ಹಿಬಾಬ್ ವಿವಾದ: ಮಂಗಳೂರು ವಿವಿ ಕಾಲೇಜು 'ಬಾಹ್ಯ ಶಕ್ತಿಗಳು' ಅಂದಿದ್ದು ಯಾರಿಗೆ?

By Girish GoudarFirst Published Jun 7, 2022, 10:57 AM IST
Highlights


*   ಬಾಹ್ಯ ಶಕ್ತಿಗಳ ಜೊತೆ ಸೇರಿಕೊಂಡು ಕಾಲೇಜಿನ ಘನತೆಗೆ ಧಕ್ಕೆ
*   ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದತ್ತ ಬೆರಳು ಮಾಡಿದ ಮಂಗಳೂರು ವಿವಿ
*   ಉಪ್ಪಿನಂಗಡಿ ವಿವಾದ: 24 ಮಂದಿಗೆ ನಿರ್ಬಂಧ 

ವರದಿ: ಭರತ್ ರಾಜ್ ಏಷ್ಯಾನೆಟ್ ಸುವರ್ಣ ನ್ಯೂಸ್, ಮಂಗಳೂರು

ಮಂಗಳೂರು(ಜೂ.07):  ಹಿಜಾಬ್ ವಿವಾದದಲ್ಲಿ ಪಟ್ಟು ಬಿಡದ ಹಿಬಾಬ್ ವಿದ್ಯಾರ್ಥಿಗಳ ವಿರುದ್ಧ ಕೊನೆಗೂ ಮಂಗಳೂರು ವಿವಿ ಕಾಲೇಜು ಆಡಳಿತ ನೋಟಿಸ್‌ ಅಸ್ತ್ರ ಪ್ರಯೋಗಿಸಿದೆ. ಆದ್ರೆ ಈ ನೋಟಿಸ್‌ನಲ್ಲಿ ಉಲ್ಲೇಖಿಸಲಾದ 'ಬಾಹ್ಯ ಶಕ್ತಿಗಳು' ಅನ್ನೋ ವಿಚಾರವೊಂದು ಪರೋಕ್ಷವಾಗಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದತ್ತ ಬೆರಳು ನೆಟ್ಟಿದೆ. 

ಮಂಗಳೂರು ಹಿಜಾಬ್ ವಿವಾದದಲ್ಲಿ ಸಿಎಫ್‌ಐ ನಂಟಿಗೆ ವಿವಿ ಕಾಲೇಜು ಆಡಳಿತ ಕೆರಳಿದ್ದು, ವಿವಿ ಕಾಲೇಜು ಹಿಜಾಬ್ ಸಂಘರ್ಷದಲ್ಲಿ ಕ್ಯಾಂಪಸ್ ಫ್ರಂಟ್ ಹೆಸರು ಉಲ್ಲೇಖಿಸದೇ ನೋಟಿಸ್‌ನಲ್ಲಿ ಪರೋಕ್ಷ ಎಚ್ಚರಿಕೆ ಕೊಟ್ಟಂತೆ ಕಾಣುತ್ತಿದೆ. ಹಿಜಾಬ್ ವಿದ್ಯಾರ್ಥಿನಿಯರಿಗೆ ಪ್ರಿನ್ಸಿಪಾಲ್ ಕೊಟ್ಟ ನೋಟಿಸ್‌ನಲ್ಲಿ 'ಬಾಹ್ಯ ಶಕ್ತಿ'ಗಳು ಅಂತ ಹೇಳಲಾಗಿದ್ದು, ಸಿಎಫ್ಐ ಜೊತೆ ಸುದ್ದಿಗೋಷ್ಟಿ ನಡೆಸಿ ಹಿಜಾಬ್ ವಿದ್ಯಾರ್ಥಿನಿಯರು ಸಂಕಷ್ಟಕ್ಕೆ ಸಿಲುಕಿದಂತಾಗಿದೆ. ಮಂಗಳೂರು ವಿವಿ ಸಮನ್ವಯ ಸಮಿತಿ ಹೆಸರಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದ ವಿದ್ಯಾರ್ಥಿನಿಯರು, ಕಾಲೇಜು ಆಡಳಿತಕ್ಕೆ ‌ಗಡುವು ನೀಡಿದ್ದರು. ಆದರೆ ಸಿಎಫ್ ಐ ಮುಖಂಡ ರಿಯಾಜ್ ಜೊತೆ ಕಾಣಿಸಿಕೊಂಡ ಬೆನ್ನಲ್ಲೇ ನೋಟೀಸ್ ನೀಡಲಾಗಿದೆ. ಪ್ರಿನ್ಸಿಪಾಲ್ ಡಾ.ಅನುಸೂಯ ರೈ ನೀಡಿದ ನೋಟಿಸ್ ಪ್ರತಿ ಏಷ್ಯಾನೆಟ್ ಸುವರ್ಣ ನ್ಯೂಸ್ ಗೆ ಲಭ್ಯವಾಗಿದೆ. 

Hijab Row; ಎರಡು ದಿನ ಗಡುವು, ಸಮನ್ವಯ ಸಮಿತಿ ಹೆಸರಲ್ಲಿ ಫೀಲ್ಡಿಗಿಳಿತಾ ಸಿಎಫ್ ಐ?

'ಬಾಹ್ಯ ಶಕ್ತಿಗಳ ಜೊತೆ ಸೇರಿಕೊಂಡು ಕಾಲೇಜಿನ ಘನತೆಗೆ ಧಕ್ಕೆ', 'ಕಾಲೇಜು ಮತ್ತು ಪ್ರಾಂಶುಪಾಲರ ವಿರುದ್ದ ಹೇಳಿಕೆ ನೀಡಿದ್ದೀರಿ', 'ಕಾಲೇಜು ಆವರಣದಲ್ಲಿ ಆತಂಕ, ಅಶಿಸ್ತು ಮತ್ತು ಶಾಂತಿಭಂಗ ಸೃಷ್ಟಿ' ಮೂರು ದಿನಗಳ ಒಳಗೆ ಉತ್ತರಿಸದೇ ಇದ್ದಲ್ಲಿ ಶಿಸ್ತು ಕ್ರಮ ಎಂದು ಸಿಎಫ್ಐ ಹೆಸರು ಉಲ್ಲೇಖಿಸದೇ ಬಾಹ್ಯ ಶಕ್ತಿ ಅಂತ ಕಾಲೇಜು ಆಡಳಿತ ನೋಟೀಸ್ ಕೊಟ್ಟಿದೆ. ಈ ಬಗ್ಗೆ ಪೊಲೀಸ್ ಇಲಾಖೆ ಮತ್ತು ದ.ಕ ಜಿಲ್ಲಾಧಿಕಾರಿ ಗಮನಕ್ಕೆ ತಂದಿರೋ ಕಾಲೇಜು ಆಡಳಿತ, ಪತ್ರಿಕಾಗೋಷ್ಠಿ ನಡೆಸಿದ ಹಿಜಾಬ್ ವಿದ್ಯಾರ್ಥಿನಿಯರ ಬಗ್ಗೆ ಕಣ್ಣಿಡುವಂತೆ ಮನವಿ ಮಾಡಿದೆ ಎನ್ನಲಾಗಿದೆ. 

Hijab Row: ಉಪ್ಪಿನಂಗಡಿ ಡಿಗ್ರಿ ಕಾಲೇಜಲ್ಲಿ ಹಿಜಾಬ್‌ಧಾರಿ 6 ವಿದ್ಯಾರ್ಥಿಗಳ ಅಮಾನತು

ಉಪ್ಪಿನಂಗಡಿ ವಿವಾದ: 24 ಮಂದಿಗೆ ನಿರ್ಬಂಧ

ಉಪ್ಪಿನಂಗಡಿ ಕಾಲೇಜಿನಲ್ಲಿ ಹಿಜಾಬ್ ವಿವಾದ ವಿಚಾರ ಸಂಬಂಧ 24 ಹಿಜಾಬ್ ವಿದ್ಯಾರ್ಥಿನಿಯರಿಗೆ ಒಂದು ವಾರಗಳ ಕಾಲ ತರಗತಿ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ಕಾಲೇಜಿನಲ್ಲಿ ಹಿಜಾಬ್ ಗೆ ಪಟ್ಟು ಹಿಡಿದ ಹಿನ್ನೆಲೆ ಸದ್ಯ ತಾತ್ಕಾಲಿಕ ನಿರ್ಬಂಧ ವಿಧಿಸಲಾಗಿದೆ. ಕಳೆದ ಹಲವು ದಿನಗಳಿಂದ ಹಿಜಾಬ್ ವಿವಾದದಲ್ಲಿ ಸುದ್ದಿಯಾಗಿದ್ದ ಕಾಲೇಜಿನ ಅಭಿವೃದ್ಧಿ ಸಮಿತಿ ನಿರ್ಣಯದಂತೆ ತರಗತಿಗೆ ನಿರ್ಬಂಧ ಹಾಕಲಾಗಿದೆ. 

ರಾಜ್ಯ ಹೈಕೋರ್ಟ್ ತೀರ್ಪು, ಸರಕಾರದ ಸುತ್ತೋಲೆ ಹಿನ್ನೆಲೆ ನಿರ್ಬಂಧ ಆದೇಶ ಹೊರಡಿಸಲಾಗಿದ್ದು, ಕೆಲ ದಿನಗಳ ಹಿಂದೆ 7 ಹಿಜಾಬ್ ವಿದ್ಯಾರ್ಥಿನಿಯರ ಅಮಾನತ್ತಾಗಿತ್ತು‌. ಇದರ ಸುದ್ದಿ ಮಾಡಲು ತೆರಳಿದ್ದ ಪತ್ರಕರ್ತರ ಮೇಲೂ ವಿದ್ಯಾರ್ಥಿಗಳು ಮಾಡಿದ್ದರು‌. ಅಲ್ಲದೇ ಟವಿ ವರದಿಗಾರ ಸೇರಿ ಮೂವರ ಮೇಲೆ ಹಿಜಾಬ್ ವಿದ್ಯಾರ್ಥಿನಿ ನೀಡಿದ್ದ ದೂರು ಆಧರಿಸಿ ಉಪ್ಪಿನಂಗಡಿ ಪೊಲೀಸರು ಪತ್ರಕರ್ತರ ಮೇಲೆ ಪ್ರಕರಣ ದಾಖಲಿಸಿದ್ದರು.
 

click me!