Karnataka SSLC Result 2023 : ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದ ಶ್ರೀಲಹರಿಗೆ ವೈದ್ಯೆಯಾಗುವ ಕನಸು

By Kannadaprabha News  |  First Published May 8, 2023, 10:55 PM IST

ಎಸ್‌ಎಸ್‌ಎಲ್ಸಿ ವಾರ್ಷಿಕ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು, ಇಲ್ಲಿನ ವೆಂಕಟರಮಣ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಶ್ರೀಲಹರಿ ಎಸ್‌. ದೇವಾಡಿಗ 625ರಲ್ಲಿ 624 ಅಂಕಗಳಗಳನ್ನು ಪಡೆದು ರಾಜ್ಯಕ್ಕೆ ದ್ವಿತೀಯ ಹಾಗೂ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ್ದಾರೆ.


ಶ್ರೀಕಾಂತ ಹೆಮ್ಮಾಡಿ

ಕುಂದಾಪುರ (ಮೇ.8) : ಎಸ್‌ಎಸ್‌ಎಲ್ಸಿ ವಾರ್ಷಿಕ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು, ಇಲ್ಲಿನ ವೆಂಕಟರಮಣ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಶ್ರೀಲಹರಿ ಎಸ್‌. ದೇವಾಡಿಗ 625ರಲ್ಲಿ 624 ಅಂಕಗಳಗಳನ್ನು ಪಡೆದು ರಾಜ್ಯಕ್ಕೆ ದ್ವಿತೀಯ ಹಾಗೂ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ್ದಾರೆ.

Tap to resize

Latest Videos

undefined

ಕುಂದಾಪುರ ವೆಂಕಟರಮಣ ಆಂಗ್ಲ ಮಾಧ್ಯಮ ಶಾಲೆ(Kundapur Venkataramana English Medium School)ಯ ವಿದ್ಯಾರ್ಥಿನಿ ಶ್ರೀ ಲಹರಿ(Srilahari devadiga), ಹೆಮ್ಮಾಡಿ ಜಾಲಾಡಿಯ ನಿವಾಸಿ ಶ್ರೀಧರ ದೇವಾಡಿಗ ಹಾಗೂ ಲಲಿತಾ ಎಸ್‌. ದೇವಾಡಿಗ ಅವರ ಕಿರಿಯ ಪುತ್ರಿ, ತಂದೆ ಶ್ರೀಧರ ದೇವಾಡಿಗ ವಾದ್ಯ ತಂಡ ನಿರ್ವಹಿಸುತ್ತಿದ್ದರೆ, ತಾಯಿ ಲಲಿತಾ ಎಸ್‌. ದೇವಾಡಿಗ ಅವರು ನಗರ ಯೋಜನಾ ಪ್ರಾಧಿಕಾರದಲ್ಲಿ ಬೆರಳಚ್ಚು ತಜ್ಞರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.

SSLC Toppers 2023 ಇವರೇ ನೋಡಿ: ಪೂರಕ ಪರೀಕ್ಷೆಗೆ ಮೇ 15ರೊಳಗೆ ಅರ್ಜಿ ಸಲ್ಲಿಸಿ

ಪಡೆದ ಅಂಕಗಳು:

ಶ್ರೀಲಹರಿ ಸಂಸ್ಕೃತದಲ್ಲಿ 125, ಕನ್ನಡ 100, ಇಂಗ್ಲಿಷ್‌ 100, ವಿಜ್ಞಾನ 100, ಸಮಾಜ 100, ಗಣಿತದಲ್ಲಿ 99 ಅಂಕ ಪಡೆದಿದ್ದಾರೆ.

ವಿದ್ಯಾರ್ಥಿನಿ ಶ್ರೀಲಹರಿ ಆಯಾ ದಿನಗಳ ಪಾಠವನ್ನು ಆಯಾ ದಿನದಲ್ಲೇ ಓದಿ ಮುಗಿಸುತ್ತಿದ್ದು, ಯಾವುದೇ ಟ್ಯೂಶನ್‌ ತರಗತಿಗಳಿಗೆ ಹೋಗಿಲ್ಲ. ಪರೀಕ್ಷಾ ದಿನಗಳಲ್ಲಿ ಹೆಚ್ಚು ಓದುತ್ತಿದ್ದು, ತನ್ನ ಈ ಸಾಧನೆಗೆ ಅದುವೇ ಭದ್ರಬುನಾದಿ ಎಂದು ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.

ವೈದ್ಯೆಯಾಗುವ ಬಯಕೆ

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನಿಯಾದ ವಿದ್ಯಾರ್ಥಿನಿ ಶ್ರೀಲಹರಿಗೆ ವೈದ್ಯೆಯಾಗುವ ಕನಸಿದೆ. ಈ ಕನಸಿನ ನನಸಿಗಾಗಿಯೇ ಪಿಯುಸಿಯಲ್ಲಿ ವಿಜ್ಞಾನ ವಿಭಾಗ ಆಯ್ಕೆ ಮಾಡಿಕೊಳ್ಳುತ್ತೇನೆ ಎಂದಿದ್ದಾರೆ.

620ಕ್ಕಿಂತ ಅಧಿಕ ಅಂಕದ ನಿರೀಕ್ಷೆ ಇತ್ತು. ಜಿಲ್ಲೆಗೆ ಪ್ರಥಮ ಸ್ಥಾನಿಯಾಗಿರುವುದು ಖುಷಿ ತಂದಿದೆ. ನನ್ನ ಈ ಸಾಧನೆಗೆ ನನ್ನ ಶಿಕ್ಷಕರು, ತಂದೆ-ತಾಯಿ ಕಾರಣ.

ಶ್ರೀಲಹರಿ, ವಿದ್ಯಾರ್ಥಿನಿ ವೆಂಕಟರಮಣ ಆಗ್ಲ ಮಾಧ್ಯಮ ಶಾಲೆ ಕುಂದಾಪುರ

ಕರ್ನಾಟಕ ಎಸ್‌ಎಸ್‌ಎಲ್‌ಸಿ 2023ರ ಫಲಿತಾಂಶ ಪ್ರಕಟ: ಚಿತ್ರದುರ್ಗ ಪ್ರಥಮ, ಮಂಡ್ಯ 2ನೇ ಸ್ಥಾನ 

ಮಗಳ ಸಾಧನೆಯಿಂದ ಬಹಳ ಸಂತಸವಾಗಿದೆ. ಅವಳ ಪರಿಶ್ರಮವೇ ಈ ಸಾಧನೆಗೆ ಕಾರಣ. ಯಾವುದೇ ಟ್ಯೂಶನ್‌ ಗೆ ಹೋಗದೆ ಅಂದಿನ ಪಾಠ ಅಂದಿನ ದಿನವೇ ಶ್ರದ್ಧೆಯಿಂದ ಓದುತ್ತಿದ್ದಳು.

ಲಲಿತಾ ಎಸ್‌. ದೇವಾಡಿಗ, ತಾಯಿ

click me!