* ಹೈಸ್ಕೂಲ್ ಪಠ್ಯದಲ್ಲಿ ಸಿದ್ಧಾರೂಢರ ಜಾತ್ರೆಯ ವೈಶಿಷ್ಟ್ಯ,?
* ವೈರಲ್ ಆಗಿರುವ ಸುದ್ದಿ ನಿಜಾವೋ ಸುಳ್ಳೋ..?
* ಇನ್ನೂ ಖಚಿತ ಪಡಿಸದ ಶಿಕ್ಷಣ ಇಲಾಖೆ...!
ವರದಿ: ಗುರುರಾಜ್ ಹೂಗಾರ್
ಹುಬ್ಬಳ್ಳಿ, (ಮೇ.19): ಕರ್ನಾಟಕ ಶಿಕ್ಷಣದಲ್ಲಿ ಭಾರೀ ಬದಲಾವಣೆಗಳು ಆಗುತ್ತಿವೆ. ಅದರಲ್ಲೂ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣದ ಪಠ್ಯದಲ್ಲಿ ಭಾರಿ ಬದಲಾವಣೆಗಳು ಆಗುತ್ತಿದ್ದು, ಇದಕ್ಕೆ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ.
ಉತ್ತರ ಕರ್ನಾಟಕ ಭಾಗದ ಆರಾಧ್ಯದೈವ ಎಂದೇ ಖ್ಯಾತಿ ಪಡೆದ ಸದ್ಗುರು ಸಿದ್ಧಾರೂಢರ ಜಾತ್ರೆಯ ಕುರಿತಾದ ವಿಷಯವೊಂದು ಹೈಸ್ಕೂಲ್ ಪಠ್ಯದಲ್ಲಿ ಸೇರ್ಪಡೆ ಮಾಡಲಾಗಿದೇಯಾ? ಸಿದ್ಧಾರೂಢರ ಜಾತ್ರೆ ವಿಶೇಷ ಎಂಬ ವಿಷಯವನ್ನು ಪಠ್ಯದಲ್ಲಿ ಸೇರಿಸಲಾಗಿದೆ ಎಂಬ ವಿಚಾರವನ್ನ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಲಾಗಿದೆ. ಆದರೆ ಈ ಕುರಿತು ಸರ್ಕಾರ ಮಾತ್ರ ಖಚಿತ ಪಡಿಸಿಲ್ಲ.
ಹೌದು..ಉತ್ತರ ಕರ್ನಾಟಕದ ಆರಾಧ್ಯದೈವ ಶ್ರೀ ಸಿದ್ಧಾರೂಢರ ಜಾತ್ರೆಯ ಕುರಿತು ಸರ್ಕಾರ ಹೈಸ್ಕೂಲು ವಿದ್ಯಾರ್ಥಿಗಳ ಪಠ್ಯದಲ್ಲಿ ಸೇರ್ಪಡೆ ಮಾಡಿದೆಯೇ..? ಎಂಬುವಂತ ಗೊಂದಲ ಸಾರ್ವಜನಿಕರಲ್ಲಿ ಉಂಟು ಮಾಡಿದೆ. ಇಂತಹದೊಂದು ಚರ್ಚೆ ಇದೀಗ ಹುಬ್ಬಳ್ಳಿ ನಗರದಲ್ಲಿ ಶುರುವಾಗಿದೆ. ಇದಕ್ಕೆ ಕಾರಣವೂ ಇಲ್ಲದಿಲ್ಲ ಸಿದ್ಧಾರೂಢರ ಜಾತ್ರೆ ಎಂಬ ಹೆಸರಿನ ಪಾಠವೊಂದನ್ನು 8 ನೇ ತರಗತಿಯ ಕನ್ನಡ ಭಾಷೆಯ ಪಠ್ಯದಲ್ಲಿ ಸೇರ್ಪಡೆ ಮಾಡಿರುವ ಮಾಹಿತಿಯ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಎಸ್‌ಎಸ್‌ಎಲ್‌ಸಿಯಿಂದ ನಾರಾಯಣ ಗುರು ಪಠ್ಯ ಎತ್ತಂಗಡಿ ,7ನೇ ತರಗತಿಗೆ ಸೇರ್ಪಡೆ!
ಆದರೆ ಇದನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ಪಠ್ಯಪುಸ್ತಕ ಸಂಘ ಇನ್ನೂ ಖಚಿತ ಪಡಿಸಿಲ್ಲ. ವಾಟ್ಸ್ ಆ್ಯಪ್, ಫೇಸ್‌ಬುಕ್‌ಗಳಲ್ಲಿ ಇದು ವೈರಲ್ ಆಗಿದ್ದು, ಬೆಳಿಗ್ಗೆಯಿಂದಲೇ 'ಅಜ್ಜನ ಜಾತ್ರೆ' ಕುರಿತು ಪಠ್ಯದಲ್ಲಿ ಸೇರ್ಪಡೆಯಾಗಿದೆ ಎಂಬ ಚರ್ಚೆ ಮುನ್ನೆಲೆ ಬಂದಿದೆ. ಅಜ್ಜನ ತೇರಿನ ಚಿತ್ರವಿರುವ ಪಠ್ಯದ ಪೂರ್ಣ ಪಾಠವನ್ನು ಇಲ್ಲಿ ನೀಡಲಾಗಿದೆ. ಇದರಲ್ಲಿ ಇತಿಹಾಸವನ್ನು ಸಾರು ವಂತೆ ವಿಷಯ ಪ್ರಸ್ತಾಪಿಸಲಾಗಿದೆ.
ಇನ್ನೂ ಹುಬ್ಬಳ್ಳಿ ತಾಲೂಕಿನ ಆದರಗುಂಚಿ ಗ್ರಾಮದ ಶಾಲೆಯೊಂದರ ಮಕ್ಕಳು, ತಮ್ಮ ಶಿಕ್ಷಕರೊಂದಿಗೆ ಸಿದ್ಧಾರೂಢರ ಜಾತ್ರೆಗೆ ಆಗಮಿಸಿರುತ್ತಾರೆ. ಮಕ್ಕಳು ಜಾತ್ರೆಯ ಬಗ್ಗೆ ಶಿಕ್ಷಕರಿಗೆ ಪ್ರಶ್ನೆಗಳನ್ನು ಕೇಳುತ್ತಾರೆ. ಶಿಕ್ಷಕರು, ಮಕ್ಕಳಿಗೆ ಉತ್ತರಿಸುತ್ತಾರೆ. ತಮ್ಮ ಉತ್ತರದ ಮೂಲಕವೇ ಆರೂಢರ ಜನ್ಮ, ಹುಬ್ಬಳ್ಳಿಗೆ ಬಂದಿರುವುದು ಸೇರಿದಂತೆ ಮಠದ ಇತಿಹಾಸವನ್ನು ವಿವರಿಸುತ್ತಾರೆ. ಈ ಮೂಲಕ ಮಕ್ಕಳು ಮತ್ತು ಶಿಕ್ಷಕರ ಸಂವಾದದ ಮೂಲಕವೇ ಜಾತ್ರೆಯ ವಿಶೇಷತೆಯನ್ನು ಹೇಳುವ ಪಾಠ ಇದಾಗಿದೆ. ಆದ್ರೆ ಇನ್ನೂ ಶಾಲೆಗಳಿಗೆ ಪಠ್ಯ ಪ್ರಸ್ತಕಗಳು ಬಾರದ ಕಾರಣ ಇದು ಇದೆಯೋ ಅಥವಾ ನಕಲಿ ಸುದ್ದಿಯೋ ಗೊತ್ತಾಗಿಲ್ಲ. ಈ ಬಗ್ಗೆ ಶಿಕ್ಷಣ ಇಲಾಖೆ ಸ್ಪಷ್ಟನೆ ಕೊಡಬೇಕಿದೆ.
SSLCಯಿಂದ ನಾರಾಯಣ ಗುರು ಪಠ್ಯ ಎತ್ತಂಗಡಿ ,7ನೇ ತರಗತಿಗೆ ಸೇರ್ಪಡೆ!
ಎಸ್‌ಎಸ್‌ಎಲ್‌ಸಿ ಪಠ್ಯದಿಂದ ಸಮಾಜ ಸುಧಾರಕ ನಾರಾಯಣ ಗುರುಗಳ ಪಠ್ಯಕ್ಕೆ ಕೊಕ್ ನೀಡಿರುವುದು ಭಾರೀ ವಿವಾದಕ್ಕೆ ಕಾರಣವಾಗಿರುವ ಬೆನ್ನಲ್ಲೇ ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿ ನಾರಾಯಣ ಗುರುಗಳ ಪಾಠವನ್ನು ಪಠ್ಯದಿಂದ ಕೈ ಬಿಟ್ಟಿಲ್ಲ ಎಂದು ಹೇಳಿದಂತೆ. ಅದರಂತೆ ಎಸ್ಸೆಸ್ಸೆಲ್ಸಿ ಬದಲಾಗಿ ಏಳನೇ ತರಗತಿ ಪಠ್ಯದಲ್ಲಿ ನಾರಾಯಣ ಗುರುಗಳ ಜೀವನ ಚರಿತ್ರೆಯನ್ನು ಉಳಿಸಿಕೊಳ್ಳಲಾಗಿದೆ.
ಏಳನೇ ತರಗತಿ ಪಠ್ಯದಲ್ಲಿ ನಾರಾಯಣ ಗುರುಗಳ ಬಗ್ಗೆ ಮಾಹಿತಿ ಸೇರ್ಪಡೆ ಮಾಡಲಾಗಿದ್ದು, ಎಸ್‌ಎಸ್‌ಎಲ್‌ಸಿ ಪಠ್ಯದಿಂದ ತೆಗೆದು ಏಳನೇ ತರಗತಿ ಪಠ್ಯದಲ್ಲಿ ಸೇರ್ಪಡೆಗೊಳಿಸಲಾಗಿದೆ. ಏಳನೇ ತರಗತಿಯ ಸಮಾಜ ವಿಜ್ಞಾನ ಪಠ್ಯ ಪುಸ್ತಕದ ಭಾಗ-2ರ ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣೆ ವಿಭಾಗದಲ್ಲಿ ನಾರಾಯಣ ಗುರುಗಳ ಬಗ್ಗೆ ವಿಚಾರ ಸೇರ್ಪಡೆ ಮಾಡಲಾಗಿದೆ.