Job Alert: ಐಟಿ ಉದ್ಯೋಗ ಬೇಕಾ?; ಈ ಆನ್‌ಲೈನ್ ಕೋರ್ಸ್ ಟ್ರೈ ಮಾಡಿ

Published : Apr 26, 2022, 04:33 PM IST
Job Alert: ಐಟಿ ಉದ್ಯೋಗ ಬೇಕಾ?; ಈ ಆನ್‌ಲೈನ್ ಕೋರ್ಸ್ ಟ್ರೈ ಮಾಡಿ

ಸಾರಾಂಶ

* ಐಟಿ ಕ್ಷೇತ್ರದಲ್ಲಿ ಕೆಲಸ ಮಾಡಲು ಆಸಕ್ತಿಯುಳ್ಳವರಿಗೆ ಅನೇಕ ಆನ್‌ಲೈನ್ ಕೋರ್ಸುಗಳಿವೆ * ಈಗಾಗಲೇ ವೃತ್ತಿಯಲ್ಲಿದ್ದವರು ತಮ್ಮ ಕೌಶಲ್ಯವನ್ನು ಹೆಚ್ಚಿಸಿಕೊಳ್ಳಲೂ ಈ ಕೋರ್ಸ್ ಮಾಡಬಹುದು * ಈ ಆನ್ಲೈನ್ ಕೋರ್ಸುಗಳನ್ನು ಪೂರ್ಣಗೊಳಿಸಿದರೆ ಉದ್ಯೋಗ ಹುಡುಕುವುದು ಸುಲಭವಾಗಲಿದೆ

ಇಂಜಿನಿಯರಿಂಗ್ ಪದವೀಧರರು ಅಥವಾ ಟೆಕ್ನಿಕಲ್ ಕೋರ್ಸ್ ಬಗ್ಗೆ ಆಸಕ್ತಿಯುಳ್ಳವರು ಮಾಹಿತಿ ತಂತ್ರಜ್ಞಾನದಲ್ಲಿ (Information Technology) ಯಾವುದಾದರೂ ಕೋರ್ಸ್‌ ಮಾಡಬಹುದು. ಅಂಥವರಿಗಾಗಿ ಸಾಕಷ್ಡು ಐಟಿ ಕೋರ್ಸ್‌ ಗಳಿವೆ.  ಮಾಹಿತಿ ತಂತ್ರಜ್ಞಾನ ವಲಯದಲ್ಲಿ ಭಾರೀ ಆಕರ್ಷಣೀಯವಾದ ಕೆಲವು ಆನ್ಲೈನ್ ಕೋರ್ಸ್‌ಗಳು ಇವೆ.  ನೆಟ್‌ವರ್ಕ್ ಡೆವಲಪ್‌ಮೆಂಟ್, ಸಾಫ್ಟ್‌ವೇರ್ ಮ್ಯಾನೇಜ್ಮೆಂಟ್, ಡೇಟಾಬೇಸ್ ಅಡ್ಮಿನ್‌ಸ್ಟೇಷನ್, ಹಾರ್ಡ್‌ವೇರ್ ಕಾಂಪೋನೆಂಟ್ಸ್ ಮತ್ತು ಪ್ರಾಜೆಕ್ಟ್ ಡೆವಲಪ್‌ಮೆಂಟ್‌ ವಲಯದಲ್ಲಿ ಸಾಕಷ್ಟು ಕೋರ್ಸುಗಳು ನಿಮಗೆ ಉದ್ಯೋಗಗಳನ್ನು ತಂದುಕೊಡಬಲ್ಲವು. ಈಗ ಕಾಲೇಜ್‌ಗೆ ಹೋಗಿಯೇ ಕಲಿಯಬೇಕೇನೂ ಇಲ್ಲ. ಹಲವು ಕಾಲೇಜುಗಳು ಆನ್‌ಲೈನ್ ಮೂಲಕ ಐಟಿ ಕ್ಷೇತ್ರಕ್ಕೆ ಸಂಬಂಧಿಸಿದಿ ಅನೇಕ ಕೋರ್ಸುಗಳನ್ನು ಆಫರ್ ಮಾಡುತ್ತಿವೆ. ನಿಮ್ಮ ಆಸಕ್ತಿಯ ಅನುಸಾರು ಈ ಕೋರ್ಸುಗಳನ್ನು ಮಾಡಿ ನಿಮಗೆ ಇಷ್ಟವಾದ ಉದ್ಯೋಗಗಳನ್ನು ಶೋಧಿಸಬಹುದಾಗಿದೆ. ಶಿಕ್ಷಣದ ಒಟ್ಟು ಸಂರಚನೆಯೇ ಬದಲಾಗಿದೆ ಎಂಬುದಕ್ಕೆ ಐಟಿ ಕ್ಷೇತ್ರದಲ್ಲಿ ಆನ್‌ಲೈನ್ ಕೋರ್ಸುಗಳು ಹೇಗೆ ತಮ್ಮ ಪ್ರಭಾವವನ್ನು ಬೀರುತ್ತಿವೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ. 

ಈ ಹುಡುಗನಿಗೆ ಸ್ಕಾಲರ್‌ಶಿಪ್‌ ಜತೆಗೆ 27 ವಿವಿ, ಕಾಲೇಜ್‌ಗಳಿಂದ ಆಫರ್!

Introduction to IT ಕೋರ್ಸ್ ಸಾಫ್ಟ್‌ವೇರ್ ಮತ್ತು ಹಾರ್ಡ್‌ವೇರ್ ಸೇರಿದಂತೆ ಡೇಟಾಬೇಸ್ ಆಡಳಿತ, ನೆಟ್‌ವರ್ಕಿಂಗ್, ನೀತಿಶಾಸ್ತ್ರ, ಗೌಪ್ಯತೆ ಮತ್ತು ಸುರಕ್ಷತೆಯ ಅವಲೋಕನವನ್ನು ನೀಡುತ್ತದೆ. ತಂತ್ರಜ್ಞಾನ ಮತ್ತು ಮಾಹಿತಿ ವ್ಯವಸ್ಥೆಗಳನ್ನು ಬಳಸಿಕೊಂಡು ವ್ಯವಹಾರಗಳು ಮತ್ತು ಸಂಸ್ಥೆಗಳು ಹೇಗೆ ನಿರ್ಧಾರಗಳನ್ನು ತೆಗೆದುಕೊಳ್ಳುತ್ತವೆ ಎಂಬುದನ್ನು ಅರ್ಥಮಾಡಿಕೊಳ್ಳಲು ಕಂಪ್ಯೂಟರ್‌ಗಳು ಡೇಟಾವನ್ನು ಹೇಗೆ ಪ್ರತಿನಿಧಿಸುತ್ತವೆ, ಸಂಗ್ರಹಿಸುತ್ತವೆ ಮತ್ತು ಪ್ರಕ್ರಿಯೆಗೊಳಿಸುತ್ತವೆ ಎಂಬುದನ್ನು ನೀವು ಇಲ್ಲಿ ಕಲಿಯುತ್ತೀರಿ.

ಈಗಾಗಲೇ IT ವೃತ್ತಿಪರರಾಗಿದ್ದು, ಪ್ರಾಜೆಕ್ಟ್ ಮತ್ತು ಪ್ರೋಗ್ರಾಂ ಮ್ಯಾನೇಜ್‌ಮೆಂಟ್ ಕುರಿತು ತಮ್ಮ ಜ್ಞಾನವನ್ನು ವಿಸ್ತರಿಸಲು ಬಯಸುವವರಿಗೆ ಐಟಿ ಪ್ರಾಜೆಕ್ಟ್ ಮ್ಯಾನೇಜ್ಮೆಂಟ್ ಕೋರ್ಸ್ ಸೂಕ್ತವಾಗಿದೆ. ಇದು ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್ ಆಫೀಸ್ (PMO ) ನ ಉದ್ದೇಶವನ್ನು ಕಲಿಸುತ್ತದೆ. ಇದೇ ವೇಳೆ, ಇನ್ಫಾರ್ಮೇಷನ್ ಟೆಕ್ನಾಲಜಿ ಎಷೇನ್ಶಿಯಲ್ ಕೋರ್ಸ್ ಕೂಡ ಮಹತ್ವದ್ದಾಗಿದೆ.  ಈ ಕೋರ್ಸ್ IT ತಂತ್ರಜ್ಞಾನದ ಇತಿಹಾಸ ಮತ್ತು ಪ್ರಸ್ತುತ ಸ್ಥಿತಿಯ ಅವಲೋಕನವನ್ನು ಸರಳವಾಗಿ ವಿವರಿಸುತ್ತದೆ. ಇಲ್ಲಿ ನೀವು ಕಂಪ್ಯೂಟರ್ ಹಾರ್ಡ್‌ವೇರ್, ನೆಟ್‌ವರ್ಕಿಂಗ್, ಕ್ಲೌಡ್ ಕಂಪ್ಯೂಟಿಂಗ್ ಮತ್ತು ಪ್ರೋಗ್ರಾಮಿಂಗ್‌ನಂತಹ ವಿವಿಧ ವಿಷಯಗಳನ್ನು ಅಧ್ಯಯನ ಮಾಡುತ್ತೀರಿ. 

ಆನ್‌ಲೈನ್ ಕೋರ್ಸುಗಳ ಪೈಕಿ ಟೆಕ್ನಿಕಲ್ ಸಪೋರ್ಟ್ ಫಂಡಮೆಂಟಲ್ಸ್ ಕೂಡ ಜನಪ್ರಿಯವಾಗುತ್ತಿದೆ.ಈ ಕೋರ್ಸ್ Google IT Support ವೃತ್ತಿಪರ ಪ್ರಮಾಣಪತ್ರ ಕಾರ್ಯಕ್ರಮದ ಭಾಗವಾಗಿದೆ. ಈ ಕೋರ್ಸ್ ಕಂಪ್ಯೂಟರ್ ಹಾರ್ಡ್‌ವೇರ್, ಇಂಟರ್ನೆಟ್, ಕಂಪ್ಯೂಟರ್ ಸಾಫ್ಟ್‌ವೇರ್, ದೋಷನಿವಾರಣೆ (Trouble Shooting) ಮತ್ತು ಗ್ರಾಹಕ ಸೇವೆ (Customer Service)ಯ ಬಗ್ಗೆ ನಿಮಗೆ ಕಲಿಸುತ್ತದೆ. ಹಾಗೆಯೇ, ಐಟಿ ಪ್ರಾಜೆಕ್ಟ್ ವಿಷನ್ ಮತ್ತು ಸ್ಕೋಪ್ ಡೆಫಿನಿಷನ್ ಕೋರ್ಸ್ ಹೊಸ ರೀತಿಯ ಕೌಶಲ್ಯಗಳನ್ನು ಬಯಸುತ್ತದೆ. ಐಟಿ ಯೋಜನೆಯ ದೃಷ್ಟಿ ಮತ್ತು ವ್ಯಾಪ್ತಿ (Vision and Scope)ಯನ್ನು ವ್ಯಾಖ್ಯಾನಿಸುವುದರ ಮೇಲೆ ಕೇಂದ್ರೀಕರಿಸುತ್ತದೆ. ಇಲ್ಲಿ ನೀವು ವ್ಯಾಪಾರದ ಅಗತ್ಯತೆಗಳ ದಾಖಲಾತಿಯನ್ನು ಹೇಗೆ ರಚಿಸುವುದು ಮತ್ತು ಅದರ ಮಿತಿಗಳು ಮತ್ತು  ಹೇಗೆ ಲೆಕ್ಕಾಚಾರ ಮಾಡುವುದು ಎಂಬುದನ್ನು ಕಲಿಯುವಿರಿ. ಅಪ್ಲಿಕೇಶನ್‌ನ ದೃಷ್ಟಿ ಮತ್ತು ವ್ಯಾಪ್ತಿ (Vision and Scope) ಅಭಿವೃದ್ಧಿಪಡಿಸುವುದನ್ನು ಒಳಗೊಂಡಿರುವ ಪ್ರಾಯೋಗಿಕ ಯೋಜನೆ ಕೂಡ ಇದೆ.

ಉತ್ತರ ಪ್ರದೇಶದಲ್ಲಿ ಕೇವಲ 1 ರೂ.ನಲ್ಲಿ SC ST ಹೆಣ್ಮಕ್ಕಳಿಗೆ ತಾಂತ್ರಿಕ ಶಿಕ್ಷಣ?

IT ವೃತ್ತಿಪರರಾಗಲು ಬಯಸುವ ಆರಂಭಿಕರಿಗಾಗಿ (Beginners) ಕಂಪ್ಯೂಟರ್ ಬೇಸಿಕ್ಸ್, ಹಾರ್ಡ್‌ವೇರ್ ಮತ್ತು ಆಪರೇಟಿಂಗ್ ಸಿಸ್ಟಮ್ಸ್ Certification ಕೋರ್ಸ್ ಅತ್ಯುತ್ತಮವಾಗಿದೆ. ಕಂಪ್ಯೂಟರ್ ಘಟಕಗಳನ್ನು ಹೇಗೆ ಗುರುತಿಸುವುದು, ಸಾಧನಗಳು ಮತ್ತು ಪೆರಿಫೆರಲ್‌ಗಳನ್ನು ಸಂಪರ್ಕಿಸುವುದು, ಡೇಟಾ ಸಂಗ್ರಹಣೆಯನ್ನು ಹೊಂದಿಸುವುದು ಮತ್ತು ವಿವಿಧ ಆಪರೇಟಿಂಗ್ ಸಿಸ್ಟಮ್‌ಗಳ ನಡುವಿನ ಹೋಲಿಕೆಗಳನ್ನು ಗುರುತಿಸುವುದು ಹೇಗೆ ಎಂದು ನಿಮಗೆ ಕಲಿಸುತ್ತದೆ. ಪರ್ಸನಲ್ ಕಂಪ್ಯೂಟರ್(PC)ಅನ್ನು ಹೇಗೆ ಜೋಡಿಸುವುದು ಎಂಬುದರ ಕುರಿತು ನಿಮಗೆ ಹ್ಯಾಂಡ್ಸ್-ಆನ್ ಪ್ರದರ್ಶನವನ್ನು ನೀಡಲಾಗುವುದು. CompTIA IT ಫಂಡಮೆಂಟಲ್ಸ್ (FC0-U61) ಪರೀಕ್ಷೆಯ ತಯಾರಿಯನ್ನು ಪ್ರಾರಂಭಿಸಲು ಈ ಕೋರ್ಸ್ ಉತ್ತಮವಾಗಿದೆ.

PREV
Read more Articles on
click me!

Recommended Stories

SSLCಗೆ ಶೇ.33 ಪಾಸಿಂಗ್ ಮಾರ್ಕ್ಸ್ ಸಮರ್ಥಿಸಿ ಕೊಳ್ಳುತ್ತಲೇ ರಾಜ್ಯ ಪೊಲಿಟಿಕ್ಸ್ ಅಪ್ಟೇಡ್ ಕೊಟ್ಟ ಮಧು ಬಂಗಾರಪ್ಪ
ಖಾಸಗಿ ಶಾಲೆಗಳಿಗೆ ಸೆಡ್ಡು, ಮುಂದಿನ ವರ್ಷದಿಂದ ರಾಜ್ಯಾದ್ಯಂತ 700 ಕೆಪಿಎಸ್ ಶಾಲೆ ಕಾರ್ಯಾರಂಭ