Karnataka SSLC Toppers List: ಒಟ್ಟು 145 ವಿದ್ಯಾರ್ಥಿಗಳು ರಾಜ್ಯಕ್ಕೆ ಪ್ರಥಮ!

By Suvarna News  |  First Published May 19, 2022, 1:43 PM IST

Karnataka SSLC 2022 Toppers List: ಎಸ್​ಎಸ್​ಎಲ್​ಸಿ ಪರೀಕ್ಷೆ 2022ರ ಫಲಿತಾಂಶ  ಪ್ರಕಟವಾಗಿದ್ದು,  145 ಮಂದಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ಫಲಿತಾಂಶ  ತಿಳಿಯಲು https://karresults.nic.in/ ಗೆ ಭೇಟಿ ನೀಡಿ


ಬೆಂಗಳೂರು (ಮೇ.19): 2021-22ನೇ ಸಾಲಿನ ಎಸ್​ಎಸ್‌ಎಲ್​ಸಿ ಪರೀಕ್ಷೆ  ಫಲಿತಾಂಶ (karnataka sslc result 2022) ಪ್ರಕಟವಾಗಿದೆ. ಶೇಕಡಾವಾರು 85.63 ಫಲಿತಾಂಶ ಬಂದಿದೆ.  ಇದು ಕಳೆದ 10 ವರ್ಷಗಳಲ್ಲಿ ದಾಖಲೆಯ ಫಲಿತಾಂಶವಾಗಿದೆ. ವಿಶೇಷವೆಂದರೆ ಈ ಬಾರಿ 145 ಮಂದಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ವಿಜಪುರ ಜಿಲ್ಲೆಯ ಅಮಿತ್‌ ಮಾದರ್‌, ತುಮಕೂರಿನ ಬಿ.ಆರ್.‌ ಭೂಮಿಕಾ, ಹಾವೇರಿಯ ಪ್ರವೀಣ್ ನೀರಲಗಿ‌, ಬೆಳಗಾವಿಗ ಸಹಾನಾ, ವಿಜಯರಪುರದ ಐಶ್ವರ್ಯ ಕನಸೆ, ಉಡುಪಿಯ ಗಾಯತ್ರಿ, ಅನೀಶ್,ವಿದ್ಯಾಮಂದಿರ ಶಾಲೆ ಮಲ್ಲೇಶ್ವರಂ ಹೀಗೆ ಹಲವು ಮಂದಿ ಟಾಪರ್ ಆಗಿದ್ದಾರೆ.

ಮಿಕ್ಕಂತೆ ನಂತರದ ಸ್ಥಾನ ಪಡೆದ ವಿದ್ಯಾರ್ಥಿಗಳ ಸಂಖ್ಯೆ ಇಂತಿದೆ

Tap to resize

Latest Videos

625ಕ್ಕೆ 624 ಅಂಕ ಪಡೆದವರು- 309 ವಿದ್ಯಾರ್ಥಿಗಳು
625ಕ್ಕೆ 623ಅಂಕ ಪಡೆದವರು 472 ವಿದ್ಯಾರ್ಥಿಗಳು
622 ಅಂಕ ಪಡೆದವರು- 615 ವಿದ್ಯಾರ್ಥಿಗಳು
621 ಅಂಕ ಪಡೆದವರು- 706 ವಿದ್ಯಾರ್ಥಿಗಳು
620 ಅಂಕ ಪಡೆದವರು  -773 ವಿದ್ಯಾರ್ಥಿಗಳು

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ  ಬಿ.ಸಿ. ನಾಗೇಶ್ (Minister of Primary and SecondEducation BC Nagesh) ಫಲಿತಾಂಶ ಪ್ರಕಟಿಸಿದ್ದಾರೆ.  ಕೊರೋನಾ ಆತಂಕ, ಹಿಜಾಬ್ ವಿವಾದದ ನಡುವೆ ಪರೀಕ್ಷೆಗೆ ಹಾಜರಾಗಿದ್ದ, 8,73,884 ವಿದ್ಯಾರ್ಥಿಗಳ ಪೈಕಿ 8,53,436 ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು. ಇದರಲ್ಲಿ 7,30,881 ಮಂದಿ ಉತ್ತೀರ್ಣರಾಗಿದ್ದಾರೆ. ಇದರಲ್ಲಿ 40,061 ಮಂದಿ ಗ್ರೇಸ್ ಮಾರ್ಕ್ ಮೂಲಕ ಪಾಸ್ ಆಗಿದ್ದಾರೆ.  

KARRESULTS.NIC.IN SSLC RESULT 2022 ಪ್ರಕಟ, ಶೇ.85.63 ಫಲಿತಾಂಶ, ಬಾಲಕಿಯರೇ ಮೇಲು ಗೈ

ಒಟ್ಟು 4,08,523 ಬಾಲಕರು ಪರೀಕ್ಷೆಗೆ ಹಾಜರಾಗಿ 3,52,752 ಮಂದಿ ಪಾಸ್ ಆಗುವ ಮೂಲಕ ಬಾಲಕರು ಶೇ. 86.34 ಮತ್ತು ಒಟ್ಟು 3,98,683 ಬಾಲಕಿಯರು ಪರೀಕ್ಷೆಗೆ ಹಾಜರಾಗಿ 3,68,579  ಮಂದಿ ಪಾಸ್ ಆಗಿ ಶೇ.92.44 ಫಲಿತಾಂಶದ  ಮೂಲಕ ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. 

ಈ ಬಾರಿಯೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಶೇ.91.32 ರ ಮೂಲಕ ಮೇಲುಗೈ ಸಾಧಿಸಿದ್ದಾರೆ. ನಗರದ ವಿದ್ಯಾರ್ಥಿಗಳಿಗೆ ಶೇ.86.64 ಫಲಿತಾಂಶ ಬಂದಿದೆ.

Out of Out ಅಂಕ ಪಡೆದ ಮಕ್ಕಳ ಸಂಖ್ಯೆ:
* ಪ್ರಥಮ ಭಾಷೆ ಕನ್ನಡ- 125ಕ್ಕೆ 125 ಅಂಕ ಪಡೆದಿದ್ದ ವಿದ್ಯಾರ್ಥಿಗಳು  19,125 
* ದ್ವಿತೀಯ ಭಾಷೆ 100ಕ್ಕೆ 100 ಮಾರ್ಕ್ಸ್ ಅನ್ನು- 13,425 ವಿದ್ಯಾರ್ಥಿಗಳು ಪಡೆದುಕೊಂಡಿದ್ದರು.
* ತೃತೀಯ ಭಾಷೆ100ಕ್ಕೆ 100 ಅಂಕ ಪಡೆದಿದ್ದವರು  43,126 ವಿದ್ಯಾರ್ಥಿಗಳು
* ಗಣಿತದಲ್ಲಿ 100ಕ್ಕೆ ನೂರು ಅಂಕವನ್ನು 13,683 ವಿದ್ಯಾರ್ಥಿಗಳು ಪಡೆದಿದ್ದರು
* ವಿಜ್ಞಾನ- 100ಕ್ಕೆ 100 ಅಂಕ ಪಡೆದ ವಿದ್ಯಾರ್ಥಿಗಳ ಸಂಖ್ಯೆ 6,592
* ಸಮಾಜ ವಿಜ್ಞಾನ100ಕ್ಕೆ 100 ಅಂಕ ಪಡೆದ ವಿದ್ಯಾರ್ಥಿಗಳ ಸಂಖ್ಯೆ  50,782

Karnataka SSLC Result 2022 Live Update: ಶೇ.85.63 ಫಲಿತಾಂಶ, 145 ಮಂದಿ ಔಟ್ ಆಫ್ ಔಟ್!

ಫಲಿತಾಂಶ ನೋಡಲು ಅಭ್ಯರ್ಥಿಗಳು https://karresults.nic.in/ ಗೆ ಭೇಟಿ ನೀಡಿ ಮೊದಲಿಗೆ ತಮ್ಮ ಪರೀಕ್ಷಾ ರಿಜಿಸ್ಟರ್ ನಂಬರ್ ಅನ್ನು ದಾಖಲಿಸಿ. ತದ ನಂತರ ಹಾಲ್ ಟಿಕೆಟ್ ನಲ್ಲಿ ನಮೂದಿಸಿರುವ ಹುಟ್ಟಿದ ದಿನಾಂಕ, ತಿಂಗಳು ಮತ್ತು ವರ್ಷವನ್ನು ನಮೂದಿಸಿ ಬಳಿಕ ಸಬ್‌ಮಿಟ್ ಬಟನ್ ಒತ್ತಿ. ಕೂಡಲೇ ನಿಮ್ಮ ಅಂಕಗಳ ಪಟ್ಟಿ ವಿಷಯಾವಾರು ಕಾಣಿಸಿಕೊಳ್ಳುತ್ತದೆ. ಮುಂದಿನ ದಾಖಲಾತಿಗೆ ಇದನ್ನು ಡೌನ್ ಲೋಡ್ ಮಾಡಿ ಇಟ್ಟುಕೊಳ್ಳಿ.

625ಕ್ಕೆ 625 ಅಂಕ ಗಳಿಸಿದ ವಿದ್ಯಾರ್ಥಿಗಳ ಪಟ್ಟಿ: 

  1. AMIT MADAR

  2. BHUMIKA B R

  3. PRAVEEN NEERALAGI

  4. SAHANA MAHANTESH RAYAR

  5. AISHWARYA LAXMAN KANASE

  6. AKRUTHI S S

  7. ARJUN E NAIK

  8. CHIRAG MAHESH NAIK

  9. EAKTHA M G

  10. GAYATHRI

  11. NISHA

  12. PRAGATHI H N

  13. PUNEETH NAIKA

  14. ROSHAN

  15. SATHVIK H S

  16. SHAMBHU SHIVANAND KHANAI 

  17. SHIVALEELA SHIVALINGAPPA DURGE

  18. SINCHANA K M

  19. SWATI GOUDAPPA MALED

  20. VAISHNAVI SHETTY

  21. YASHWITHA T S

  22. KANNIKAPARAME SHWARI RAMACHANDRA HEGDE

  23. MADHU BASAVARAJ SHETASANADI

  24. SWATI SURESH TOLAGI

  25. VARSHA ANIL PATIL

  26. ADITHYA A S

  27. CHARUKEERTHY K

  28. MAHALAKSHMI C

  29. SUJAY B

  30. INDIRA ARUN NYAMAGOUDAR

  31. IRAYYA SHRISHAIL SHEGUNASIMATH

  32. KALMESHWAR PUNDALIK NAIK

  33. SHREYA R SHETTY

  34. SUDESH DATTATRAY KILLEDAR

  35. ABHAY SHARMA K

  36. ABHIJHNA B

  37. ABHIJNA R

  38. ABHISHEK GOWDA K

  39. ADARSH BASAVARAJ

  40. HALBHAVI

  41. ADITHI B S

  42. AKSHATHA

  43. AMOGH N KOUSHIK

  44. AMRUTHA B

  45. AMULYA M S

  46. ANAGHA M MURTHY

  47. ANANYA H N

  48. ANEESHA N BHARADWAJ

  49. ANNAPOORNA H V

  50. APOORVA H S

  51. ATHMEEYA M

  52. KASHYAP

  53. AVANI K

  54. B JAYASRI

  55. BHOOMIKA B K

  56. BHUMIKA C R

  57. BHUVAN KUNCHUM R

  58. C S KAVANA

  59. CHAITHANYA J

  60. CHANDU S

  61. CHARITHA M GOWDA

  62. DEEKSHA PANDURANG NAIK

  63. DEVIKA G

  64. DHANYASHREE

  65. DISHA B M

  66. G HARSHITHA

  67. GAGAN K M

  68. GANA C SHEKHAR

  69. HARSHITHA H C

  70. HARSHITHA M

  71. HEMANTH S GOWDA

  72. INCHARA L

  73. JAYATHI B GOWDA

  74. JNANAVI H D

  75. KALYAN M M

  76. KARNIKA A

  77. KARTIK BHAT

  78. LAVANYA H N

  79. LIKITHA H D

  80. LISA H C

  81. MADHURA A

  82. MADHUSHREE

  83. MANJUNATHA B

  84. MEGHANA VISHNU BHAT

  85. MOHAMMED ASHIQ S

  86. MOHITH H

  87. MONISH GOWDA N D

  88. NAMRATH G P

  89. NITHYA R

  90. NIVEDITHA H Y

  91. PANCHAMI C

  92. PANCHAMI R

  93. PARNIKA Y K

  94. PRAJNA H R

  95. PRAKRUTHI P

  96. PRANATHI MURTHY

  97. PRATHEEKSHA DAYANANDA

  98. PREETAM RAVALAPPA PANASUDAKAR

  99. PREETHI S

  100. PRERANA B

  101. PRERANA M SALUNKE

  102. PUNEETHA B B

  103. PURVIKA S

  104. RAKSHA B M

  105. RAKSHIT SURESH CHINIWAR

  106. RAKSHITHA S N

  107. ROHINI GOUDAR

  108. RUTU AMOLTALATHI

  109. S B VIDYASHREE

  110. SAKSHI PATIL

  111. SAMEEKSHA S

  112. SAMSKRITI P KUMAR

  113. SANJANA C A

  114. SANJANA PRAVEEN

  115. SHAMA S SHETTY

  116. SHARMEEN M SHAIKH

  117. SHIVANAND BASAGOUD PATIL

  118. SHRAVANI G R

  119. SHREEJA HEBBAR

  120. SHREEKANT BELLE

  121. SHREYA C J

  122. SHREYA DESAI

  123. SHREYA R

  124. SPOORTHY G C

  125. SRI LAKSHMI M

  126. SRUSHTI J

  127. SRUSHTI MAHESH PATTAR

  128. SRUSHTI V R

  129. SUCHARITHA R

  130. SUPRIYA K S

  131. SURAJ GOWDA M N

  132. SUSHMITA

  133. SWASTHI

  134. TASNEEM FIRDOSE HUNSHAL

  135. TEJASHWINI CHAVAN

  136. THRUPTHI K C

  137. TUSHAR KESHAV SHANBHAG

  138. V AKSHATHA KAMATH

  139. VASAVI S PURANIK

  140. VEEKSHA V SHETTY

  141. VIKAS K R

  142. VISHNU PRIYA R

  143. VIVEKANAND

  144. MAHANTESH HONNALLI

  145. VYANKATESH YOGESH DONGARE

  146. YALLALING BASAPPA SULIBHAVI'

  147. YASHASWI URS M

  148. YUKTHA B
     

click me!