ಕರ್ನಾಟಕ ಎಸ್‌ಎಸ್‌ಎಲ್‌ಸಿ 2023ರ ಫಲಿತಾಂಶ ಪ್ರಕಟ: ಚಿತ್ರದುರ್ಗ ಪ್ರಥಮ, ಮಂಡ್ಯ 2ನೇ ಸ್ಥಾನ

Published : May 08, 2023, 10:24 AM ISTUpdated : May 08, 2023, 10:52 AM IST
ಕರ್ನಾಟಕ ಎಸ್‌ಎಸ್‌ಎಲ್‌ಸಿ 2023ರ ಫಲಿತಾಂಶ ಪ್ರಕಟ: ಚಿತ್ರದುರ್ಗ ಪ್ರಥಮ, ಮಂಡ್ಯ 2ನೇ ಸ್ಥಾನ

ಸಾರಾಂಶ

ಕರ್ನಾಟಕ SSLC ಫಲಿತಾಂಶ 2023ರ ಫಲಿತಾಂಶ ಸೋಮವಾರ (ಮೇ 8) ಪ್ರಕಟವಾಗಿದ್ದು, ಶೇಕಡಾ 83.89 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಇದರಲ್ಲಿ ಗ್ರಾಮೀಣ ವಿದ್ಯಾರ್ಥಿಗಳೇ ಮೇಲುಗೈ ಸಾಧಿಸಿದ್ದಾರೆ.

ಬೆಂಗಳೂರು (ಮೇ.8): ಕರ್ನಾಟಕ SSLC ಫಲಿತಾಂಶ 2023ರ ಫಲಿತಾಂಶ ಸೋಮವಾರ (ಮೇ 8) ಪ್ರಕಟವಾಗಿದ್ದು, ಶೇಕಡಾ 83.89 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಇದರಲ್ಲಿ ಗ್ರಾಮೀಣ ವಿದ್ಯಾರ್ಥಿಗಳೇ ಮೇಲುಗೈ ಸಾಧಿಸಿದ್ದಾರೆ.

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ (KARNATAKA SCHOOL EXAMINATION AND ASSESSMENT BOARD- KSEAB) ಪ್ರಕಟಣೆಯಲ್ಲಿ ತಿಳಿಸಿದೆ. ಇಂದು 11 ಗಂಟೆಯ ನಂತರ ಫಲಿತಾಂಶ ಜಾಲಾತಾಣದಲ್ಲಿ ಲಭ್ಯವಾಗಲಿದೆ. www.karresults.nic.in ಲಭ್ಯವಾಗಲಿದೆ. ಕರ್ನಾಟಕ SSLC ಬೋರ್ಡ್ ಪರೀಕ್ಷೆಯಲ್ಲಿ ಈ ಬಾರಿ ಒಟ್ಟು 8 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಜರಾಗಿದ್ದರು.

ಇಂದು ಎಸ್​ಎಸ್​ಎಲ್​ಸಿ ಫಲಿತಾಂಶ ಪ್ರಕಟ, ಇಲ್ಲಿದೆ ಅಪ್ಡೇಟ್ಸ್​​

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಅಧ್ಯಕ್ಷ ರಾಮನಾಥ್ ಮಾತನಾಡಿ, ಶೇಕಡಾ 83.89 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಶೇಕಡಾ 87.87 ರಷ್ಟು ವಿದ್ಯಾರ್ಥಿನಿಯರು ಉತ್ತೀರ್ಣರಾಗಿದ್ದು, ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಈ ಬಾರಿ 8,35,102 ಜನ ವಿದ್ಯಾರ್ಥಿಗಳ ಹಾಜರು ಆಗಿದ್ದರು. 7,00,619 ವಿದ್ಯಾರ್ಥಿಗಳು ಉತ್ತಿರ್ಣರಾಗಿದ್ದಾರೆ ಎಂದು ಮಾಹಿತಿ ನೀಡಿದರು.

ಗ್ರಾಮೀಣ ವಿದ್ಯಾರ್ಥಿಗಳ ಮೇಲುಗೈ:  ಗ್ರಾಮೀಣ ಭಾಗದಲ್ಲಿ ಶೇ.87 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ನಗರ ಪ್ರದೇಶದ ಮಕ್ಕಳಿಗಿಂತ ಗ್ರಾಮೀಣ ಪ್ರದೇಶದಲ್ಲಿನ ಹೆಚ್ಚಿನ ಫಲಿತಾಂಶ ಲಭ್ಯವಾಗಿದೆ. ಗ್ರಾಮೀಣ ಭಾಗದಲ್ಲಿ ಶೇ.87 ಹಾಗೂ ನಗರ ಪ್ರದೇಶದಲ್ಲಿ ಶೇ.79 ಫಲಿತಾಂಶ ಸಿಕ್ಕಿದೆ.  ಸರ್ಕಾರಿ ಶಾಲೆಗಳಲ್ಲಿ ಶೇಕಡ 86.74 ಉತ್ತಮ ಫಲಿತಾಂಶ ಲಭ್ಯವಾಗಿದೆ.  ಅನುದಾನ ರಹಿತ ಶಾಲೆಗಳಲ್ಲಿ ಶೇ.90.89 ಫಲಿತಾಂಶ ಲಭ್ಯವಾಘಿದೆ. ಅನುದಾನಿತ ಶಾಲೆಯಲ್ಲಿ 85.64% ಫಲಿತಾಂಶ ಸಿಕ್ಕಿದೆ. ಕನ್ನಡದಲ್ಲಿ  14,983  ವಿದ್ಯಾರ್ಥಿಗಳು 125  ಅಂಕ ಪಡೆದಿದ್ದಾರೆ.

  • ನಾಲ್ಕು ವಿದ್ಯಾರ್ಥಿಗಳು ಶೇ.100 ಫಲಿತಾಂಶ: (625 ಕ್ಕೆ 625 ಅಂಕ ಟಾಪರ್ಸ್‌).
  • 625-  ಭೂಮಿಕ ಪೈ, ನ್ಯೂ ಮೆಕಾಲೆ ಇಂಗ್ಲೀಷ್ ಸ್ಕೂಲ್, ಹೊಸೂರು ರೋಡ್ , ಬೆಂಗಳೂರು
  • 625 - ಯಶಸ್ಸ್ ಗೌಡ, ಬಾಲಗಂಗಾಧರ ಸ್ವಾಮಿ ಹೈಸ್ಕೂಲ್ ಚಿಕ್ಕಬಳ್ಳಾಪುರ
  • 625 - ಅನುಪಮ ಶ್ರೀಶೈಲ್ ಹಿರಿಹೋಳಿ, ಶ್ರೀಕಂಠೇಶ್ವರ ಪ್ರೌಢಶಾಲೆ, ಸೌದತ್ತಿ, ಬೆಳಗಾವಿ ಜಿಲ್ಲೆ
  • 625- ಭೀಮನಗೌಡ ಹನುಮಂತ ಗೌಡ ಬೀರಾದರ್ ಪಾಟೀಲ್, ಆಕ್ಸ್‌ಫರ್ಡ್‌ ಇಂಗ್ಲೀಷ್‌ ಹೈಸ್ಕೂಲ್, ಮುದ್ದೆಬೀಹಾಳ

ಸರ್ಕಾರಿ ಶಾಲೆಯಲ್ಲಿ ಉತ್ತಮ ಫಲಿತಾಂಶ:  61,003 ವಿದ್ಯಾರ್ಥಿಗಳು ಶೇ.90ರಿಂದ 100 ಶೇಕಾಡವಾರು ಅಂಕ ಪಡೆದಿದ್ದಾರೆ. 1,517 ಸರ್ಕಾರಿ ಶಾಲೆಗಳು 100ಕ್ಕೆ 100 ರಿಸರ್ಲ್ಟ್ ಪಡೆದಿದ್ದಾರೆ. ಯಾವುದೇ ಸರ್ಕಾರಿ ಶಾಲೆಯಲ್ಲಿ ಶೂನ್ಯ ಫಲಿತಾಂಶ ಇಲ್ಲ. ಆದರೆ, ಖಾಸಗಿ ಮತ್ತು ಅನುದಾನಿತ ಶಾಲೆಗಳು ಸೇರಿ ಒಟ್ಟು 34 ಶಾಲೆಗಳಲ್ಲಿ ಶೂನ್ಯ ಫಲಿತಾಂಶವಾಗಿದೆ. 

ಚಿತ್ರದುರ್ಗ ಪ್ರಥಮ, ಯಾದಗಿರಿ ಕೊನೆಯ ಸ್ಥಾನ: ಚಿತ್ರದುರ್ಗ ಜಿಲ್ಲೆ ಹೆಚ್ಚಿನ ಫಲಿತಾಂಶ ಲಭ್ಯವಾಗಿದ್ದು, ಶೇ.96 ಫಲಿತಾಂಶದೊಂದಿಗೆ ಪ್ರಥಮ ಸ್ಥಾನದಲ್ಲಿದೆ. 
ಮಂಡ್ಯ ಜಿಲ್ಲೆಯು ಶೇಕಡಾ 96.74 ಫಲಿತಾಂಶ ಪಡೆದಿದ್ದು, 2ನೇ ಸ್ಥಾನ ಪಡೆದಿದೆ. ಹಾಸನ 96,.68 ಸ್ಥಾನದೊಂದಿಗೆ 3ನೇ ಸ್ಥಾನ ಪಡೆದಿದೆ. ಉಳಿದಂತೆ ಕೊನೆಯ ಸ್ಥಾನದಲ್ಲಿ ಯಾದಗಿರಿ ಜಿಲ್ಲೆಯಿದ್ದು, ಶೇ.75.49 ಫಲಿತಾಂಶವನ್ನು ಪಡೆದುಕೊಂಡಿದೆ.

ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್‌ ಮಾಡಿ: 
ಪರೀಕ್ಷಾ ಫಲಿತಾಂಶ ನೋಡಲು ವಿದ್ಯಾರ್ಥಿಗಳು ಅನುಸರಿಸಬೇಕಾದ ಮಾಹಿತಿ ಇಲ್ಲಿದೆ.
ಅಧಿಕೃತ ವೆಬ್‌ಸೈಟ್  www.karresults.nic.in ಗೆ ಭೇಟಿ 
ಮುಖಪುಟದಲ್ಲಿ ಕರ್ನಾಟಕ SSLC 2023 ಫಲಿತಾಂಶ ಲಿಂಕ್ ಅನ್ನು ಒತ್ತಿರಿ
ತೆರೆಯುವ ಹೊಸ ಪುಟದಲ್ಲಿ ನಿಮ್ಮ ನೋಂದಣಿ ಸಂಖ್ಯೆಯನ್ನು ನಮೂದಿಸಿ ಮತ್ತು ವಿವರಗಳನ್ನು ಸಲ್ಲಿಸಿ
ಫಲಿತಾಂಶವನ್ನು ಪರಿಶೀಲಿಸಿ ಮತ್ತು ಡೌನ್‌ಲೋಡ್ ಮಾಡಿಟ್ಟುಕೊಳ್ಳಿ

ಕರ್ನಾಟಕದಲ್ಲಿ ಪ್ರಧಾನಿ ಮೋದಿ ಪ್ರಚಾರ ಅಂತ್ಯ: 18 ಸಮಾವೇಶ, 6 ರೋಡ್‌ ಶೋಗಳ ಮಾಹಿತಿ ಇಲ್ಲಿದೆ!

ಯಶಸ್‌ಗೌಡ ಟಾಪರ್ ಆಗಲು ಶ್ರಮ ಹೇಗಿತ್ತು?
ನಾನು ಟಾಪರ್‌ ಆಗ್ತೀನಿ ಎನ್ನುವ ನಂಬಿಕೆಯಿತ್ತು. ಇನ್ನಿ ನಿರ್ಮಲಾನಂದ ಸ್ವಾಮೀಜಿ ಆಶೀರ್ವಾದ, ಮನೆಯವರ ಆಶೀರ್ವಾದ ಮತ್ತು ಪ್ರೋತ್ಸಾಹದಿಂದ ಈ ಫಲಿತಾಂಶ ಪಡೆಯಲು ಸಾಧ್ಯವಾಗಿದೆ.  ಹಾರ್ಡ್‌ವರ್ಕ್‌ ಜೊತೆಗೆ ಸ್ಮಾರ್ಟ್‌ ವರ್ಕ್‌ ಕೂಡ ಮಾಡಿದ್ದೆನು. ಶಿಕ್ಷಕರಿಂದ 6.30ರವರೆಗೆ ಡೌಟ್‌ ಕೇಳಿ ಪರಿಹರಿಸಿಕೊಳ್ಳುತ್ತಿದ್ದೆನು. ಮನೆಯಲ್ಲಿಯೂ ಕೂಡ ಶ್ರಮವಹಿಸಿ ಓದುತ್ತಿದ್ದೆನು. ಮುಂದೆ ನಾನು ಇಂಜಿನಿಯರ್‌ ಆಗಬೇಕು ಎಂದುಕೊಂಡಿದ್ದೇನೆ ಎಂದು ಎಸ್‌ಎಸ್‌ಎಲ್‌ಸಿ ಟಾಪರ್‌ ಯಶಸ್‌ಗೌಡ ತಿಳಿಸಿದರು.

PREV
Read more Articles on
click me!

Recommended Stories

1ನೇ ತರಗತಿ ದಾಖಲಾತಿಗೆ 6 ವರ್ಷ ಕಡ್ಡಾಯ, ಇಂಗ್ಲೀಷ್ ಶಾಲೆಗಳ ಪೋಷಕರಿಂದ ಸಡಿಲಿಕೆಗೆ ಮನವಿ
SSLCಗೆ ಶೇ.33 ಪಾಸಿಂಗ್ ಮಾರ್ಕ್ಸ್ ಸಮರ್ಥಿಸಿ ಕೊಳ್ಳುತ್ತಲೇ ರಾಜ್ಯ ಪೊಲಿಟಿಕ್ಸ್ ಅಪ್ಟೇಡ್ ಕೊಟ್ಟ ಮಧು ಬಂಗಾರಪ್ಪ