ಸೋರುವ ಶಾಲೆ: ಛತ್ರಿ ಹಿಡಿದೇ ಪಾಠ ಕೇಳುವ ವಿದ್ಯಾರ್ಥಿಗಳು!

By Kannadaprabha News  |  First Published Jul 8, 2023, 8:15 AM IST

ಇಲ್ಲಿನ ಸಮೀಪದ ಕೋಡೂರು ಗ್ರಾಮದ ಸರ್ಕಾರಿ ಪ್ರೌಢಶಾಲೆ ಮೇಲ್ಚಾವಣೆ ಶಿಥಿಲವಾಗಿ ಮಳೆ​ಗಾ​ಲ​ದಲ್ಲಿ ಸಂಪೂರ್ಣ ಸೋರು​ತ್ತಿದೆ. ಆದರೆ, ಶಿಕ್ಷಣ ಇಲಾಖೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ದಿವ್ಯನಿರ್ಲಕ್ಷ್ಯದಿಂದಾಗಿ ಧೋ ಎಂದು ನೀರು ಸುರಿ​ಯುವ ಕೊಠಡಿಗಳಲ್ಲೇ ವಿದ್ಯಾರ್ಥಿಗಳು ಛತ್ರಿ ಹಿಡಿದು ಪಾಠ ಕೇಳುವ ದುಸ್ಥಿತಿ ಎದುರಾಗಿದೆ!


ರಿಪ್ಪನ್‌ಪೇಟೆ (ಜು.8) : ಇಲ್ಲಿನ ಸಮೀಪದ ಕೋಡೂರು ಗ್ರಾಮದ ಸರ್ಕಾರಿ ಪ್ರೌಢಶಾಲೆ ಮೇಲ್ಚಾವಣೆ ಶಿಥಿಲವಾಗಿ ಮಳೆ​ಗಾ​ಲ​ದಲ್ಲಿ ಸಂಪೂರ್ಣ ಸೋರು​ತ್ತಿದೆ. ಆದರೆ, ಶಿಕ್ಷಣ ಇಲಾಖೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ದಿವ್ಯನಿರ್ಲಕ್ಷ್ಯದಿಂದಾಗಿ ಧೋ ಎಂದು ನೀರು ಸುರಿ​ಯುವ ಕೊಠಡಿಗಳಲ್ಲೇ ವಿದ್ಯಾರ್ಥಿಗಳು ಛತ್ರಿ ಹಿಡಿದು ಪಾಠ ಕೇಳುವ ದುಸ್ಥಿತಿ ಎದುರಾಗಿದೆ!

ಹೊಸನಗರ ಮುಖ್ಯ ರಸ್ತೆಯಲ್ಲಿರುವ ಕೋಡೂರು ಸರ್ಕಾರಿ ಪ್ರೌಢಶಾಲೆಯಲ್ಲಿ 8ನೇ ತರಗತಿಯಿಂದ 10ನೇ ತರಗತಿವರಗೆ ಗ್ರಾಮೀಣ ಪ್ರದೇಶದ 125 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. 6 ಜನ ಶಿಕ್ಷಕರು ಇದ್ದಾರೆ. 2022- 2023ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪಬ್ಲಿಕ್‌ ಪರೀಕ್ಷೆಯಲ್ಲಿ ಸರ್ಕಾರಿ ಪ್ರೌಢಶಾಲೆ ಶೇ.86ರಷ್ಟುಫಲಿತಾಂಶ ಪಡೆದಿದೆ. ಪ್ರತಿ​ಭಾ​ವಂತ ವಿದ್ಯಾ​ರ್ಥಿ​ಗ​ಳಿರುವ ಈ ಪ್ರೌಢಶಾಲೆಯಲ್ಲಿ ಮೇಲ್ಚಾ​ವ​ಣಿಯೇ ಸರಿ​ಯಾ​ಗಿ​ಲ್ಲ. ಮಳೆ ಬಂದ​ರೆ ನೀರು ಸುರಿ​ದಂತೆ ಸೋರು​ತ್ತದೆ. ಸಂಪೂರ್ಣ ಶಿಥಿಲಗೊಂಡಿರುವ ಈ ಶಾಲೆ ಬಗ್ಗೆ ಎಸ್‌ಡಿಎಂಸಿ ಮತ್ತು ಮುಖ್ಯೋಪಾಧ್ಯಾಯರು, ಕ್ಷೇತ್ರ ಶಿಕ್ಷಣಾಧಿಕಾರಿ ಗಮನಕ್ಕೆ ತರಲಾಗಿದೆ. ಶೀಘ್ರ ಸಮಸ್ಯೆ ಬಗೆ​ಹ​ರಿಸಿ ಎಂದು ಒತ್ತಾ​ಯಿ​ಸ​ಲಾ​ಗಿದೆ. ಆದರೂ ಗಮನಹರಿಸದೇ ಶಾಲೆ, ವಿದ್ಯಾ​ರ್ಥಿ​ಗ​ಳನ್ನು ನಿರ್ಲ​ಕ್ಷಿ​ಸಿ​ದ್ದಾರೆ. ಪರಿ​ಣಾಮ ಶಾಲೆ ದುರಾವಸ್ಥೆಗೆ ತಲು​ಪಿದೆ.

Tap to resize

Latest Videos

undefined

ಬಾಗಲಕೋಟೆ: ನೋಡ ಬನ್ನಿ ಹಳಿಂಗಳಿ ಸರ್ಕಾರಿ ಶಾಲೆ..!

ಛತ್ರಿ ಹಿಡಿದೇ ಕುಳಿ​ತು​ಕೊ​ಳ್ಳ​ಬೇ​ಕು:

ಕಳೆದ ವರ್ಷದಲ್ಲಿ ತಾಲೂಕಿನಲ್ಲಿ ಸುರಿದ ಭಾರಿ ಮಳೆಯಿಂದಾಗಿ ಕೋಡೂರು ವ್ಯಾಪ್ತಿಯಲ್ಲಿ ಸಾಕಷ್ಟುಹಾನಿ ಸಂಭವಿಸಿದೆ. ಮಳೆಹಾನಿ ಪ್ರದೇಶದ ವೀಕ್ಷಣೆಗಾಗಿ ಭೇಟಿ ನೀಡಿದ ರಾಜ್ಯ ಗೃಹ ಸಚಿವ ಮತ್ತು ಶಾಸಕರಾಗಿ​ದ್ದ ಆರಗ ಜ್ಞಾನೇಂದ್ರ ಮತ್ತು ಜಿಲ್ಲಾ ತಾಲೂಕುಮಟ್ಟದ ಅಧಿಕಾರಿಗಳ ತಂಡಕ್ಕೆ ಈ ಶಾಲಾ ಮೇಲ್ಚಾವಣಿಯ ಶಿಥಿಲಗೊಂಡಿರುವ ಬಗ್ಗೆ ಮನವಿ ನೀಡಲಾಗಿದೆ. ಮಳೆಹಾನಿ ಪರಿಹಾರದಡಿ ಶಾಲೆಯ ಮೇಲ್ಛಾವಣಿ ದುರಸ್ತಿಗೊಳಿಸುವ ಕಾಮಗಾರಿ ಪಟ್ಟಿಗೆ ಸೇರಿಸಿ, ಅನುಮೋದನೆಗೆ ಕಳುಹಿಸಲಾಗಿದೆ ಎನ್ನಲಾಗುತ್ತಿದೆ. ಆದ​ರೆ, ಈ ವರೆಗೂ ಮೇಲ್ಚಾವಣೆ ದುರಸ್ತಿಗೆ ಹಣ ಬಿಡುಗಡೆಯಾಗಿಲ್ಲ. ಪ್ರೌಢಶಾಲೆ ವಿದ್ಯಾರ್ಥಿಗಳು ಮಾತ್ರ ಮಳೆ​ಗಾ​ಲ​ದಲ್ಲಿ ಕೊಠಡಿಯಲ್ಲಿ ಛತ್ರಿ ಹಿಡಿದೇ ಕುಳಿತು ಪಾಠ ಕೇಳುವಂಥ ಸಂಕಟ, ಕಿರಿಕಿರಿ ತಪ್ಪಿ​ಲ್ಲ ಎಂಬುದು ವಿದ್ಯಾ​ರ್ಥಿ​ಗಳು, ಪೋಷ​ಕರ ಆಕ್ರೋಶ.

ಮೇಲ್ಚಾ​ವಣಿ ಮರ​ಗಳು ಗೆದ್ದಲು ಪಾಲು:

ತರಗತಿ ಕೊಠಡಿಯ ಮೇಲ್ಚಾವಣಿ ಮರದ ರೀಪ್‌-ಪಕಾಶಿಗಳು ಗೆದ್ದಲು ತಿಂದು ಹಾಳಾಗಿಹೋಗಿವೆ. ಮಳೆ-ಗಾಳಿಯಿಂದಾಗಿ ಹೆಂಚುಗಳು ಎಲ್ಲಿ ಮಕ್ಕಳ ತಲೆಗಳ ಮೇಲೆ ಬೀಳುತ್ತವೋ ಎಂಬ ಭಯ ನಿರಂತರ ಕಾಡು​ತ್ತಿದೆ. ಶಿಕ್ಷ​ಕರು ಕೂಡ ಇದೇ ಆತಂಕ​ದಿಂದ ಮೇಲ್ಚಾ​ವಣಿಯತ್ತ ನೋಡುತ್ತ ಪಾಠ ಮಾಡುತ್ತಿದ್ದಾರೆ. ಒಡೆದ ಹಾಗೂ ಸರಿದ ಹೆಂಚುಗಳ ಸಂದಿ​ಯಿಂದ ಮಳೆಹನಿಗಳು ಪಠ್ಯ​ಪುಸ್ತಕ, ನೋಟ್‌ಬುಕ್‌ಗಳ ಮೇಲೆ ಬೀಳು​ತ್ತಿದ್ದು, ಬರವಣಿಗೆ ಅಳಿಸಿ ಹೋಗುವ ಸಮಸ್ಯೆ ಎದು​ರಾ​ಗಿದೆ. ಕೊಠಡಿಯಲ್ಲಿ ಗಾಳಿ, ಚಳಿ ಜೊತೆಗೆ ಮಳೆನೀರು ಸೋರಿಕೆಯಾಗಿ ಮಕ್ಕಳ ಕಾಲಿನ ಬುಡ​ದಲ್ಲೇ ಹರಿ​ಯು​ತ್ತದೆ. ತಲೆಯ ಮೇಲೆ ನೀರು ಜಿನುಗಿ ಅರೋಗ್ಯವಂತ ಮಕ್ಕಳು ಶೀತ, ಜ್ವರ​ದಂಥ ಅನಾರೋಗ್ಯಕ್ಕೂ ತುತ್ತಾಗುವ ಆತಂಕ ತಪ್ಪು​ತ್ತಿಲ್ಲ. ಹೀಗಾ​ದರೆ, ಶಿಕ್ಷ​ಕರ ಬೋಧ​ನೆ ಮಕ್ಕಳ ಮನ​ಸಿನ ಮೇಲೆ ಪರಿ​ಣಾ​ಮ ಬೀರು​ವು​ದೇ?

ಶಹಾಪುರ: ಬೆನಕನಹಳ್ಳಿ ಶಾಲೆ ಬಯಲು ಶೌಚ ಮುಕ್ತ ಆಗೋದು ಯಾವಾಗ?

ಇನ್ನಾದರೂ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ರಾಜ್ಯ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ಮತ್ತು ಜಿಲ್ಲಾಧಿಕಾರಿ, ಜಿಲ್ಲಾ ಶಿಕ್ಷಣಾಧಿಕಾರಿಗಳು ಕೂಡಲೇ ಇತ್ತ ಗಮನಹರಿಸಬೇ​ಕಾದ ಅನಿ​ವಾ​ರ್ಯತೆ ಇದೆ. ವಿದ್ಯಾರ್ಥಿಗಳು, ಶಿಕ್ಷ​ಕ​ರ ರಕ್ಷಣೆ ಜೊತೆಗೆ ಶಿಥಿಲ ಸರ್ಕಾರಿ ಪ್ರೌಢಶಾಲೆಯ ದುರಸ್ತಿಗೆ ಅಗ​ತ್ಯ ​ಕ್ರ​ಮ​ಗ​ಳನ್ನು ಜರು​ಗಿ​ಸಬೇಕಿದೆ.

click me!