೆದಿದೆ ಎಂದು ಹೇಳಲಾಗುತ್ತಿದೆ.

ಮಹಿಳೆಯರಿಗೆ ಮೀಸಲಾಗಿರುವ ಈ ವಿಶ್ವವಿದ್ಯಾಲಯಕ್ಕೆ ಯಾವುದೇ ರೀತಿಯಿಂದ ಆದಾಯ ಬರುತ್ತಿಲ್ಲ. ಈ ಹಿನ್ನೆಲೆಯಲ್ಲಿ ಇದನ್ನು ಕೋ ಎಜುಕೇಶನ ಅಂದರೆ ಇತರ ವಿಶ್ವವಿದ್ಯಾಲಯಗಳಂತೆ ಪುರುಷರಿಗೂ ಅವಕಾಶ ಕಲ್ಪಿಸುವ ವಿಶ್ವವಿದ್ಯಾಲಯವಾಗಿ ಬದಲಾಯಿಸುವ ಹುನ್ನಾರ ನಡೆದಿದೆ. ಈಗಾಗಲೇ ಈ ನಿಟ್ಟಿನಲ್ಲಿ ಒಂದು ಸುತ್ತಿನ ಪ್ರಯತ್ನ ಕೂಡ ಮುಗಿದಿದೆ ಜನಪ್ರತಿನಿಧಿಗಳೊಂದಿಗೂ ಸರಕಾರ ಮಾತುಕತೆ ನಡೆಸಿದ್ದು, ಅವರ ಪ್ರತಿನಿಧಿಯೊಬ್ಬರು ಈಗಾಗಲೇ ಮಹಿಳಾ ವಿಶ್ವವಿದ್ಯಾಲಯದ ಕುಲಪತಿ ಜೊತೆಗೆ ಮಾತುಕತೆ ಕೂಡ ನಡೆಸಿದ್ದಾರೆ. ಅಲ್ಲದೇ, ಸರಕಾರದ ಮಟ್ಟದಲ್ಲಿ ಈ ಕುರಿತು ನಡಾವಳಿ ಕೂಡ ಆಗಿದೆ ಎಂದು ಹೇಳಲಾಗುತ್ತಿದೆ.

click me!