ಸಿಂಧೂರ, ಕುಂಕುಮ, ಬಳೆ ಬಗ್ಗೆ ಪ್ರಶ್ನೆ ಬೇಡ, ಅದು ನಮ್ಮ ಸಂಸ್ಕೃತಿಯ ಪ್ರತೀಕ, ಅಲಂಕಾರಿಕ ವಸ್ತು ಅದಕ್ಕೂ ಹಿಜಾಬ್ ಗೂ ಸಂಬಂಧವಿಲ್ಲ, ಅದನ್ನು ಧರಿಸಿ ಬಂದವರನ್ನು ಶಾಲೆ-ಕಾಲೇಜುಗಳಲ್ಲಿ ತಡೆದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಶಿಕ್ಷಣ ಸಚಿವ ಬಿ ಸಿ ನಾಗೇಶ್ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರು (ಫೆ.20): ಸಿಂಧೂರ, ಕುಂಕುಮ, ಬಳೆ ಬಗ್ಗೆ ಪ್ರಶ್ನೆ ಬೇಡ, ಅದು ನಮ್ಮ ಸಂಸ್ಕೃತಿಯ ಪ್ರತೀಕ, ಅಲಂಕಾರಿಕ ವಸ್ತು ಅದಕ್ಕೂ ಹಿಜಾಬ್ ಗೂ (Hijab row) ಸಂಬಂಧವಿಲ್ಲ, ಅದನ್ನು ಧರಿಸಿ ಬಂದವರನ್ನು ಶಾಲೆ-ಕಾಲೇಜುಗಳಲ್ಲಿ ತಡೆದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಶಿಕ್ಷಣ ಸಚಿವ ಬಿ ಸಿ ನಾಗೇಶ್ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಬಳೆ, ಬಿಂದಿ,ಸಿಂಧೂರ, ಕುಂಕುಮಗಳು ಅಲಂಕಾರಿಕ ವಸ್ತುಗಳು, ಅವುಗಳಿಗೆ ನಿರ್ಬಂಧ ಹಾಕಲು ಸಾಧ್ಯವಿಲ್ಲ. ಹಿಜಾಬ್ ಧಾರ್ಮಿಕ ಗುರುತನ್ನು ಸಂಕೇತಿಸುವ ಬಟ್ಟೆ, ಹಿಜಾಬ್ ಗೆ ಪ್ರತಿಯಾಗಿ ಬಳೆ, ಸಿಂಧೂರ, ಕುಂಕುಮವನ್ನು ಹೋಲಿಸುವುದು ಬೇಡ. ಅದನ್ನು ಧರಿಸಿ ಬಂದವರನ್ನು ತಡೆದರೆ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳಲು ಆದೇಶ ನೀಡಿದ್ದೇನೆ ಎಂದು ಹೇಳಿದರು.
ಹಿಜಾಬ್ ಧರ್ಮವನ್ನು ಸೂಚಿಸಿದರೆ ಬಳೆ, ಕುಂಕುಮ, ಬಿಂದಿ, ಸಿಂಧೂರ ಅಲಂಕಾರವನ್ನು ಸೂಚಿಸುತ್ತದೆ. ಅಲಂಕಾರಿಕ ವಸ್ತುಗಳನ್ನು ಧರಿಸಿಕೊಂಡು ಬನ್ನಿ ಎಂದು ನಾವು ವಿದ್ಯಾರ್ಥಿಗಳಿಗೆ ಕಡ್ಡಾಯ ಮಾಡಿಲ್ಲ. ಸ್ವ ಇಚ್ಛೆಯಿಂದ ಹಾಕಿಕೊಂಡು ಬರುತ್ತಾರೆ ಎಂದರು.
ನಿನ್ನೆ ವಿಜಯಪುರದ ಇಂಡಿ ಪಟ್ಟಣದ ಸರ್ಕಾರಿ ಪಿಯು ಕಾಲೇಜಿನಲ್ಲಿ ತಿಲಕ ಇಟ್ಟುಕೊಂಡು ಬಂದ ವಿದ್ಯಾರ್ಥಿಗೆ ತರಗತಿಯೊಳಗೆ ಶಿಕ್ಷಕರು ಪ್ರವೇಶ ನಿರಾಕರಿಸಿದ್ದು ಭಾರೀ ಸುದ್ದಿಯಾಗಿತ್ತು. ಈ ಹಿನ್ನೆಲೆಯಲ್ಲಿ ಶಿಕ್ಷಣ ಸಚಿವರು ಈ ಆದೇಶ ನೀಡಿದ್ದಾರೆ.
MENASE SCHOOL: ಶೃಂಗೇರಿಯ ಮೆಣಸೆಯಲ್ಲಿ ಹೈಟೆಕ್ ಸರಕಾರಿ ಶಾಲೆ
ಸಮವಸ್ತ್ರ ಇಲ್ಲದೆ ಬಂದ್ರೆ 200 ರೂಪಾಯಿ ದಂಡ: ಕಾಲೇಜಿನಿಂದ ನೋಟಿಸ್:
ಉಡುಪಿಯಲ್ಲಿ (Udupi) ಶುರುವಾದ ಈ ಹಿಜಾಬ್ ವಿವಾದದ (Hijab Row) ಕಿಚ್ಚು ಇದೀಗ ರಾಜ್ಯದೆಲ್ಲೆಡೆ ವ್ಯಾಪಿಸಿಕೊಂಡಿದ್ದು, ಇದು ರಾಷ್ಟ್ರ ಮಟ್ಟದವರೆಗೂ ಸುದ್ದಿಯಾಗುತ್ತಿದೆ.
ಇದರ ಮಧ್ಯೆ ಸಮವಸ್ತ್ರ (Uniform) ಇಲ್ಲದೆ ಬಂದರೆ 200 ರೂಪಾಯಿ ದಂಡ ಪಾವತಿಸಬೇಕು ಎಂದು ಹಾಸನದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಮುಂಭಾಗ ನೋಟಿಸ್ ಹಾಕಲಾಗಿದೆ.
ವಿದ್ಯಾರ್ಥಿನಿಯರು ಕಡ್ಡಾಯವಾಗಿ ಸಮವಸ್ತ್ರ ಹಾಗೂ ಗುರುತಿನ ಪತ್ರ ಹಾಕಿಕೊಂಡು ತರಗತಿಗೆ ಹಾಜರಾಗಬೇಕು ಎಂದು ಆಡಳಿತ ಮಂಡಳಿ ಆದೇಶಿಸಿದೆ. ಕಾಲೇಜಿನಲ್ಲಿ ಮೊಬೈಲ್ ಬಳಕೆ ನಿಷೇಧಿಸಲಾಗಿದೆ.
ಒಂದು ವೇಳೆ ಮೊಬೈಲ್ ಬಳಸಿದರೆ ಮುಟ್ಟುಗೋಲು ಹಾಕಿಕೊಳ್ಳುವುದಾಗಿ ಎಚ್ಚರಿಕೆ ನೀಡಿದೆ. ಶುಕ್ರವಾರ ಕಾಲೇಜಿನಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್‌ಗಾಗಿ ಪ್ರತಿಭಟನೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಈ ಕಾಲೇಜು ಈ ಸುತ್ತೋಲೆ ಹೊರಡಿಸಿದೆ ಎಂದು ಹೇಳಲಾಗುತ್ತಿದೆ.
ಸರ್ಕಾರವೂ ಸಹ ಪಿಯು ಕಾಲೇಜುಗಳಿಗೆ ಸಮವಸ್ತ್ರ ಕಡ್ಡಾಯ ಮಾಡಿ ಆದೇಶ ಹೊರಡಿಸಿದೆ. ಆದ್ರೆ, ಪದವಿ ಕಾಲೇಜುಗಳಿಗೆ ಯಾವುದೇ ಸಮವಸ್ತ್ರ ಕಡ್ಡಾಯ ಇಲ್ಲ ಎಂದು ಹೇಳಿದೆ.
IIT UAE: ವಿದೇಶದಲ್ಲಿ ಮೊದಲ ಭಾರತೀಯ ತಂತ್ರಜ್ಞಾನ ಸಂಸ್ಥೆ ಸ್ಥಾಪನೆಗೆ ಐತಿಹಾಸಿಕ ಒಪ್ಪಂದ!
ಹಿಜಾಬ್ ಕಿಚ್ಚು ಹುಟ್ಟಿದ್ದು ಉಡುಪಿಯಲ್ಲಿ: ಉಡುಪಿಯಲ್ಲಿ ಶುರುವಾದ ಈ ಹಿಜಾಬ್ ವಿವಾದದ ಕಿಚ್ಚು ಇದೀಗ ರಾಜ್ಯದೆಲ್ಲೆಡೆ ವ್ಯಾಪಿಸಿಕೊಂಡಿದ್ದು, ಇದು ರಾಷ್ಟ್ರ ಮಟ್ಟದವರೆಗೂ ಸುದ್ದಿಯಾಗುತ್ತಿದೆ. ಇನ್ನು ಹಿಜಾಬ್ ವಿವಾರಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ಆದೇಶ ನೀಡಿದೆ.
ಯಾರು ಯಾವುದೇ ಧರ್ಮದ ಗುರುತುಗಳನ್ನ ಶಾಲಾ೦ಕಾಲೇಜುಗಳಲ್ಲಿ ಹಾಕಿಕೊಂಡು ಬರುವಂತಿಲ್ಲ ಎಂದು ಕೋರ್ಟ್ ಮಧ್ಯಂತರ ಆದೇಶ ಹೊರಡಿಸಿದೆ. ಆದ್ರೆ, ವಿದ್ಯಾರ್ಥಿನಿಯರು ಕೋರ್ಟ್ ಆದೇಶಕ್ಕೆ ಡೋಂಟ್ ಕೇರ್ ಎಂದಿದ್ದು, ಹಿಜಾಬ್‌ಗೆ ಅವಕಾಶ ಕೊಡಲೇ ಬೇಕೆಂದು ಪಟ್ಟು ಹಿಡಿದಿದ್ದಾರೆ. ಪ್ರತಿದಿನ ಕಾಲೇಜಿಗೆ ಹಿಜಾಬ್ ಧರಿಸಿಕೊಂಡು ಪ್ರತಿಭಟನೆ ಮಾಡುತ್ತಿದ್ದಾರೆ. ಇನ್ನು ಹಿಜಾಬ್ ತೆಗೆದರೆ ಮಾತ್ರ ಕ್ಲಾಸ್ ಪ್ರವೇಶ ನೀಡಲಾಗತ್ತಿದೆ. ಆದ್ರೆ ವಿದ್ಯಾರ್ಧಿನಿಯರು ತಮ್ಮ ಹಿಜಾಬ್‌ಗಾಗಿ ಕ್ಲಾಸ್‌ಗೆ ಮಾತ್ರವಲ್ಲ ಪರೀಕ್ಷಗೂ ಗೈರು ಹಾಜರಾಗಿದ್ದಾರೆ.