2021-22ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದೆ. ಶೇಕಡಾವಾರು 85.63 ಫಲಿತಾಂಶ ಬಂದಿದೆ. ವಿಶೇಷವೆಂದರೆ ಈ ಬಾರಿಯೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಮೇಲುಗೈ ಸಾಧಿಸಿದ್ದಾರೆ.
ಬೆಂಗಳೂರು (ಮೇ.19): 2021-22ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶ (karnataka sslc result 2022) ಪ್ರಕಟವಾಗಿದೆ. ಶೇಕಡಾವಾರು 85.63 ಫಲಿತಾಂಶ ಬಂದಿದೆ. ಇದು ಕಳೆದ 10 ವರ್ಷಗಳಲ್ಲಿ ದಾಖಲೆಯ ಫಲಿತಾಂಶವಾಗಿದೆ. ವಿಶೇಷವೆಂದರೆ ಈ ಬಾರಿಯೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಶೇ.91.32 ರ ಮೂಲಕ ಮೇಲುಗೈ ಸಾಧಿಸಿದ್ದಾರೆ. ನಗರದ ವಿದ್ಯಾರ್ಥಿಗಳಿಗೆ ಶೇ.86.64 ಫಲಿತಾಂಶ ಬಂದಿದೆ.
ಗ್ರಾಮೀಣ ಭಾಗದ 4,69,105 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ ಅದರಲ್ಲಿ 4,28,385 ಮಂದಿ ಉತ್ತೀರ್ಣರಾಗಿದ್ದಾರೆ. ನಗರ ಪ್ರದೇಶದ 3,38,101 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ ಅದರಲ್ಲಿ 2,92,946 ಮಂದಿ ಮಾತ್ರ ಉತ್ತೀರ್ಣರಾಗಿದ್ದಾರೆ.
ಈ ಬಾರಿ 145 ಮಂದಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ಜೂನ್ 27 ರಿಂದ ಜುಲೈ 4 ರವರೆಗೆ ಪೂರಕ ಪರೀಕ್ಷೆ ನಡೆಯಲಿದೆ ಎಂದು ಇದೇ ವೇಳೆ ಶಿಕ್ಷಣ ಸಚಿವರು ತಿಳಿಸಿದ್ದಾರೆ. ಕೊರೋನಾ ಆತಂಕ, ಹಿಜಾಬ್ ವಿವಾದದ ನಡುವೆ ಪರೀಕ್ಷೆಗೆ ಹಾಜರಾಗಿದ್ದ, 8,73,884 ವಿದ್ಯಾರ್ಥಿಗಳ ಪೈಕಿ 8,53,436 ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು. ಇದರಲ್ಲಿ 7,30,881 ಮಂದಿ ಉತ್ತೀರ್ಣರಾಗಿದ್ದಾರೆ. ಇದರಲ್ಲಿ 40,061 ಮಂದಿ ಗ್ರೇಸ್ ಮಾರ್ಕ್ ಮೂಲಕ ಪಾಸ್ ಆಗಿದ್ದಾರೆ.
KARNATAKA SSLC 2022 TOPPER ಬಡತನದಲ್ಲಿ ಅರಳಿದ ವಿಜಯಪುರದ ಪ್ರತಿಭೆ ರಾಜ್ಯಕ್ಕೆ ಟಾಪರ್!
ಒಟ್ಟು 4,08,523 ಬಾಲಕರು ಪರೀಕ್ಷೆಗೆ ಹಾಜರಾಗಿ 3,52,752 ಮಂದಿ ಪಾಸ್ ಆಗುವ ಮೂಲಕ ಬಾಲಕರು ಶೇ. 86.34 ಮತ್ತು ಒಟ್ಟು 3,98,683 ಬಾಲಕಿಯರು ಪರೀಕ್ಷೆಗೆ ಹಾಜರಾಗಿ 3,68,579 ಮಂದಿ ಪಾಸ್ ಆಗಿ ಶೇ.92.44 ಫಲಿತಾಂಶದ ಮೂಲಕ ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.
ಒಟ್ಟು 145 ಮಂದಿ ಈ ಬಾರಿ 625ಕ್ಕೆ 625 ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.ರಾಜ್ಯದ 3,920 ಶಾಲೆಗಳಿಗೆ ಶೇ.100 ಫಲಿತಾಂಶ ಬಂದಿದೆ. ಸರಕಾರಿ ಶಾಲೆಗೆ ಶೇ.88 ಫಲಿತಾಂಶ, ಅನುದಾನಿತ ಶಾಲೆಯಲ್ಲಿ ಶೇ.87.84 ಫಲಿತಾಂಶ ಅನುದಾನ ರಹಿತ ಶಾಲೆ ಶೇ.92.29 ಫಲಿತಾಂಶ ಬಂದಿರುತ್ತದೆ.
ವಿಶೇಷವೆಂದರೆ ಈ ಬಾರಿ 625ಕ್ಕೆ 625 ಪಡೆದು 145 ಮಂದಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ಮಿಕ್ಕಂತೆ
625ಕ್ಕೆ 624 ಅಂಕ ಪಡೆದವರು- 309 ವಿದ್ಯಾರ್ಥಿಗಳು
625ಕ್ಕೆ 623ಅಂಕ ಪಡೆದವರು 472 ವಿದ್ಯಾರ್ಥಿಗಳು
622 ಅಂಕ ಪಡೆದವರು- 615 ವಿದ್ಯಾರ್ಥಿಗಳು
621 ಅಂಕ ಪಡೆದವರು- 706 ವಿದ್ಯಾರ್ಥಿಗಳು
620 ಅಂಕ ಪಡೆದವರು -773 ವಿದ್ಯಾರ್ಥಿಗಳು
Karnataka SSLC Toppers List: ಒಟ್ಟು 145 ವಿದ್ಯಾರ್ಥಿಗಳು ರಾಜ್ಯಕ್ಕೆ ಪ್ರಥಮ!
Out of Out ಅಂಕ ಪಡೆದ ಮಕ್ಕಳ ಸಂಖ್ಯೆ:
* ಪ್ರಥಮ ಭಾಷೆ ಕನ್ನಡ- 125ಕ್ಕೆ 125 ಅಂಕ ಪಡೆದ ವಿದ್ಯಾರ್ಥಿಗಳು 19,125
* ದ್ವಿತೀಯ ಭಾಷೆ 100ಕ್ಕೆ 100 ಮಾರ್ಕ್ಸ್ ಅನ್ನು- 13,425 ವಿದ್ಯಾರ್ಥಿಗಳು ಪಡೆದುಕೊಂಡಿದ್ದಾರೆ
* ತೃತೀಯ ಭಾಷೆ100ಕ್ಕೆ 100 ಅಂಕ ಪಡೆದವರು 43,126 ವಿದ್ಯಾರ್ಥಿಗಳು
* ಗಣಿತದಲ್ಲಿ 100ಕ್ಕೆ ನೂರು ಅಂಕವನ್ನು 13,683 ವಿದ್ಯಾರ್ಥಿಗಳು ಪಡೆದಿದ್ದಾರೆ
* ವಿಜ್ಞಾನ- 100ಕ್ಕೆ 100 ಅಂಕ ಪಡೆದ ವಿದ್ಯಾರ್ಥಿಗಳ ಸಂಖ್ಯೆ 6,592
* ಸಮಾಜ ವಿಜ್ಞಾನ100ಕ್ಕೆ 100 ಅಂಕ ಪಡೆದ ವಿದ್ಯಾರ್ಥಿಗಳ ಸಂಖ್ಯೆ 50,782
ಫಲಿತಾಂಶ ನೋಡಲು ಅಭ್ಯರ್ಥಿಗಳು https://karresults.nic.in/ ಗೆ ಭೇಟಿ ನೀಡಿ ಮೊದಲಿಗೆ ತಮ್ಮ ಪರೀಕ್ಷಾ ರಿಜಿಸ್ಟರ್ ನಂಬರ್ ಅನ್ನು ದಾಖಲಿಸಿ. ತದ ನಂತರ ಹಾಲ್ ಟಿಕೆಟ್ ನಲ್ಲಿ ನಮೂದಿಸಿರುವ ಹುಟ್ಟಿದ ದಿನಾಂಕ, ತಿಂಗಳು ಮತ್ತು ವರ್ಷವನ್ನು ನಮೂದಿಸಿ ಬಳಿಕ ಸಬ್‌ಮಿಟ್ ಬಟನ್ ಒತ್ತಿ. ಕೂಡಲೇ ನಿಮ್ಮ ಅಂಕಗಳ ಪಟ್ಟಿ ವಿಷಯಾವಾರು ಕಾಣಿಸಿಕೊಳ್ಳುತ್ತದೆ. ಮುಂದಿನ ದಾಖಲಾತಿಗೆ ಇದನ್ನು ಡೌನ್ ಲೋಡ್ ಮಾಡಿ ಇಟ್ಟುಕೊಳ್ಳಿ.