1 ರಿಂದ 5ನೇ ಕ್ಲಾಸ್‌ಗೆ ದಿನವಿಡೀ ಪಾಠ ಆರಂಭ

By Kannadaprabha News  |  First Published Nov 3, 2021, 7:27 AM IST
  • 1 ರಿಂದ 5ನೇ ಕ್ಲಾಸ್‌ಗೆ ದಿನವಿಡೀ ಪಾಠ ಆರಂಭ
  •  ಬಿಸಿಯೂಟದೊಂದಿಗೆ ತರಗತಿ: ಆದರೂ ಹಾಜರಿ ಏರಿಕೆ ಇಲ್ಲ
  •  ಅರ್ಧ ದಿನದ ತರಗತಿ ಬದಲು ದಿನಪೂರ್ತಿ ತರಗತಿ ವಿಸ್ತರಣೆ

ಬೆಂಗಳೂರು (ಅ.03):  ರಾಜ್ಯದಲ್ಲಿ 1ರಿಂದ 5ನೇ ತರಗತಿ ವಿದ್ಯಾರ್ಥಿಗಳಿಗೆ (Students) ಮಂಗಳವಾರದಿಂದ ಕೋವಿಡ್‌ (covid 19) ಪೂರ್ವ ಮಾದರಿಯಲ್ಲಿ ಬಿಸಿಯೂಟದೊಂದಿಗೆ (Mid Day Meal) ದಿನಪೂರ್ತಿ ತರಗತಿಗಳು (class) ಆರಂಭಗೊಂಡಿವೆ. ಆದರೆ, ಶಾಲೆಗಳಲ್ಲಿ (School) ಮಕ್ಕಳ ಹಾಜರಾತಿ (Attendance) ಪ್ರಮಾಣ ಮಾತ್ರ ಏರಿಕೆಯಾಗಿಲ್ಲ.

ಕಳೆದ ಅ.25ರಿಂದ ಪ್ರಾಥಮಿಕ ತರಗತಿ (Primary School) ಮಕ್ಕಳಿಗೂ ಭೌತಿಕ ತರಗತಿ ಆರಂಭಿಸಿದ್ದ ಸರ್ಕಾರ ಆರಂಭದ ಮೊದಲ ವಾರ ನಿತ್ಯ ಅರ್ಧದಿನ ಮಾತ್ರ ತರಗತಿ ನಡೆಸಲು ಅವಕಾಶ ನೀಡಿತ್ತು. ಪರಿಸ್ಥಿತಿ ನೋಡಿಕೊಂಡು ನ.2ರಿಂದ ದಿನಪೂರ್ತಿ ತರಗತಿಗೆ ಅವಕಾಶ ನೀಡಿತ್ತು. ಮಂಗಳವಾರದಿಂದ ಎಲ್ಲ ಶಾಲೆಗಳಲ್ಲೂ ದಿನಪೂರ್ತಿ ತರಗತಿಗಳ ಜೊತೆಗೆ ಮಧ್ಯಾಹ್ನದ ಬಿಸಿಯೂಟ ಆರಂಭಿಸಲಾಗಿದೆ. ಆದರೆ, ಮಕ್ಕಳ ಹಾಜರಾತಿಯಲ್ಲಿ (Attendance) ಯಾವುದೇ ವ್ಯತ್ಯಾಸ ಕಂಡುಬಂದಿಲ್ಲ. ಅರ್ಧ ದಿನ ತರಗತಿ ನಡೆಸಿದ ದಿನಗಳಲ್ಲಿ ಇದ್ದಷ್ಟೇ ಹಾಜರಾತಿ ಪೂರ್ಣದಿನದಲ್ಲೂ ಕಂಡುಬಂದಿದೆ.

Tap to resize

Latest Videos

20 ತಿಂಗಳ ಬಳಿಕ ಚಿಣ್ಣರು ಶಾಲೆಗೆ, ಶಿಕ್ಷಕರು, ಮಕ್ಕಳು ಇಬ್ಬರಲ್ಲೂ ಸಂಭ್ರಮ.!

ಸಾರ್ವಜನಿಕ ಶಿಕ್ಷಣ ಇಲಾಖೆ (Education Department) ನೀಡಿರುವ ಹಾಜರಾತಿ ಮಾಹಿತಿ ಪ್ರಕಾರ, ರಾಜ್ಯದಲ್ಲಿ 62,038 ಶಾಲೆಗಳಿದ್ದು, 21,103 ಶಾಲೆಗಳು ಮಾತ್ರ ಮಕ್ಕಳ ಹಾಜರಾತಿ ಮಾಹಿತಿಯನ್ನು ಇಲಾಖೆಯ ಸ್ಟೂಡೆಂಟ್‌ ಅಚೀವ್ಮೆಂಟ್‌ ಟ್ರ್ಯಾಕಿಂಗ್‌ ಸಿಸ್ಟಮ್‌(SATS) ಪೋರ್ಟಲ್‌ನಲ್ಲಿ ಅಪ್‌ಲೋಡ್‌ ಮಾಡಿವೆ. ಅದರ ಪ್ರಕಾರ 1ನೇ ತರಗತಿಗೆ ಶೇ.28.54, 2ನೇ ತರಗತಿಗೆ ಶೇ.26.18, 3ನೇ ತರಗತಿ ಶೇ.24.83, 4ನೇ ತರಗತಿ ಶೇ.25.57 ಹಾಗೂ 5ನೇ ತರಗತಿ ಶೇ.26.22 ವಿದ್ಯಾರ್ಥಿಗಳು ಹಾಜರಾಗಿದ್ದಾರೆ.

ಪ್ರಾಥಮಿಕ ತರಗತಿಗಳು ಆರಂಭವಾದ ಮೊದಲ ಒಂದು ವಾರದಲ್ಲೂ ಹಾಜರಾತಿ ಹೆಚ್ಚೂ ಕಡಿಮೆ ಇಷ್ಟೇ ಇತ್ತು. ಬಹುಶಃ ಹಬ್ಬ ಮುಗಿದ ಮೇಲೆ ಸೋಮವಾರದಿಂದ ಮಕ್ಕಳ ಹಾಜರಾತಿ ಪ್ರಮಾಣದಲ್ಲಿ ಹೆಚ್ಚಳ ಸಾಧ್ಯತೆ ಇದೆ ಎನ್ನುತ್ತಾರೆ ಅಧಿಕಾರಿಗಳು. ಈ ಮಧ್ಯೆ, ಉಳಿದ ತರಗತಿಗಳ ಹಾಜರಾತಿಯಲ್ಲೂ ಏರಿಕೆ ಕಂಡುಬಂದಿಲ್ಲ. 6ರಿಂದ 8ನೇ ತರಗತಿಗೆ ಹಾಜರಾಗುವ ಮಕ್ಕಳ ಪ್ರಮಾಣ ಶೇ.33ರಿಂದ ಶೇ.36 ಇದೆ. 9 ಮತ್ತು 10ನೇ ತರಗತಿ ಶೇ.38 ಇದೆ.

ಅ.25ರಿಂದ ಅರಂಭವಾಗಿದ್ದ ಶಾಲೆ

 

ರಾಜ್ಯಾದ್ಯಂತ 1 ರಿಂದ 5 ನೇ ತರಗತಿವರೆಗೆ ಶಾಲೆ ಆರಂಭಗೊಂಡಿವೆ. 

20 ತಿಂಗಳ ಬಳಿಕ ಚಿಣ್ಣರು ಶಾಲೆಗೆ, ಶಿಕ್ಷಕರು, ಮಕ್ಕಳು ಇಬ್ಬರಲ್ಲೂ ಸಂಭ್ರಮ.!

ಸಿಲಬಸ್ ಕಡಿತ ವಿಚಾರ :  ಇನ್ನು ಈ ಬಾರಿ ಸಿಲಬಸ್ (syllabus) ಕಡಿಮೆ ಮಾಡುವ ಬಗ್ಗೆ ಇನ್ನೂ ಚಿಂತಿಸಿಲ್ಲ. ಕಳೆದೊಂದುವರೆ ವರ್ಷದಿಂದ ಮಕ್ಕಳಿಗೆ ಪಠ್ಯದ ವಿಚಾರದಲ್ಲಿ ಅನ್ಯಾಯವಾಗಿದ್ದು, ಇದನ್ನು ಕವರ್ ಮಾಡುವ ನಿಟ್ಟಿನಲ್ಲಿ ಚಿಂತನೆ ನಡೆಸಿದ್ದೆವೆ. ಮುಂದಿನ ದಿನಗಳಲ್ಲಿ ಯೋಚಿಸಿ ಈ ಬಗ್ಗೆ ನಿರ್ಧಾರ ಮಾಡಲಿದ್ದೇವೆ.  ಆದರೂ, ಪಾಠದಲ್ಲಿ ಸಿಲಬಸ್ ಕಡಿಮೆ ಮಾಡುವುದಿಲ್ಲ. ಅವಶ್ಯಕತೆ ಇದ್ದರೆ ಪರೀಕ್ಷೆಯಲ್ಲಿ (Exam) ಕಡಿಮೆ ಸಿಲಬಸ್ ಬರುವ ರೀತಿಯಲ್ಲಿ ಯೋಚನೆ ಮಾಡಲಿದ್ದೇವೆ. ಡಿಸೆಂಬರ್ ವೇಳೆಗೆ ಈ ಬಗ್ಗೆ ತಜ್ಞರ ಜೊತೆ ಸಮಾಲೋಚಿಸಿ, ನಿರ್ಧರಿಸಲಾಗುವುದು ಎಂದು ಸಚಿವ ಬಿಸಿ ನಾಗೇಶ್ ತಿಳಿಸಿದ್ದರು.

ಪಿಯುಸಿ ವಿದ್ಯಾರ್ಥಿಗಳಿಗೆ ಅನ್ಯಾಯವಾಗದು : ಪಿಯುಸಿ (PUC) ವಿದ್ಯಾರ್ಥಿಗಳಿಗೆ (Students) ಯಾವುದೇ ರೀತಿಯಲ್ಲಿ ಅನ್ಯಾಯವಾಗುವುದಿಲ್ಲ. ಶೈಕ್ಷಣಿಕ ವರ್ಷದಲ್ಲಿ ಪಿಯುಸಿಗೆ ಕೇವಲ ಒಂದೇ ಒಂದು ತಿಂಗಳು ಕಡಿಮೆಯಾಗಿದೆಯಷ್ಟೇ. ಆದರೆ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳುತ್ತೇವೆ ಎಂದು ಹೇಳಿದರು. 

1 ರಿಂದ 5ರವರೆಗೆ ಶಾಲೆ ಆರಂಭ : ಆದರೆ ಅರ್ಧ ದಿನ

ಶಿಕ್ಷಕರ ಪ್ರತಿಭಟನೆ ವಿಚಾರ :   ಶಿಕ್ಷಕರು (Teachers) ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ (Protest) ನಡೆಸುತ್ತಿರುವ ವಿಚಾರದ ಬಗ್ಗೆಯೂ ಪ್ರಸ್ತಾಪಿಸಿ, ಅವರು ಸಾಂಕೇತಿಕ ಪ್ರತಿಭಟನೆ ನಡೆಸುತ್ತಿದ್ದಾರೆ. ಎರಡು ಮೂರು ಬಾರಿ ಈ ಬಗ್ಗೆ ಕುಳಿತು ಚರ್ಚಿಸಿದ್ದೆವೆ.  ಒಳ್ಳೆಯ ಗುಣಮಟ್ಟದ ಶಿಕ್ಷಣ ನೀಡಬೇಕೆಂದರೆ, ಪರೀಕ್ಷೆ ನಡೆಸುವುದು ಒಳ್ಳೆಯದು. ಅವರು ಪರೀಕ್ಷೆ ಇಲ್ಲದೇ ಮುಂಬಡ್ತಿ ನೀಡಿ ಎಂದು ಕೇಳಿದ್ದಾರೆ.  ಆದರೆ, ಶಿಕ್ಷಣ ಇಲಾಖೆ, ಪರೀಕ್ಷೆ ನೀಡಿಯೇ, ಮುಂಬಡ್ತಿ ನೀಡಲು ನಿರ್ಧರಿಸಿದೆ. ಮುಂದಿನ ದಿನಗಳಲ್ಲಿ ಇದನ್ನು ಒಪ್ಪಿಕೊಳ್ಳುವ ಬಗ್ಗೆ ಭರವಸೆ ಇದೆ. ಶಿಕ್ಷಕರು ನಮ್ಮ ಜೊತೆ ರಾಜಿ ಮಾಡಿಕೊಳ್ಳುವ ವಿಶ್ವಾಸವೂ ಇದೆ ಎಂದರು.

 ಎಲ್.ಕೆ.ಜಿ (LkG)., ಯು.ಕೆ.ಜಿ (UKG). ಶಾಲೆ ಆರಂಭದ ವಿಚಾರ :  ನಾವು ಹಂತ, ಹಂತವಾಗಿ ಈ ಬಗ್ಗೆ ಯೋಚಿಸುತ್ತಿದ್ದೆವೆ. 1 ರಿಂದ 5 ಶಾಲೆಗಳು ಆರಂಭ ಮಾಡಿದ್ದೆವೆ.  ಸರ್ಕಾರಿ ಶಾಲೆಯಲ್ಲಿ ಅಂಗನವಾಡಿಗಳೇ ಹೆಚ್ಚಾಗಿದ್ದು, ಕೆಲವು ಕಡೆಗಳಲ್ಲಿ ಮಾತ್ರ ಎಲ್.ಕೆ.ಜಿ., ಯು.ಕೆ.ಜಿ. ಇವೆ.  1 ರಿಂದ 5ನೇ ತರಗತಿ ಆರಂಭದ  ಅನುಭವದ ಆಧಾರದ ಮೇಲೆ ಎಲ್.ಕೆ.ಜಿ., ಯು.ಕೆ.ಜಿ. ಆರಂಭಕ್ಕೆ ಚಿಂತನೆ ಮಾಡಲಿದ್ದೇವೆ. ಮುಂದಿನ ದಿನಗಳಲ್ಲಿ, ಈ ಬಗ್ಗೆ ತಜ್ಞರ ಜೊತೆ ಸಮಾಲೋಚಿಸಲಿದ್ದೆವೆ ಎಂದು ಸಚಿವ ಬಿ ಸಿ ನಾಗೇಶ್ ಹೇಳಿದರು. 

click me!