ಬೆಂಗಳೂರು(ಮೇ.19): 2021-22ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶ (Karnataka SSLC Result 2022 Declared) ಪ್ರಕಟವಾಗಿದೆ. ಶೇಖಡವಾರು 85.63 ಫಲಿತಾಂಶ ಬಂದಿದೆ. ಇದು ಕಳೆದ 10 ವರ್ಷಗಳಲ್ಲಿ ದಾಖಲೆಯ ಫಲಿತಾಂಶವಾಗಿದೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಬಿ.ಸಿ. ನಾಗೇಶ್ (Minister of Primary and SecondEducation BC Nagesh) ಫಲಿತಾಂಶ ಪ್ರಕಟಿಸಿದ್ದಾರೆ. ವಿಜಯಪುರ ಜಿಲ್ಲೆಯ ವಿದ್ಯಾರ್ಥಿ ಅಮಿತ್ ಮಾದರ್ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದ್ದರೆ, ತುಮಕೂರಿನ ಭೂಮಿಕಾ ಬಿಆರ್ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಒಟ್ಟಾರೆ, ಶೇ.85.63 ಫಲಿತಾಂಶ ದಾಖಲಾಗಿದ್ದು ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.

10:00 AM (IST) May 27
ಎಲ್ಲ ಸಹಕಾರ ಸಿಕ್ಕರೂ 10ನೇ ತರಗತಿಯಲ್ಲಿ ಶೂನ್ಯ ಸಾಧನೆಗೈದ ಬಿಬಿಎಂಪಿ ಶಾಲಾ ಮಕ್ಕಳು.
ಏನಿದು ಸುದ್ದಿ
10:00 AM (IST) May 27
ಎಲ್ಲ ಸಹಕಾರ ಸಿಕ್ಕರೂ 10ನೇ ತರಗತಿಯಲ್ಲಿ ಶೂನ್ಯ ಸಾಧನೆಗೈದ ಬಿಬಿಎಂಪಿ ಶಾಲಾ ಮಕ್ಕಳು.
ಏನಿದು ಸುದ್ದಿ
09:58 AM (IST) May 27
ಜಿಲ್ಲೆಯ ಸಿಂಧನೂರು ತಾಲೂಕಿನ ಗೌಡನಭಾವಿ ಗ್ರಾಮದ ವಿದ್ಯಾರ್ಥಿನಿ ಬಸವಲೀಲಾ ಈ ವರ್ಷದ SSLC ಪರೀಕ್ಷೆಯಲ್ಲಿ 625 ಅಂಕಗಳಿಗೆ 624 ಅಂಕಗಳು ಪಡೆದ ಜಿಲ್ಲೆಗೆ ಫಸ್ಟ್ ರ್ಯಾಂಕ್ ಬಂದಿದ್ದಾಳೆ. ಆದ್ರೆ ಈ ವಿದ್ಯಾರ್ಥಿನಿ ತನ್ನ ಮುಂದಿನ ವಿದ್ಯಾಭ್ಯಾಸಕ್ಕಾಗಿ ಆಧಾರ ಕಾರ್ಡ್ ಗಾಗಿ ಆಧಾರ್ ಕಾರ್ಡ್ ಕೇಂದ್ರಗಳನ್ನು ಅಲೆಯುತ್ತಿದ್ದಾಳೆ.
ಏನಿದು ಸುದ್ದಿ, ಇಲ್ಲಿ ಕ್ಲಿಕ್ ಮಾಡಿ
04:17 PM (IST) May 19
ಕನ್ನಡಪ್ರಭ ಹಂಚುವ ವಿದ್ಯಾರ್ಥಿ ಎಸ್.ಎಸ್ಎಲ್ಸಿಯಲ್ಲಿ ಮೊದಲ ದರ್ಜೆಯಲ್ಲಿ ಪಾಸ್ ಆಗಿದ್ದಾನೆ.
03:02 PM (IST) May 19
ಬಡತನದಲ್ಲೆ ಹುಟ್ಟಿದ ಅಮಿತ್ ದುರಾದೃಷ್ಟವೋ ಏನೋ, ಆತ ಹುಟ್ಟಿದ ಒಂದೇ ವರ್ಷದಲ್ಲೆ ತಂದೆ ಆನಂದ ಸಾವನ್ನಪ್ಪಿದ್ದಾರೆ. ತಂದೆ ಇಲ್ಲದಿದ್ದರು, ಅಮ್ಮನಲ್ಲೆ ತಂದೆಯನ್ನ ಕಾಣುತ್ತಾ ಬೆಳೆದ ಅಮಿತ್ ಇಂದು ಮಾಡಿದ ಸಾಧನೆ ಎಲ್ಲರನ್ನ ಹುಬ್ಬೇರಿಸುವಂತೆ ಮಾಡಿದೆ.
Karnataka SSLC 2022 Topper ಬಡತನದಲ್ಲಿ ಅರಳಿದ ವಿಜಯಪುರದ ಪ್ರತಿಭೆ ರಾಜ್ಯಕ್ಕೆ ಟಾಪರ್!
02:53 PM (IST) May 19
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 145 ವಿದ್ಯಾರ್ಥಿಗಳು ಔಟ್ ಆಫ್ ಔಟ್ ಅಂಕ ಪಡೆದುಕೊಂಡಿದ್ದಾರೆ. ಈ ಬಾರಿಯೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಶೇ.91.32 ರ ಮೂಲಕ ಮೇಲುಗೈ ಸಾಧಿಸಿದ್ದಾರೆ. ನಗರದ ವಿದ್ಯಾರ್ಥಿಗಳಿಗೆ ಶೇ.86.64 ಫಲಿತಾಂಶ ಬಂದಿದೆ.
Karnataka SSLC Toppers List: ಒಟ್ಟು 145 ವಿದ್ಯಾರ್ಥಿಗಳು ರಾಜ್ಯಕ್ಕೆ ಪ್ರಥಮ!
02:00 PM (IST) May 19
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತೇರ್ಗಡೆಯಾದ ಎಲ್ಲಾ ಮಕ್ಕಳಿಗೆ ಅಭಿನಂದನೆಗಳು. ಇಂದು ನನ್ನ ಮಗಳು ಸಮೇತಾಳ ಸಾಧನೆಯ ಬಗ್ಗೆ ನನಗೆ ಹೆಮ್ಮೆ ಎನಿಸುತ್ತಿದೆ. ಅವಳು SSLC ಯಲ್ಲಿ 621 (99.36%) ಅಂಕಗಳನ್ನು ಪಡೆದಿದ್ದಾಳೆ. ಒಬ್ಬ ತಂದೆಯಾಗಿ ನನ್ನ ಮಗಳ ಬಗ್ಗೆ ತುಂಬಾ ಹೆಮ್ಮೆ ಅನಿಸ್ತಾ ಇದೆ. ಒಳ್ಳೆದಾಗಲಿ ಮಗಳೇ #SSLCResults ಎಂದು ದೊಡ್ಡ ಗಣೇಶ್ ಟ್ವೀಟ್ ಮಾಡಿದ್ದಾರೆ.
01:48 PM (IST) May 19
ಮೌಲ್ಯಮಾಪನ ವಿದ್ಯಾರ್ಥಿ ಸ್ನೇಹಿಯಾಗಿ ಮಾಡಿದ್ದೇವೆ. ಹೀಗಾಗಿ ಹೆಚ್ಚು ಫಲಿತಾಂಶ ಬಂದಿದೆ. ಪ್ರಶ್ನೆ ಪತ್ರಿಕೆ ಕೂಡಾ ವಿದ್ಯಾರ್ಥಿ ಸ್ನೇಹಿಯಾಗಿ ಇತ್ತು. 10% ಮಾತ್ರ ಟಫ್ ಪ್ರಶ್ನೆಗಳನ್ನ ಪತ್ರಿಕೆಯಲ್ಲಿ ನೀಡಲಾಗಿತ್ತು. 10% ಗ್ರೇಸ್ ಮಾರ್ಕ್ಸ್ ನೀಡಲಾಗಿದೆ. 175 ಅಂಕ ಪಡೆದವರು ಮಾತ್ರ ಇದಕ್ಕೆ ಎಲಿಜಬಲ್ ಆಗಿರುತ್ತಾರೆ ಎಂದು ಸಚಿವರು ಹೇಳಿದ್ದಾರೆ.
"
01:46 PM (IST) May 19
ವಿಜಯಪುರ ಜಿಲ್ಲೆಯ ಅಮಿತ್ ಮಾದರ್, ತುಮಕೂರಿನ ಬಿ.ಆರ್. ಭೂಮಿಕಾ, ಹಾವೇರಿಯ ಪ್ರವೀಣ್ ನೀರಲಗಿ, ಬೆಳಗಾವಿಗ ಸಹಾನಾ, ವಿಜಯರಪುರದ ಐಶ್ವರ್ಯ ಕನಸೆ, ಉಡುಪಿಯ ಗಾಯತ್ರಿ, ಅನೀಶ್,ವಿದ್ಯಾಮಂದಿರ ಶಾಲೆ ಮಲ್ಲೇಶ್ವರಂ ಹೀಗೆ ಹಲವು ಮಂದಿ ಟಾಪರ್ ಆಗಿದ್ದಾರೆ.
SSLC Result 2022 Declared ಒಟ್ಟು 145 ವಿದ್ಯಾರ್ಥಿಗಳು ರಾಜ್ಯಕ್ಕೆ ಟಾಪರ್
01:42 PM (IST) May 19
ಈ ಬಾರಿ ಫಲಿತಾಂಶದಲ್ಲಿ ಜಿಲ್ಲೆಗಳ ನಡುವೆ ನಂಬರ್ 1, 2 ಕಾಂಪಿಟೇಷನ್ ಇಲ್ಲ. ಗ್ರೇಡ್ ವ್ಯವಸ್ಥೆ ಅಳವಡಿಸಿಕೊಂಡಿರುವ ಶಿಕ್ಷಣ ಇಲಾಖೆ. A ಗ್ರೇಡ್ ನಲ್ಲಿ ಒಟ್ಟು 32 ಜಿಲ್ಲೆಗಳು B ಗ್ರೇಡ್ ನಲ್ಲಿ ಎರಡು ಜಿಲ್ಲೆಗಳಿವೆ ಎಂದು ಸಚಿವರು ಹೇಳಿದ್ದಾರೆ.
01:42 PM (IST) May 19
ಒಟ್ಟು 20 ಶಾಲೆಗಳಲ್ಲಿ ಶೂನ್ಯ ಫಲಿತಾಂಶ
ಸರ್ಕಾರಿ ಶಾಲೆ 2, ಅನುದಾನಿತ 3, ಅನುದಾನ ರಹಿತ 15 ಶಾಲೆಗಳಲ್ಲಿ ಶೂನ್ಯ ಫಲಿತಾಂಶ
01:36 PM (IST) May 19
35931 ವಿದ್ಯಾರ್ಥಿಗಳು ಒಂದು ವಿಷಯದಲ್ಲಿ ಮಾತ್ರ ಗ್ರೇಸ್ ಮಾರ್ಕ್ಸ್ ನೀಡಿದ್ದೇವೆ
3940 ವಿದ್ಯಾರ್ಥಿಗಳಿಗೆ ಎರಡು ವಿಷಯದಲ್ಲಿ ಗ್ರೇಸ್ ಮಾರ್ಕ್ಸ್ ನೀಡಿದ್ದೇವೆ.
01:32 PM (IST) May 19
ಕಳೆದ ಹತ್ತು ವರ್ಷದಲ್ಲಿ ಇದು ದಾಖಲೆಯ ಫಲಿತಾಂಶ
4,41,099 ಪುರುಷ ವಿದ್ಯಾರ್ಥಿಗಳು
3,58, 602 ಪಾಸ್ ಆಗಿದ್ದಾರೆ
81.3% ಫಲಿತಾಂಶ ವಿದ್ಯಾರ್ಥಿಗಳದ್ದು
4,12,334 ಹೆಣ್ಣುಮಕ್ಕಳು ಪರೀಕ್ಷೆ ಬರೆದಿದ್ರು
3,72,279 ವಿದ್ಯಾರ್ಥಿನಿಯರು ಪಾಸ್ ಆಗಿದ್ದಾರೆ
90.29% ಫಲಿತಾಂಶ
730881 ಮಕ್ಕಳಲ್ಲಿ 40,061 ಮಕ್ಕಳು ಗ್ರೇಸ್ ಮಾರ್ಕ್ಸ್ ಪಡೆದು ಪಾಸ್ ಆಗಿದ್ದಾರೆ
01:31 PM (IST) May 19
8,53,436 ಮಕ್ಕಳು ಪರೀಕ್ಷೆ ಬರೆದಿದ್ದಾರೆ
ಇದರಲ್ಲಿ 85.63% ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ
7,30, 881 ಮಕ್ಕಳು ಪಾಸ್ ಆಗಿದ್ದಾರೆ
"
01:29 PM (IST) May 19
ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟವಾಗಿದ್ದು, ಧಾರವಾಡದ ಪ್ರಜೇಂಟೆಶನ್ ಶಾಲೆ ವಿದ್ಯಾರ್ಥಿನಿ ಸಯಿದಾ ಸಿಮ್ರಾನ್ ಮದನಿ 625 ಕ್ಕೆ 625 ಅಂಕ ಪಡೆದು ಪ್ರಥಮ ಸ್ಥಾನ ಗಳಿಸಿದ್ದಾರೆ. ಶಿರಸಿ ಮತ್ತು ಕಾರವಾರ ಶೈಕ್ಷಣಿಕ ಜಿಲ್ಲೆಯಲ್ಲಿ 7 ವಿದ್ಯಾರ್ಥಿಗಳು 625/625 ಅಂಕ ಗಳಿಸಿದ್ದಾರೆ.
01:26 PM (IST) May 19
A+ ಗ್ರೇಡ್ ನಲ್ಲಿ 1,18,875 (ಶೇ.16.48) ವಿದ್ಯಾರ್ಥಿಗಳು, A ಗ್ರೇಡ್ ನಲ್ಲಿ 1,82,600 (25.31%), B+ ಗ್ರೇಡ್ ನಲ್ಲಿ 1,73,528 (ಶೇ.24.06), B ಗ್ರೇಡ್ ನಲ್ಲಿ 1,43,900 (19.95%), C+ ಗ್ರೇಡ್ ನಲ್ಲಿ 87,801 (12.17%) ಹಾಗೂ C ಗ್ರೇಡ್ ನಲ್ಲಿ 14,627 (ಶೇ. 2.03) ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ.
01:14 PM (IST) May 19
ಔಟ್ ಆಫ್ ಔಟ್ ಪಡೆದ ವಿದ್ಯಾರ್ಥಿಗಳು
ಈ ಸಲದ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಔಟ್ ಆಫ್ ಔಟ್ 625 ಅಂಕಕ್ಕೆ 625 ಅಂಕವನ್ನ 145 ಮಕ್ಕಳು ಪಡೆದುಕೊಂಡಿದ್ದಾರೆ. ಹಾಗೇ,
625ಕ್ಕೆ 624 ಅಂಕ ಪಡೆದವರು- 309
-625ಕ್ಕೆ 623ಅಂಕ ಪಡೆದವರು 472
-622 ಅಂಕ ಪಡೆದವರು- 615
- 621 ಅಂಕ ಪಡೆದವರು- 706
-620 ಅಂಕ ಪಡೆದವರು -773 ವಿದ್ಯಾರ್ಥಿಗಳು
01:12 PM (IST) May 19
ವಿಷಯವಾರು ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳು
ಪ್ರಥಮ ಭಾಷೆ- 19,125 ವಿದ್ಯಾರ್ಥಿಗಳು
ದ್ವಿತೀಯ ಭಾಷೆ -13,458 ವಿದ್ಯಾರ್ಥಿಗಳು
ತೃತೀಯ ಭಾಷೆ - 43,126 ವಿದ್ಯಾರ್ಥಿಗಳು
ಗಣಿತ - 13,683 ವಿದ್ಯಾರ್ಥಿಗಳು
ವಿಜ್ಞಾನ 6592 ವಿದ್ಯಾರ್ಥಿಗಳು
ಸಮಾಜ ವಿಜ್ಞಾನ- 50,782 ವಿದ್ಯಾರ್ಥಿಗಳು
01:10 PM (IST) May 19
2021-22ನೇ ಸಾಲಿನಲ್ಲಿ 8,53,436 ವಿದ್ಯಾರ್ಥಿಗಳು ಹಾಜರಾಗಿದ್ದು, 7,30,881 ಉತ್ತೀರ್ಣರಾಗಿ ಶೇಕಡವಾರು ಫಲಿತಾಂಶ 85.63% ರಷ್ಟು ಆಗಿದೆ.
ಲಿಂಗವಾರು ಫಲಿತಾಂಶ
ಹಾಜರು- ಉತ್ತೀರ್ಣ- ಶೇಕಡವಾರು
ಬಾಲಕಿಯರು- 4,12,334- 3,72,278-90.29%
ಬಾಲಕರು-4,41,099- 3,58,602- 81.30%
ಶಾಲಾವಾರು ಫಲಿತಾಂಶ
*ಸರ್ಕಾರಿ- 88.0%
*ಅನುದಾನಿತ- 87.84%
*ಅನುದಾನ ರಹಿತ-92.29%
ನಗರ ಮತ್ತು ಗ್ರಾಮೀಣವಾರು ಫಲಿತಾಂಶ
ನಗರ- 2,92,946-86.64%
ಗ್ರಾಮೀಣ-4,28,385- 91.32%
12:58 PM (IST) May 19
ವಿಜಯಪುರ ಜಿಲ್ಲೆಯ ವಿದ್ಯಾರ್ಥಿ ಅಮಿತ್ ಮಾದರ್ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದ್ದರೆ, ತುಮಕೂರಿನ ಭೂಮಿಕಾ ಬಿಆರ್ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.
12:54 PM (IST) May 19
ಫೇಲ್ ಆದ ವಿದ್ಯಾರ್ಥಿಗಳಿಗೆ ಈ ಮೇ 27 ರಿಂದ ಪೂರಕ ಪರೀಕ್ಷೆ ನಡೆಯಲಿದ್ದು, ಜೂನ್ 4ರಂದು ಮುಕ್ತಾಯವಾಗಲಿದೆ ಎಂದು ಶಿಕ್ಷಣ ಸಚಿವ ಬಿಸಿ ನಾಗೇಶ್ ಹೇಳಿದ್ದಾರೆ. ಈ ತಿಂಗಳ 20 ರಿಂದ ಅನ್ ಲೈನ್ ನಲ್ಲಿ ಇದಕ್ಕಾಗಿ ನೋಂದಣಿ ಮಾಡಿಕೊಳ್ಳಬೇಕಿದೆ. ಮರು ಮೌಲ್ಯಮಾಪನಕ್ಕೆ ಮೇ 20 ರಿಂದ 30ರವರೆಗೆ ಅವಕಾಶ
12:52 PM (IST) May 19
ಸರ್ಕಾರಿ ಶಾಲೆಗಳಲ್ಲಿ ಶೇ.88ರಷ್ಟು ಫಲಿತಾಂಶ ದಾಖಲಾಗಿದೆ. ಅನುದಾನಿತ ಶಾಲೆಯಲ್ಲಿ ಶೇ.87.84 ರಷ್ಟು ಫಲಿತಾಂಶ ದಾಖಲಾಗಿದೆ. ವಿಜಯಪುರ ಜಿಲ್ಲೆಯ ವಿದ್ಯಾರ್ಥಿ ಅಮಿತ್ ಮಾದರ್ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.
12:46 PM (IST) May 19
ಈ ಬಾರಿ ಒಟ್ಟು 145 ವಿದ್ಯಾರ್ಥಿಗಳು 625ಕ್ಕೆ 625 ಅಂಕ ಪಡೆದುಕೊಂಡಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ 21 ಮಕ್ಕಳು, ಅನುದಾನಿತ ಶಾಲೆಗಳಲ್ಲಿ 8 ಮಕ್ಕಳು ಹಾಗೂ ಅನುದಾನರಹಿತ ಶಾಲೆಗಳಲ್ಲಿ 116 ಮಕ್ಕಳು 625ಕ್ಕೆ 625 ಅಂಕ ಸಂಪಾದನೆ ಮಾಡಿದ್ದಾರೆ
12:43 PM (IST) May 19
ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಈ ಬಾರಿಯೂ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ. 3 ಲಕ್ಷದ 72,779 ವಿದ್ಯಾರ್ಥಿನಿಯರು ಪಾಸ್ ಆಗಿದ್ದಾರೆ. ಕಳೆದ 10 ವರ್ಷಗಳಲ್ಲಿಯೇ ಇದು ದಾಖಲೆಯ ಫಲಿತಾಂಶ ಎಂದು ಶಿಕ್ಷಣ ಸಚಿವ ಬಿಸಿ ನಾಗೇಶ್ ಹೇಳಿದ್ದಾರೆ.
SSLC Result 2022 ಪ್ರಕಟ, ಶೇ.85.63 ಫಲಿತಾಂಶ, ಬಾಲಕಿಯರೇ ಮೇಲು ಗೈ
12:41 PM (IST) May 19
- 7 ಲಕ್ಷದ 30,881 ವಿದ್ಯಾರ್ಥಿಗಳು ಪಾಸ್
- ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿಸಿ ನಾಗೇಶ್ ಸುದ್ದಿಗೋಷ್ಠಿ
- ಶೇಕಡಾ 85.63 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ.
SSLC Result 2022 ಪ್ರಕಟ, ಶೇ.85.63 ಫಲಿತಾಂಶ
12:37 PM (IST) May 19
ಇಂದು ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟವಾಗಲಿದ್ದು, ಈ ಕುರಿತಾಗಿ ಶಿಕ್ಷಣ ಸಚಿವ ಬಿಸಿ ನಾಗೇಶ್ ಸುದ್ದಿಗೋಷ್ಠಿ ಆರಂಭವಾಗಿದೆ. 7, 30,881 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ ಒಟ್ಟಾರೆ ಶೇ.85.63 ಫಲಿತಾಂಶ ದಾಖಲಾಗಿದೆ.
12:27 PM (IST) May 19
ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿರುವ ಫೋನ್ ನಂಬರ್‌ಗಳಿಗೆ SMS ಮೂಲಕ ಫಲಿತಾಂಶ ಕಳುಹಿಸಲಾಗುತ್ತದೆ ಎಂದು ಶಿಕ್ಷಣ ಸಚಿವ ಬಿಸಿ ನಾಗೇಶ್ ಈಗಾಗಲೇ ಟ್ವೀಟ್ ಮಾಡಿದ್ದಾರೆ.
12:17 PM (IST) May 19
ಕೆಲ ಸಮಯದಲ್ಲಿಯೇ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಲಿದ್ದು, https://karresults.nic.in/ ವೆಬ್ ಸೈಟ್ ಕೆಲವೆಡೆ ಓಪನ್ ಆಗುತ್ತಿಲ್ಲ.
11:57 AM (IST) May 19
ಕಳೆದ ವರ್ಷ (2021ರಲ್ಲಿ) ನಡೆದ ಎಸ್ಎಸ್ಎಲ್ಸಿ ಪರೀಕ್ಷೆ ರಾಜ್ಯದ ಇತಿಹಾಸದಲ್ಲಿಯೇ ವಿನೂತನವಾಗಿ ನಡೆದಿತ್ತು. ಅದರಂತೆ, ಒಬ್ಬ ವಿದ್ಯಾರ್ಥಿ ಹೊರತು ಪಡಿಸಿ ಎಲ್ಲರನ್ನು ಪಾಸ್ ಮಾಡಲಾಗಿತ್ತು. ಶೇ. 99.9 ಫಲಿತಾಂಶ ಕೂಡ ಬಂದಿತ್ತು. ತಾನು ಪರೀಕ್ಷೆ ಬರೆಯುವ ಬದಲು ಬೇರೆಯುವರು ಪರೀಕ್ಷೆ ಬರೆದ ಕಾರಣ ಒಬ್ಬ ವಿದ್ಯಾರ್ಥಿಯನ್ನು ಫೇಲು ಮಾಡಲಾಗಿತ್ತು.
ಇತಿಹಾಸದಲ್ಲಿಯೇ ವಿನೂತನವಾಗಿ ನಡೆದಿದ್ದ 2021ರ SSLC ಪರೀಕ್ಷಾ ಫಲಿತಾಂಶ ಎಷ್ಟಾಗಿತ್ತು?
11:52 AM (IST) May 19
ಎಸ್ ಎಸ್ ಎಲ್ ಸಿ ಪೂರಕ ಪರೀಕ್ಷೆ (sslc supplementary exam 2022) ಜೂನ್ ಕೊನೆಯ ವಾರದಲ್ಲಿ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.
11:48 AM (IST) May 19
2021ನೇ ಸಾಲಿನ SSLC ಪರೀಕ್ಷೆಯಲ್ಲಿ 157 ವಿದ್ಯಾರ್ಥಿಗಳು 625 ಕ್ಕೆ 625 ಅಂಕಗಳನ್ನು ಪಡೆದಿದ್ದರು. 562 ರಿಂದ 625 ಅಂಕಗಳನ್ನು ಪಡೆದವರಿಗೆ A+ ಗ್ರೇಡ್ ನೀಡಲಾಗಿತ್ತು. ಬಿ ಗ್ರೇಡ್‌ನಲ್ಲಿ 2,87,694 ವಿದ್ಯಾರ್ಥಿಗಳು, ಸಿ ಗ್ರೇಡ್‌ನಲ್ಲಿ 1,13,610 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರು.
11:27 AM (IST) May 19
ಕೋವಿಡ್ ಕಾರಣದಿಂದ 2020-21ನೇ ಸಾಲಿನ ಪರೀಕ್ಷೆ ನಡೆಸದೆ ಸಾಮೂಹಿಕವಾಗಿ ಎಲ್ಲ ವಿದ್ಯಾರ್ಥಿಗಳನ್ನು ಉತ್ತೀರ್ಣ ಮಾಡಲಾಗಿತ್ತು. ಈ ವರ್ಷ ಯಾವುದೇ ಕೋವಿಡ್ ಭೀತಿ ಇಲ್ಲದೆ ಎಲ್ಲೆಡೆ ಸುಸೂತ್ರವಾಗಿ ಪರೀಕ್ಷೆ ನಡೆಸಲು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಅಗತ್ಯ ಸಿದ್ಧತೆ ಮಾಡಿಕೊಂಡಿತ್ತು.
11:16 AM (IST) May 19
ಪರೀಕ್ಷೆ ಬರೆದಿರುವ ಎಲ್ಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೂ ಶುಭ ಹಾರೈಕೆಗಳು. ತಂದೆ, ತಾಯಿ, ಗುರು ಹಿರಿಯರ ಮಾರ್ಗದರ್ಶನದಲ್ಲಿ ಮುನ್ನಡೆಯಿರಿ. ಸೋಲು ಗೆಲುವು ಎರಡೂ ಜೀವನದ ಭಾಗ. ಧೃತಿಗೆಡದೆ ಆತ್ಮವಿಶ್ವಾಸದಿಂದ ಮುನ್ನುಗ್ಗಿ. ಪರೀಕ್ಷೆ ಫಲಿತಾಂಶವೇ ಅಂತ್ಯವಲ್ಲ, ನಿರ್ಣಾಯಕವಲ್ಲ ಎಂದು ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಟ್ವೀಟ್ ಮಾಡಿದ್ದಾರೆ.
11:16 AM (IST) May 19
"
11:13 AM (IST) May 19
ಎಸ್ ಎಸ್ ಎಲ್ ಸಿ ಫಲಿತಾಂಶ ಹಿನ್ನೆಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿಮ್ಹಾನ್ಸ್ ಸಹಾಯದೊಂದಿಗೆ ವಿದ್ಯಾರ್ಥಿಗಳಿಗೆ ಮಾನಸಿಕ ಆರೋಗ್ಯ ಸಹಾಯವಾಣಿ ತೆರೆದಿದೆ. ಫಲಿತಾಂಶದ ಒತ್ತಡದಲ್ಲಿರುವ ವಿದ್ಯಾರ್ಥಿಗಳಿಗೆ ಈ ಮೂಲಕ ಟೆಲಿ ಕೌನ್ಸಿಲಿಂಗ್ ಒದಗಿಸಲಾಗುತ್ತದೆ. ಒತ್ತಡದಲ್ಲಿರುವ ವಿದ್ಯಾರ್ಥಿಗಳು 080 46110007 ಸಂಖ್ಯೆಗೆ ಕರೆ ಮಾಡಿ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಟ್ವೀಟ್ ಮಾಡಿದ್ದಾರೆ
10:58 AM (IST) May 19
ಎಸ್ ಎಸ್ ಎಲ್ ಸಿ ಫಲಿತಾಂಶದ ಒತ್ತಡದಲ್ಲಿರುವ ವಿದ್ಯಾರ್ಥಿಗಳ ಸಲುವಾಗಿ ಸಹಾಯವಾಣಿ ಆರಂಭಿಸಲಾಗಿದ್ದು, 080 46110007 ಸಂಖ್ಯೆಗೆ ಕರೆ ಮಾಡುವ ಮೂಲಕ ಸಹಾಯ ಪಡೆದುಕೊಳ್ಳಬಹುದಾಗಿದೆ.
ಎಸ್‌ಎಸ್‌ಎಲ್‌ಸಿ ಫಲಿತಾಂಶ ಬಗ್ಗೆ ಒತ್ತಡವೇ: 08046110007 ಸಂಖ್ಯೆಗೆ ಕರೆ ಮಾಡಿ
10:55 AM (IST) May 19
ಈ ಬಾರಿ ರಾಜ್ಯದ(Karnataka) ಒಟ್ಟು 15,387 ಶಾಲೆಗಳ 8.73ಲಕ್ಷ ವಿದ್ಯಾರ್ಥಿಗಳು(Students) ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದಿದ್ದರು. ರಾಜ್ಯಾದ್ಯಂತ 3,446 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗಿತ್ತು. ಸುಮಾರು 234 ಕೇಂದ್ರಗಳಲ್ಲಿ ನಡೆದ ಮೌಲ್ಯಮಾಪನ ಪ್ರಕ್ರಿಯೆಯಲ್ಲಿ 63,796 ಶಿಕ್ಷಕರು ಭಾಗಿಯಾಗಿದ್ದರು.
10:12 AM (IST) May 19
ಎಸ್‌ಎಸ್ಎಲ್‌ಸಿ ಪರೀಕ್ಷೆ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದೆ. ಮೇ 19ರ ಮಧ್ಯಾಹ್ನ 12.30ಕ್ಕೆ ಎಸ್‌ಎಸ್ಎಲ್‌ಸಿ ಪರೀಕ್ಷೆ ಫಲಿತಾಂಶ (karnataka sslc result 2022) ಪ್ರಕಟಿಸಲಾಗುತ್ತಿದ್ದು, ಮಧ್ಯಾಹ್ನ 1 ಗಂಟೆಗೆ ವೆಬ್‌ಸೈಟ್ https://karresults.nic.in/ ನಲ್ಲಿ ಪ್ರಕಟಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಬಿ.ಸಿ. ನಾಗೇಶ್ (Minister of Primary and SecondEducation BC Nagesh) ಟ್ವೀಟ್ ಮಾಡಿ ಈಗಾಗಲೇ ಮಾಹಿತಿ ನೀಡಿದ್ದಾರೆ. ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ (Karnataka Secondary Education Examination Board) ಇದಕ್ಕೆ ಸಂಪೂರ್ಣ ತಯಾರಿ ಮಾಡಿಕೊಂಡಿದೆ.
09:52 AM (IST) May 19
ಮೇ 19ರಂದು ಎಸೆಸೆಲ್ಸಿ ಫಲಿತಾಂಶ (karnataka sslc resul) ಪ್ರಕಟವಾಗಲಿದ್ದು, ವಿದ್ಯಾರ್ಥಿಗಳು ಕಾತರದಿಂದ ಕಾಯ್ತುತ್ತಿದ್ದಾರೆ. ಮುಂದೆ ಪಿಯುಸಿಗೆ ಪ್ರವೇಶಾತಿ (puc admission 2022-23) ಪಡೆಯಲು ತುದಿಕಾಲಿನಲ್ಲಿದ್ದಾರೆ. ಅದೇ ಹೊತ್ತಿಗೆ ದ್ವಿತೀಯ ಪಿಯು ಪರೀಕ್ಷೆ (karnataka 2nd puc Exam) ಮುಗಿದು ಉಪನ್ಯಾಸಕರು (professor) ಮೌಲ್ಯಮಾಪನದಲ್ಲಿ ತೊಡಗಲಿದ್ದಾರೆ. ಹೀಗಾಗಿ ಪ್ರಥಮ ಪಿಯುಸಿ (1st PUC) ವಿದ್ಯಾರ್ಥಿಗಳ ದಾಖಲಾತಿಗೆ ಉಪನ್ಯಾಸಕರ ಕೊರತೆ ಉಂಟಾಗಲಿದೆ.
1st PUC ದಾಖಲಾತಿಗೆ SSLC ಫಲಿತಾಂಶವೇ ವಿದ್ಯಾರ್ಥಿಗಳಿಗೆ ತೊಡಕಾಗುತ್ತಾ!?
09:29 AM (IST) May 19
ಮೇ 19ರಂದು ಎಸ್‌ಎಸ್ಎಲ್‌ಸಿ ಪರೀಕ್ಷೆ ಫಲಿತಾಂಶ (karnataka sslc result 2022) ಪ್ರಕಟಿಸಲಾಗುತ್ತದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಬಿ.ಸಿ. ನಾಗೇಶ್ (Minister of Primary and Secondary Education BC Nagesh) ಹೇಳಿದ್ದಾರೆ. ಮಡಿಕೇರಿಯಲ್ಲಿ ಸುದ್ದಿಗಾರರರೊಂದಿಗೆ ಮಾತನಾಡಿದ ಅವರು, ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶದ ಬಗ್ಗೆ ಮಾಹಿತಿ ನೀಡಿದ್ದಾರೆ. ಇನ್ನೂ ಮೇ 15 ರಂದು ಫಲಿತಾಂಶವನ್ನು ಪ್ರಕಟಿಸಲಾಗುತ್ತದೆ ಎಂದು ಈ ಹಿಂದೆ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ (Karnataka Secondary Education Examination Board) ತಿಳಿಸಿತ್ತು. ಆದರೆ ಸಾಲು ಸಾಲು ರಜೆಗಳು ಬಂದ ಕಾರಣ, ಮೌಲ್ಯಮಾಪನ ಕೊಂಚ ವಿಳಂಬವಾಗಿತ್ತು.