Digital Documentation: ರಾಜ್ಯಪಾಲರ ಡಿಜಿಟಲ್‌ ಅಂಕಪಟ್ಟಿ ಆದೇಶ ವಾಪಸ್‌: ಗೊಂದಲಕ್ಕೆ ತೆರೆ

Kannadaprabha News   | Asianet News
Published : Feb 10, 2022, 07:38 AM ISTUpdated : Feb 10, 2022, 07:58 AM IST
Digital Documentation: ರಾಜ್ಯಪಾಲರ ಡಿಜಿಟಲ್‌ ಅಂಕಪಟ್ಟಿ ಆದೇಶ ವಾಪಸ್‌: ಗೊಂದಲಕ್ಕೆ ತೆರೆ

ಸಾರಾಂಶ

*  ರಾಜ್ಯಪಾಲರ ಆದೇಶದಿಂದ ಗೊಂದಲಕ್ಕೆ ಸಿಲುಕಿದ್ದ ವಿಶ್ವವಿದ್ಯಾಲಯಗಳು *  ರಾಜ್ಯಪಾಲರಿಗೆ ಪತ್ರ ಬರೆದು ಮನವರಿಕೆ ಮಾಡಿಕೊಟ್ಟಿದ್ದ ಉನ್ನತ ಶಿಕ್ಷಣ ಇಲಾಖೆ *  ರಾಜ್ಯಪಾಲರಿಗೆ ಪತ್ರ ಬರೆಯಲೂ ನಿರ್ಧರಿಸಿದ್ದ ವಿವಿಧ ಕುಲಪತಿಗಳು   

ಬೆಂಗಳೂರು(ಫೆ.10): ಅಂಕಪಟ್ಟಿ(Marks Card)  ಸೇರಿದಂತೆ ವಿದ್ಯಾರ್ಥಿಗಳ ವಿವಿಧ ದಾಖಲೆ, ಪ್ರಮಾಣಪತ್ರಗಳನ್ನು ಡಿಜಿಟಲ್‌(Digital) ರೂಪದಲ್ಲಿ ಸಂಗ್ರಹಿಸಿ ನೀಡುವ ಸಂಬಂಧ ಸರ್ಕಾರ ಮತ್ತು ರಾಜ್ಯಪಾಲರಿಂದ ಬಂದ ಭಿನ್ನ ಆದೇಶಗಳಿಂದಾಗಿ ರಾಜ್ಯ ವಿಶ್ವವಿದ್ಯಾಲಯಗಳು(Universities) ಗೊಂದಲಕ್ಕೆ ಸಿಲುಕಿದ್ದವು. ಈಗ ರಾಜ್ಯಪಾಲರು(Governor) ತಮ್ಮ ಆದೇಶವನ್ನು ವಾಪಸ್‌ ಪಡೆಯುವ ಮೂಲಕ ಗೊಂದಲಕ್ಕೆ ತೆರೆ ಬಿದ್ದಿದೆ.

ಎರಡೂ ಭಿನ್ನ ಆದೇಶದಿಂದ ಉಂಟಾಗಿರುವ ಗೊಂದಲದ ಬಗ್ಗೆ ಉನ್ನತ ಶಿಕ್ಷಣ ಇಲಾಖೆ(Department of Higher Education) ಪ್ರಧಾನ ಕಾರ್ಯದರ್ಶಿ ಅವರು ರಾಜ್ಯಪಾಲರಿಗೆ ಪತ್ರ ಬರೆದು ಮನವರಿಕೆ ಮಾಡಿಕೊಟ್ಟಿದ್ದರು. ಈ ಹಿನ್ನೆಲೆಯಲ್ಲಿ ರಾಜ್ಯಪಾಲರು ತಾವು ರಾಜ್ಯದ ವಿವಿಗಳ ಕುಲಪತಿಗಳಿಗೆ ಬರೆದಿದ್ದ ಪತ್ರವನ್ನು ವಾಪಸ್‌ ಪಡೆದುಕೊಂಡಿರುವುದಾಗಿ ರಾಜಭವನದಿಂದ(Raj Bhavan) ಬುಧವಾರ ಆದೇಶ ಹೊರಬಿದ್ದಿದೆ.

2nd PUC Exam Time Table 2022: ಪಿಯು ಪರೀಕ್ಷೆ ಏ. 16 ರಿಂದ, ಯಾವ ದಿನ ಯಾವ ಪರೀಕ್ಷೆ?

ಅಂಕಪಟ್ಟಿ ಸೇರಿದಂತೆ ವಿದ್ಯಾರ್ಥಿಗಳ(Students) ಇತರೆ ದಾಖಲೆಗಳನ್ನು ಕೇಂದ್ರ ಸರ್ಕಾರ(Central Government) ಈಗಾಗಲೇ ಜಾರಿಗೊಳಿಸಿರುವ ಸರ್ಕಾರಿ ಸ್ವಾಮ್ಯದ ಡಿಜಿಲಾಕರ್‌- ನಾಡ್‌ (National Academic Depository) ನಲ್ಲಿ ಉಚಿತವಾಗಿ ಸಂಗ್ರಹಿಸಿ ವಿದ್ಯಾರ್ಥಿಗಳಿಗೆ ನೀಡುವ ಯೋಜನೆಯನ್ನು ಮುಂದುವರೆಸುವಂತೆ ರಾಜ್ಯದ ಎಲ್ಲಾ ವಿವಿಗಳಿಗೆ ರಾಜ್ಯ ಸರ್ಕಾರ ಪತ್ರ ಬರೆದಿತ್ತು. ಮತ್ತೊಂದೆಡೆ ರಾಜ್ಯದ ವಿವಿಗಳ ಕುಲಾಧಿಪತಿಯೂ ಆಗಿರುವ ರಾಜ್ಯಪಾಲ ಥಾವರ್‌ ಚಂದ್‌ ಗೆಹಲೋತ್‌ ಅವರು ಈ ಕಾರ್ಯವನ್ನು ಕಿಯೋನಿಕ್ಸ್‌ ಸಂಸ್ಥೆಯ ಎಲೆಕ್ಟ್ರಾನಿಕ್‌ ಡಾಕ್ಯುಮೆಂಟರ್‌ ಜನರೇಷನ್‌ ಸಿಸ್ಟಮ್‌ಗೆ (ಇಡಿಜಿಎಸ್‌) ನೀಡಲು ಎಲ್ಲಾ ವಿವಿಗಳ ಕುಲಪತಿಗಳಿಗೆ ಆದೇಶ ಮಾಡಿದ್ದರು. ಇದರಿಂದ ಯಾರ ಆದೇಶ ಪಾಲಿಸಬೇಕೆಂದು ವಿವಿಗಳಿಗೆ ಗೊಂದಲ ಶುರುವಾಗಿತ್ತು. ಇದಕ್ಕೆ ಸ್ಪಷ್ಟನೆ ಕೋರಿ ಸರ್ಕಾರ ಮತ್ತು ರಾಜ್ಯಪಾಲರಿಗೆ ಪತ್ರ ಬರೆಯಲೂ ವಿವಿಧ ಕುಲಪತಿಗಳು(Chancellors) ನಿರ್ಧರಿಸಿದ್ದರು.

ಎರಡು ಆದೇಶಗಳ ಗೊಂದಲದ ಬಗ್ಗೆ ಕನ್ನಡಪ್ರಭ ಮಂಗಳವಾರ ವಿಶೇಷ ವರದಿ ಪ್ರಕಟಿಸಿತ್ತು.

Digital Documentation ಡಿಜಿಲಾಕರ್‌ಗೆ ಕೇಂದ್ರ, ಇಡಿಜಿಎಸ್‌ಗೆ ರಾಜ್ಯಪಾಲರ ನಿರ್ದೇಶನ, ಡಿಜಿಟಲ್‌ ಅಂಕಪಟ್ಟಿ ಗೊಂದಲದಲ್ಲಿ ವಿವಿ!

ಬೆಂಗಳೂರು: ಅಂಕಪಟ್ಟಿ ಸೇರಿದಂತೆ(Marks Card) ವಿದ್ಯಾರ್ಥಿಗಳ ಇತರೆ ಪ್ರಮಾಣಪತ್ರಗಳನ್ನು(Document) ಡಿಜಿಟಲ್‌(Digital) ರೂಪದಲ್ಲಿ ಸಂಗ್ರಹಿಸಿ ನೀಡುವ ಸಂಬಂಧ ಸರ್ಕಾರ ಮತ್ತು ರಾಜ್ಯಪಾಲರಿಂದ ಬಂದಿರುವ ಭಿನ್ನ ಆದೇಶಗಳಿಂದ ಗೊಂದಲಕ್ಕೆ ಸಿಲುಕಿರುವ ರಾಜ್ಯದ ವಿಶ್ವವಿದ್ಯಾಲಯಗಳು ಎರಡರಲ್ಲಿ ಯಾವ ಆದೇಶ ಜಾರಿಗೊಳಿಸಬೇಕೆಂದು ಸ್ಪಷ್ಟನೆ ಕೋರಿ ಪತ್ರ ಬರೆಯಲು ಮುಂದಾಗಿದ್ದವು. 

Inspiring Story: ಇವರು ಮಗಳಿಗಾಗಿ ಚಿನ್ನ ಮಾಡಿಡಲಿಲ್ಲ, ಮಗಳನ್ನೇ ಚಿನ್ನದ ಹುಡುಗಿಯಾಗಿಸಿದರು

ಒಂದೆಡೆ ರಾಜ್ಯ ಸರ್ಕಾರ, ಅಂಕಪಟ್ಟಿ ಸೇರಿದಂತೆ ವಿದ್ಯಾರ್ಥಿಗಳ ಇತರೆ ದಾಖಲೆಗಳನ್ನು ಕೇಂದ್ರ ಸರ್ಕಾರ ಈಗಾಗಲೇ ಜಾರಿಗೊಳಿಸಿರುವ ಸರ್ಕಾರಿ ಸ್ವಾಮ್ಯದ ಡಿಜಿಲಾಕರ್‌-ನಾಡ್‌ (ನ್ಯಾಷನಲ್‌ ಅಕಾಡೆಮಿಕ್‌ ಡಿಪಾಸಿಟರಿ) ನಲ್ಲಿ ಉಚಿತವಾಗಿ ಸಂಗ್ರಹಿಸಿ ವಿದ್ಯಾರ್ಥಿಗಳಿಗೆ ನೀಡುವ ಯೋಜನೆಯನ್ನು ಮುಂದುವರೆಸುವಂತೆ ರಾಜ್ಯದ ಎಲ್ಲಾ ವಿವಿಗಳಿಗೆ ರಾಜ್ಯ ಸರ್ಕಾರ ಜ.14ರಂದು ಪತ್ರ ಬರೆದಿದೆ. ಮತ್ತೊಂದೆಡೆ ರಾಜ್ಯದ ವಿವಿಗಳ ಕುಲಾಧಿಪತಿಯೂ ಆಗಿರುವ ರಾಜ್ಯಪಾಲ ಥಾವರ್‌ ಚಂದ್‌ ಗೆಹಲೋತ್‌ ಅವರು ಈ ಕಾರ್ಯವನ್ನು ಕಿಯೋನಿಕ್ಸ್‌ ಸಂಸ್ಥೆಯ ಎಲೆಕ್ಟ್ರಾನಿಕ್‌ ಡಾಕ್ಯುಮೆಂಟರ್‌ ಜನರೇಷನ್‌ ಸಿಸ್ಟಮ್‌ಗೆ (ಇಡಿಜಿಎಸ್‌) ನೀಡಲು ಎಲ್ಲಾ ವಿವಿಗಳ ಕುಲಪತಿಗಳಿಗೆ ಆದೇಶ ಮಾಡಿದ್ದರು.

ಹೀಗೆ ಸರ್ಕಾರ ಮತ್ತು ರಾಜ್ಯಪಾಲರಿಂದ ಭಿನ್ನ ಆದೇಶ ಬಂದಿರುವುದರಿಂದ ಯಾವುದನ್ನು ಪಾಲಿಸಬೇಕು ಯಾವುದನ್ನು ಬಿಡಬೇಕು ಎಂಬುದು ತಿಳಿಯದೆ ವಿವಿಗಳ ಅಧಿಕಾರಿಗಳು ಗೊಂದಲಕ್ಕೆ ಸಿಲುಕಿದ್ದಾರೆ. ಈ ಗೊಂದಲ ಬಗೆಹರಿಸಿಕೊಳ್ಳಲು ಸರ್ಕಾರದಿಂದ ಬಂದಿರುವ ಆದೇಶವನ್ನು ರಾಜ್ಯಪಾಲರಿಗೆ ಮತ್ತು ರಾಜ್ಯಪಾಲರಿಗೆ ಬಂದಿರುವ ಆದೇಶವನ್ನು ಸರ್ಕಾರಕ್ಕೆ ಕಳುಹಿಸಿ ಯಾವ ಆದೇಶ ಪಾಲಿಸಬೇಕೆಂದು ಸ್ಪಷ್ಟನೆ ಕೋರಲು ನಿರ್ಧರಿಸಿರುವುದಾಗಿ ಕೆಲ ವಿವಿಗಳ ಕುಲಪತಿಗಳು ತಿಳಿಸಿದ್ದರು.
 

PREV
Read more Articles on
click me!

Recommended Stories

SSLCಗೆ ಶೇ.33 ಪಾಸಿಂಗ್ ಮಾರ್ಕ್ಸ್ ಸಮರ್ಥಿಸಿ ಕೊಳ್ಳುತ್ತಲೇ ರಾಜ್ಯ ಪೊಲಿಟಿಕ್ಸ್ ಅಪ್ಟೇಡ್ ಕೊಟ್ಟ ಮಧು ಬಂಗಾರಪ್ಪ
ಖಾಸಗಿ ಶಾಲೆಗಳಿಗೆ ಸೆಡ್ಡು, ಮುಂದಿನ ವರ್ಷದಿಂದ ರಾಜ್ಯಾದ್ಯಂತ 700 ಕೆಪಿಎಸ್ ಶಾಲೆ ಕಾರ್ಯಾರಂಭ