Hijab-Saffron Row: ಹರಪನಹಳ್ಳಿ ಕಾಲೇಜಿನಲ್ಲಿ ಕೇಸರಿ ಬಣ್ಣದ ಧಿರಿಸೇ ಯುನಿಫಾರಂ..!

By Kannadaprabha News  |  First Published Feb 13, 2022, 9:02 AM IST

*  ಬಂಗಿಬಸಪ್ಪ ಪದವಿಪೂರ್ವ ಕಾಲೇಜಿನ ಸಮ​ವ​ಸ್ತ್ರವೇ ಕೇಸರಿ
*  ಭಾವೈಕ್ಯತೆಗೆ ಸಾಕ್ಷಿಯಾದ ಹಿಂದು- ಮುಸ್ಲಿಂ ವಿದ್ಯಾರ್ಥಿಗಳು 
*  ಕೇಸರಿ ಯೂನಿಫಾರಂ ಮೇಲೆ ಬುರ್ಕಾ ಧರಿಸಿ ಆಗಮಿಸುವ ಮುಸ್ಲಿಂ ವಿದ್ಯಾರ್ಥಿನಿಯರು 


ಬಿ. ರಾಮಪ್ರಸಾದ್‌ ಗಾಂಧಿ

ಹರಪನಹಳ್ಳಿ(ಫೆ.13):  ಹಿಜಾಬ್‌ -ಕೇಸರಿ(Hijab-Saffron) ಶಾಲಿನ ವಿವಾದ ರಾಜ್ಯಾದ್ಯಂತ(Karnataka) ಭುಗಿಲೆದ್ದು ಕೋರ್ಟ್‌ ಮೆಟ್ಟಿಲೇರಿರುವ ಸಂದರ್ಭದಲ್ಲಿ ಪ್ರತಿದಿನ ಕೇಸರಿ ಸಮವಸ್ತ್ರ ಧರಿಸಿ ಹಿಂದು- ಮುಸ್ಲಿಂ(Hindu-Muslim) ವಿದ್ಯಾರ್ಥಿಗಳು ಪಟ್ಟಣದ ಖಾಸಗಿ ಕಾಲೇಜೊಂದಕ್ಕೆ ಬರುತ್ತಿದ್ದು, ಯಾವುದೇ ಗೊಂದಲ, ಘರ್ಷಣೆ ಇಲ್ಲದೇ ಭಾವೈಕ್ಯತೆ ಮೆರೆದಿದ್ದಾರೆ.

Tap to resize

Latest Videos

undefined

ಪಟ್ಟಣದ ಹೊಸಪೇಟೆ ರಸ್ತೆಯ ಗೋಸಾವಿ ಗುಡ್ಡದ ಬಳಿ ಇರುವ ಬಂಗಿಬಸಪ್ಪ ಪದವಿಪೂರ್ವ ಪಿ.ಯು. ಕಾಲೇಜಿನ(Bangibasappa PU College) ಸಮ​ವ​ಸ್ತ್ರವೇ(Uniform) ಕೇಸರಿಯಾಗಿದೆ. ಇಲ್ಲಿಯ ಪ್ರಸಿದ್ಧ ತೆಗ್ಗಿನಮಠ ಆಟ್ಸ್‌ರ್‍ ಆ್ಯಂಡ್‌ ಎಜುಕೇಶನ್‌ ಸಂಸ್ಥೆಯ ಅಡಿ ಕಾರ್ಯನಿರ್ವಹಿಸುತ್ತಿರುವ ಈ ಕಾಲೇಜಿನಲ್ಲಿ ಒಟ್ಟು 324 ವಿದ್ಯಾರ್ಥಿಗಳಿದ್ದು, ಅದರಲ್ಲಿ ಶೇ. 25ರಷ್ಟು ಮುಸ್ಲಿಂ ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಕಾಲೇಜು 2011-12 ನೇ ಸಾಲಿನಲ್ಲಿ ಸ್ಥಾಪನೆಯಾಗಿದೆ.

Hijab Controversy ಸಮವಸ್ತ್ರ ಶಾಲೆಯ ಮೂಲಭೂತ ಹಕ್ಕು, ಹಿಜಾಬ್‌ಗೆ ಧರಿಸುವ ಮನವಿ ವಜಾ, 2018ರ ಕೇರಳ ಹೈಕೋರ್ಟ್ ತೀರ್ಪು!

ಕಾಲೇಜು ಸ್ಥಾಪನೆ ಸಂದರ್ಭದಲ್ಲಿಯೇ ಕೇಸರಿ ಸಮವಸ್ತ್ರ(Saffron Uniform) ಆರಂಭಗೊಂಡಿದೆ. ಹುಡುಗರಿಗೆ ಕೇಸರಿ ಅಂಗಿ, ಕಂದುಬಣ್ಣದ ಪ್ಯಾಂಟು, ಹುಡುಗಿಯರಿಗೆ ಚೂಡಿದಾರದ ಮೇಲುಡುಪು ಸಹ ಕೇಸರಿ, ಪೈಜಾಮು ಹಾಗೂ ವೇಲ್‌ ಕಂದು ಬಣ್ಣದ್ದು, ವಾರದಲ್ಲಿ ಸೋಮವಾರ, ಮಂಗಳವಾರ, ಗುರುವಾರ ಮತ್ತು ಶುಕ್ರವಾರ ಹೀಗೆ ನಾಲ್ಕು ದಿನಗಳು ಈ ಕೇಸರಿ ಸಮವಸ್ತ್ರ ಧರಿಸಿ ವಿದ್ಯಾರ್ಥಿಗಳು(Students) ಕಾಲೇಜಿಗೆ ಆಗಮಿಸುತ್ತಾರೆ.
ಮುಸ್ಲಿಂ ವಿದ್ಯಾರ್ಥಿನಿಯರು ಕೇಸರಿ ಯೂನಿಫಾರಂ ಮೇಲೆ ಬುರ್ಕಾ ಧರಿಸಿ ಕಾಲೇಜಿಗೆ ಆಗಮಿಸಿ ಕಾಲೇಜಿನ ವಿಶ್ರಾಂತಿ ಕೊಠಡಿಯಲ್ಲಿ ಬುರ್ಕಾ ತೆಗೆದಿರಿಸಿ ತರಗತಿಗಳಿಗೆ ಸಮವಸ್ತ್ರ ದೊಂದಿಗೆ ಕುಳಿತು ಪಾಠ ಕೇಳುತ್ತಾರೆ. ನಂತರ ಕಾಲೇಜು ಬಿಟ್ಟನಂತರ ವಿಶ್ರಾಂತಿ ಕೊಠಡಿಗೆ ತೆರಳಿ ಪುನಃ ಬುರ್ಕಾ ಧರಿಸಿ ಮನೆಗೆ ತೆರಳುತ್ತಾರೆ.

ಹಿಜಾಬ್‌ -ಕೇಸರಿ ವಿವಾದ ರಾಜ್ಯದಲ್ಲಿ ಇಷ್ಟೊಂದು ಸದ್ದು ಮಾಡಿದ ಇಂದಿನ ಸಂದರ್ಭದಲ್ಲೂ ಈ ಕಾಲೇಜಿನಲ್ಲಿ ಹಿಂದು -ಮುಸ್ಲಿಂ ಎನ್ನದೆ ಕೇಸರಿ ಧರಿಸುವುದಕ್ಕೆ ಸಮಸ್ಯೆಯಾಗಿಲ್ಲ.

ಕಾಲೇಜು ಆರಂಭದಲ್ಲಿ ಪ್ರಾಚಾರ್ಯರು ಎಲ್ಲೊ ನೋಡಿಕೊಂಡು ಬಂದು ಚೆನ್ನಾಗಿ ಇದೆ ಎಂದು ಆರಂಭಿಸಿದರು. ಈವರೆಗೂ ಯಾವುದೇ ಸಮಸ್ಯೆ ಇಲ್ಲ, ಸಮಾಜ ಸಹ ಸ್ಪಂದಿಸಿದೆ. ಆ ಜಾತಿ, ಈ ಜಾತಿ ಎನ್ನದೆ ಶಿಸ್ತಿನಿಂದ ವಿದ್ಯಾರ್ಥಿಗಳು ಸಮವಸ್ತ್ರ ಧರಿಸಿ ಆಗಮಿಸಿ ಭಾವೈಕ್ಯತೆಗೆ ಸಾಕ್ಷಿಯಾಗಿದ್ದಾರೆ ಅಂತ ತೆಗ್ಗಿನಮಠ ಸಂಸ್ಥೆಯ ಕಾರ್ಯದರ್ಶಿ ಟಿ.ಎಂ. ಚಂದ್ರಶೇಖರಯ್ಯ ತಿಳಿಸಿದ್ದಾರೆ. 

Karnataka Hijab Row: ಸಮವಸ್ತ್ರ ಸಂಘರ್ಷಕ್ಕೆ ಬ್ರೇಕ್‌ ಹಾಕಲು ಗೃಹ ಇಲಾಖೆ ಸಜ್ಜು!

ನಮ್ಮಲ್ಲಿ ಯಾವುದೇ ಭೇದ ಭಾವವಿಲ್ಲ, ಈ ಹಿಂದೆ ಇದ್ದ ಪ್ರಾಚಾರ್ಯರು ಮಂಗಳೂರಿನ ಕಡೆಯ ಕಾಲೇಜೊಂದರಲ್ಲಿ ಇದ್ದ ಸಮವಸ್ತ್ರ ನೋಡಿಕೊಂಡು ಬಂದು ಇಲ್ಲಿ ಆರಂಭಿಸಿದರು. ಅಲ್ಲಿಂದ ಈವರೆಗೂ ಯಾವುದೇ ಸಮಸ್ಯೆ ಇಲ್ಲ ಅಂತ ಹರಪನಹಳ್ಳಿ ಬಂಗಿಬಸಪ್ಪ ಪಿ.ಯು. ಕಾಲೇಜಿನ ಪ್ರಾಚಾರ್ಯರು ಅರುಣಕುಮಾರ ಹೇಳಿದ್ದಾರೆ. 

ಸಮವಸ್ತ್ರ ಧರಿಸಿ ಕಾಲೇಜಿಗೆ ಬನ್ನಿ, ವಿದ್ಯಾರ್ಥಿಗಳಿಗೆ ಹೈಕೋರ್ಟ್ ಪಾಠ

ಬೆಂಗಳೂರು: ಕಾಲೇಜುಗಳಲ್ಲಿ ವಿದ್ಯಾರ್ಥಿಗಳ(Students) ಹಿಜಾಬ್ (Hijab) ಹಾಗೂ ಕೇಸರಿ ಜಟಾಪಟಿಗೆ ಕರ್ನಾಟಕ ಹೈಕೋರ್ಟ್ (Karnataka High Court) ಬ್ರೇಕ್ ಹಾಕಿದೆ. ಅಂತಿಮ ಆದೇಶ ನೀಡುವವರೆಗೆ ಯಾವುದೇ ಧಾರ್ಮಿಕ ಉಡುಗೆಗೆ ಅವಕಾಶ ಇಲ್ಲ ಎಂದು ನ್ಯಾಯಾಲಯ ಹೇಳಿದೆ.  ಸರ್ಕಾರ 8, 9 ಮತ್ತು 10ನೇ ತರಗತಿ ಆರಂಭ ಮಾಡುತ್ತೇನೆ ಎಂದು ಹೇಳಿದೆ.  ರಾಜಕೀಯ ನಾಯಕರು ಮಾತ್ರ ತಮ್ಮದೇ ಆದ ದಾಟಿಯಲ್ಲಿ ಮಾತನಾಡಿದ್ದಾರೆ. 

ಪ್ರಧಾನಿ ನರೇಂದ್ರ ಮೋದಿ ಉತ್ತರ ಪ್ರದೇಶ ಅಖಾಡಲ್ಲಿ ಇದ್ದಾರೆ. ಮುಸ್ಲಿಂ ಮಹಿಳೆಯರ ಹಕ್ಕು ಕಾಪಾಡಲು ತ್ರಿವಳಿ ತಲಾಖ್ ಗೆ ಮುಕ್ತಿ ಹಾಡಿದ್ದೇವೆ ಎಂದು ತಿಳಿಸಿದ್ದಾರೆ. ಮಂಡ್ಯದ ವಿದ್ಯಾರ್ಥಿನಿ ಅಲ್ಲಾ  ಅಲ್ಲಾ ಹು ಅಕ್ಬರ್ ಎಂದು ಘೋಷಣೆ  ಕೂಗಿದ್ದು ವೈರಲ್ ಆಗಿತ್ತು. ಆಕೆಗೆ ಮುಸ್ಲಿಂ ಸಂಘಟನೆಗಳು ಬಹುಮಾನ ಘೋಷಣೆ ಮಾಡಿವೆ ಎನ್ನುವ ಮಾತು ಇದೆ. 
 

click me!