
ಬೆಂಗಳೂರು (ಮೇ.19): ಎಸ್‌ಎಸ್ಎಲ್‌ಸಿ ಪರೀಕ್ಷೆ ಫಲಿತಾಂಶಕ್ಕೆ (karnataka sslc result 2022) ಕ್ಷಣಗಣನೆ ಆರಂಭವಾಗಿದೆ. ಮಧ್ಯಾಹ್ನ 12.30ಕ್ಕೆ ಎಸ್‌ಎಸ್ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟಿಸಲಾಗುತ್ತಿದ್ದು, ಮಧ್ಯಾಹ್ನ 1 ಗಂಟೆಗೆ ವೆಬ್‌ಸೈಟ್ https://karresults.nic.in/ ನಲ್ಲಿ ಲಭ್ಯವಾಗಲಿದೆ. ಇದರ ಬೆನ್ನಲ್ಲೇ ಕಳೆದ ಬಾರಿ ರಾಜ್ಯದಲ್ಲಿ ನಡೆದಿದ್ದ ಎಸ್‌ಎಸ್ಎಲ್‌ಸಿ ಪರೀಕ್ಷೆಯ ಸಂಪೂರ್ಣ ಮಾಹಿತಿ ಇಲ್ಲಿದೆ.
ಕಳೆದ ವರ್ಷ (2021ರಲ್ಲಿ) ನಡೆದ ಎಸ್‌ಎಸ್ಎಲ್‌ಸಿ ಪರೀಕ್ಷೆ ರಾಜ್ಯದ ಇತಿಹಾಸದಲ್ಲಿಯೇ ವಿನೂತನವಾಗಿ ನಡೆದಿತ್ತು. ಕೋವಿಡ್ ಸವಾಲಿನ ಸಮಯದಲ್ಲಿ ಸರಳ ಮಾದರಿಯ ಪರೀಕ್ಷೆ ನಡೆದಿತ್ತು. ಪರೀಕ್ಷೆ ಬರೆದ ಎಲ್ಲರನ್ನೂ ಪಾಸ್ ಮಾಡುವುದಾಗಿ ಮೊದಲೇ ಸರಕಾರ ತೀರ್ಮಾನ ಕೂಡ ಮಾಡಿತ್ತು. ಅದರಂತೆ, ಒಬ್ಬ ವಿದ್ಯಾರ್ಥಿ ಹೊರತು ಪಡಿಸಿ ಎಲ್ಲರನ್ನು ಪಾಸ್ ಮಾಡಲಾಗಿತ್ತು. ಶೇ. 99.9 ಫಲಿತಾಂಶ ಕೂಡ ಬಂದಿತ್ತು. ತಾನು ಪರೀಕ್ಷೆ ಬರೆಯುವ ಬದಲು ಬೇರೆಯುವರು ಪರೀಕ್ಷೆ ಬರೆದ ಕಾರಣ ಒಬ್ಬ ವಿದ್ಯಾರ್ಥಿಯನ್ನು ಫೇಲು ಮಾಡಲಾಗಿತ್ತು. ಹೀಗಾಗಿ ಶೇ. 99.9 ಫಲಿತಾಂಶ ಬಂದಿತ್ತು. ಇಲ್ಲವಾದರೆ ಶೇ.100 ಫಲಿತಾಂಶ ಬಂದು ಇತಿಹಾಸ ಸೃಷ್ಟಿಯಾಗುತ್ತಿತ್ತು.
SSLC ಫಲಿತಾಂಶಕ್ಕೆ ಚೆಕ್ ಮಾಡುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ
2021ರಲ್ಲಿ ಒಟ್ಟು 8.76 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. A+ ಗ್ರೇಡ್‌ನಲ್ಲಿ 128931 ವಿದ್ಯಾರ್ಥಿಗಳು ಪಾಸ್ ಆಗಿದ್ರೆ, A ಗ್ರೇಡ್‌ನಲ್ಲಿ 250317 ಸ್ಟೂಡೆಂಟ್ಸ್ ಉತ್ತೀರ್ಣರಾಗಿದ್ದರು. B ಗ್ರೇಡ್‌ನಲ್ಲಿ 287684 ಹಾಗೂ ಸಿ ಗ್ರೇಡ್- 1 ಲಕ್ಷದ 13 ಸಾವಿರದ 610 ವಿದ್ಯಾರ್ಥಿಗಳು ಪಡೆದು ಕೊಂಡಿದ್ದರು. ಇನ್ನು ಶೇ.9 ರಷ್ಟು ಮಕ್ಕಳಿಗೆ ಮಾತ್ರ ಗೇಸ್ ಅಂಕ ನೀಡಿ ಪಾಸ್ ಮಾಡಲಾಗಿತ್ತು. 13 ವಿದ್ಯಾರ್ಥಿಗಳಿಗೆ ವಿಷಯವೊಂದಕ್ಕೆ ಗರಿಷ್ಟ 28 ಕೃಪಾಂಕ ನೀಡಿ ಪಾಸ್ ಮಾಡಲಾಗಿತ್ತು.
157 ವಿದ್ಯಾರ್ಥಿಳು 625 ಕ್ಕೆ 625 ಅಂಕ ಪಡೆದಿದ್ದರು, 289 ವಿದ್ಯಾರ್ಥಿಗಳು 625ಕ್ಕೆ 623 ಅಂಕ ಪಡೆದಿದ್ದರೆ, ಇಬ್ಬರಿಗೆ 622 ಅಂಕ ಸಿಕ್ಕಿತ್ತು. 449 ವಿದ್ಯಾರ್ಥಿಗಳಿಗೆ 621 ಅಂಕ ಸಿಕ್ಕಿತ್ತು. 28 ವಿದ್ಯಾರ್ಥಿಗಳು 620 ಅಂಕ ಪಡೆದಿದ್ದರು.
Karnataka SSLC Result 2022: ಕೆಲವೇ ಗಂಟೆಗಳಲ್ಲಿ ಹತ್ತನೇ ತರಗತಿ ಫಲಿತಾಂಶ
Out of Out ಅಂಕ ಪಡೆದ ಮಕ್ಕಳ ಸಂಖ್ಯೆ:
* ಪ್ರಥಮ ಭಾಷೆ ಕನ್ನಡ- 125ಕ್ಕೆ 125 ಅಂಕ ಪಡೆದಿದ್ದ ವಿದ್ಯಾರ್ಥಿಗಳು 25 ಸಾವಿರದ 702.
* ದ್ವಿತೀಯ 100ಕ್ಕೆ 100 ಮಾರ್ಕ್ಸ್ ಅನ್ನು- 36ಸಾವಿರದ 628 ವಿದ್ಯಾರ್ಥಿಗಳು ಪಡೆದುಕೊಂಡಿದ್ದರು.
* ಹಿಂದಿ 100ಕ್ಕೆ 100 ಅಂಕ ಪಡೆದಿದ್ದವರು 36 776 ವಿದ್ಯಾರ್ಥಿಗಳು
* ಗಣಿತದಲ್ಲಿ 100ಕ್ಕೆ ನೂರು ಅಂಕವನ್ನು 6321 ವಿದ್ಯಾರ್ಥಿಗಳು ಪಡೆದಿದ್ದರು
* ವಿಜ್ಞಾನ- 100ಕ್ಕೆ 100 ಅಂಕ ಪಡೆದ ವಿದ್ಯಾರ್ಥಿಗಳ ಸಂಖ್ಯೆ 3649
* ಸಮಾಜ ವಿಜ್ಞಾನ100ಕ್ಕೆ 100 ಅಂಕ ಪಡೆದ ವಿದ್ಯಾರ್ಥಿಗಳ ಸಂಖ್ಯೆ 9367
ಕೋವಿಡ್ ಸಂಕಷ್ಟದ ಸಮಯದಲ್ಲಿ ಸವಾಲಿನ ರೀತಿ 2021ರಲ್ಲಿ ಎಸ್‌ಎಸ್ಎಲ್‌ಸಿ ಪರೀಕ್ಷೆ ನಡೆಸಲಾಗಿತ್ತು. ವರ್ಷ ಪೂರ್ತಿ ಆನ್ಲೈನ್ ಕಲಿಕೆ ಮೂಲಕ ಪಾಠ ಕಲಿತ ಮಕ್ಕಳಿಗೆ ಯಾವುದೇ ತೊಡಗು ಆಗದಂತೆ ಸರಳೀಕೃತವಾಗಿ ವಿನೂತನ ಮಾದರಿಯಲ್ಲಿ ಪರೀಕ್ಷೆ ನಡೆಸಲಾಗಿತ್ತು. ಕೆಪಿಎಸ್ಸಿ ಪರೀಕ್ಷೆ ವಿಧಾನದ ಮೂಲಕ ವಿದ್ಯಾರ್ಥಿಗಳು ಬಹು ಆಯ್ಕೆ ಉತ್ತರಗಳಿಗೆ ಪರೀಕ್ಷೆ ಬರೆದಿದ್ದರು. 40 ಅಂಕಗಳಿಗೆ ನಡೆದ ಈ ಪರೀಕ್ಷೆ ಜೂ. 19 ಮತ್ತು 22 ರಂದು ಎರಡು ದಿನ ನಡೆದಿತ್ತು. ಶೇ 99.65 ರಷ್ಟು ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗುವ ಮೂಲಕ ದಾಖಲೆ ಬರೆದಿದ್ದರು.
ಇನ್ನು ಜಿಲ್ಲಾವಾರು ಫಲಿತಾಂಶದಲ್ಲಿ ಬೆಂಗಳೂರು ಉತ್ತರ ಪ್ರಥಮ ಸ್ಥಾನ, ಬೆಂಗಳೂರು ದಕ್ಷಿಣ ದ್ವಿತೀಯ ಹಾಗೂ ರಾಮನಗರಕ್ಕೆ ತೃತೀಯ ಸ್ಥಾನ ಲಭಿಸಿತ್ತು. ಇನ್ನು ಬಳ್ಳಾರಿ ಕೊನೆ ಸ್ಥಾನದಲ್ಲಿತ್ತು. ನಂತರದ ಸ್ಥಾನಗಳಲ್ಲಿ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ಮದುಗಿರಿ, ತುಮಕೂರು, ಚಾಮರಾಜನಗರ, ಮೈಸೂರು, ಮಂಡ್ಯ, ಉಡುಪಿ, ಮಂಗಳೂರು, ಕೊಡಗು, ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಹಾವೇರಿ, ಗದಗ, ಧಾರವಾಡ, ಚಿಕ್ಕೋಡಿ, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಶಿರಸಿ, ಉತ್ತರ ಕನ್ನಡ, ಯಾದಗಿರಿ, ಕಲಬುರಗಿ, ಕೊಪ್ಪಳ, ರಾಯಚೂರು, ಬೀದರ್ ಹಾಗೂ ಬಳ್ಳಾರಿ ಕೊನೆಯ ಸ್ಥಾನದಲ್ಲಿತ್ತು.