Army HPCL Kashmir Super 50: ಕಾಶ್ಮೀರ್ ಮಕ್ಕಳ ವೈದ್ಯ ಶಿಕ್ಷಣಕ್ಕೆ ಸೇನೆ ನೆರವು

By Suvarna News  |  First Published Feb 20, 2022, 5:02 PM IST

*ಕಾಶ್ಮೀರದ ಮಕ್ಕಳಿಗೆ ವೈದ್ಯಕೀಯ ಶಿಕ್ಷಣ ಕೊಡಿಸಲು ಭಾರತೀಯ ಸೇನೆ ನೆರವು
*ಆರ್ಮಿ ಎಚ್‌ಪಿಸಿಎಲ್ ಕಾಶ್ಮೀರ್ ಸೂಪರ್ 50 ಎಂಬ ಕಾರ್ಯಕ್ರಮ ಆರಂಭಿಸಿದ ಸೇನೆ
 


ಜಮ್ಮು-ಕಾಶ್ಮೀರ (ಫೆ.20): ಭಾರತೀಯ ಸೇನೆ (Indian Military) ಬರೀ‌ ಗಡಿ ಕಾಯುವ ಕಾಯಕವೊಂದೇ ಅಲ್ಲ.. ದೇಶದ ಜನರು, ಬಡ ವಿದ್ಯಾರ್ಥಿಗಳ ಹಿತ ರಕ್ಷಿಸುವ ಕೆಲಸಗಳನ್ನು ಮಾಡುತ್ತದೆ. ಹೌದು..ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನೆಯು ವೈದ್ಯಕೀಯ ವಿದ್ಯಾರ್ಥಿಗಳ ನೆರವಿಗೆ ಧಾವಿಸಿದೆ. ಕಾಶ್ಮೀರದ ವಿದ್ಯಾರ್ಥಿಗಳಿಗೆ ವೈದ್ಯಕೀಯ ಶಿಕ್ಷಣ(Medical Education)ದ ಕನಸುಗಳನ್ನು ಈಡೇರಿಸಿಕೊಳ್ಳಲು ಸೇನೆಯು ಸಹಾಯ ಮಾಡುತ್ತದೆ. ಉತ್ತರ ಕಾಶ್ಮೀರ ಪ್ರದೇಶಗಳಲ್ಲಿ  'ಆರ್ಮಿ ಎಚ್‌ಪಿಸಿಎಲ್ ಕಾಶ್ಮೀರ್ ಸೂಪರ್ 50 ' (Army HPCL Kashmir Super 50) ಯೋಜನೆ ಅಡಿಯಲ್ಲಿ  ವೈದ್ಯಕೀಯ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ಉಚಿತವಾಗಿ ಸಿದ್ಧಗೊಳಿಸ್ತಿದೆ. ವೈದ್ಯಕೀಯ ಕಾಲೇಜುಗಳಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಸೇನೆಯು,  ಶುಲ್ಕವನ್ನು ಪ್ರಾಯೋಜಿಸುವ ಮೂಲಕ ಹಣಕಾಸಿನ ನೆರವು ನೀಡುತ್ತಿದೆ.

ಈ ಕುರಿತು ಎಎನ್‌ಐಗೆ ಮಾತನಾಡಿದ ಮೇಜರ್ ಜನರಲ್ ಎಸ್‌ಎಸ್ ಸ್ಲಾರಿಯಾ, ಉತ್ತರ ಕಾಶ್ಮೀರದಲ್ಲಿ ಪರಿಸ್ಥಿತಿ ಸಹಜ ಸ್ಥಿತಿಯತ್ತ ಸಾಗುತ್ತಿದೆ.  ಶಾಲೆಗಳಿಗೆ ಹೋಗುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳವಾಗಿದೆ, ಭಯೋತ್ಪಾದಕ ಘಟನೆಗಳು ಇಳಿಕೆಯಾಗಿದ್ದು ಪರಿಸ್ಥಿತಿ‌  ಸುಧಾರಿಸುತ್ತಿದೆ. 'ಹರ್ತಾಲ್' ಘಟನೆಗಳು ಕಡಿಮೆಯಾಗುತ್ತಿವೆ. ಹೆಚ್ಚು ಪ್ರವಾಸಿಗರ ಆಗಮನದಿಂದ ಪ್ರವಾಸೋದ್ಯಮ ಕ್ಷೇತ್ರವು ಚೇತರಿಕೆ ಕಾಣುತ್ತಿದೆ.  ಹೆಚ್ಚಿನ ವಿದ್ಯಾರ್ಥಿಗಳು ಶಾಲೆಗಳಿಗೆ ಹೋಗುತ್ತಿದ್ದಾರೆ, ಯುವಕರು ತಮ್ಮ ನಾಯಕರನ್ನು ಚೆನ್ನಾಗಿ ಆಯ್ಕೆ ಮಾಡಬೇಕು. ಅವರು ನಾಯಕರನ್ನು ಚೆನ್ನಾಗಿ ಆಯ್ಕೆ ಮಾಡಿದರೆ, ಅವರು ಸರಿಯಾದ ಹಾದಿಯಲ್ಲಿರುತ್ತಾರೆ, ”ಎಂದು ಅಭಿಪ್ರಾಯಪಟ್ಟಿದ್ದಾರೆ.

Tap to resize

Latest Videos

ಇದೇ ವೇಳೆ 'ಆರ್ಮಿ ಎಚ್‌ಪಿಸಿಎಲ್ ಕಾಶ್ಮೀರ್ ಸೂಪರ್ 50(Army HPCL Kashmir Super 50)' ಯೋಜನೆಯ ಕುರಿತು ಮಾತನಾಡಿದ ಸೇನಾ ಪ್ರಾಯೋಜಿತ ಸಂಸ್ಥೆಯ ಶಿಕ್ಷಕ ವಾಹಿದ್ ಫಾರೂಕ್, ಸೇನೆಯ ಉಪಕ್ರಮದ ಭಾಗವಾಗಿ ತರಬೇತಿಯಲ್ಲಿ 30 ಹುಡುಗರು ಮತ್ತು 20 ಹುಡುಗಿಯರು ಉಚಿತವಾಗಿ ಕಲಿಯುತ್ತಿದ್ದಾರೆ. "ನಾವು ಈ ಯೋಜನೆಯನ್ನು 2018 ರಲ್ಲಿ ಪ್ರಾರಂಭಿಸಿದ್ದೇವೆ ಮತ್ತು ಪ್ರತಿ ಶಾಲೆಗೆ ಭೇಟಿ ನೀಡಿದ್ದೇವೆ ಮತ್ತು ತರಬೇತಿ ಕಾರ್ಯಕ್ರಮಕ್ಕಾಗಿ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲು ಲಿಖಿತ ಪರೀಕ್ಷೆಗಳನ್ನು ನಡೆಸಿದ್ದೇವೆ. 2018 ರಲ್ಲಿ ನಾವು 30 ವಿದ್ಯಾರ್ಥಿಗಳನ್ನು ತೆಗೆದುಕೊಂಡಿದ್ದೇವೆ. ಅದರಲ್ಲಿ 25 ವಿದ್ಯಾರ್ಥಿಗಳು ವೈದ್ಯಕೀಯ ಕಾಲೇಜುಗಳಿಗೆ ಪ್ರವೇಶ ಪರೀಕ್ಷೆಯನ್ನು ತೇರ್ಗಡೆಗೊಳಿಸಿದ್ದಾರೆ. AIIMS ನಂತಹ ಸಂಸ್ಥೆಗಳಿಗೆ ವಿದ್ಯಾರ್ಥಿಗಳು ಪ್ರವೇಶ ಪಡೆದ ನಂತರ ಸೇನೆಯು ಶುಲ್ಕವನ್ನು ಪ್ರಾಯೋಜಿಸುತ್ತದೆ ”ಎಂದು ಅವರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

 IGM RECRUITMENT 2022: 10ನೇ ತರಗತಿಯಾದವರಿಗೆ ಬಂಗಾರದಂತಹ ಉದ್ಯೋಗವಕಾಶ!

ಬಾಲಕರಲ್ಲಿ ಶೇ.100ರಷ್ಟು ಯಶಸ್ವಿ ದಾಖಲೆಯಾಗಿದೆ. ಕಳೆದ ವರ್ಷ ಜುಲೈನಿಂದ ಇಲ್ಲಿ ಪಾಠ ಮಾಡಲಾಗುತ್ತಿದೆ. ವಿದ್ಯಾರ್ಥಿಗಳು ಬಂದರೆ ಹಂತಹಂತವಾಗಿ ಮೂಲಭೂತ ವಿಷಯಗಳಿಂದ ಆರಂಭಿಸಲಾಗುತ್ತದೆ. ಯಾವ ಕ್ಷೇತ್ರದಿಂದ ಬಂದರೂ ಅವರೆಲ್ಲ ಉತ್ತಮ ಸಾಧನೆ ಮಾಡಬೇಕೆಂಬ ಹಂಬಲ ಹೊಂದಿರುವುದು ನಿಜಕ್ಕೂ ಅಚ್ಚರಿಯ ಸಂಗತಿ.  ಮುಂದಿನ ದಿನಗಳಲ್ಲಿ ಹುಡುಗಿಯರು ಸಹ ಉತ್ತಮವಾಗಿ ಕಾರ್ಯನಿರ್ವಹಿಸುತ್ತಾರೆ ಎಂಬ  ಖಾತ್ರಿಯಿದೆ ಎನ್ನಲಾಗುತ್ತಿದೆ.

ಲಿಖಿತ ಪರೀಕ್ಷೆಗಳು ಮತ್ತು ಸಂದರ್ಶನಗಳ ನಂತರ ಕೋಚಿಂಗ್ ಇನ್‌ಸ್ಟಿಟ್ಯೂಟ್‌ನಲ್ಲಿ ಪ್ರವೇಶಗಳು ನಡೆಯುತ್ತವೆ ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ.  "ನಾನು ಇಲ್ಲಿ ಓದಲು ಪ್ರಾರಂಭಿಸಿ ಸುಮಾರು ಮೂರು ತಿಂಗಳಾಗಿದೆ. 12 ನೇ ತರಗತಿಯ ನಂತರ ಈ ಕೋಚಿಂಗ್ ಸೆಂಟರ್ ಸೇರಿದೆ.  ಪ್ರವೇಶ ಪರೀಕ್ಷೆಯ ನಂತರ ಫಾರ್ಮ್ ಅನ್ನು ಭರ್ತಿ ಮಾಡಬೇಕು. ಸಂದರ್ಶನವನ್ನು ತೆಗೆದುಕೊಳ್ಳಲಾಗುತ್ತದೆ ಮತ್ತು ನಂತರ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಇಲ್ಲಿ ಸೌಲಭ್ಯಗಳು ಉತ್ತಮವಾಗಿವೆ ಮತ್ತು ದೊಡ್ಡ ನಗರಗಳಲ್ಲಿ ದುಬಾರಿ ತರಬೇತಿ ಪಡೆಯಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ಈ ಕೋಚಿಂಗ್ ಉತ್ತಮ ಅವಕಾಶವಾಗಿದೆ ಅಂತಾರೆ ವಿದ್ಯಾರ್ಥಿ ಹಕೀಮಾ. ಶಿಕ್ಷಕರೊಂದಿಗೆ ಮುಖಾಮುಖಿ ಸಂವಾದದ ಮೂಲಕ ಕೋಚಿಂಗ್ ಇನ್‌ಸ್ಟಿಟ್ಯೂಟ್‌ನಿಂದ ತಾನು ಸಾಕಷ್ಟು ಪ್ರಯೋಜನ ಪಡೆಯುತ್ತಿದ್ದೇನೆ ಎಂದು ಇನ್ನೊಬ್ಬ ವಿದ್ಯಾರ್ಥಿ ಹೇಳುತ್ತಾರೆ.

ESIC Recruitment 2022: ಭೋಧಕರ ಹುದ್ದೆಗೆ ಅರ್ಜಿ ಆಹ್ವಾನ, ಮಾರ್ಚ್ 2 ರಂದು ನೇರ ಸಂದರ್ಶನ

click me!