* ಮೈಸೂರು, ಉಡುಪಿ ವಿದ್ಯಾರ್ಥಿಗಳ ಸಾಧನೆ
* ಕೆ- ಸಿಇಟಿಯಲ್ಲೂ ಪ್ರಥಮ ರ‍್ಯಾಂಕ್ ಗಳಿಸಿದ್ದ ಮೇಘನ್
* ಅಖಿಲ ಭಾರತ ಮಟ್ಟದಲ್ಲಿ 5ನೇ ರ‍್ಯಾಂಕ್ ಪಡೆದಿದ್ದ ಕರ್ನಾಟಕದ ವಿದ್ಯಾರ್ಥಿಗಳು
ಬೆಂಗಳೂರು(ನ.02): ಮೆಡಿಕಲ್(Medical), ಡೆಂಟಲ್(Dental) ಪ್ರವೇಶಕ್ಕೆ ನಡೆದಿದ್ದ 2021ನೇ ಸಾಲಿನ ನೀಟ್ ಫಲಿತಾಂಶ(NEET Result) ಸೋಮವಾರ ಪ್ರಕಟವಾಗಿದ್ದು, ರಾಜ್ಯದ ಇಬ್ಬರು ವಿದ್ಯಾರ್ಥಿಗಳು(Students) ಅಖಿಲ ಭಾರತ ಮಟ್ಟದಲ್ಲಿ (AIR) 5ನೇ ರ‍್ಯಾಂಕ್ ಪಡೆದು ಕರ್ನಾಟಕದ(Karnataka) ಟಾಪರ್ ಗಳಾಗಿದ್ದಾರೆ.
ಕೆ- ಸಿಇಟಿಯಲ್ಲಿ(K-CET) ಪ್ರಥಮ ರ‍್ಯಾಂಕ್(First Rank) ಗಳಿಸಿದ್ದ ಮೈಸೂರಿನ(Mysuru) ಎಚ್.ಕೆ. ಮೇಘನ್(HK Meghan) ಮತ್ತು ಉಡುಪಿಯ ಜಶನ್ ಛಬ್ರಾ ನೀಟ್ ಪರೀಕ್ಷೆಯಲ್ಲಿ 720 ಅಂಕಗಳಿಗೆ ತಲಾ 715 ಅಂಕ ಗಳಿಸಿದ್ದಾರೆ. ಈ ಮಧ್ಯೆ, ಮಂಗಳೂರಿನ(Mangaluru) ಎಕ್‌ಸ್ಪರ್ಟ್ ಪಿಯು ಕಾಲೇಜಿನ ವಿದ್ಯಾರ್ಥಿಗಳಾದ ತೇಜಸ್(Tejas), ತನುಷ್(Tanush Gowda) ಗೌಡ ನೀಟ್‌ನಲ್ಲಿ ತಲಾ 700 ಅಂಕ, ಮತ್ತೊಬ್ಬ ವಿದ್ಯಾರ್ಥಿ 695 ಅಂಕ ಪಡೆದು ಉತ್ತಮ ಸಾಧನೆ ಮಾಡಿದ್ದಾರೆ.
undefined
ತನುಷ್ ಗೌಡ ಜನರಲ್ ಮೆರಿಟ್‌ನಲ್ಲಿ 162ನೇ ರ‍್ಯಾಂಕ್, ಓಬಿಸಿ ಕ್ಯಾಟಗರಿಯಲ್ಲಿ 33ನೇ ರ‍್ಯಾಂಕ್, ತೇಜಸ್ ಜನರಲ್ ಮೆರಿಟ್ ನಲ್ಲಿ 165ನೇ ರ‍್ಯಾಂಕ್, ಕ್ಯಾಟಗರಿಯಲ್ಲಿ 121ನೇ ರ‍್ಯಾಂಕ್ ಹಾಗೂ ರಿತಮ್ 720ರಲ್ಲಿ 695 ಅಂಕ ಪಡೆದು ಜನರಲ್ ಮೆರಿಟ್‌ನಲ್ಲಿ(General Merit) 307ನೇ ಹಾಗೂ ಕ್ಯಾಟಗರಿಯಲ್ಲಿ 220ನೇ ರ‍್ಯಾಂಕ್ ಪಡೆದುಕೊಂಡಿದ್ದಾರೆ. ಕಾಲೇಜಿನ ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆ ಅಧ್ಯಕ್ಷ ನರೇಂದ್ರ ನಾಯಕ್ ಅಭಿನಂದಿಸಿದ್ದಾರೆ.
ಕರ್ನಾಟಕ ಸಿಇಟಿ ರಿಸಲ್ಟ್ ಪ್ರಕಟ: ಇಲ್ಲಿದೆ Rank ವಿಜೇತ ವಿದ್ಯಾರ್ಥಿಗಳ ಪಟ್ಟಿ
ಮೇಘನ್ ಸಂತಸ:
5ನೇ ರ‍್ಯಾಂಕ್ ಸಂತಸ ತಂದಿದೆ. ದೆಹಲಿಯ ಏಮ್ಸ್‌ನಲ್ಲಿ(Delhi AIMS) ಎಂಬಿಬಿಎಸ್(MBBS) ಕೋರ್ಸ್‌ಗೆ ಸೇರಬೇಕು ಎಂದುಕೊಂಡಿದ್ದೇನೆ. ಪ್ರೌಢಶಾಲೆಗೆ ಬಂದ ತಕ್ಷಣವೇ ನೀಟ್ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದೆ ಎಂದು ಮೈಸೂರಿನ ಮೇಘನ್ ಹೇಳಿದ್ದಾರೆ.
ಐದೂ ವಿಭಾಗಗಳಲ್ಲಿ ರ‍್ಯಾಂಕ್ ಪಡೆದಿದ್ದ ಮೈಸೂರಿನ ಮೇಘನ್
ಸಿಇಟಿಯಲ್ಲಿ 5 ವಿಭಾಗದಲ್ಲಿ ಮೈಸೂರಿನ ಮೇಘನ್ ರ‍್ಯಾಂಕ್ ಪಡೆದಿದ್ದರು. ಅಗಸ್ಟ್ 28-29 & 30ರಂದು ರಾಜ್ಯದ 530 ಕೇಂದ್ರಗಳಲ್ಲಿ ನಡೆದಿದ್ದ ಪರೀಕ್ಷೆಗೆ ಒಟ್ಟು 1,93,447 ವಿದ್ಯಾರ್ಥಿಗಳು ಹಾಜರಾಗಿದ್ದರು. ಇವರಲ್ಲಿ 95,462 ವಿದ್ಯಾರ್ಥಿಗಳು ಹಾಗೂ 97,985 ವಿದ್ಯಾರ್ಥಿನಿಯರಿದ್ದಾರೆ ಎಂದರು.
ಎಲ್ಲ ವಿಭಾಗದಲ್ಲಿಯೂ ಮೈಸೂರು ವಿದ್ಯಾರ್ಥಿ ಮೇಘನ್ ಎಚ್.ಕೆ. ಮೊದಲ ರ‍್ಯಾಂಕ್ ಪಡೆದಿದ್ದು, ಈ ರೀತಿ ಒಬ್ಬನೇ ವಿದ್ಯಾರ್ಥಿ ಎಲ್ಲ ಬ್ರಾಂಚ್ʼಗಳಲ್ಲಿ ಪ್ರಥಮ ಸ್ಥಾನ ಗಳಿಸಿರುವುದು ಹೊಸ ದಾಖಲೆಯಾಗಿದೆ. ಈ ಕಾರಣಕ್ಕಾಗಿ ಮೇಘನ್ ಅವರನ್ನು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ(CN Ashwathnarayan) ಅಭಿನಂದಿಸಿದ್ದರು.