NIRF: ಸತತ ಎರಡನೇ ವರ್ಷವೂ ಬೆಂಗಳೂರಿನ ಐಐಎಸ್ಸಿ ದೇಶದ ನಂ.1 ವಿವಿ!

By Kannadaprabha NewsFirst Published Jun 6, 2023, 5:10 AM IST
Highlights

ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ದೇಶದ ಅತ್ಯುತ್ತಮ ಶಿಕ್ಷಣ ಸಂಸ್ಥೆಗಳ ರಾರ‍ಯಂಕಿಂಗ್‌ನಲ್ಲಿ ಸತತ ಎರಡನೇ ವರ್ಷ ಬೆಂಗಳೂರಿನ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಸೈನ್ಸ್‌ (ಐಐಎಸ್‌ಸಿ) ದೇಶದ ಅತ್ಯುತ್ತಮ ವಿಶ್ವವಿದ್ಯಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಬೆಂಗಳೂರು ಐಐಎಂ ಹಾಗೂ ರಾಜ್ಯದ ಮಣಿಪಾಲ್‌ ಅಕಾಡೆಮಿ ಆಫ್‌ ಹೈಯರ್‌ ಎಜುಕೇಶನ್‌ ಕೂಡ ಅತ್ಯುತ್ತಮ ಶಿಕ್ಷಣ ಸಂಸ್ಥೆಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.

ನವದೆಹಲಿ (ಜೂ.6) ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ದೇಶದ ಅತ್ಯುತ್ತಮ ಶಿಕ್ಷಣ ಸಂಸ್ಥೆಗಳ ರಾರ‍ಯಂಕಿಂಗ್‌ನಲ್ಲಿ ಸತತ ಎರಡನೇ ವರ್ಷ ಬೆಂಗಳೂರಿನ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಸೈನ್ಸ್‌ (ಐಐಎಸ್‌ಸಿ) ದೇಶದ ಅತ್ಯುತ್ತಮ ವಿಶ್ವವಿದ್ಯಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಬೆಂಗಳೂರು ಐಐಎಂ ಹಾಗೂ ರಾಜ್ಯದ ಮಣಿಪಾಲ್‌ ಅಕಾಡೆಮಿ ಆಫ್‌ ಹೈಯರ್‌ ಎಜುಕೇಶನ್‌ ಕೂಡ ಅತ್ಯುತ್ತಮ ಶಿಕ್ಷಣ ಸಂಸ್ಥೆಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.

ಕೇಂದ್ರ ಶಿಕ್ಷಣ ಸಚಿವಾಲಯ(Union Ministry of Education)ದ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ Ranking ಫ್ರೇಮ್‌ವರ್ಕ್(NIRF) ಇತ್ತೀಚೆಗೆ ಎಂಟನೇ ವರ್ಷದ ಸಮೀಕ್ಷಾ ವರದಿ ಬಿಡುಗಡೆ ಮಾಡಿದೆ. ಅದರಲ್ಲಿ ದೇಶದ ಎಲ್ಲಾ ಶಿಕ್ಷಣ ಸಂಸ್ಥೆಗಳ ಪೈಕಿ ಮದ್ರಾಸ್‌ ಐಐಟಿ ನಂ.1 ಸ್ಥಾನ ಪಡೆದಿದೆ. ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಐಐಎಸ್‌ಸಿ(IISc Bengaluru) ನಂ.1 ಸ್ಥಾನ ಪಡೆದಿದ್ದು, ಐದನೇ ಸ್ಥಾನವನ್ನು ಮಣಿಪಾಲ್‌ ಅಕಾಡೆಮಿ ಆಫ್‌ ಹೈಯರ್‌ ಎಜುಕೇಶನ್‌ ಪಡೆದಿದೆ.

Mann Ki Baat: ಕರ್ನಾಟಕದ 3 ಸಂಸ್ಥೆಗಳಿಗೆ ಪ್ರಧಾನಿ ಮೋದಿ ಪ್ರಶಂಸೆ

ದೇಶದ ಅತ್ಯುತ್ತಮ ಬಿಸಿನೆಸ್‌ ಸ್ಕೂಲ್‌ ಪಟ್ಟಿಯಲ್ಲಿ ಐಐಎಂ ಅಹಮದಾಬಾದ್‌ ಹಾಗೂ ಐಐಎಂ ಬೆಂಗಳೂರು ಮೊದಲ ಎರಡು ಸ್ಥಾನ ಪಡೆದಿವೆ. ದೇಶದ ಅತ್ಯುತ್ತಮ ಡೆಂಟಲ್‌ ಕಾಲೇಜುಗಳ ಪಟ್ಟಿಯಲ್ಲಿ ಮಣಿಪಾಲ್‌ ಕಾಲೇಜ್‌ ಆಫ್‌ ಡೆಂಟಲ್‌ ಸೈನ್ಸಸ್‌ ಎರಡನೇ ಸ್ಥಾನ ಪಡೆದಿದೆ. ಅತ್ಯುತ್ತಮ ಕಾಲೇಜುಗಳ ಪಟ್ಟಿಯಲ್ಲಿ ಮಿರಾಂಡಾ ಹೌಸ್‌, ಹಿಂದು ಕಾಲೇಜ್‌ ಹಾಗೂ ಪ್ರೆಸಿಡೆನ್ಸಿ ಕಾಲೇಜುಗಳು ಮೊದಲ ಮೂರು ಸ್ಥಾನ ಪಡೆದಿವೆ.

ಬೋಧನೆ, ಕಲಿಕೆ ಹಾಗೂ ಸಂಪನ್ಮೂಲ, ಸಂಶೋಧನೆ ಹಾಗ ವೃತ್ತಿಪರ ಚಟುವಟಿಕೆಗಳು, ಶೈಕ್ಷಣಿಕ ಫಲಿತಾಂಶ, ವ್ಯಾಪ್ತಿ ಹಾಗೂ ಒಳಗೊಳ್ಳುವಿಕೆಯ ಮಾನದಂಡದ ಮೇಲೆ ಈ ರಾರ‍ಯಂಕಿಂಗ್‌ ನೀಡಲಾಗುತ್ತದೆ.

ಮೆಟ್ರೋ ಪಿಲ್ಲರ್ ದುರಂತಕ್ಕೆ 18 ಅಡಿ ಎತ್ತರ ಕಂಬಿ ಕಟ್ಟಿರೋದೇ ಕಾರಣ?: IISC ಪ್ರೊಫೆಸರ್ ಹೇಳಿದ್ದೇನು?

5 ಅತ್ಯುತ್ತಮ ಐಐಟಿಗಳು

1. ಮದ್ರಾಸ್‌

2. ಬಾಂಬೆ

3. ದೆಹಲಿ

4. ಕಾನ್ಪುರ

5. ಖರಗ್‌ಪುರ

5 ಅತ್ಯುತ್ತಮ ವಿವಿಗಳು

1. ಐಐಎಸ್‌ಸಿ

2. ಜೆಎನ್‌ಯು

3. ಜಾಮಿಯಾ ಮಿಲಿಯಾ ಇಸ್ಲಾಮಿಯಾ

4. ಬನಾರಸ್‌ ಹಿಂದು ವಿಶ್ವವಿದ್ಯಾಲಯ

5. ಮಣಿಪಾಲ್‌ ಅಕಾಡೆಮಿ ಆಫ್‌ ಹೈಯರ್‌ ಎಜುಕೇಶನ್‌

ಅತ್ಯುತ್ತಮ ಐಐಎಂಗಳು

1. ಐಐಎಂ ಅಹಮದಾಬಾದ್‌

2. ಐಐಎಂ ಬೆಂಗಳೂರು

3. ಐಐಎಂ ಕೋಳಿಕ್ಕೋಡ್‌

4. ಐಐಎಂ ಕಲ್ಕತ್ತಾ

ಅತ್ಯು​ತ್ತಮ ಡೆಂಟಲ್‌ ಕಾಲೇ​ಜು​ಗ​ಳು

1. ಸವಿತಾ ಡೆಂಟಲ್‌ ಕಾಲೇಜು, ಚೆನ್ನೈ

2. ಮಣಿ​ಪಾ​ಲ ​ಡೆಂಟಲ್‌ ಕಾಲೇ​ಜು

3. ಡಿ.ವೈ. ಪಾಟೀಲ್‌ ವಿದ್ಯಾ​ಪೀಠ, ಪುಣೆ

click me!