CBSE Term 1 Results 2022: ಸಿಬಿಎಸ್‌ಇ 10ನೇ ಮತ್ತು 12 ನೇ ತರಗತಿ ಪರೀಕ್ಷೆ ಫಲಿತಾಂಶ ಶೀಘ್ರವೇ ಪ್ರಕಟ

By Suvarna News  |  First Published Feb 9, 2022, 1:30 PM IST

ಸೆಂಟ್ರಲ್ ಬೋರ್ಡ್‌ ಆಫ್‌ ಸೆಕೆಂಡರಿ ಎಜುಕೇಷನ್‌ ಟರ್ಮ್‌ 1, 2022 ಫಲಿತಾಂಶವನ್ನು ಶೀಘ್ರದಲ್ಲಿ ಬಿಡುಗಡೆ ಮಾಡಲಿದೆ.   10ನೇ ತರಗತಿ ಮತ್ತು 12 ನೇ ತರಗತಿ ಟರ್ಮ್‌ 1 ಪರೀಕ್ಷೆಯ ಫಲಿತಾಂಶಕ್ಕಾಗಿ ವಿದ್ಯಾರ್ಥಿಗಳು ತುದಿಗಾಲಲ್ಲಿ ಕಾಯುತ್ತುದ್ದಾರೆ.


ಬೆಂಗಳೂರು(ಫೆ.9): ಕೇಂದ್ರ ಪ್ರೌಢಶಿಕ್ಷಣ ಮಂಡಳಿ  (Central Board of Secondary Education -CBSE) 10ನೇ ತರಗತಿ ಮತ್ತು 12ನೇ ತರಗತಿ ಟರ್ಮ್ 1ರ ಫಲಿತಾಂಶವನ್ನು ಅತೀ ಶೀಘ್ರದಲ್ಲಿ ಪ್ರಕಟ ಮಾಡಲಿದೆ ಎಂದು ತಿಳಿದುಬಂದಿದೆ. ಆದರೆ 10, 12 ನೇ ತರಗತಿಯ ಫಲಿತಾಂಶದ ದಿನಾಂಕವನ್ನು ಮಂಡಳಿಯು ಇನ್ನೂ ಬಹಿರಂಗಪಡಿಸಿಲ್ಲ.  10, 12 ನೇ ತರಗತಿ ಪರೀಕ್ಷೆಗಳಿಗೆ ಹಾಜರಾಗಿರುವ ಅಭ್ಯರ್ಥಿಗಳು ತಮ್ಮ ಫಲಿತಾಂಶಗಳನ್ನು CBSEಯ (Central Board of Secondary Education) ಅಧಿಕೃತ ಸೈಟ್‌ ನಲ್ಲಿ  https://www.cbse.gov.in/ಮತ್ತು ಇತರ ಪ್ಲಾಟ್‌ಫಾರ್ಮ್‌ಗಳಲ್ಲಿ ಪರಿಶೀಲಿಸಬಹುದು.  ಭಾರತೀಯ ಶಾಲಾ ಪ್ರಮಾಣಪತ್ರ ಪರೀಕ್ಷಾ ಕೌನ್ಸಿಲ್ (CISCE - Council for the Indian School Certificate Examinations) ಐಸಿಎಸ್‌ಇ ( Indian Certificate of Secondary Education -  ICSE), ISC (ಭಾರತೀಯ ಶಾಲಾ ಪ್ರಮಾಣಪತ್ರ) 2022 ಸೆಮಿಸ್ಟರ್ 1 ಫಲಿತಾಂಶವನ್ನು ಫೆಬ್ರವರಿ 07 ರಂದು ಬಿಡುಗಡೆ ಮಾಡಿದೆ.

ಸದ್ಯ ವಿದ್ಯಾರ್ಥಿಗಳು ಟರ್ಮ್‌ 1 ಪರೀಕ್ಷೆಯಲ್ಲಿ ಗಳಿಸಿದ ಅಂಕಗಳನಷ್ಟೇ ಬಿಡುಗಡೆ ಮಾಡಲಿದ್ದು, ವಿದ್ಯಾರ್ಥಿಗಳು ಪಾಸ್‌ ಅಥವಾ ಫೇಲ್‌ ಎಂಬುದನ್ನು ತಿಳಿಸುವುದಿಲ್ಲ. ಸಿಬಿಎಸ್‌ಇ ಟರ್ಮ್‌ 1 ಪರೀಕ್ಷೆ ಫಲಿತಾಂಶವನ್ನು ಚೆಕ್‌ ಮಾಡಲು ವಿದ್ಯಾರ್ಥಿಗಳು cbse.gov.in ಅಥವಾ cbseresults.nic.in ಗೆ ಭೇಟಿ ನೀಡಲು ಸೂಚಿಸಲಾಗಿದೆ.

Tap to resize

Latest Videos

ಫಲಿತಾಂಶವನ್ನು ಟರ್ಮ್‌ 1 ಪರೀಕ್ಷೆ ಮತ್ತು ಇಂಟರ್‌ನಲ್‌ ಮಾರ್ಕ್ಸ್‌ ಹಾಗೂ ಟರ್ಮ್‌ 2 ಪರೀಕ್ಷೆ ಮತ್ತು ಇಂಟರ್‌ನಲ್‌ ಮಾರ್ಕ್ಸ್‌ ಆಧಾರದಲ್ಲಿ  ಅಂದರೆ ಶೇಕಡ.50 ಅಂಕಗಳ ವ್ಹೇಟೇಜ್‌ ನೀಡಿ ಫಲಿತಾಂಶ ಪ್ರಕಟಿಸಲಾಗುತ್ತದೆ.

2nd PUC Exam Time Table 2022: ಪಿಯು ಪರೀಕ್ಷೆ ಏ. 16 ರಿಂದ, ಯಾವ ದಿನ ಯಾವ ಪರೀಕ್ಷೆ?

ಸಿಬಿಎಸ್‌ಇ ಫಲಿತಾಂಶ ಚೆಕ್‌ ಮಾಡುವ ವಿಧಗಳು: ವಿದ್ಯಾರ್ಥಿಗಳು ಕೇಂದ್ರ ಪ್ರೌಢಶಿಕ್ಷಣ ಮಂಡಳಿಯ ವೆಬ್‌ಸೈಟ್‌ cbse.gov.in  ಅಥವಾ cbseresults.nic.in ಗೆ ಭೇಟಿ ನೀಡಿ. ಓಪನ್‌ ಅದ ಪೇಜ್‌ನಲ್ಲಿ ರಿಜಿಸ್ಟ್ರೇಷನ್‌ ನಂಬರ್ ನೀಡಿ ಲಾಗಿನ್‌ ಆಗಿ. ಫಲಿತಾಂಶ ಚೆಕ್ ಮಾಡಿ. ಅಗತ್ಯವಿದ್ದಲ್ಲಿ ದಾಖಲೆಯನ್ನು ಡೌನ್‌ಲೋಡ್ ಮಾಡಿ ಪ್ರಿಂಟ್‌ ತೆಗೆದುಕೊಳ್ಳಿ.

ಡಿಜಿ ಲಾಕರ್ ಮೂಲಕವು ವೀಕ್ಷಿಸಬಹುದು: ಡಿಜಿಲಾಕರ್ ಆ್ಯಪ್‌ನಲ್ಲಿ ಅಭ್ಯರ್ಥಿಗಳು ತಮ್ಮ 10, 12ನೇ ತರಗತಿ ಫಲಿತಾಂಶಗಳನ್ನು ಪರಿಶೀಲಿಸಬಹುದು. ಅಪ್ಲಿಕೇಶನ್ ಅನ್ನು ಗೂಗಲ್ ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಬಹುದು ಅಥವಾ ವೆಬ್‌ಸೈಟ್ digilocker.gov.in ನಲ್ಲಿ ಪರಿಶೀಲಿಸಬಹುದು.

Mandya: ಶುಲ್ಕ ಕಟ್ಟದ 40 ಮಕ್ಕಳನ್ನು ಕೂಡಿಹಾಕಿದ ಶಾಲಾ ಮಂಡಳಿ..!

ಡಿಜಿಲಾಕರ್ ಆಪ್‌ನಿಂದ ಸಿಬಿಎಸ್‌ಇ 10ನೇ ಮತ್ತು 12 ನೇ ತರಗತಿ ಟರ್ಮ್ 1ರ ಮಾರ್ಕ್‌ಶೀಟ್ ಅನ್ನು ಪರಿಶೀಲಿಸುವುದು ಅಥವಾ ಡೌನ್‌ಲೋಡ್ ಮಾಡುವುದು ಹೇಗೆ? : ಸ್ಮಾರ್ಟ್‌ಫೋನ್‌ನಲ್ಲಿ ಪ್ಲೇಸ್ಟೋರ್ ಅಥವಾ ಆಪ್ ಸ್ಟೋರ್‌ಗೆ ಹೋಗಿ.  ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ. ಸಿಬಿಎಸ್‌ಇ ನಲ್ಲಿ ನೋಂದಾಯಿಸಲಾದ ಮೊಬೈಲ್ ಸಂಖ್ಯೆಯೊಂದಿಗೆ ಲಾಗಿನ್ ಮಾಡಿ. ಬಳಿಕ ಶಿಕ್ಷಣ ವಿಭಾಗಕ್ಕೆ ಹೋಗಿ ಮತ್ತು "10 ನೇ ತರಗತಿ ಉತ್ತೀರ್ಣ ಪ್ರಮಾಣಪತ್ರ ಮತ್ತು 10 ನೇ ತರಗತಿಯ ಅಂಕಪಟ್ಟಿ" ಅಥವಾ "12 ನೇ ತರಗತಿ ಉತ್ತೀರ್ಣ ಪ್ರಮಾಣಪತ್ರ ಮತ್ತು 12 ನೇ ತರಗತಿಯ ಅಂಕಪಟ್ಟಿ" ಆಯ್ಕೆಮಾಡಿ.  ಲಾಗಿನ್ ಜಾಗದಲ್ಲಿ ವರ್ಷ, ಹೆಸರು ಮತ್ತು ರೋಲ್ ಸಂಖ್ಯೆಯನ್ನು ನಮೂದಿಸಿ. ಸಿಬಿಎಸ್‌ಇ ಟರ್ಮ್ 1ರ ಮಾರ್ಕ್‌ಶೀಟ್ ಕಾಣಿಸಿಕೊಳ್ಳುತ್ತದೆ. ಡೌನ್‌ಲೋಡ್ ಮಾಡಿ ಇಟ್ಟುಕೊಳ್ಳಿ.

ಉಮಂಗ್ ಮೂಲಕವು ಪರಿಶೀಲಿಸಬಹುದು: CBSE ವಿದ್ಯಾರ್ಥಿಗಳು UMANG ಮೊಬೈಲ್ ಅಪ್ಲಿಕೇಶನ್‌ನಲ್ಲಿ ಕೂಡ ತಮ್ಮ ಫಲಿತಾಂಶಗಳನ್ನು ಪರಿಶೀಲಿಸಬಹುದು. UMANG ಅಪ್ಲಿಕೇಶನ್ ಅನ್ನು Google Play ಅಪ್ಲಿಕೇಶನ್ ಮೂಲಕ ಡೌನ್‌ಲೋಡ್ ಮಾಡಬಹುದು.

click me!