ಬೆಂಗಳೂರು (ಜೂ.12): ಅಸೆಸ್ಮೆಂಟ್ ಮೂಲಕ ಫಲಿತಾಂಶ ನೀಡಲು ಮುಂದಾಗಿದ್ದ ಪಿಯು ಬೋರ್ಡ್ಗೆ ಪಿಯು ಅತಿಥಿ ಉಪನ್ಯಾಸಕರು ಶಾಕ್ ಕೊಟ್ಟಿದ್ದಾರೆ.
ಪ್ರಥಮ ಪಿಯುಸಿ ಮೌಲ್ಯಮಾಪನದಿಂದ ಹಿಂದೆ ಸರಿದು ಮೌಲ್ಯಮಾಪನ ಪ್ರಕ್ರಿಯೆ ನಡೆಸದೆ ಬಹಿಷ್ಕಾರ ಹಾಕಲು ನಿರ್ಧಾರ ಮಾಡಿಕೊಂಡಿದ್ದಾರೆ. ಈ ಮೂಲಕ ಶಿಕ್ಷಣ ಇಲಾಖೆಗೆ ಶಾಕ್ ಕೊಟ್ಟಿದ್ದಾರೆ.
undefined
ಹಲವು ಅತಿಥಿ ಉಪನ್ಯಾಸಕರನ್ನ ಕೆಲಸದಿಂದ ಏಕಾಏಕಿ ಬಿಡುಗಡೆಗೊಳಿಸಲಾಗಿತ್ತು. 2021ರ ಏ.21 ರಂದು ಸೇವೆಯಿಂದ ಬಿಡುಗಡೆಗೊಳಿಸಲಾಗಿತ್ತು. ಅಲ್ಲದೇ ಹಲವು ತಿಂಗಳಿಂದ ವೇತನವನ್ನೂ ಕೊಡದೆ ಶಿಕ್ಷಣ ಇಲಾಖೆ ಸತಾಯಿಸುತ್ತಿದ್ದು, ಇದರಿಂದಾಗಿ ಸರ್ಕಾರಿ ಪಿಯು ಅತಿಥಿ ಉಪನ್ಯಾಸಕರೆಲ್ಲರೂ ಮೌಲ್ಯಮಾಪನ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ.
ಪಿಯು ವಿದ್ಯಾರ್ಥಿಗಳಿಗೆ ಶಾಕ್, ಪರೀಕ್ಷೆ ಬರೆಯಲೇಬೇಕು ..
ರಾಜ್ಯದಲ್ಲಿ ಒಟ್ಟು 1,835 ಸರ್ಕಾರಿ ಪಿಯು ಅತಿಥಿ ಉಪನ್ಯಾಸಕರಿದ್ದು, ಮೌಲ್ಯಮಾಪನ ಮಾಡಲು ಸಾಕಷ್ಟು ಬೇಡಿಕೆಗಳನ್ನು ಸರ್ಕಾರ ಮುಂದೆ ಇಟ್ಟಿದ್ದಾರೆ.
2020-21ಸಾಲಿನ ಪ್ರಥಮ ಪಿಯು ಫಲಿತಾಂಶ ಬರುವ ತನಕ ನೇಮಕ ಮಾಡಬೇಕು, ಅತಿಥಿ ಉಪನ್ಯಾಸಕರಿಗೆ ಮಾಸಿಕ ಗೌರವ ಧನ ನೀಡಬೇಕು. ಇಲ್ಲವಾದಲ್ಲಿ ತಮ್ಮ ನಿರ್ಧಾರ ಬದಲಿಸುವುದಿಲ್ಲ ಎಂದು ಹೇಳಿದ್ದಾರೆ. ಈ ಮೂಲಕ ಶಾಕ್ ನೀಡಿದ್ದಾರೆ.