2nd PUC Revised Time Table: ಗಮನಿಸಿ, ದ್ವಿತೀಯ ಪಿಯುಸಿ ಪರೀಕ್ಷೆಯ ಪರಿಷ್ಕೃತ ವೇಳಾಪಟ್ಟಿ ಬಿಡುಗಡೆ

By Suvarna News  |  First Published Feb 13, 2022, 5:24 PM IST

ಎಪ್ರಿಲ್/ಮೇ ತಿಂಗಳಿನಲ್ಲಿ ನಡೆಯುವ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ  ಪರಿಷ್ಕೃತ  ವೇಳಾಪಟ್ಟಿಯನ್ನು ಪದವಿ ಪೂರ್ವ ಶಿಕ್ಷಣ ಇಲಾಖೆ ಬಿಡುಗಡೆ ಮಾಡಿದೆ.


ಬೆಂಗಳೂರು(ಫೆ.13): ಎಪ್ರಿಲ್/ಮೇ ತಿಂಗಳಿನಲ್ಲಿ ನಡೆಯುವ ದ್ವಿತೀಯ ಪಿಯುಸಿ  (2nd PUC)  ವಾರ್ಷಿಕ ಪರೀಕ್ಷೆಯ ವೇಳಾಪಟ್ಟಿಯನ್ನು ಪದವಿ ಪೂರ್ವ ಶಿಕ್ಷಣ ಇಲಾಖೆ  (Karnataka PU Board)  ಪರಿಷ್ಕರಣೆ ಮಾಡಿ ಶನಿವಾರ ಆದೇಶ ಹೊರಡಿಸಿದೆ. ಪರೀಕ್ಷೆ ಎಂದಿನಂತೆ ಏ.16ರಿಂದ ಮೇ.6ರವರೆಗೆ ನಡೆಯಲಿದೆ. ಏ.21ರಂದು ನಡೆಯಬೇಕಿದ್ದ ಭಾಷಾ ವಿಷಯಗಳಲ್ಲಿ ಉರ್ದು ಮತ್ತು ಅರೇಬಿಕ್ ವಿಷಯಗಳನ್ನು ಪ್ರತ್ಯೇಕಿಸಿ ಪರೀಕ್ಷೆ ನಡೆಸಲಾಗುತ್ತಿದೆ. 

ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ವೇಳಾಪಟ್ಟಿಯನ್ನು ಇಲಾಖೆಯ ಅಧಿಕೃತ ವೆಬ್‌ಸೈಟ್‌ https://pue.kar.nic.in/ ನಲ್ಲಿ ಚೆಕ್‌ ಮಾಡಬಹುದು. ಇದರ ಪ್ರಕಾರವಾಗಿ ಏ.21ರಂದು ಉರ್ದು ಪರೀಕ್ಷೆ ಎಂದಿಂತೆ ನಡೆಯಲಿದ್ದು, ಈ ಮೊದಲು ರಜೆ ಅವಧಿಯಾಗಿದ್ದ ಏ.29ಕ್ಕೆ ಅರೆಬಿಕ್ ಪರೀಕ್ಷೆ ನಡೆಸುವುದಾಗಿ ಪ್ರಕಟಣೆಯಲ್ಲಿ ತಿಳಿಸಿದೆ. 

Tap to resize

Latest Videos

NDRI RECRUITMENT 2022: ರಾಷ್ಟ್ರೀಯ ಹೈನು ಸಂಶೋಧನಾ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗೆ ಈ ಕೂಡಲೇ ಅರ್ಜಿ ಸಲ್ಲಿಸಿ

ಹೊಸ ವೇಳಾಪಟ್ಟಿ ವಿವರ ಇಂತಿದೆ...

  • ಏಪ್ರಿಲ್ 16: ಗಣಿತ, ಶಿಕ್ಷಣ, ಬೇಸಿಕ್ ಗಣಿತ
  • ಏಪ್ರಿಲ್ 18: ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ
  • ಏಪ್ರಿಲ್ 19: ಮಾಹಿತಿ ತಂತ್ರಜ್ಞಾನ, ರಿಟೇಲ್, ಆಟೋ ಮೊಬೈಲ್, ಹೆಲ್ತ್ ಕೇರ್, ಬ್ಯೂಟಿ ಮತ್ತು ವೆಲ್ ನೆಸ್
  • ಏಪ್ರಿಲ್ 20: ಇತಿಹಾಸ, ಭೌತಶಾಸ್ತ್ರ
  • ಏಪ್ರಿಲ್ 21: ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್
  • ಏಪ್ರಿಲ್ 22: ಲಾಜಿಕ್, ಬಿಸಿನೆಸ್ ಸ್ಟಡೀಸ್
  • ಏಪ್ರಿಲ್ 23: ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ, ಮನೋವಿಜ್ಞಾನ, ರಸಾಯನಶಾಸ್ತ್ರ
  • ಏಪ್ರಿಲ್ 25: ಅರ್ಥಶಾಸ್ತ್ರ
  • ಏಪ್ರಿಲ್ 26: ಹಿಂದಿ
  • ಏಪ್ರಿಲ್ 28: ಕನ್ನಡ
  • ಏಪ್ರಿಲ್ 29: ಅರೇಬಿಕ್
  • ಏಪ್ರಿಲ್ 30: ಸಮಾಜಶಾಸ್ತ್ರ, ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್
  • ಮೇ 2: ಭೂಗೋಳ, ಜೀವಶಾಸ್ತ್ರ
  • ಮೇ 4: ಇಂಗ್ಲಿಷ್
  • ಮೇ 6: ಲೆಕ್ಕ ಶಾಸ್ತ್ರ, ಭೂಗರ್ಭಶಾಸ್ತ್ರ, ಗೃಹ ವಿಜ್ಞಾನ, ಕನ್ನಡ (ಐಚ್ಛಿಕ)

ಈ ಬಾರಿ ಪದವಿ ಪೂರ್ವ ಶಿಕ್ಷಣ ಇಲಾಖೆಯೇ (PU Board) ಸಿದ್ಧಪಡಿಸಿ ನೀಡಿದ್ದ ಮಧ್ಯವಾರ್ಪಿಕ ಪ್ರಶ್ನೆ ಪತ್ರಿಕೆಗಳಲ್ಲಿ ಲೋಪಗಳ ಬಗ್ಗೆ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರಿಂದಲೇ ಆರೋಪಗಳು ಕೇಳಿಬರುತ್ತಿವೆ. ಲೆಕ್ಕಶಾಸ್ತ್ರ, ಇಂಗ್ಲಿಷ್‌ (english) , ಗಣಿತ, ರಸಾಯನಶಾಸ್ತ್ರ ಸೇರಿದಂತೆ ವಿವಿಧ ವಿಷಯಗಳ ಪ್ರಶ್ನೆ ಪತ್ರಿಕೆಗಳಲ್ಲಿ ಈ ರೀತಿಯ ಹಲವು ಲೋಪಗಳು ಕಂಡು ಬಂದಿದ್ದವು.

Global remarks on hijab row: ನಮ್ಮ ಆಂತರಿಕ ವಿಚಾರದಲ್ಲಿ ಮೂಗು ತೂರಿಸಬೇಡಿ, ವಿದೇಶಗಳಿಗೆ ಭಾರತದ ಖಡಕ್ ಎಚ್ಚರಿಕೆ

ಮುಂದಿನ ವಾರದಿಂದ ಪದವಿ ತರಗತಿಗಳು ಪ್ರಾರಂಭ: ಕರ್ನಾಟಕದಲ್ಲಿ  ಫೆ.14ರಿಂಧ  ಪ್ರೌಢಶಾಲೆಗಳ 9 ಮತ್ತು 10ನೇ ತರಗತಿಗಳು ಆರಂಭವಾಗಲಿವೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆಯಲಿರುವ ಸಭೆಯಲ್ಲಿ ಪಿಯು ಮತ್ತು ಪದವಿ ಕಾಲೇಜುಗಳನ್ನು ಆರಂಭಿಸುವ ಬಗ್ಗೆ ನಿರ್ಧಾರ ಮಾಡಲಾಗುವುದು. ಬಹುತೇಕ ಮುಂದಿನ ವಾರದಿಂದ ಪದವಿ ತರಗತಿಗಳು ಆರಂಭವಾಗಲಿವೆ ಎಂದು ಹಾಸನ ಜಿಲ್ಲೆ ಅರಸೀಕೆರೆಯಲ್ಲಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ (BC Nagesh) ಮಾಹಿತಿ ನೀಡಿದ್ದಾರೆ. ದೇಶದಲ್ಲಿ ಗೊಂದಲ ಸೃಷ್ಟಿಸಲು  ಹಲವು ಯತ್ನಗಳು ನಡೆಯುತ್ತಿದೆ. ಕೊವಿಡ್ ಲಸಿಕೆ ಬಗ್ಗೆಯೂ ಗೊಂದಲ ಸೃಷ್ಟಿ ಮಾಡಿದ್ದರು. ಮಕ್ಕಳಲ್ಲಿ ನನ್ನ ದೇಶ ಎಂಬ ಮನೋಭಾವನೆ ಬೆಳೆಯಬೇಕು. ಡಿ.28ರವರೆಗೆ ವಿದ್ಯಾರ್ಥಿನಿಯರು ಸಮವಸ್ತ್ರದಲ್ಲಿ ಬರುತ್ತಿದ್ದರು. ಬಳಿಕ ಸಮವಸ್ತ್ರದ ಜತೆ ಹಿಜಾಬ್ ಧರಿಸಿ ಬರುವುದಾಗಿ ಹಟ ಮಾಡಿದರು. ವಿದ್ಯಾರ್ಥಿನಿಯರು ಈ ರೀತಿ ಯಾಕೆ  ವರ್ತಿಸಿದರೆಂದು ಗೊತ್ತಿಲ್ಲ. ಒಂದು ಶಾಲೆಯ 6 ವಿದ್ಯಾರ್ಥಿಗಳ ಸಮಸ್ಯೆಯನ್ನು ಈಗ ಅಂತಾರಾಷ್ಟ್ರೀಯ ಸಮಸ್ಯೆ ಮಾಡಲು ಕೆಲವರು ಪ್ರಯತ್ನಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

click me!