ಕೇಂದ್ರ ಸರ್ಕಾರದ ರಾಷ್ಟ್ರೀಯ ಶಿಕ್ಷಣ ನೀತಿಯನ್ನು (ಎನ್‌ಇಪಿ) 2021-22ನೇ ಸಾಲಿ ನಿಂದ ದೇಶದಲ್ಲೇ ಮೊದಲು ಕರ್ನಾ ಟಕದಲ್ಲಿ ಜಾರಿಗೊಳಿಸಿ ಪದವಿ ವ್ಯಾಸಂಗವನ್ನು 4 ವರ್ಷಗಳಿಗೆ ಹೆಚ್ಚಿಸಿದ್ದ ಕ್ರಮಕ್ಕೆ ಕೊಕ್ ನೀಡಿದಂತಾಗಿದೆ. ಜೊತೆಗೆ ಕಲೆ, ವಿಜ್ಞಾನ ಮತ್ತು ವಾಣಿಜ್ಯ ಹೀಗೆ ಬೇರೆ ಬೇರೆ ವಿಭಾಗದ ಮೇಜರ್ ವಿಷಯಗಳ ಆಯ್ಕೆ ಮಾಡಿಕೊಂಡು ವ್ಯಾಸಂಗ ಮಾಡಬಹುದಾದ ವ್ಯವಸ್ಥೆಗೂ ಕೆಲ ಮಾರ್ಪಾಡು ತರಲಾಗಿದೆ.
ಬೆಂಗಳೂರು(ಮೇ.09): ರಾಜ್ಯ ಶಿಕ್ಷಣ ನೀತಿ ಆಯೋಗದ ಮಧ್ಯಂತರ ವರದಿಯ ಶಿಫಾರಸುಗಳನ್ನು ಆಧರಿಸಿ ರಾಜ್ಯದಲ್ಲಿ 2024-25ನೇ ಸಾಲಿನಿಂದ ಪದವಿ ವ್ಯಾಸಂಗದ ಅವಧಿಯನ್ನು ನಾಲ್ಕು ವರ್ಷಗಳ ಬದಲು ಈ ಹಿಂದೆ ಇದ್ದಂತೆ ಮೂರು ವರ್ಷಗಳಿಗೆ ಸೀಮಿತಗೊಳಿಸಿ ಹಾಗೂ ಪದವಿ ಪಠ್ಯ ರಚನೆಯಲ್ಲಿ ಕೆಲ ಮಾರ್ಪಾಡುಗಳನ್ನು ಮಾಡಿ ಸರ್ಕಾರ ಆದೇಶಿಸಿದೆ.
ಆದರೆ, ಆದೇಶ ಅಥವಾ ಬದಲಾವಣೆಗಳು 2021-22, 2022-23, 2023-24 ನೇ ಶೈಕ್ಷಣಿಕ ವರ್ಷಗಳಲ್ಲಿ ಪದವಿಗೆ ಪ್ರವೇಶಾತಿ ಪಡೆದು ಪ್ರಸ್ತುತ ವಿವಿಧ ಸೆಮಿಸ್ಟರ್ ಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ ಗಳಿಗೆ ಅನ್ವಯಿಸುವುದಿಲ್ಲ. ಆ ವಿದ್ಯಾರ್ಥಿಗಳು ಪ್ರಸಕ್ತ ರಾಷ್ಟ್ರೀಯ ಶಿಕ್ಷಣ ನೀತಿ ಅನುಸಾರ 4ನೇ ವರ್ಷದ ಆನರ್ಸ್ ಪದವಿ ವ್ಯಾಸಂಗ ಮಾಡುವುದು, ಬಿಡುವುದು ಅವರ ಆಯ್ಕೆಗೇ ಬಿಟ್ಟದ್ದು ಎಂದು ಸರ್ಕಾರ ಸ್ಪಷ್ಟಪಡಿಸಿದೆ.
undefined
NEP ನೀತಿಯಿಂದ ಭಾರತ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ, ವಿಶ್ವ ರ್‍ಯಾಂಕಿಂಗ್ ವರದಿ ಪ್ರಕಟ!
ಇದರೊಂದಿಗೆ ಹಿಂದಿನ ಬಿಜೆಪಿ ಸರ್ಕಾರವು ಕೇಂದ್ರ ಸರ್ಕಾರದ ರಾಷ್ಟ್ರೀಯ ಶಿಕ್ಷಣ ನೀತಿಯನ್ನು (ಎನ್‌ಇಪಿ) 2021-22ನೇ ಸಾಲಿನಿಂದ ದೇಶದಲ್ಲೇ ಮೊದಲು ಕರ್ನಾ ಟಕದಲ್ಲಿ ಜಾರಿಗೊಳಿಸಿ ಪದವಿ ವ್ಯಾಸಂಗವನ್ನು 4 ವರ್ಷಗಳಿಗೆ ಹೆಚ್ಚಿಸಿದ್ದ ಕ್ರಮಕ್ಕೆ ಕೊಕ್ ನೀಡಿದಂತಾಗಿದೆ. ಜೊತೆಗೆ ಕಲೆ, ವಿಜ್ಞಾನ ಮತ್ತು ವಾಣಿಜ್ಯ ಹೀಗೆ ಬೇರೆ ಬೇರೆ ವಿಭಾಗದ ಮೇಜರ್ ವಿಷಯಗಳ ಆಯ್ಕೆ ಮಾಡಿಕೊಂಡು ವ್ಯಾಸಂಗ ಮಾಡಬಹುದಾದ ವ್ಯವಸ್ಥೆಗೂ ಕೆಲ ಮಾರ್ಪಾಡು ತರಲಾಗಿದೆ.
ಬುಧವಾರ ಸರ್ಕಾರ ಹೊರಡಿಸಿರುವ ಆದೇಶದ ಪ್ರಕಾರ ಇನ್ನುಂದೆ ರಾಜ್ಯದಲ್ಲಿ ಪದವಿ ವ್ಯಾಸಂಗ ಮೂರು ವರ್ಷಗಳಿಗೆ ಸೀಮಿತವಾಗಲಿದೆ. ಜೊತೆಗೆ ಪಠ್ಯ ವಿಷಯದ ಆಯ್ಕೆ ವೇಳೆ ಆರು ಸೆಮಿಸ್ಟರ್‌ಗಳಲ್ಲಿ ಒಂದೇ ವಿಭಾಗದ (ಕಲೆ ಅಥವಾ ವಿಜ್ಞಾನ ಅಥವಾ ವಾಣಿಜ್ಯ) ಮೂರು ಮೇಜರ್ ವಿಷಯ ಗಳೊಂದಿಗೆ ಸಾಮಾನ್ಯ ಪದವಿ ವ್ಯಾಸಂಗ ಮಾಡಬಹುದು. ಅಥವಾ 5 ಮತ್ತು 6ನೇ ಸೆಮಿಸ್ಟರ್‌ಗಳಲ್ಲಿ ಮೂರು ಮೇಜಯ್ ವಿಷಯಗಳಲ್ಲಿ ಯಾವುದಾದರೂ ಒಂದು ವಿಷಯಕ್ಕೆ ಪರ್ಯಾಯವಾಗಿ ಬೇರೆ ವಿಭಾಗದ ವಿಷಯವನ್ನು (ಸ್ಪೆಷಲೈಸೇಷನ್) ಆಯ್ಕೆ ಮಾಡಿಕೊಳ್ಳಬಹುದು. ಜೊತೆಗೆ ಮೊದಲನೇ ಸೆಮಿಸ್ಟರ್‌ನಿಂದಲೇ ಇತರೆ ವಿಷಯಗಳ ಜೊತೆಗೆ ಒಂದು ವಿಶೇಷವಾದ ಬೇರೆ ವಿಭಾಗದ ವಿಷಯವನ್ನು ಆಯ್ಕೆ ಮಾಡಿಕೊಂಡು ಓದಬ ಹುದು ಎಂದು ತಿಳಿಸಿದೆ.
ಇನ್ನು, ಎನ್‌ಇಪಿಯಲ್ಲಿ ವಿವಾದಕ್ಕೀಡಾಗಿದ್ದ ಮತ್ತೊಂದು ಅಂಶ ಪದವಿ ವ್ಯಾಸಂಗದ ವೇಳೆ ಮಧ್ಯೆ ಯಾವುದೇ ವರ್ಷ ಓದು ನಿಲ್ಲಿಸಬಹುದಿತ್ತು. ಈ ವೇಳೆ ಮೊದಲ ವರ್ಷಕ್ಕೆ ಸರ್ಟಿಫಿಕೇಟ್, ಎರಡನೇ ವರ್ಷಕ್ಕೆ ಡಿಪ್ಲೊಮಾ ಹೀಗೆ ಓದು ನಿಲ್ಲಿಸಿದ ವರ್ಷಕ್ಕೆ ಒಂದೊಂದು ಪ್ರಮಾಣ ಪತ್ರ ನೀಡಲು ಅವಕಾಶವಿತ್ತು. ಅದನ್ನು ಉಪಯೋಗಿಸಿಕೊಂಡು ವಿದ್ಯಾರ್ಥಿ ಮುಂದೆ ಯಾವಾಗ ಬೇಕಾದರೂ ಪದವಿ ವ್ಯಾಸಂಗ ಮುಂದುವರೆಸಬಹುದಿತ್ತು. ಸದ್ಯ ಈ ವ್ಯವಸ್ಥೆಯನ್ನು ಕೈಬಿಡುವ ಬಗ್ಗೆ ಯಾವುದೇ ಆಯೋಗವು ಮುಂದಿನ ಆಗಸ್ಟ್‌ನಲ್ಲಿ ನೀಡುವ ಅಂತಿಮ ವರದಿಯ ಆಧರಿಸಿ ತೀರ್ಮಾನ ಕೈಗೊಳ್ಳಲು ನಿರ್ಧರಿಸಿದೆ. ನಿರ್ಧಾರವನ್ನು ಸರ್ಕಾರ ಕೈಗೊಂಡಿಲ್ಲ.
4 ವರ್ಷದ ಡಿಗ್ರಿ ಪಾಸ್ ಆದ ವಿದ್ಯಾರ್ಥಿಗಳಿಗೆ ಪಿಎಚ್‌ಡಿಗೆ ನೇರ ಅವಕಾಶ
ವಿದೇಶಗಳಲ್ಲಿ ವಿಶೇಷವಾಗಿ ಅಮೇರಿಕಾದಲ್ಲಿ ಸ್ನಾತಕೋತ್ತರ ಪದವಿ ಕೋರ್ಸ್‌ಗಳ ಪ್ರವೇಶಕ್ಕೆ 4 ವರ್ಷದ ಪದವಿ ಪೂರ್ಣಗೊಳಿಸಿರಬೇಕು. ಈ ಜಾಗತಿಕ ಶೈಕ್ಷಣಿಕ ಪದ್ಧತಿಗಳೊಂದಿಗೆ ಸಾಮ್ಯತೆ ಸಾಧಿಸುವ ಉದ್ದೇಶದಿಂದ ಪದವಿ ವ್ಯಾಸಂಗದ ಅವಧಿಯನ್ನು ಎನ್‌ಇಪಿ ಅಡಿಯಲ್ಲಿ 4 ವರ್ಷಕ್ಕೆ ಹೆಚ್ಚಿಸಲಾಗಿದೆ.
ಇಂದಿನಿಂದ ಪದವಿ ಪ್ರವೇಶ ಪ್ರಕ್ರಿಯೆ ಆರಂಭ
2024-25ನೇ ಸಾಲಿನ ಮೂರು ವರ್ಷದ ಪದವಿ ಪ್ರವೇಶ ಪ್ರಕ್ರಿಯೆಯು ಮೇ 9ರಿಂದ ಆರಂಭವಾಗಲಿದೆ. ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳು ಹಾಗೂ ಅವುಗಳ ಸಂಯೋಜಿತ ಕಾಲೇಜುಗಳು ಕಾಲೇಜು ಶಿಕ್ಷಣ ಇಲಾಖೆಯ ಸಮಗ್ರ ವಿಶ್ವವಿದ್ಯಾಲಯ ಮತ್ತು ಕಾಲೇಜುಗಳ ನಿರ್ವಹಣಾ ವ್ಯವಸ್ಥೆ (ಯುಯುಸಿಎಂಎಸ್) ತಂತ್ರಾಂಶದ ಮೂಲಕ ಎಲ್ಲ ವಿವಿಗಳು ಮತ್ತು ಕಾಲೇಜುಗಳು ಪದವಿ ಪ್ರವೇಶ ಪ್ರಕ್ರಿಯೆ ನಡೆಸಬಹುದು ಎಂದು ಸರ್ಕಾರ ತನ್ನ ಆದೇಶದಲ್ಲಿ ತಿಳಿಸಿದೆ.