ಧಾರವಾಡ ಕೃಷಿ ವಿವಿ 35 ನೇ ಘಟಿಕೋತ್ಸವಕ್ಕೆ ರಾಜ್ಯಪಾಲರಿಂದ ಚಾಲನೆ

By Girish Goudar  |  First Published Jun 7, 2022, 2:17 PM IST

*  ಪದವಿ ಪ್ರಧಾನ ಮಾಡಲು ನಮ್ಮೊಂದಿಗಿರುವುದು ನಮ್ಮೆಲ್ಲರ ಅದೃಷ್ಟ ಮತ್ತು ಸೌಭಾಗ್ಯ 
*  ರೈತರ ಮಕ್ಕಳಿಗಾಗಿ ಸದ್ಯ ಇರುವ ಕೃಷಿ ಮೀಸಲಾತಿಯನ್ನು ಶೇ. 40 ರಿಂದ ಶೇ. 50 ಕ್ಕೆ ಹೆಚ್ಚಿಸಿದ್ದಾರೆ
*  ಅತ್ಯುತ್ತಮ ಶೈಕ್ಷಣಿಕ ವಾತಾವರಣ ಸೃಷ್ಟಿ


ವರದಿ: ಪರಮೇಶ್ವರ ಅಂಗಡಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಧಾರವಾಡ

ಧಾರವಾಡ(ಜೂ.07): ಧಾರವಾಡ ಕೃಷಿ ವಿಶ್ವವಿದ್ಯಾಲಯದ 35 ನೇ ಘಟಿಕೋತ್ಸವಕ್ಕೆ ರಾಜ್ಯಪಾಲರಾದ ಥಾವರ್ ಚಂದ ಗೆಲ್ಲೋಟ್ ಇಂದು(ಮಂಗಳವಾರ) ಚಾಲನೆ ನೀಡಿದ್ದಾರೆ.  ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಕೃಷಿ ವಿವಿ ಕುಲಪತಿ ಮಹಾದೇವ ಶೆಟ್ಟಿ ಅವರು, ಧಾರವಾಡ ಕೃಷಿ ವಿಶ್ವವಿದ್ಯಾಲಯದ 35 ನೇ ಘಟಿಕೋತ್ಸವಕ್ಕೆ ವ್ಯವಸ್ಥಾಪನಾ ಮಂಡಳಿ, ವಿದ್ಯಾವಿಷಯಕ ಪರಿಷತ್ತು ಪರವಾಗಿ ಹಾಗೂ ವೈಯಕ್ತಿಕವಾಗಿ ಸ್ವಾಗತಿಸಲು ತುಂಬಾ ಹರ್ಷವೆನಿಸುತ್ತದೆ ಎಂದು ಹೇಳಿದರು. 

Tap to resize

Latest Videos

ಇದೇ ವೇಳೆ ಮಾತನಾಡಿದ ಥಾವರ್ ಚಂದ್ ಗೆಹೋಟ್, ಇಂದು 35 ನೇ ಘಟಿಕೋತ್ಸವದ ಅಧ್ಯಕ್ಷರಾಗಿ ಪದವಿ ಪ್ರಧಾನ ಮಾಡಲು ನಮ್ಮೊಂದಿಗಿರುವುದು ನಮ್ಮೆಲ್ಲರ ಅದೃಷ್ಟ ಮತ್ತು ಸೌಭಾಗ್ಯ ಅಂತ ಹೇಳಿದ್ದಾರೆ.  ಕೃಷಿ ವಿಶ್ವವಿದ್ಯಾಲಯ, ಧಾರವಾಡ ಆವರಣಕ್ಕೆ ರಾಜ್ಯಪಾಲರು ಒಂದು ವರ್ಷಕ್ಕಿಂತ ಕಡಿಮೆ ಅವಧಿಯಲ್ಲಿ ನಾಲ್ಕು ಬಾರಿ ಭೇಟಿ ನೀಡುತ್ತಿರುವುದು ಅಪರೂಪದ ಮತ್ತು ಗೌರವದ ವಿಷಯವಾಗಿದೆ.

ಪಠ್ಯ ಪುಸ್ತಕ ಪರಿಷ್ಕರಣೆ ವಿವಾದ: ಸಚಿವ ನಾಗೇಶ್‌ ಮನೆಗೆ ಮುತ್ತಿಗೆ

ಸಮಗ್ರ ಕೃಷಿ ಪದ್ಧತಿಗಳನ್ನು ನಮ್ಮ ಕೃಷಿ ಇಲಾಖೆಯಲ್ಲಿ ಅಳವಡಿಸಿ ರಾಜ್ಯದ ಆಹಾರ ಉತ್ಪಾದನೆ ಹೆಚ್ಚಿಸುವಲ್ಲಿ ಸಹಕಾರಿಯಾಗಿದ್ದಾರೆ. ಮಾನ್ಯ ಕೃಷಿ ಮಂತ್ರಿಗಳ ಅವಿರತ ಪರಿಶ್ರಮದಿಂದ ಪಿ, ಎದು ಸಾವ ಯೋಜನೆಯಡಿಯಲ್ಲಿ ಶೇ. 97ರಷ್ಟು ಆಧಾರ್‌ ಕಾರ್ಡ್‌ ಜೋಡಣೆ ಹಾಗೂ ಹಣ ನಾವತಿ ಕೈಗೊಂಡ ರಾಷ್ಟ್ರದಲ್ಲಿ ಮೊದಲ ಸ್ಥಾನ ಪಡೆದ ರಾಜ್ಯವಾಗಿ ಕೇಂದ್ರ ಸರ್ಕಾರದಿಂದ ಮರಸ್ಕಾರವನ್ನು ಪಡೆದಿರುವುದು ಅತ್ಯಂತ ಶ್ಲಾಘನೀಯ ರೈತರ ಆದಾಯವನ್ನು ಹೆಚ್ಚಿಸುವಲ್ಲಿ ಸನ್ಮಾನ್ಯ ಕೃಷಿ ಸಚಿವರಿಗಿರುವ ಕಾಳಜಿಯಿಂದ ಕರ್ನಾಟಕದಲ್ಲಿ ಪ್ರಥಮ ಬಾರಿಗೆ ಕೃಷಿ ಮತ್ತು ಇತರ ಆಹಾರ ಉತ್ಪನ್ನಗಳ ಸಂಸ್ಕರಣೆ ಮತ್ತು ಮೌಲ್ಯವರ್ಧನೆಗಾಗಿ ಪ್ರತ್ಯೇಕ ಸೆಕಂಡು ಕೃಷಿ ನಿರ್ದೇಶನಾಲಯವನ್ನು ಸ್ಥಾಪನೆ ಮಾಡಲಾಗಿದೆ. ಕೃಷಿ, ತೋಟಗಾರಿಕೆ ಹಾಗೂ ಪಶುವೈದ್ಯಕೀಯ ವಿಶ್ವವಿದ್ಯಾಲಯಗಳಲ್ಲಿ ಪ್ರಸಕ್ತ ಸಾಲಿನಲ್ಲಿ ಸ್ನಾತಕ ಪದವಿಗಳ ಪ್ರವೇಶಕ್ಕಾಗಿ ರೈತರ ಮಕ್ಕಳಿಗಾಗಿ ಸದ್ಯ ಇರುವ ಕೃಷಿ ಮೀಸಲಾತಿಯನ್ನು ಶೇ. 40 ರಿಂದ ಶೇ. 50 ಕ್ಕೆ ಹೆಚ್ಚಿಸಿದ್ದಾರೆ. ಹಾಗೂ ರೈತರ ಮಕ್ಕಳಿಗೆ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಒಲವು ಮೂಡಿಸಲು “ಕರ್ನಾಟಕ ರೈತ ಮಕ್ಕಳ ಶಿಷ್ಯವೇತನ ಯೋಜನೆ"- ಮುಂತಾದವುಗಳನ್ನು ಜಾರಿಗೆ ತರುವಲ್ಲಿ ಶ್ರೀಯುತರ ಪ್ರಯತ್ನ ಸ್ತುತ್ಯಾರ್ಹ ಅಂತ ಥಾವರ್ ಚಂದ್ ಗೆಹೋಟ್ ತಿಳಿಸಿದ್ದಾರೆ. 

ಸನ್ಮಾನ್ಯರಿಗೆ ವಿಶ್ವವಿದ್ಯಾಲಯದ ಪರವಾಗಿ ಮತ್ತು ನನ್ನ ವಯಕ್ತಿಕವಾಗಿ ಹಾರ್ದಿಕ ಸ್ವಾಗತ ಕೋರುತ್ತೇನೆ ಇಂದಿನ ಘಟಿಕೋತ್ಸವ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿರುವ ಭಾರತೀಯ ಕೃಷಿ ಅನುಸಂಧಾನ ಪರಿಷತ್ತು, ನವದೆಹಲಿಯಲ್ಲಿ ಉಪ ಮಹಾನಿರ್ದೇಶಕ (ಶಿಕ್ಷಣ) ರಾಗಿರುವ ಡಾ. ಆರ್. ಸಿ. ಅಗ್ರವಾಲ್‌ಜಿ ಅವರನ್ನು ಸ್ವಾಗತಿಸಲು ನನಗೆ ಅತೀವ ಹರ್ಷವೆನಿಸುತ್ತದೆ. ಡಾ. ರಾಕೇಶ ಚಂದ್ರ ಅಗ್ರವಾಲ್ ರವರು ಪ್ರಸ್ತುತ ಭಾರತೀಯ ಕೃಷಿ ಅನುಸಂಧಾನ ಪರಿಷತ್ತು, ನವದೆಹಲಿಯಲ್ಲಿ ಉಪ ಮಹಾನಿರ್ದೇಶಕರು (ಶಿಕ್ಷಣ) ಮತ್ತು ಭಾರತೀಯ ಕೃಷಿ ಅನುಸಂಧಾನ ಪರಿಷತ್ತಿನ ರಾಷ್ಟ್ರೀಯ ಕೃಷಿ ಉನ್ನತ ಶಿಕ್ಷಣ ಯೋಜನೆಯ ರಾಷ್ಟ್ರೀಯ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಇವರು ದೇಶದ ಕೃಷಿ ಶಿಕ್ಷಣವನ್ನು ಮುನ್ನಡೆಸುತ್ತಿದ್ದು ಮತ್ತು ದೇಶದಲ್ಲಿನ 74 ಕೃಷಿ ವಿಶ್ವವಿದ್ಯಾಲಯಗಳಲ್ಲಿ ಕೃಷಿ ಉನ್ನತ ಶಿಕ್ಷಣದಲ್ಲಿನ ಸುಧಾರಣೆಗೋಸ್ಕರ ಮತ್ತು ಕೃಷಿ ಹಾಗೂ ಕೃಷಿ ಸಂಬಧಿತ ಕ್ಷೇತ್ರಗಳಲ್ಲಿ ಯುವಕರನ್ನು ಆಕರ್ಷಿಸುತ್ತಿದೆ ಅಂತ ಹೇಳಿದ್ದಾರೆ. 

ವಿಜಯಪುರದ ವಿಕಲಚೇತನರ ಪುನಶ್ಚೇತನ ಕೇಂದ್ರಕ್ಕೆ ಜಿಲ್ಲಾ ಪಂಚಾಯತ್ ಸಿಇಓ ಭೇಟಿ!

ಲೇಖನಗಳನ್ನು ಪ್ರಕಟಿಸಲು ಪ್ರೇರೇಪಿಸಲಾಯಿತು, ಗುಣಮಟ್ಟದ ಉಪಕರಣಗಳನ್ನು ಹೊಂದಿದ ಉನ್ನತ ದರ್ಜೆಯ ಪ್ರಯೋಗಾಲಯಗಳನ್ನು ಅಭಿವೃದ್ಧಿಪಡಿಸಲಾಯಿತು. ಅತ್ಯುತ್ತಮ ಶೈಕ್ಷಣಿಕ ವಾತಾವರಣವನ್ನು ಸೃಷ್ಟಿಸಲಾಯಿತು, ಇಂತಹ ಕಾರ್ಯಕ್ರಮಗಳು ನಮ್ಮ ವಿಶ್ವವಿದ್ಯಾಲಯವನ್ನು ವಿಶ್ವದಲ್ಲಿಯೇ ಉನ್ನತ ವಿಶ್ವವಿದ್ಯಾಲಯಗಳಲ್ಲೊಂದವಾಗಿ ತಲುಪುವ ಹಂತಕ್ಕೆ ತಂದು ನಿಲ್ಲಿಸಿದೆ ಅಂತ ತಿಳಿಸಿದ್ದಾರೆ. 

2021-22 ನೇ ಸಾಲಿನಲ್ಲಿ ಒಟ್ಟು 849 (431 ವಿದ್ಯಾರ್ಥಿನಿಯರು) ಅಭ್ಯರ್ಥಿಗಳು ವಿವಿಧ ಪದವಿಗಳಿಗೆ ಪ್ರವೇಶ ಪಡೆದಿದ್ದಾರೆ. ಇದರಲ್ಲಿ ಸ್ನಾತಕ ಪದವಿಗೆ 546 (260 ವಿದ್ಯಾರ್ಥಿನಿಯರು), ಸ್ನಾತಕೋತ್ತರ ಪದವಿಗೆ 251 (142 ವಿದ್ಯಾರ್ಥಿನಿಯರು) ಮತ್ತು ಪಿ.ಹೆಚ್.ಡಿ. ಪದವಿಗೆ 52 (29 ವಿದ್ಯಾರ್ಥಿನಿಯರು) ಅಭ್ಯರ್ಥಿಗಳು ಪ್ರವೇಶ ಪಡೆದಿದ್ದಾರೆ. ಪ್ರಸ್ತುತ 35 ನೆಯ ಘಟಿಕೋತ್ಸವದಲ್ಲಿ, 42 ಪಿಎಚ್.ಡಿ., 253 ಸ್ನಾತಕೋತ್ತರ ಹಾಗೂ 595 ಸ್ನಾತಕ ಪದವಿ ಗಳನ್ನೊಳಗೊಂಡಂತೆ ಒಟ್ಟು 890  ಅಭ್ಯರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗಿದೆ. ಈ ಘಟಿಕೋತ್ಸವದಲ್ಲಿ 48 ಚಿನ್ನದ ಪದಕ ಹಾಗೂ 11 ನಗದು ಬಹುಮಾನಗಳನ್ನು ಅತಿ ಹೆಚ್ಚು ಅಂಕ ಪಡೆದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ನಿಡಲಾಯಿತು. 
 

click me!