SSLC Fail: ಮಂಡ್ಯ ವಿದ್ಯಾರ್ಥಿ ನೇಣಿಗೆ ಶರಣು, ಚಿಕ್ಕೋಡಿ ವಿದ್ಯಾರ್ಥಿನಿ ವಿಷ ಸೇವನೆ

By Sathish Kumar KHFirst Published May 9, 2024, 4:40 PM IST
Highlights

ಮಂಡ್ಯದಲ್ಲಿ ವಿದ್ಯಾರ್ಥಿಯೊಬ್ಬ ಎಸ್‌ಎಸ್‌ಎಲ್‌ಸಿಯಲ್ಲಿ ಫೇಲ್‌ ಆಗಿದ್ದಕ್ಕೆ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ. ಮತ್ತೊಬ್ಬ ಬಾಲಕಿ ಬೆಳಗಾವಿಯಲ್ಲಿ ವಿಷ ಸೇವನೆ ಮಾಡಿದ್ದಾಳೆ.

ಮಂಡ್ಯ (ಮೇ 09): ರಾಜ್ಯಾದ್ಯಂತ ಇಂದು ಬೆಳಗ್ಗೆ 10.30ಕ್ಕೆ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟಗೊಂಡಿದೆ. ಆದರೆ, ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಮಂಡ್ಯ ವಿದ್ಯಾರ್ಥಿ ಲಿಖಿತ್ ಫೇಲ್ ಆಗಿದ್ದಕ್ಕೆ ಮನನೊಂದು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಮತ್ತೊಂದು ಘನೆಯಲ್ಲಿ ಬೆಳಗಾವಿ ಜಿಲ್ಲೆ ಚಿಕ್ಕೋಡಿಯಲ್ಲಿ ಫೇಲಾದ ವಿದ್ಯಾರ್ಥಿನಿ ವಿಷ ಸೇವನೆ ಮಾಡಿದ್ದಾಳೆ.

ಮಂಡ್ಯದಲ್ಲಿ ವಿದ್ಯಾರ್ಥಿಯೊಬ್ಬ ತಾನು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅನುತ್ತೀರ್ಣ ಆಗಿದ್ದೇನೆಂದು ಮನನೊಂದು ನೇಣಿಗೆ ಶರಣಾಗಿರುವ ದುರ್ಘಟನೆ ನಡೆದಿದೆ. ಈ ಘಟನೆ ಮಂಡ್ಯ ಜಿಲ್ಲೆ ಮದ್ದೂರು ತಾಲೂಕು ತಗ್ಗಹಳ್ಳಿ ಗ್ರಾಮದಲ್ಲಿ ನಡೆದಿದೆ. ಮಹದೇವು ಎನ್ನುವವರ ಪುತ್ರ ಲಿಖಿತ್ (15) ಮೃತ ಬಾಲಕ. ಎಸ್ಸೆಸ್ಸೆಲ್ಸಿ ಫಲಿತಾಂಶ ನೋಡಲು ಶಾಲೆಯ ಬಳಿ ಹೋದಾಗ ಎರಡು ವಿಷಯದಲ್ಲಿ ಅನುತ್ತೀರ್ಣಗೊಂಡಿದ್ದಿಯಾ  ಎಂದು ಶಿಕ್ಷಕರು ತಿಳಿಸಿದ್ದಾರೆ. ಈ ವೇಳೆ ತುಂಬಾ ಬೇಸರಗೊಂಡಿದ್ದ ನಿಖಿಲ್‌ನನ್ನು ಶಿಕ್ಷಕರು ಸಮಾಧಾನ ಮಾಡಿ, ಮುಂದಿನ ಪರೀಕ್ಷೆಗೆ ಸಿದ್ಧತೆ ನಡೆಸುವಂತೆ ಧೈರ್ಯ ತುಂಬಿ ಮನೆಗೆ ಕಳುಹಿಸಿದ್ದರು.

625ಕ್ಕೆ ಒಂದು ಅಂಕ ಕಡಿಮೆ, ಸಂಸ್ಕೃತ ವಿಷಯ ಮರುಮೌಲ್ಯಮಾಪನ ಮೊರೆ; ಮೇಧಾ ಶೆಟ್ಟಿ!

ಆದರೆ, ನಿಖಿಲ್ ಮನೆಗೆ ಹೋದರೆ ಅಲ್ಲಿ ಫೇಲ್ ಆಗಿರುವ ವಿಚಾರ ತಿಳಿದು ಮನೆಯವರು ಬೈಯಬಹುದು, ಇದರಿಂದ ನನಗೆ ಅವಮಾನ ಆಗುತ್ತದೆ ಎಂದು ಮನನೊಂದು ಜಮೀನಿನ ಕಡೆಗೆ ಹೋಗಿದ್ದಾನೆ. ಅಲ್ಲಿ ಹಸು ಕಟ್ಟಲು ಇಟ್ಟಿದ್ದ ಹಗ್ಗವನ್ನು ಬಿಚ್ಚಿಕೊಂಡು ಪಕ್ಕದಲ್ಲಿದ್ದ ಮರಕ್ಕೆ ಹಾಕಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ತಿಳಿದುಬಂದಿದೆ. ಇನ್ನು ಎಸ್‌ಎಸ್‌ಎಲ್‌ಸಿ ಫಲಿತಾಂಶ ನೋಡಲು ಶಾಲೆಯ ಕಡೆಗೆ ಹೋದ ಮಗ ಇನ್ನೂ ಬಂದಿಲ್ಲ ಎಂದು ಪೋಷಕರು ಶಾಲೆಯತ್ತ ತೆರಳಿದ್ದಾರೆ. ಆಗ ಶಿಕ್ಷಕರು ಆತನ 2 ವಿಷಯ ಪೇಲ್ ಆಗಿದ್ದು, ಮನೆಯ ಕಡೆಗೆ ಹೋದ ಎಂದು ತಿಳಿಸಿದ್ದಾರೆ.

ಆಗ ನಿಖಿಲ್ ಪೋಷಕರು ಮಗನನ್ನು ಹುಡುಕುತ್ತಾ ಎಲ್ಲೆಡೆ ಹೋಗಿದ್ದಾರೆ. ಆಗ ಜಮೀನಿನ ಬಳಿ ಹೋಗಿ ನೋಡಿದಾಗ ಮರದಲ್ಲಿ ನೇಣು ಬಿಗಿದುಕೊಂಡು ನೇತಾಡುತ್ತಿರುವುದು ಕಂಡುಬಂದಿದೆ. ಕೂಡಲೇ ಆತನನ್ನು ಪೋಷಕರು ಮರದಿಂದ ಇಳಿಸಿದರೂ ಆತನ ಪ್ರಾಣಪಕ್ಷಿ ಹಾರಿ ಹೋಗಿತ್ತು. ವಿದ್ಯಾರ್ಥಿಯ ದುಡುಕಿನ ನಿರ್ಧಾರದಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

ಚಿಕ್ಕೋಡಿಯಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನ: ಮತ್ತೊಂದೆಡೆ ಬೆಳಗಾವಿ ಜಿಲ್ಲೆಯ ಶೈಕ್ಷಣಿಕ ಜಿಲ್ಲೆ ಚಿಕ್ಕೋಡಿಯಲ್ಲಿಯೂ ವಿದ್ಯಾರ್ಥಿನಿಯೊಬ್ಬಳು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಫೇಲ್ ಆಗಿದ್ದರಿಂದ ಮನೆಯಲ್ಲಿ ಒಟ್ಟಿದ್ದ ವಿಷವನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಆದರೆ, ಈ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಗ್ರಾಮದಲ್ಲಿ ನಡೆದಿದೆ. ಕೂಡಲೇ ವಿದ್ಯಾರ್ಥಿನಿ ಒದ್ದಾಡುವುದನ್ನು ನೋಡಿದ ಪೋಷಕರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯಕ್ಕೆ ವಿದ್ಯಾರ್ಥಿನಿ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ (ಐಸಿಯು) ಚಿಕಿತ್ಸೆ ಪಡೆಯುತ್ತಿದ್ದಾಳೆ. ಆಸ್ಪತ್ರೆಗೆ ಚಿಕ್ಕೋಡಿ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎ. ಮೇಕಲಮರಡಿ ಅವರು ಭೇಟಿ ಮಾಡಿ ಪೋಷಕರಿಗೆ ಸಾಂತ್ವನ ಹೇಳಿದ್ದಾರೆ.

ಕರ್ನಾಟಕ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ, ರಾಜ್ಯದ ಫಲಿತಾಂಶ ಶೇ.73ಕ್ಕೆ ಕುಸಿತ: ಬಾಗಲಕೋಟೆ ಅಂಕಿತಾ ಟಾಪರ್

ಏಕಾಏಕಿ ಕಟ್ಟುನಿಟ್ಟಾಗಿ ಪರೀಕ್ಷೆ ನಡೆಸಿದ್ದ ಕೆಎಸ್‌ಎಇಬಿ: ಕಳೆದೊಂದು ದಶಕದಿಂದ ರಾಜ್ಯದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಹೆಚ್ಚು ಕಟ್ಟುನಿಟ್ಟಾಗಿ ನಡೆಸುತ್ತಿರಲಿಲ್ಲ. ಇನ್ನು ಕಳೆದ ಮೂರು ವರ್ಷಗಳ ಹಿಂದೆ ಕೋವಿಡ್‌ ಹಿನ್ನೆಲೆಯಲ್ಲಿ ಪರೀಕ್ಷೆ ಬರೆಯದ ವಿದ್ಯಾರ್ಥಿಗಳು ಕೂಡ ಉನ್ನತ ಶ್ರೇಣಿಯಲ್ಲಿ ಪಾಸಾಗಿದ್ದಾರೆ. ಆದರೆ, ಸದರಿ 2023-24ನೇ ಸಾಲಿನಲ್ಲಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಿ ಕಟ್ಟುನಿಟ್ಟಾಗಿ ಪರೀಕ್ಷೆ ನಡೆಸಲಾಗಿತ್ತು. ಇದರಿಂದ ಕೆಲವು ವಿದ್ಯಾರ್ಥಿಗಳು ತೀವ್ರ ಭಯದಿಂದ ಗೊತ್ತಿರುವ ಉತ್ತರ ಬರೆಯಲೂ ಭಐಪಟ್ಟಿದ್ದಾರೆ. ಜೊತೆಗೆ, ವಿದ್ಯಾರ್ಥಿಗಳು ಕಾಪಿ ಮಾಡಿದ ಕಡೆಗಳಲ್ಲಿ ಶಿಕ್ಷಕರನ್ನು ಅಮಾನತು ಮಾಡಲಾಗಿತ್ತು. ಇದರ ಪರಿಣಾಮವಾಗಿ ಫಲಿತಾಂಶ ಶೇ.73ಕ್ಕೆ ಕುಸಿತವಾಗಿದೆ ಎಂದು ಹೇಳಲಾಗುತ್ತಿದೆ.

click me!